ಪೋರ್ನ್ ಸೈಟ್ ನಲ್ಲಿ ಕಾಣಿಸಿಕೊಂಡ ಜಾಹ್ನವಿ ಕಾಪೂರ್..!
ಪೋರ್ನ್ ಸೈಟ್ ನಲ್ಲಿ ಕಾಣಿಸಿಕೊಂಡ ಜಾಹ್ನವಿ ಕಾಪೂರ್..!
ಜಾಹ್ನವಿ ಕಾಪೂರ್. ಬಾಲಿವುಡ್ ನಲ್ಲಿ ತನ್ನದೇ ಆದ ಚಾಪು ಮೂಡಿಸಿದ ನಟಿ. ಸೆಲೆಬ್ರಿಟಿಗಳ ಮಗಳಾದರೂ ಆಕೆಯ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಹಲವಾರು ಕಷ್ಟ ನಷ್ಟಗಳನ್ನು ಅನುಭವಿಸಿಕೊಂಡೇ ನಟಿ ಚಿತ್ರರಂಗದಲ್ಲಿ ಮುಂದುವರೆದುಕೊಂಡು ಹೋಗಿದ್ದಾರೆ. 2018ರಲ್ಲಿ ಬಿಡುಗಡೆಯಾದ ಧಡಕ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಯಾದ ಈ ನಟಿ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಶಾಲಾ ದಿನಗಳು ತಾವು ಎಷ್ಟು ಡಿ ಗ್ಲಾಮರ್ ಆಗಿದ್ದೇ ಗೆಳೆಯರು ನನ್ನ ಹೇಗೆ ಚುಡಾಯಿಸುತ್ತಿದ್ದರು ಎಂದೆಲ್ಲಾ ಹೇಳಿಕೊಂಡಿದ್ದಾರೆ. ತನ್ನ ಹಳೆಯ ಫೋಟೋಗಳನ್ನು ನೋಡಿದರೆ ನನಗೆ ನಗು ಬರುತ್ತೆ ಎಂದಿರುವ ಅವರು, ಕೆಲವು ಪಡ್ಡೆಗಳು ಪೋರ್ನ್ ಸೈಟ್ ನಲ್ಲಿ ತನ್ನ ಮಾರ್ಫ್ಡ್ ಫೋಟೋವನ್ನು ಬಳಸಿರುವುದನ್ನು ನಾನು ಗಮನಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ..
https://youtube.com/shorts/Z5R0f1QO6nk?si=7W1Q9acCxxJEknNE
ಶಾಲಾ ದಿನಗಳಲ್ಲಿ ಇದ್ದ ಹಾಗೆ ಫೋಟೋ ತೆಗೆಸಿಕೊಳ್ಳುತ್ತಿದ್ದ ನಾನು ಯಾವುದೇ ರೀತಿಯ ಸ್ಟೈಲ್ ಆಗಿರಲಿಲ್ಲ. ಗ್ಲಾಮರಸ್ ಲುಕ್ ಬಗ್ಗೆ ಗೊತ್ತೆ ಇರಲಿಲ್ಲ ಎಂದಿರುವ ಆಕೆ, ನನಗೆ ಕ್ಯಾಮೆರಾಗಳು ಎಂದರೆ ಇಷ್ಟು ಬಾಲ್ಯದಲ್ಲೂ ನಾನು ಸಾಕಷ್ಟು ಫೋಟೋಗಳನ್ನು ತೆಗೆಸಿಕೊಳ್ಳುತ್ತಿದ್ದೆ. ಅಷ್ಟೇ ಅಲ್ಲದೆ ನಾನು ಹಾಗೂ ನನ್ನ ತಂಗಿ ಹೊರಗೆ ಹೋದಾಗೆಲ್ಲಾ ಜನರು ನಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಿದ್ದರು ಎಂದಿರುವ ಅವರು ತಮ್ಮ ಶಾಲಾ ದಿನಗಳಲ್ಲಿ ಆದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ನಾನು ಕಂಪ್ಯೂಟರ್ ಲ್ಯಾಬ್ ಗೆ ಎಂಟ್ರಿ ಕೊಟ್ಟ ಸಮಯವದು. ಆಗ ನಾನಿನ್ನು 4ನೇ ತರಗತಿಯಲ್ಲಿದ್ದೆ. ಎಲ್ಲರ ಸ್ಕ್ರೀನ್ ನಲ್ಲೂ ನನ್ನದೇ ಫೋಟೋವಿತ್ತು. ಆ ಫೋಟೋ ನನ್ನನ್ನು ಫೇಮಸ್ ಮಾಡಿದ್ದಲ್ಲ. ಬದಲಿಗೆ ಎಲ್ಲರೂ ನನ್ನನೋಡಿ ಗೇಲಿ ಮಾಡಿದ್ದರು. ನನ್ನನ್ನು ವಿಚಿತ್ರವಾಗಿ ನೋಡಿ, ವ್ಯಾಕ್ಸ್ ಮಾಡದ ನನ್ನ ಕೈ ಗಳನ್ನು ನೋಡಿ ಗೇಲಿ ಮಾಡಿ ನಕ್ಕಿದ್ದರು ಎಂದಿದ್ದಾರೆ.
ಇತ್ತೀಚೆಗೆ ಯಾರೋ ನನ್ನ ಮಾರ್ಫ್ ಮಾಡಿದ ಫೋಟೋವನ್ನು ಪೋರ್ನ್ ಸೈಟ್ ನಲ್ಲಿ ಹಾಕಿರುವುದು ನಾನು ನೋಡಿದ್ದು, ನೋವು ತಂದಿದೆ. ಇದು ಸಮಂಜಸವಲ್ಲ ಎಂದಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ