ನಟ ದರ್ಶನ್ ನೋವಿನಿಂದ ಆ ಮಾತು ಹೇಳೋದಿಕ್ಕೆ ಕಾರಣವೇನು?

ನಟ ದರ್ಶನ್ ನೋವಿನಿಂದ ಆ ಮಾತು ಹೇಳಿದ್ಯಾಕೆ? 




ಚಾಲೆಂಜಿಂಗ್ ಸ್ಟಾರ್​ ದರ್ಶನ್ . ಕಾವೇರಿ ಹೋರಾಟಗಾರರ ಬಗ್ಗೆ ಮಾತಾಡಿ  ಇದೀಗ ಕಾವೇರಿ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.  ತಮಿಳು ಸಿನಿಮಾ ನೋಡಿ ಗೆಲ್ಲಿಸ್ತೀರಾ. ಆದರೆ ಹೋರಾಟದ ವಿಚಾರ ಬಂದಾಗ ಮಾತ್ರ ನಿಮಗೆ ದರ್ಶನ್, ಸುದೀಪ್, ಶಿವಣ್ಣ ಮಾತ್ರ ಕಾಣೋದಾ ಎಂಬ ಹೇಳಿಕೆ ಇದೀಗ ವಿವಾದವನ್ನು ಬಡಿದೆಬ್ಬಿಸಿದೆ. 


ನಿಜಕ್ಕೂ ದರ್ಶನ್​ ಹೇಳಿದ್ದೇನು?


ಮೊದ್ಲಿಗೆ ಕಾಂಟ್ರವರ್ಸಿ ವಿಚಾರವಾಗಿ ಮಾತನಾಡೋಣ ಚಿನ್ನ ಎಂದು ಪತ್ರಕರ್ತರೆದುರು ಮಾತು ಆರಂಭಿಸಿದ ನಟ, ಕನ್ನಡ ಸಿನಿಮಾ ನಟರ ವಿಚಾರಕ್ಕೆ ಬಂದಾಗ ಅವರು ಅದಕ್ಕೆ ಬರ್ಲಿಲ್ಲ. ಇದಕ್ಕೆ ಬರ್ಲಿಲ್ಲಾ  ಅಂತೀರಾಲ್ಲ. ಮೊನ್ನೆ ಮೊನ್ನೆ ಒಂದು ತಮಿಳು ಸಿನಿಮಾ ರಿಲೀಸ್ ಆಯ್ತು. ಅದನ್ನು ಒಬ್ಬ 6 ಕೋಟಿಗೆ ಖರೀದಿಸಿ ಕರ್ನಾಟಕದಲ್ಲಿ 36 ಕೋಟಿ ಲಾಭ ಮಾಡಿಕೊಂಡ್ರು. ಹಾಗಾದರೆ ಆ ಸಿನಿಮಾನ ಬರೀ ತಮಿಳಿನವರು ನೋಡಿದ್ರಾ..? ಕನ್ನಡದವರು ನೋಡಿ ತಾನೇ ಅಷ್ಟು ಲಾಭವಾಗಿರೋದು.  ಇದೀಗ ಕಾವೇರಿ ಗಲಾಟೆ ನಡಿತಿದೆ ಬನ್ನಿ ಹೋರಾಟ ಮಾಡೋಣ ಅಂತ ಆ ನಟರನ್ನು ಕರೆಯಿರಿ. ಎಲ್ಲೋ ಇದ್ದು ಏನೋ ಮಾಡದವರಿಗೆ ನೂರಾರು ಕೋಟಿ ಕೊಡುವ ನೀವು ಯಾಕೆ ಕನ್ನಡ ಸಿನಿಮಾವನ್ನು ಗೆಲ್ಲಿಸಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. 

36 ಕೋಟಿ ಬಾಚಿಕೊಂಡ ಅವರಿಂದ ಒಂದು ಟ್ವೀಟ್ ಕೂಡ ಕೇಳಿಲ್ಲಾ. ಅವರ ಬಾಯಿ ಮುಚ್ಚಿಸಿಲ್ಲ. ದರ್ಶನ್ ,ಶಿವಣ್ಣ, ಸುದೀಪ್​, ಯಶ್ ಮಾತ್ರನಾ ನಿಮಗೆ ಕಾಣ್ತಿರೋದು ಯಾಕೆ ನಿಮಗೆ ಅವರ್ಯಾರು ಕಾಣುತ್ತಿಲ್ಲವಾ  ಎಂದು ನಟ ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಹೇಳಿದ್ರು.

ದರ್ಶನ್ ಹೇಳಿದ್ದು ನಿಜವೇ ಆಗಿದ್ದರೂ, ಹೋರಾಟಗಾರರಿಗೆ ಮಾತ್ರ ದರ್ಶನ್ ನೇರ ಮಾತು ನೋವು ತರಿಸಿದೆ. ಹೀಗಾಗಿ ದರ್ಶನ್ ಕ್ಷಮೆಗೆ ಆಗ್ರಹಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?