ಪ್ರಭಾಸ್ ಹಾಗೂ ಶಾರೂಖ್ ಖಾನ್ ನಡುವೆ ಫೈಟ್ !

 


ಪ್ರಭಾಸ್ ಹಾಗೂ ಕಿಂಗ್ ಖಾನ್ ನಡುವೆ ಫೈಟ್..! 



ಪ್ರಭಾಸ್ ಹಾಗೂ ಕಿಂಗ್ ಖಾನ್ ಅಭಿಮಾನಿಗಳು ಬಹುದಿನಗಳಿಂದ ಕಾಯುತ್ತಿರುವ ಸಲಾರ್ ಚಿತ್ರದ ರಿಲೀಸ್ ಡೇಟ್ ಅಧಿಕೃತವಾಗಿ ಹೊಂಬಾಳೆ ಸಂಸ್ಥೆಯಿಂದ ಕನ್ಪರ್ಮ್ ಆಗಿದೆ, ಡಿಸೆಂಬರ್ 22ಕ್ಕೆ ಚಿತ್ರ ತೆರೆಗಪ್ಪಳಿಸಲಿದ್ದು, ಅದೇ ದಿನ ಶಾರೂಖ್ ಖಾನ್ ನಟನೆಯ ಡಂಕಿ ಸಿನಿಮಾ ಕೂಡ ರಿಲೀಸ್ ಆಗಲಿದೆ.  ಕೆಜಿಎಫ್ 2 ಬಳಿಕ ಪ್ರಶಾಂತ್ ನೀಲ್ ಸಲಾರ್ ಸಿನಿಮಾವನ್ನು ಕೈಗೆತ್ತಿಕೊಂಡಿದ್ದರು, ಹೊಂಬಾಳೆ ಸಂಸ್ಥೆಯೇ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಅಂದಹಾಗೆ ಮೂರು ಸಿಕ್ವೆಲ್ ಗಳಲ್ಲಿ ಚಿತ್ರ ರಿಲೀಸ್ ಆಗಲಿದ್ದು, ಡಿಸೆಂಬರ್ 22ಕ್ಕೆ ಮೊದಲ ಭಾಗ ರಿಲೀಸ್ ಆಗಲಿದೆಯಂತೆ. 

ಕೊರೊನಾ ಸಮಯದಲ್ಲಿ ಅಂದರೆ 2020ಯಲ್ಲಿ ಸಲಾರ್ ಸಿನಿಮಾ ಘೋಷಣೆಯಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 2022ರಲ್ಲಿ ಸಿನಿಮಾ ರಿಲೀಸ್ ಆಗಬೇಕಿತ್ತು. ಕಾರಣಾಂತರಗಳಿಂದ ಶೂಟಿಂಗ್ ತಡವಾಗಿ ಆರಂಭವಾಗಿದ್ದರಿಂದ ಚಿತ್ರ ರಿಲೀಸ್ ತಡವಾಯಿತು. ಇದೀಗ ಚಿತ್ರವನ್ನು ಈ ವರ್ಷ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಹೊಸ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡ, ಪೋಸ್ಟರ್ ನಲ್ಲಿ ಪ್ರಭಾಸ್ ಲುಕ್ ಡಿಫರೆಂಟ್ ಆಗಿದೆ. ಕತ್ತಿ ಹಿಡಿದಿರುವ ಪ್ರಭಾಸ್ ರಕ್ತಸಿಕ್ತ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಪೋಸ್ಟರ್ ನೋಡಿದಾಕ್ಷಣ ಅಭಿಮಾನಿಗಳಿಗೆ ಇದೊಂದು ಭಾರಿ ಪೈಟಿಂಗ್ ಇರುವ ಚಿತ್ರ ಎಂಬುದನ್ನು ಸಾಬೀತು ಪಡಿಸಿದಂತಿದೆ. 



ಸಲಾರ್ ಚಿತ್ರದಲ್ಲಿ ಪ್ರಭಾಸ್ ಗೆ ಶೃತಿ ಹಾಸನ್ ನಟಿಯಾಗಿದ್ದರೆ, ಪೃಥ್ವಿರಾಜ್ ಸುಕುಮಾರನ್ ವಿಲನ್ ಆಗಿದ್ದಾರೆ. ದೇವರಾಜ್, ಜಗಪತಿ ಬಾಬು, ರಾಮಚಂದ್ರ, ಈಶ್ವರಿ, ಸೇರಿದಂತೆ ದೊಡ್ಡ ತಾರಾಗಣನನ್ನು ನೋಡಬಹುದಾಗಿದೆ. ಚಿತ್ರಕ್ಕೆ ರವಿಬಸ್ರೂರ್ ಸಂಗೀತ ಮತ್ತು ಭುವನ್ ಗೌಡ ಛಾಯಾಗ್ರಹಣವಿದೆ. 

ಒಟ್ಟಾರೆಯಾಗಿ ಪ್ರಭಾಸ್ ಹಾಗೂ ಕಿಂಗ್ ಖಾನ್ ನಟನೆಯ ಚಿತ್ರಗಳೆರಡು ಒಟ್ಟಾಗಿ ತೆರೆ ಕಾಣುತ್ತಿದ್ದು, ಇವರ ಪೈಟ್ ಹೇಗಿರಲಿದೆ ಇದರಲ್ಲಿ ಯಾರೂ ಗೆಲ್ಲುತ್ತಾರೆ ಅನ್ನೋದು ಸದ್ಯದ ಕುತೂಹಲ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?