ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ವಿ ಮನೋಹರ್ ಬಗೆಗೆ ಒಂದಷ್ಟು ಮಾಹಿತಿ



ಸಂಗೀತ ನಿರ್ದೇಶನದ  ಜೊತೆಗೆ ಗೀತ ರಚನೆ , ಸಂಗೀತ ನಿರ್ದೇಶನ ಮತ್ತು ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ವಿ ಮನೋಹರ್ ಹುಟ್ಟಿದ್ದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ತಂದೆ ಶಿವಾನಂದ ಭಟ್ ಮ್ತತು ತಾಯಿ ಪದ್ಮವತಿಯವರ ಪುತ್ರರಾದ ಇವರು ಆರಂಭದಲ್ಲಿ ದಿನಪತ್ರಿಕೆ ಮತ್ತು ವಾರಪತ್ರಿಕೆಯಲ್ಲಿ ಕಾರ್ಟೂನಿಸ್ಟ್ ಆಗಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದರು.

ಮನೋಹರ್ ಅವರು ಗೆಜ್ಜೆ ನಾದಓ ಮಲ್ಲಿಗೆಇಂದ್ರ ದನುಷ್ಜನುಮದ ಜೋಡಿತರ್ಲೆ ನನ್ನ ಮಗಸ್ವಸ್ತಿಕ್ದುನಿಯಾಈ ಸಂಭಾಷಣೆಬಂದ ನನ್ನ ಗಂಡಜನುಮದ ಗೆಳತಿಮತ್ತು ಮತದಾನದಂತಹ 100 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

 ಜನುಮದ ಜೋಡಿ ಚಿತ್ರದ ಅವರ "ಕೋಲು ಮಂಡೆ" ಹಾಡು 90 ರ ದಶಕದ ಅತ್ಯಂತ ಯಶಸ್ವಿ ಕನ್ನಡ ಹಾಡುಗಳಲ್ಲಿ ಒಂದಾಗಿದೆ. "ದುನಿಯಾ" ಚಿತ್ರದ "ಕರಿಯಾ ಐ ಲವ್ ಯು" ಹಾಡು ಅವರ ದೊಡ್ಡ ಹಿಟ್‌ಗಳಲ್ಲಿ ಒಂದಾಗಿದೆ.

 

ಗೀತರಚನೆಕಾರರಾಗಿ ಅವರ ಮೊದಲ ಹಾಡು ಅನುಭವ ಚಿತ್ರದ "ಹೊದೆಯ ದೂರ ಓ ಜೊತೆಗಾರ" ಹಾಡು.

ವಿಟ್ಲ ಮನೋಹರ್ ಒಬ್ಬ ಭಾರತೀಯ ಸಂಗೀತ ನಿರ್ದೇಶಕ ಮಾತ್ರವಲ್ಲದೆ. ಗೀತರಚನೆಕಾರಚಲನಚಿತ್ರ ನಿರ್ದೇಶಕ ಮತ್ತು ಕನ್ನಡ ಮತ್ತು ತುಳು ಚಲನಚಿತ್ರಗಳ ನಟ ಕೂಡ ಹೌದು. . ಅವರು ಹಲವಾರು ಕನ್ನಡ ಮತ್ತು ತುಳು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 1000ಕ್ಕೂ ಹೆಚ್ಚು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

ಇವರ ಸಾಧನೆಗೆ ಹಲವು ರಾಜ್ಯ ಪ್ರಶಸ್ತಿಗಳು ಲಭಿಸಿದೆ. ತರ್ಲೆ ನನ್ನ ಮಕ್ಕಳು ಚಿತ್ರದ ಮೂಲಕ ಸಂಗೀತ ರಚನೆಗಾರ ಮತ್ತು ಸಂಗೀತ ನಿರ್ದೇಶಕರಾಗಿ ಅವರು ಗುರುತಿಸಿಕೊಂಡರು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?