ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

 ಇಂದಿಗೆ ಸರಿಯಾಗಿ 39 ವರ್ಷಗಳ ಹಿಂದಿನ ಮಾತು. ಅಕ್ಟೋಬರ್ 31, 1984 ರಂದು ದೇಶದ ಪ್ರಧಾನಿಯಾಗಿದ್ದ ಇಂಧಿರಾಗಾಂಧಿಯ ಮೇಲೆ ಅವರ ಅಂಗರಕ್ಷಕರೇ ಗುಂಡಿಕ್ಕಿ ಹತ್ಯೆಗೈದ ದಿನ. ಪವಿತ್ರ ಗೋಲ್ಡನ್ ಟೆಂಪಲ್ ನಲ್ಲಿ ನಡೆದ ಅಪರೇಷನ್ ಬ್ಲೂ ಸ್ಟಾರ್ ನ ನಂತರ ನಡೆದ ಆ ಘಟನೆಯನ್ನು ಇಂದು ನೆನಪಿಸಿಕೊಳ್ಳಲೇ ಬೇಕು. 



ಇಂದಿರಾ ಗಾಂಧಿಯವರು ಅಕ್ಟೋಬರ್ 31, 1984 ರಂದು ಹತ್ಯೆಗೀಡಾದರು. ಪ್ರಧಾನಿಯವರ ಇಬ್ಬರು ಅಂಗರಕ್ಷಕರಾದ ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಅವರೇ ಪ್ರಧಾನಿಯನ್ನು ಹತ್ಯೆಗೈದರು. ಸಿಖ್ಖರಿಗಾದ ಅವಮಾನ ಮತ್ತು ಕಾರ್ಯಾಚರಣೆಯ ಸಮಯದಲ್ಲಿ ಗೋಲ್ಡನ್ ಟೆಂಪಲ್ ಅನ್ನು ಅಪವಿತ್ರಗೊಳಿಸಿದರು ಎಂಬ ಸೇಡು ತೀರಿಸಿಕೊಳ್ಳಲು 30 ಕ್ಕೂ ಹೆಚ್ಚು ಗುಂಡುಗಳನ್ನು ಅವರ ಮೇಲೆ ಪಾಯಿಂಟ್ ಬ್ಲಾಂಕ್ ರೇಂಜ್ ನಿಂದ ಹಾರಿಸಿದರು. ಆ ವರ್ಷದ ಜೂನ್‌ನಲ್ಲಿ ಬ್ಲೂ ಸ್ಟಾರ್.

ಇಂದಿರಾ ಹತ್ಯೆಯು ರಾಷ್ಟ್ರದಾದ್ಯಂತ  ಅಲ್ಲೋಲ ಕಲ್ಲೋಲವನ್ನು ಸೃಷ್ಟಿಸಿತು. ಭಾರತದಾತ್ಯಂತ ಕೋಮುಸಂಘರ್ಷ ಏರ್ಪಟ್ಟಿತ್ತು.  ಘಟನೆ ನಡದ ಮೂರನೇ ದಿನಗಳಲ್ಲಿ ಸರಿಸುಮಾರು 3350ಕ್ಕೂ ಹೆಚ್ಚು ಸಿಖ್ಖರನ್ನು ಹತ್ಯೆಗೈಯ್ಯಲಾಯಿತು. ಕೇವಲ 2800 ಮಂದಿಯನ್ನು ದೆಹಲಿಯಲ್ಲೇ ಹತ್ಯೆಗೈಯ್ಯಲಾಯಿತು. 


39 ವರ್ಷಗಳ ಹಿಂದೆ ನಡೆದಿದ್ದು ಇದೇ..?

ಸಿಖ್ಖರ ಪವಿತ್ರ ದೇವಾಲಯ ಅಮೃತಸರದ ಗೋಲ್ಡನ್ ಟೆಂಪಲ್. ಈ ದೇವಾಲಯದಲ್ಲಿ ನೆಲೆ ಕಂಡುಕೊಂಡಿದ್ದ ಪ್ರತ್ಯೇಕತಾವಾದಿಗಳನ್ನು ಹೊರಹಾಕಲೆಂದು ಆ ದಿನ ಭಾರತೀಯ ಸೇನೆ ಅಪರೇಷನ್ ಬ್ಲೂ ಸ್ಟಾರ್ ಹೆಸರಿನಲ್ಲಿ ಮಂದಿರವನ್ನು ನುಗ್ಗಿತು. ಸೇನೆಯ ಕಾರ್ಯಾಚರಣೆ ಯಶಸ್ವಿಯಾದರೂ, ಈ ಕಾರ್ಯಾಚರಣೆಯಿಂದ ದೇವಾಲಯಕ್ಕೆ ದೊಡ್ಡ ಹಾನಿಯಾಯಿತು. ಸಾವಿರಾರು ಮಂದಿ ಸಿಖ್ಖರು ಕೂಡ ಸಾವನಪ್ಪಿದರು. ಇದು ವಿಶ್ವಾದ್ಯಂತ ಸಿಖ್ಖರನ್ನು ಕೆರಳಿಸಿತು, ಹೀಗಾಗಿ ಅಪರೇಷನ್ ಬ್ಲೂಸ್ಟಾರ್ ಎಂಬುದು ನಮ್ಮ ನಂಬಿಕೆಯ ಮೇಲೆ ನಡೆದ ದಾಳಿ ಎಂದು ಸಿಖ್ಖರು ಅಂದುಕೊಂಡರು.

ಕಾರ್ಯಾಚರಣೆಯ ಹೊಣೆಯನ್ನು ಪ್ರಧಾನಿಯೇ ಹೊತ್ತುಕೊಂಡರು. ಈ ಕುರಿತಂತೆ ಕ್ಯಾಥರೀನ್ ಫ್ರಾಂಕ್ ಅವರು ಬರೆದಿರುವ ಇಂದಿರಾ: ದಿ ಲೈಫ್ ಆಫ್ ಇಂದಿರಾ ನೆಹರೂ ಗಾಂಧಿ, 2001ರಲ್ಲಿ ಬರೆದುಕೊಂಡಿದ್ದಾರೆ. 

ವಿಶೇಷವೆಂದರೆ ಬ್ಲೂಸ್ಟಾರ್ ನಂತರದ ದಿನಗಳಲ್ಲಿ ಮತ್ತು ತಿಂಗಳುಗಳಲ್ಲಿ ಇಂದಿರಾ ಗಾಂಧಿ ತನ್ನ ಸನಿಹದವರಲ್ಲಿ ಮತ್ತು ಕುಟುಂಬಸ್ಥರೊಂದಿಗೆ ತನ್ನ ಸಾವಿನ ಕುರಿತಂತೆ ಮಾತನಾಡುತ್ತಿದ್ದರು. ನಾನು ಅವಳನ್ನು ಅಂತಹ ಮನಸ್ಥಿತಿಯಲ್ಲಿ ನೋಡಿದ್ದು ತೀರಾ ಅಪರೂಪ ಎಂದು ಇಂದಿರಾ ಅವರ ಆತ್ಮೀಯರಾಗಿದ್ದ ಮತ್ತು ಜೀವನಚರಿತ್ರೆಕಾರರಾದ ಪುಫುಲ್ ಜಯಕರ್ ಅವರು ಇಂದಿರಾಗಾಂಧಿ; ಎ ಬಯೋಗ್ರಫಿ 2000 ರಲ್ಲಿ ಬರೆದುಕೊಂಡಿದ್ದಾರೆ. ಜಯಕರ್ ಅವರು ಇಂದಿರಾಗೆ ಸಾವಿನ ಬಗ್ಗೆ ಏಕೆ ಮಾತನಾಡುತ್ತಿದ್ದೀರಾ ಎಂದು ಕೇಳಿದಾಗ ಅವರು ಸರಳವಾಗಿ ಇದು ಅನಿವಾರ್ಯವಲ್ಲವೇ ಎಂದು ಪ್ರತಿಕ್ರಿಯಿಸಿದ್ದರು ಎಂದ ಕೂಡ ಬರೆದುಕೊಂಡಿದ್ದಾರೆ. 


ಸಿಖ್ ಕಾವಲುಗಾರನ್ನೇ ನೇಮಿಸಿಕೊಂಡರು.

ದೇಶಾದ್ಯಂತ ಸಿಖ್ಖರು ಇಂದಿರಾಗಾಂಧಿ ಅವರ ವಿರುದ್ಧ ಧಂಗೆ ಎದ್ದರೂ ಪ್ರಧಾನಿಯಾಗಿದ್ದ ಇಂದಿರಾರವರು ಮಾತ್ರ ತನ್ನ ಕಾವಲುಗಾರರಾಗಿ ಸಿಖ್ಖರೆ ಮುಂದುವರೆಯಲಿ ಎಂದು ಒತ್ತಾಯಿಸಿದರು. ಅಪರೇಷನ್ ಬ್ಲೂ ಸ್ಟಾರ್ ನಂತರ ಇಂದಿರಾ ಅವರ ಭದ್ರತೆಯನ್ನು ಹೆಚ್ಚಿಸಲಾಯಿತು. ಆಕೆ ತನ್ನ ಭದ್ರತೆಯನ್ನು ಪೊಲೀಸರಿಂದ ಸೇನೆಗೆ ವರ್ಗಾಯಿಸಲು ನಿರಾಕರಿಸಿದರೂ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ನಿಂದ ಕಮಾಂಡೋಗಳನ್ನು ಆಕೆಯ ರಕ್ಷಣಾ ತಂಡಕ್ಕೆ ಸೇರಿಸಲಾಯಿತು. 

ಆಕೆಯ ಕುಟುಂಬದ ಸುತ್ತ, ವಿಶೇಷವಾಗಿ ಆಕೆಯ ಮೊಮ್ಮಕ್ಕಳಾದ ರಾಹುಲ್ (ಆಗ 14), ಮತ್ತು ಪ್ರಿಯಾಂಕಾ (12) ಅವರ ಸುತ್ತ ಭದ್ರತೆಯನ್ನು ಹೆಚ್ಚಿಸಲಾಯಿತು. “ತನ್ನ ಮೊಮ್ಮಕ್ಕಳು ಅಪಹರಣಕ್ಕೊಳಗಾಗುತ್ತಾರೆ ಅಥವಾ ಅವರಿಗೆ ಅಪಾಯವಾಗಬಹುದು ಎಂಬ  ಭಯವನ್ನು ಅವಳು ಹೊಂದಿದ್ದಳು. ಜೂನ್‌ನಿಂದ ಅವಳು ಆ ಭಯಾನಕ ಆಲೋಚನೆಯೊಂದಿಗೆ ಬದುಕು ಸಾಗಿಸಿದ್ದಳು, ”ಎಂದು ಇಂದಿರಾ ಅವರ ಪ್ರಧಾನ ಕಾರ್ಯದರ್ಶಿ ಪಿ ಸಿ ಅಲೆಕ್ಸಾಂಡರ್ ನಂತರ ಜಯಕರ್‌ಗೆ ತಿಳಿಸಿದ್ದರಂತೆ. 

ಆದಾಗ್ಯೂ, ತನ್ನ ರಕ್ಷಣೆ ಸಿಬ್ಬಂದಿಗಳಾಗಿದ್ದ ಸಿಖ್ಖರನ್ನು ತೆಗೆದುಹಾಕಲು ಅವಳು ನಿರಾಕರಿಸಿದಳು. ಇಂಡಿಯನ್ ಎಕ್ಸ್‌ಪ್ರೆಸ್ ತನ್ನ ನವೆಂಬರ್ 1, 1984 ರ ಆವೃತ್ತಿಯಲ್ಲಿ ವರದಿ ಪ್ರಸಾರ ಮಾಡಿದಂತೆ,  ಇಂಟೆಲಿಜೆನ್ಸ್ ಬ್ಯೂರೋದ ನಿರ್ದೇಶಕರು ಜುಲೈ 1984 ರಲ್ಲಿ ಇಂದಿರಾ ಅವರಿಗೆ "ಗುಪ್ತಚರ ಸಂಸ್ಥೆಗಳಿಂದ ಪಡೆದ ಕೆಲವು  ವರದಿಗಳ ಪ್ರಕಾರ, ಯಾವುದೇ ಕಾರಣಕ್ಕೂ ಸಿಖ್ಖರನ್ನು ಅವರ ಭದ್ರತೆಗೆ ಇಟ್ಟುಕೊಳ್ಳಬಾರದು ಎಂದು ಶಿಫಾರಸ್ಸು ಮಾಡಿದ್ದರು ಎಂದು ವರದಿ ಮಾಡಿತ್ತು. 

ಇಂದಿರಾ ಶಿಫಾರಸನ್ನು ತಿರಸ್ಕರಿಸಿದರು ಮತ್ತು "ನಾವು ಜಾತ್ಯತೀತರಲ್ಲವೇ?" ಎಂದು ಪ್ರತಿಕ್ರಿಯಿಸಿದ್ದರು.

ಈ ಕುರಿತಂತೆ ಗುಪ್ತಚರ ಇಲಾಖೆ ಮಾಡಿದ ಶಿಫಾರಸ್ಸನ್ನು ಇಂದಿರಾಗಾಂಧಿ ಅವರು ತಿರಸ್ಕರಿಸಿದ್ದರು ಮತ್ತು ನಾವು ಜಾತ್ಯಾತೀತರಲ್ಲವೆ? ಎಂದು ಪ್ರಶ್ನಿಸಿದ್ದರು ಎಂದು ಜಯಪ್ರಕಾರ್ ಜೀವನಚರಿತ್ರೆಯಲ್ಲಿ ಬರೆದುಕೊಂಡಿದ್ದರು. ಹೀಗಾಗಿಯೇ ಆಕೆ ತನ್ನ ಸ್ವಂತ ಮನೆಯಲ್ಲಿ ತನ್ನ ಸ್ವಂತ ಕಾವಲುಗಾರರಿಂದಲೇ ಹತ್ಯೆಗೀಡಾದಳು .

ಅಕ್ಟೋಬರ್ 31 ರ ಬೆಳಿಗ್ಗೆ 9.10 ರ ಸುಮಾರಿಗೆ, ಇಂದಿರಾ ಗಾಂಧಿಯವರು ನವದೆಹಲಿಯ 1 ಸಫ್ದರ್‌ಜಂಗ್ ರಸ್ತೆಯಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಹೊರಬಂದರು ಮತ್ತು 1 ಅಕ್ಬರ್ ರಸ್ತೆಯಲ್ಲಿರುವ ತಮ್ಮ ಬಂಗಲೆಯಲ್ಲಿರುವ ತಮ್ಮ ವೈಯಕ್ತಿಕ ಕಚೇರಿಗೆ ತೆರಳಿದರು. ಆಕೆ ಕಾನ್ಸ್‌ಟೇಬಲ್‌ಗಳಾದ ನರೇನ್ ಸಿಂಗ್ ಮತ್ತು ರಾಮೇಶ್ವರ್ ದಯಾಳ್, ಆಕೆಯ ಆಪ್ತ ಕಾರ್ಯದರ್ಶಿ ಆರ್ ಕೆ ಧವನ್ ಮತ್ತು ಆಕೆಯ ಮನೆಯ ಸಹಾಯಕ ನಾಥು ರಾಮ್ ಅವರನ್ನು ಒಳಗೊಂಡ ಸಣ್ಣ ಸಿಬ್ಬಂದಿಗಳನ್ನು ಹೊಂದಿದ್ದರು. 

ಇಂದಿರಾಗಾಂಧಿ ಉದ್ಯಾನದ ಹಾದಿಯಲ್ಲಿ ನಡೆಯುತ್ತಿದ್ದಾಗ, ಇಂದಿರಾ ಅವರ ಭದ್ರತಾ ವಿವರಗಳ ದೀರ್ಘಾವಧಿಯ ಸದಸ್ಯ ಸಬ್-ಇನ್ಸ್ಪೆಕ್ಟರ್ ಬಿಯಾಂತ್ ಸಿಂಗ್ ಮುಂದೆ ಬಂದರು. ನೂತನವಾಗಿ ನೇಮಕವಾದ ಕಾನ್ಸ್ಟೇಬಲ್ ಸತ್ವಂತ್ ಸಿಂಗ್,  ಕೆಲವು ಹೆಜ್ಜೆ ದೂರದಲ್ಲಿ ನಿಂತಿದ್ದರು. 

"ಅವಳು ಮುಗುಳ್ನಕ್ಕು ತನ್ನ ಕೈಗಳನ್ನು ಮಡಚಿ ನಮಸ್ಕರಿಸಿದಳು, ಅವಳು ತನಗೆ ನಮಸ್ಕರಿಸುವಂತೆ ತನ್ನ ಕೈಯನ್ನು ಎತ್ತುತ್ತಿದ್ದಳು ... ಆದರೆ ಕೈ ರಿವಾಲ್ವರ್ ಅನ್ನು ಹಿಡಿದಿತ್ತು ಮತ್ತು ಅವನು ಮೂರು ಅಡಿ ದೂರದಿಂದ ಅವಳ ಹೊಟ್ಟೆಗೆ ಗುಂಡು ಹಾರಿಸಿದನು" ಎಂದು ಜಯಕರ್ ಬರೆದಿದ್ದಾರೆ.


ಗುಂಡಿನ ಚಕಮಕಿ ಸುಮಾರು 25 ಸೆಕೆಂಡುಗಳ ಕಾಲ ನಡೆಯಿತು, ಈ ಸಮಯದಲ್ಲಿ ಇಂದಿರಾ ನೆಲಕ್ಕೆ ಕುಸಿದರು. ಕಾನ್‌ಸ್ಟೆಬಲ್ ದಯಾಳ್ ಬಂದೂಕುಧಾರಿಗಳತ್ತ ನುಗ್ಗಲು ಯತ್ನಿಸಿದ್ದು, ತೊಡೆಯ ಭಾಗಕ್ಕೆ ಗುಂಡು ತಗುಲಿತು.

ಶೂಟೌಟ್ ಮುಗಿದ ನಂತರ, ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಇಬ್ಬರೂ ತಮ್ಮ ಶಸ್ತ್ರಾಸ್ತ್ರಗಳನ್ನು ಕೈಬಿಟ್ಟರು. “ನಾನು ಏನು ಮಾಡಬೇಕೋ ಅದನ್ನು ಮಾಡಿದ್ದೇನೆ. ಈಗ ನೀವು ಏನು ಮಾಡಬೇಕೋ ಅದನ್ನು ಮಾಡುತ್ತೀರಿ, ”ಎಂದು ಬಿಯಾಂತ್ ಸಿಂಗ್ ಪಂಜಾಬಿಯಲ್ಲಿ ಹೇಳಿದರು. ಘಟನಾ ಸ್ಥಳಕ್ಕೆ ಆಗಮಿಸಿದ ನರೇನ್ ಸಿಂಗ್ ಮತ್ತು ITBP ಕಮಾಂಡೋಗಳ ಗುಂಪಿನಿಂದ ಇಬ್ಬರನ್ನೂ ತ್ವರಿತವಾಗಿ ವಶಕ್ಕೆ ಪಡೆಯಲಾಯಿತು. 

ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಂದಿರಾ ದೇಹವನ್ನು ಕೂಡಲೇ ಅಂಬಾಸಿಡರ್ ಕಾರ್ ನಲ್ಲಿ ಏಮ್ಸ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ನಾಲ್ಕು ಗಂಟೆಯ ಸುದೀರ್ಘ ಅಪರೇಷನ್ ನಂತರವೂ ಇಂದಿರಾ ಗಾಂಧಿಯನ್ನು ಬದುಕುಳಿಸಲು ವೈದ್ಯರಿಂದ ಸಾಧ್ಯವಾಗಲಿಲ್ಲ. ಹೀಗಾಗಿ 2.23ಕ್ಕೆ ಇಂದಿರಾ ಸಾವನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. 

ಚುನಾವಣಾ ಪ್ರಚಾರಕ್ಕಾಗಿ ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ರಾಜೀವ್ ಗಾಂಧಿಯವರು ಸುದ್ದಿ ತಿಳಿಯುತ್ತಿದ್ದಂತೆ ಕೂಡಲೇ ದೆಹಲಿಗೆ ವಾಪಾಸ್ಸಾದರು. ಅಕ್ಟೋಬರ್ 31ರಂದು ಮದ್ಯಾಹ್ನ ಅವರು ದೆಹಲಿಗೆ ವಾಪಾಸ್ಸಾಗುವ ಮೊದಲೇ ಮುಂದಿನ ಪಕ್ಷದ ಉತ್ತರಾಧಿಕಾರಿಯನ್ನು ಪಕ್ಷವು ರಾಜೀವ್ ಗಾಂಧಿ ಅವರನ್ನು ಆಯ್ಕೆ ಮಾಡಿತ್ತು.

ಆದರೆ ಪರಿಸ್ಥಿತಿ ವಿಚಿತ್ರ ತಿರುವು ಪಡೆದುಕೊಂಡಿತು. ಸಿಖ್ಖರ ವಿರುದ್ಧ ಜನ ದಂಗೆ ಎದ್ದರು. ಹಿಂಸಾಚಾರ ಮೇರೆ ಮೀರಿತು. ಖೂನ್ ಕಾ ಬದ್ಲಾ ಖೂನ್ ಸೆ ಲೆಂಗೆ ಎಂದು ಜನ ಹಿಂಸಾಚಾರವನ್ನು ಪ್ರಚೋದಿಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಪ್ರಧಾನಿಗಳು ಸೇನೆಯನ್ನೇ ಸ್ಥಾಪಿಸಿದರು ಎಂದು ಜಯಕರ್ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.      

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?