ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಹುಚ್ಚೇಗೌಡ ಆದ ಕಥೆ..
ಅಂಬಿ ಎಂಬ ಮಂಡ್ಯದ ಗಂಡಿನ ಲೈಫ್ ಸ್ಟೋರಿ
ಮಳವಳ್ಳಿ ಹುಚ್ಚೇಗೌಡ ಅಮರನಾಥ್ . ಕನ್ನಡ ಚಿತ್ರರಂಗದಲ್ಲಿ ಅಂಬಿ, ಅಂಬರೀಷ್ ಎಂದು ಖ್ಯಾತಿ ಪಡೆದ ಅಂಬಿ ಹುಟ್ಟಿದ್ದು, 1952 ಮೇ 29ರಂದು. ಭಾರತೀಯ ನಟ, ಕರ್ನಾಟಕ ರಾಜ್ಯದ ರಾಜಕಾರಣಿಯೂ ಆಗಿ ಜನ ಸೇವೆ ಸಲ್ಲಿಸಿದ್ದರು. ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಜೊತೆಗೆ, ಅಂಬಿ ಅವರನ್ನು ಕನ್ನಡ ಚಿತ್ರರಂಗದ ತ್ರಿಮೂರ್ತಿಗಳು ಎಂದು ಕರೆಯಲಾಗುತ್ತಿತ್ತು.
1972ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ಕಮರ್ಷಿಯಲ್ ಸಿನಿಮಾಗಳಲ್ಲಿ ಬಂಡಾಯದ ಪಾತ್ರಗಳನ್ನು ನಿರ್ವಹಿಸಿದ್ದರಿಂದ ಅವರಿಗೆ ರೆಬೆಲ್ ಸ್ಟಾರ್ ಎಂಬ ಬಿರುದು ಬಂತು. ಜನ ಪ್ರೀತಿಯಿಂದ ಅವರನ್ನು ಮಂಡ್ಯದ ಗಂಡು ಎಂದೂ ಕೂಡ ಕರೆಯುತ್ತಾರೆ.
1994 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ ನಂತರ, ಅಂಬರೀಶ್ ಮೂರು ಬಾರಿ ಲೋಕಸಭೆಯ ಸದಸ್ಯರಾದರು, , ಮೊದಲು ಜನತಾ ದಳದಿಂದ ಮತ್ತು ನಂತರದ ಎರಡು ಬಾರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ, ಅವರು ಸದಸ್ಯರಾಗಿದ್ದರು. . ಮೂರನೇ ಅವಧಿಯಲ್ಲಿ, ಅವರು ಡಾ. ಮನಮೋಹನ್ ಸಿಂಗ್ ಸಚಿವಾಲಯದ ಭಾಗವಾಗಿ ಅಕ್ಟೋಬರ್ 2006 ಮತ್ತು ಫೆಬ್ರವರಿ 2007 ರ ನಡುವೆ ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2013 ಮತ್ತು 2016 ರ ನಡುವೆ ಅವರು ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದರು ಮತ್ತು ಸಿದ್ದರಾಮಯ್ಯ ಸಂಪುಟದ ಭಾಗವಾಗಿ ವಸತಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ತಮ್ಮ ನಟನಾ ವೃತ್ತಿಜೀವನದಲ್ಲಿ ಅನೇಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ದಕ್ಷಿಣದಲ್ಲಿ ಗೆದ್ದುಕೊಂಡಿದ್ದಲ್ಲದೆ, ಅಂಬರೀಶ್ ಅವರಿಗೆ 2013 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. .ಹಲವು ಪ್ರಶಸ್ತಿಗಳನ್ನು ಬಾಚಿಕೊಂಡ ಅಂಬಿ 2014 ರಲ್ಲಿ ಉಸಿರಾಟದ ಸಮಸ್ಯೆಯಿಂದ ನಿಧನರಾದರು.
ಅಂಬರೀಶ್ ಅವರು ಹಿಂದಿನ ಮೈಸೂರು ರಾಜ್ಯದ (ಈಗಿನ ಕರ್ನಾಟಕ) ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆ ಗ್ರಾಮದಲ್ಲಿ 29 ಮೇ 1952 ರಂದು ಜನಿಸಿದರು. ಮಗನಿಗೆ ಪೋಷಕರು "ಮಳವಳ್ಳಿ ಹುಚ್ಚೇಗೌಡ ಅಮರನಾಥ್" ಎಂದು ಹೆಸರಿಟ್ಟರು. ಹುಚ್ಚೇಗೌಡ ಮತ್ತು ಪದ್ಮಮ್ಮ ಅವರ ಏಳು ಮಕ್ಕಳಲ್ಲಿ ಆರನೆಯವರು ಅಂಬರೀಷ್. ಅಂಬರೀಶ್ ಅವರು ಉನ್ನತ ಶಿಕ್ಷಣಕ್ಕಾಗಿ ಮೈಸೂರಿಗೆ ತೆರಳುವ ಮೊದಲು ಮಂಡ್ಯದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು.
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ತಮ್ಮ ಮುಂಬರುವ ಚಿತ್ರಕ್ಕಾಗಿ ಹೊಸ ಮುಖದ ಹುಡುಕಾಟದಲ್ಲಿದ್ದಾಗ, ಅಂಬರೀಶ್ ಅವರ ಆಪ್ತರಲ್ಲಿ ಒಬ್ಬರಾದ ಸಂಗ್ರಾಮ್ ಸಿಂಗ್ ಅಂಬಿ ಇಚ್ಛೆಗೆ ವಿರುದ್ಧವಾಗಿ ಅವರ ಹೆಸರನ್ನು ಸ್ಕ್ರೀನ್ ಟೆಸ್ಟ್‌ಗೆ ಸೂಚಿಸಿದರು. ಸ್ಕ್ರೀನ್ ಟೆಸ್ಟ್ ನಲ್ಲಿ ವಿಶೇಷವಾಗಿ ಬಾಯಿಯಿಂದ ಸಿಗರೇಟನ್ನು ಎಸೆಯಲು ಸೂಚಿಸಲಾಯಿತು. ಅಂಬರೀಷ್ ಅವರ ಶೈಲಿ ನೋಡಿ ಕಣಗಾಲ್ ಫಿದಾ ಆಗಿ, ಕಣಗಾಲ್ ಅವರು ತಮ್ಮ 1972 ರ ಚಲನಚಿತ್ರ ನಾಗರಹಾವುನಲ್ಲಿ ಅವಕಾಶ ನೀಡಿದರು. ಈ ಚಿತ್ರವು ಅಂಬಿ ಹಾಗೂ ವಿಷ್ಣುವರ್ಧನ್ ಅವರ ಚೊಚ್ಚಲ ಚಿತ್ರವಾಯಿತು.
ಕಣಗಾಲ್ ಅವರ ಇತರ ಚಿತ್ರಗಳಾದ ಪಡುವಾರಳ್ಳಿ ಪಾಂಡವರು, ಶುಭಮಂಗಳ, ಮಸಣದ ಹೂವು ಮತ್ತು ರಂಗನಾಯಕಿ (1981) ಸೇರಿದಂತೆ ಸುಮಾರು 208 ಚಿತ್ರಗಳಲ್ಲಿ ಅಂಬರೀಶ್ ಕಾಣಿಸಿಕೊಂಡರು. 2010 ರ ಹೊತ್ತಿಗೆ, ಅಂಬರೀಶ್ ಅವರು ಕನ್ನಡ ಚಲನಚಿತ್ರಗಳಲ್ಲಿ ನಾಯಕರಾಗಿ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ, ನಾಯಕ ನಟರಾಗಿ ರಾಜ್‌ಕುಮಾರ್ ಅವರ 206 ಚಲನಚಿತ್ರಗಳ ದಾಖಲೆಯನ್ನು ಮತ್ತು ನಾಯಕ ನಟರಾಗಿ ವಿಷ್ಣುವರ್ಧನ್ ಅವರ 230 ಚಲನಚಿತ್ರಗಳ (ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಚಲನಚಿತ್ರಗಳು ಸೇರಿದಂತೆ) ದಾಖಲೆಯನ್ನು ಮೀರಿಸಿದ್ದಾರೆ.
ಅಂಬರೀಶ್ ಅವರು 1994 ರಲ್ಲಿ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಗೆ ಸೇರಿದರು. 1996 ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ನಂತರ ಅವರು ಎರಡು ವರ್ಷಗಳ ನಂತರ ಪಕ್ಷವನ್ನು ತೊರೆದರು. ಅಂಬರೀಶ್ ನಂತರ ಜನತಾದಳಕ್ಕೆ ಸೇರಿ 1998ರ ಸಾರ್ವತ್ರಿಕ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ ಗೆದ್ದರು.
1999 ರಲ್ಲಿ, ಅಂಬರೀಶ್ ಅವರು INC ಗೆ ಮರುಸೇರ್ಪಡೆಯಾದರು ಮತ್ತು 5 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದರು. ಅವರು 14 ನೇ ಲೋಕಸಭೆಯಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಮೇ 2009 ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತರು.
ಸದಸ್ಯ, 12ನೇ ಲೋಕಸಭೆ: 1998–1999
ಸದಸ್ಯ, 13ನೇ ಲೋಕಸಭೆ: 1999–2004
ಸದಸ್ಯ, 14ನೇ ಲೋಕಸಭೆ: 2004–2009
24 ಅಕ್ಟೋಬರ್ 2006 ರಿಂದ 2008 ರವರೆಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿ ಸೇವೆ.
2008ರಲ್ಲಿ ಕಾವೇರಿ ವಿವಾದ ನ್ಯಾಯಾಧಿಕರಣದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟಿಸಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ.
2012ರಲ್ಲಿ ಕೆಪಿಸಿಸಿ ಉಪಾಧ್ಯಕ್ಷ
ಇನ್ನೂ ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೆ, ಅಂಬರೀಷ್ ಅವರು ಅಂಬರೀಶ್ ಅವರು 1984 ರಲ್ಲಿ ಆಹುತಿ ಎಂಬ ಕನ್ನಡ ಚಲನಚಿತ್ರದ ಸೆಟ್‌ನಲ್ಲಿ ಮೊದಲ ಬಾರಿಗೆ ನಟಿ ಸುಮಲತಾ ಅವರನ್ನು ಭೇಟಿಯಾದರು. ಈ ಭೇಟಿ ಸ್ನೇಹಕ್ಕೆ ತಿರುಗಿತು. ಬಳಿಕ 8 ಡಿಸೆಂಬರ್ 1991 ರಂದು ವಿವಾಹವಾದರು ವಿವಾಹವಾದರು. ದಂಪತಿಗೆ ಅಭಿಷೇಕ್ ಗೌಡ ಎಂಬ ಮಗನಿದ್ದಾನೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ