ಕಂಗನಾ ರಣಾವತ್ ನಟನೆ ಚಂದ್ರಮುಖಿ-2 ರಿವ್ಯೂ

 ಕಂಗನಾ ರಣಾವತ್ ನಟನೆ ಚಂದ್ರಮುಖಿ-2 , ಬಾಕ್ಸ್ ಆಫೀಸ್ ನಲ್ಲಿ ಗಳಿಸಿದ್ದೇಷ್ಟು?




ತಮಿಳಿನ ಸೂಪರ್ ಹಿಟ್ ಕಂಡ ಚಂದ್ರಮುಖಿ 2 ಚಿತ್ರ ಇದೀಗ ಬಾಲಿವುಡ್ ನಲ್ಲಿ ಬಿಡುಗಡೆಗೊಂಡಿದ್ದು, ತೆಲುಗಿನ ಈ ರಿಮೇಕ್ ಚಿತ್ರದಲ್ಲಿ ನಟಿ ಕಂಗನಾ ರಣಾವತ್ ಚಂದ್ರಮುಖಿಯಾಗಿ ಕಾಣಿಸಿಕೊಂಡಿದ್ದಾರೆ. ಪಿ. ವಾಸು ಅವರ ತಮಿಳಿನ ಹಾರರ್ ಕಾಮಿಡಿ ಚಿತ್ರ ಹಿಂದಿ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿದ್ದು, 2005ರಲ್ಲಿ ಜ್ಯೋತಿಕಾ ಮತ್ತು ರಜನಿಕಾಂತ್ ನಟಿಸಿದ್ದ ಚಿತ್ರದ ಮುಂದುವರೆದ ಭಾಗವಾಗಿದೆ. 

ರಾಘವ್ ಲಾರೆನ್ಸ್ ಮತ್ತು ಕಂಗನಾ ರನಾವತ್ ಅವರ ನಟನೆಯ ಈ ಚಿತ್ರದ ಗುರುವಾರ ರಿಲೀಸ್ ಆಗಿದ್ದು ಚಿತ್ರಕ್ಕೆ ಮೊದಲ ದಿನವೇ ಅತ್ಯುತ್ತಮ ರಿಯಾಕ್ಷನ್ ಸಿಕ್ಕಿದೆ.. ಚಿತ್ರವು ನಿನ್ನೆ ಒಂದೇ ದಿನ 7.5 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಚಿತ್ರಕ್ಕೆ ಪಿ ವಾಸು ಆಕ್ಷನ್ ಕಟ್ ಹೇಳಿದ್ದು, ರಾಘವ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಂದ್ರಮುಖಿ 2 ಬಗ್ಗೆ ಹೇಳಬೆಕೆಂದರೆ, ಇದು ರಜನಿಕಾಂತ್ ಮತ್ತು ಜ್ಯೋತಿಕಾ ಪ್ರಮುಖವಾಗಿ ನಟಿಸಿದ ಸೂಪರ್ ಹಿಟ್ ತೆಲುಗು ಚಿತ್ರದ ಸಿಕ್ವೇಲ್. ಹಾರರ್ ಮತ್ತು ಕಾಮಿಡಿಯನ್ನು ಸಮವಾಗಿ ಹಂಚಿಕೊಂಡು ಈ ಚಿತ್ರವನ್ನು ತೆರೆಮೇಲೆ ತೋರಿಸಲಾಗಿದ್ದು, ನಿಜಕ್ಕೂ ಕಂಗನಾ ರಣಾವತ್ ನಟನೆ ವ್ಹಾ ಎನ್ನುವಂತಿದೆ. ಇನ್ನೂ ರಾಘವ್ ಅವರ ಕಾಮಿಡಿ ಮತ್ತು ಹಾರರ್ ದೃಶ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. 

ಕಂಗನಾ ಚಂದ್ರಮುಖಿಯಾಗಿ ರಾಜನ ಆಸ್ಥಾನದಲ್ಲಿ ನರ್ತಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ತನ್ನ ಸೌಂದರ್ಯ ಮತ್ತು ನೃತ್ಯ ಕೌಶಲ್ಯಕ್ಕೆ ಪ್ರಸಿದ್ಧಿಯಾದ ಚಂದ್ರಮುಖಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?