ಪ್ರಭಾಸ್ ಈ ವಿಚಾರಗಳು ಕಂಫರ್ಟ್ ಅನಿಸುವುದಿಲ್ಲವಂತೆ.
ಹುಟ್ಟುಹಬ್ಬದ ಸಂದರ್ಭದಲ್ಲಿರುವ ಪ್ರಭಾಸ್ ಬಾಹುಬಲಿ ನಂತರ ಕೊಟ್ಟಿದ್ದೆಲ್ಲಾ ಪ್ಲಾಪ್ ಚಿತ್ರಗಳೇ. ಸದ್ಯಕ್ಕೆ ಮತ್ತೊಂದು ಬಿಗ್ ಹಿಟ್ ಎದುರು ನೋಡುತ್ತಿರುವ ಪ್ರಭಾಸ್ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅವರ ನೆಚ್ಚಿನ ಸಿನಿಮಾಗಳು ಯಾವುದು ಮತ್ತು ಅವರಿಗೆ ಇಷ್ಟವಾಗದ ಸಂಗತಿಗಳ ಬಗ್ಗೆ ನೋಡೋಣ.
2002ರಲ್ಲಿ ಈಶ್ವರ್ ಚಿತ್ರದೊಂದಿಗೆ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ಪ್ರಭಾಸ್, ಎರಡು ವರ್ಷಗಳ ನಟನೆಯಲ್ಲಿ ಅಷ್ಟೇನೂ ಕೀರ್ತಿ ತರಲಿದ್ದರೂ, ಅವರ ಕೈ ಹಿಡಿದಿದ್ದು ವರ್ಷಂ ಚಿತ್ರ. ಇದರ ಬಳಿಕ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಪ್ರಭಾಸ್ ಗೆ ಮತ್ತೊಂದು ಬಿಗ್ ಬ್ರೇಕ್ ನೀಡಿದ್ದು 2013ರ ಮಿರ್ಚಿ. ಅಷ್ಟೊತ್ತಿಗಾಗಲೇ ಪ್ರಭಾಸ್ ಬೇಡಿಕೆ ತಮಿಳು ಹಾಗೂ ತೆಲುಗು ಇಂಡಸ್ಟ್ರೀಯಲ್ಲಿ ಮೇರೆ ಮೀರಿತ್ತು. ಯಂಗ್ ರೆಬೆಲ್ ಸ್ಟಾರ್ ಎಂಬ ಪಟ್ಟಗೆದ್ದ ಪ್ರಭಾಸ್ 2015ರಲ್ಲಿ ನಟಿಸಿದ ಬಾಹುಬಲಿ ಚಿತ್ರವಂತೂ ಅವರ ಸಿನಿಜೀವನದ ಒಂದು ಸಂಪೂರ್ಣ ಚಿತ್ರ ಎಂದೇ ಹೇಳಬಹುದು. ಪ್ರಭಾಸ್ ಅನ್ನು ವಿಭಿನ್ನ ಗೆಟಪ್ ಹಾಗೂ ಪಾತ್ರದೊಂದಿಗೆ ತೆರೆ ಮೇಲೆ ನೋಡಿದ ಮಂದಿ ಫೀದಾ ಆಗಿದ್ದರು. ಪಾತ್ರಕ್ಕೆ ತಕ್ಕಂತೆ ಅವರ ನಟನೆ, ವೇಷಭೂಷಣ, ನಡೆ ಎಲ್ಲವೂ ಪ್ರಭಾಸ್ ಗೆ ಹೇಳಿಮಾಡಿಸಿದಂತಿತ್ತು. ಎಸ್ ಎಸ್ ರಾಜಮೌಳಿಯವರ ಈ ಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಭಾಸ್ ಗೆ ಸ್ಟಾರ್ ಡಮ್ ಸಿಗುವಂತೆ ಮಾಡಿತ್ತು.
ತಮಗೆ ಇಷ್ಟವಾಗದ ಕೆಲವು ಸಿನಿಮಾ ಟೈಟಲ್ ಗಳ ಬಗ್ಗೆ ಮಾತನಾಡಿದ್ದ ಪ್ರಭಾಸ್
ಅಂದಹಾಗೆ ಸಿನಿ ಜರ್ನಿಯಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ್ದ ಪ್ರಭಾಸ್, ತಮ್ಮ ಸಿನಿ ಜರ್ನಿಯ ಕುರಿತಂತೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದ ವೇಳೆ ಮಾತನಾಡುತ್ತಾ, ತಮ್ಮ ಕೆಲವು ಟೈಟಲ್ ಗಳು ನನಗೆ ನಿಜಕ್ಕೂ ಕಂಫರ್ಟೆಬಲ್ ಆಗಿಲ್ಲ ಎಂದಿದ್ದರು. ತಾನು ಕೇವಲ ಪ್ರಭಾಸ್ ಆಗಿರಲು ಇಷ್ಟಪಡುತ್ತೇನೆ ಹೊರತು ನನಗೆ ಟೈಟಲ್ ಗಳು ಇಷ್ಟವಾಗುವುದಿಲ್ಲ. ಮಿರ್ಚಿ ಚಿತ್ರದ ಯಶಸ್ಸಿನ ಬಳಿಕ ನನಗೆ ಯಂಗ್ ರೆಬೆಲ್ ಸ್ಟಾರ್ ಎಂದು ಟೈಟಲ್ ನೀಡಲಾಯಿತು. ಆದರೆ ನನಗೆ ಇದು ಕಂಫರ್ಟ್ ಆಗಲಿಲ್ಲ. ಹೀಗಾಗಿ ನಾನು ನನ್ನ ಸ್ನೇಹಿತರ ಮನವೊಲಿಸಲು ಯತ್ನಿಸಿದೆ. ದಯವಿಟ್ಟು ಈ ಹೆಸರನ್ನು ಕೈ ಬಿಡಿ ಎಂದು ಕೇಳಿಕೊಂಡಿದ್ದೆ. ಆದರೆ ಅದಕ್ಕೆ ಅವರು ಅಭಿಮಾನಿಗಳು ಈ ಟೈಟಲ್ ಅನ್ನು ಇಷ್ಟಪಡುತ್ತಿದ್ದಾರೆ. ಹೀಗಾಗಿ ಯಂಗ್ ರೆಬೆಲ್ ಸ್ಟಾರ್ ಅನ್ನೊ ಪಟ್ಟವನ್ನು ವಾಪಾಸ್ ಪಡೆಯುವುದಿಲ್ಲ ಎಂದಿದ್ದರು. ಅಭಿಮಾನಿಗಳ ಇಷ್ಟೇವೆ ನನ್ನ ಇಷ್ಟ ಎಂದು ನಾನು ಕೊನೆಗೆ ಒಪ್ಪಿಕೊಳ್ಳಬೇಕಾಯಿತು ಎಂದಿದ್ದಾರೆ.
ಒಂದೇ ರೀತಿಯ ಸಿನಿಮಾಗಳು ಅಥವ ಕಲಾತ್ಮಕ ಸಿನಿಮಾಗಳಲ್ಲಿ ನಾನು ನಟಿಸುವುದಿಲ್ಲ ಎಂದು ಕೂಡ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ನನ್ನ ಸಿನಿಮಾ ಮನರಂಜನಾತ್ಮಕವಾಗಿರಬೇಕು. ನನ್ನ ಇಮೇಜ್ ನ ಮಿತಿಯಲ್ಲಿ ನಾನು ಚಿತ್ರಗಳನ್ನು ಮಾಡುತ್ತೇನೆ. ಪಾತ್ರಗಳನ್ನು ಮಾಡುತ್ತೇನೆ ಎಂದವರು ಹೇಳಿದ್ದರು. ಉದಾಹರಣೆಗೆಡಾರ್ಲಿಂಗ್ ಮತ್ತು ಮಿಸ್ಟರ್ ಫರ್ಫೆಕ್ಟ್ ಕೌಟುಂಬಿಕ ಪ್ರಧಾನ ಚಿತ್ರಗಳಾಗಿದ್ದು ನನ್ನ ಈ ಪ್ರಯೋಗದಲ್ಲಿ ನಾನು ಯಶಸ್ವಿಯಾಗಿದ್ದೇನೆ. ಆದರೆ ನಾನು ಚಕ್ರಂನಂತರ ಸಿನಿಮಾ ಮಾಡಬಾರದು ಎಂದಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ