ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?

ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಹಲವು ಮಂದಿಗೆ ಸ್ಟ್ರೀಟ್ ಫುಡ್ ಮತ್ತು ಹೊಟೆಲ್ ಫುಡ್ ಗಳೆಂದರೆ ಪ್ರಾಣ. ಆದರೆ ಈ ಫುಡ್ ಅನ್ನು ಮನೆಯಲ್ಲಿ ಮಾಡಿದರೆ ರುಚಿಸುವುದಿಲ್ಲ. ಇಷ್ಟವಾಗುವುದಿಲ್ಲ. ಹೋಟೆಲ್ ರುಚಿಯನ್ನು ಕೊಡುತ್ತಿಲ್ಲ ಎಂದು ಹಲವು ಮಂದಿ ಹೇಳುವುದನ್ನು ಕೇಳಿದ್ದೇವೆ. ಹಾಗಾದರೆ ಏನಿದು ವಿಶೇಷ, ಯಾಕೆ ಸ್ಟ್ರೀಟ್ ಫುಡ್ ಮತ್ತು ಹೊಟೆಲ್ ಫುಟ್ ಗಳು ಮನೆ ಫುಡ್ ಗಿಂತ ವಿಭಿನ್ನವಾಗಿರುತ್ತದೆ ಎಂಬುದನ್ನು ನಾವು ನೋಡೋಣ. 



ಸಾಮಾನ್ಯವಾಗಿ ಹೊರಗಿನ ಆಹಾರಗಳಿಗೆ ಅಜಿನೋಮೋಟೋವನ್ನು ಬಳಸುತ್ತಾರೆ. ಈ ಪೌಡರ್ ಬಳಸಿದಾಕ್ಷಣ ಆಹಾರ ಸಿಕ್ಕಾಪಟ್ಟೆ ಟೆಸ್ಟಿಯಾಗಿರುತ್ತದೆ. ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ. ಹಾಗಾದರೆ ಈ ಅಜಿನೋಮೋಟೋ ಎಂದರೇನು ಅದು ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ನೋಡೋಣ.

ಅಜಿನೋಮೋಟೋ ಎಂದರೆ ಮೊನೊಸೋಡಿಯಂ ಗ್ಲುಟಮೇಟ್ (MSG) ಯ ಬ್ರಾಂಡ್ ಹೆಸರು. ಇದು ಆಹಾರದ ಪರಿಮಳವನ್ನು ಹೆಚ್ಚಿಸಲು ಬಳಸುವ ಒಂದು ಪೌಡರ್.  ಈ ಕುರಿತಂತೆ ಮಾತನಾಡಿರುವ ಚೆಫ್ ಅಜಯ್ ಚೋಪ್ರಾ, ಅಜಿನೊಮೊಟೋದ ಬಗೆಗೆ ಹಲವು ರೀತಿಯ ನೆಗೆಟೀವ್ ಕಮೆಂಟ್ ಗಳಿದ್ದು, ಅದು ತಿನ್ನ ಆಯೋಗ್ಯವಾದ ವಸ್ತುವಲ್ಲ. ಸರಿಯಾದ ಅಳತೆಯಲ್ಲಿ ಬಳಸಿದರೆ ಅದು ದೇಹಕ್ಕೆ ಅಷ್ಟೋಂದು ಹಾನಿಕಾರಕವಲ್ಲ ಎಂಬುದು ಚೋಪ್ರಾ ವಾದ. 


 ಹಾಗಾದರೆ ಅಜಿನೋಮೋಟೋ ಎಂದರೇನು..?

ಅಜಿನೊಮೊಟೊ ಎಂದರೆ ಆಹಾರದ ರುಚಿವರ್ಧಕ ಎಂದು ಕರೆಯಲಾಗಿದೆ.  ಒಂದು ಅಳತೆಯಲ್ಲಿ ಅದನ್ನು ಮಿತವಾಗಿ ಬಳಸಿದರೆ ಅದು ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬುದು ವೈದ್ಯರ ಮಾತು ಕೂಡ ಹೌದು. ಸಾಮಾನ್ಯವಾಗಿ ಆಹಾರದ ಸುಹಾಸನೆ ಹೆಚ್ಚಿಸಲು ಮತ್ತು ರುಚಿಯನ್ನು ಹೆಚ್ಚಿಸಲು ಇದನ್ನು ಬಳಸಲಾಗುತ್ತದೆ 

ಪಾಕ ಪದ್ದತಿಯಲ್ಲಿ ಇದರ ಬಳಕೆ ಯಾಕೆ? 

MSG ಅನ್ನು ಪ್ರಾಥಮಿಕವಾಗಿ ಆಹಾರಗಳ ಉಮಾಮಿ ಅಥವಾ ಖಾರದ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಇದು ಭಕ್ಷ್ಯಗಳನ್ನು ಹೆಚ್ಚು ಸುವಾಸನೆ ಮತ್ತು ಆಕರ್ಷಕವಾಗಿ ಮಾಡುತ್ತದೆ, ಅದಕ್ಕಾಗಿಯೇ ಇದನ್ನು ಸಾಮಾನ್ಯವಾಗಿ ಅನೇಕ ಪಾಕಪದ್ಧತಿಗಳಲ್ಲಿ ಬಳಸಲಾಗುತ್ತದೆ ಎಂದು ಮುಂಬೈನ ರೆಜುವಾ ಎನರ್ಜಿ ಸೆಂಟರ್‌ನ ಪೌಷ್ಟಿಕತಜ್ಞ ಡಾ ನಿರುಪಮಾ ರಾವ್ ಹೇಳಿದರು. ಇನ್ನೂ ಕೆಲವರಿಗೆ ಈ ಆಹಾರಗಳನ್ನು ಸೇವಿಸಿದಾಗ ತಲೆನೋವು, ಎದೆನೋವು ಕಾಣಿಸಿಕೊಳ್ಳುತ್ತದೆ ಎಂದು ದೂರುತ್ತಾರೆ. ಇದನ್ನು ಚೈನೀಸ್ ರೆಸ್ಟೋರೆಂಟ್ ಸಿಂಡ್ರೋಮ್  ಎಂದು ಕರೆಯಲಾಗುತ್ತದೆ.  ಅಜಿನೋಮೋಟೋದಲ್ಲಿ ಸೋಡಿಯಂ ಹೆಚ್ಚಾಗಿದ್ದು,  ಇದು ಉಪ್ಪಿನ ಅಂಶವಾಗಿದೆ.  "ಸೋಡಿಯಂನ ಅತಿಯಾದ ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಹೃದಯರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗಬಹುದು, ಇದು ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳಿಗೆ ಅಥವಾ ಹೃದ್ರೋಗದ ಅಪಾಯದಲ್ಲಿರುವವರಿಗೆ ತೊಂದರೆಯನ್ನುಂಟು ಮಾಡುತ್ತದೆ" ಎಂದು ಆರೋಗ್ಯ ಮತ್ತು ಕ್ಷೇಮ ಸಲಹೆಗಾರ್ತಿ ಶಿಖಾ ಅಗರ್ವಾಲ್ ಹೇಳಿದ್ದಾರೆ. ಇತರ ಆಹಾರಗಳಂತೆ ಇದನ್ನು ಮಿತವಾಗಿ ಸೇವಿಸಿದಾಗ  ಅಡ್ಡ ಪರಿಣಾಮವಾಗುವುದಿಲ್ಲ ಎಂಬುದು ಶಿಖಾ ಅಗರ್ವಾಲ್ ಹೇಳಿಕೆ.


MSG ಬಳಕೆಯ ಮೇಲೆ ನಿಗಾವಹಿಸುವುದು ಹೇಗೆ..? 


ನಾವು ಸೇವಿಸುವ ಆಹಾರದಲ್ಲಿ MSG ಯ ಮೂಲವನ್ನು ತಿಳಿದುಕೊಳ್ಳುವುದು ಅತ್ಯಗತ್ಯ. "ಟೊಮ್ಯಾಟೊ, ಪಾರ್ಮೆಸನ್ ಚೀಸ್ ಮತ್ತು ಅಣಬೆಗಳಂತಹ ಗ್ಲುಟಮೇಟ್‌ನ ನೈಸರ್ಗಿಕ ಆಹಾರ ಮೂಲಗಳು . ಒಂದು ವೇಳೆ ಆಹಾರದಲ್ಲಿ ನೀವು ಅಜಿನೋಮೋಟೋ ಸೇರಿಸಿದರು ಅದು ಸಮಪ್ರಮಾಣದಲ್ಲಿರಬೇಕೆ ಹೊರತು ಹೆಚ್ಚಾದರೆ ಅಮೃತವೂ ವಿಷ ಎಂಬುದು ಆಹಾರ ತಜ್ಞರ ವಾದ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!