ಏನಿದು Disease X? ರೋಗ ಲಕ್ಷಣಗಳು ಹೇಗಿರುತ್ತವೆ ಗೊತ್ತಾ?

 ಕೋವಿಡ್ 19ಕ್ಕಿಂದ ಮಾರಕ ಕಾಯಿಲೆ Disease X? 




2019ರಲ್ಲಿ ಇಡೀ  ವಿಶ್ವವನ್ನು ಆವರಿಸಿದ ಕೋವಿಡ್ 19 ನರಮೇದವನ್ನೇ ನಡೆಸಿತ್ತು. ಸರಿಸುಮಾರು 3 ವರ್ಷಗಳ ಕಾಲ ಇಡೀ ಮನುಕುಲವನ್ನೇ ನಡುಗಿಸಿದ ಈ ಕಾಯಿಲೆ ಇದೀಗ ತಕ್ಕ ಮಟ್ಟಿಗೆ ತಹಬದಿಗೆ ಬಂದು ಜನ ಅಬ್ಬಾ ಎನ್ನುತ್ತಿರುವಂತೆ ಇದೀಗ ವಿಶ್ವಕ್ಕೆ ಮತ್ತೊಂದು ಕಂಟಕ ಕಾದಿದೆ. ಸದ್ಯಕ್ಕೆ ಕಾಲಿಟ್ಟಿರುವ Disease X? ಕೋವಿಡ್ ಗಿಂತಲೂ ಮಾರಕವಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. 

ಕೋವಿಡ್ 19 ಮರುಕಳಿಸುವ ಮತ್ತು ಪರಿಚಿತ ಆರೋಗ್ಯ ಸಮಸ್ಯೆಯಾಗಿರುವುದರಿಂದ ಇದೀಗ ಜನ ಅದರ ಬಗ್ಗೆ ಅಷ್ಟೇನು ತಲೆಕೆಡಿಸಿಕೊಂಡಿಲ್ಲ. ಆದರೆ ಸದ್ಯಕ್ಕೆ ಕಾಣಿಸಿಕೊಂಡಿರುವ   ಡಿಸೀಸ್   ಸಂಭಾವ್ಯ ಹೊಸ ಸಾಂಕ್ರಾಮಿಕವಾಗುವುದರಲ್ಲಿ ಎರಡು ಮಾತಿಲ್ಲ ಎನ್ನುತ್ತಿದ್ದಾರೆ ತಜ್ಡರು. ಹೀಗಾಗಿ ಅಮೆರಿಕಾದಲ್ಲಿ  ಈ ಹೊಸ ಸಾಂಕ್ರಾಮಿಕಕ್ಕೆ ತಯಾರಿ ನಡೆಸುತ್ತಿದ್ದು, ಈ ಹೊಸ ವೈರಸ್ 1918-1920ರಲ್ಲಿ ಕಾಣಿಸಿಕೊಂಡ ಸ್ಪ್ಯಾನಿಷ್ ಜ್ವರದಂತೆ ವಿನಾಶಕಾರಿಯಾಗಿದೆ ಎಂಬುದು ಆರೋಗ್ಯತಜ್ಞರ ಆತಂಕ.

 Disease X ಕ್ಕೆ 50 ಮಿಲಿಯನ್ ಮಂದಿ ಬಲಿಯಾಗುವ ಸಾಧ್ಯತೆ..!

Disease X ರೋಗವು 50 ಮಿಲಿಯನ್ ಸಾವಿಗೆ ಕಾರಣವಾಗಬಹುದು ಎಂದು ತಜ್ಞರು ಅಂದಾಜಿಸಲಾಗಿದೆ. ಡಿಸೀಸ್ ಎಕ್ಸ್ ಸುಮಾರು 50 ಮಿಲಿಯನ್ ಸಾವಿಗೆ ಕಾರಣವಾಗುವ ಆತಂಕವನ್ನು ತಜ್ಞರು ಆತಂಕ ವ್ಯಕ್ತಪಡಿಸಿದ್ದು, 1918-1919 ಫ್ಲೂ ಸಾಂಕ್ರಾಮಿಕವು ಪ್ರಪಂಚದಾದ್ಯಂತ 50 ಮಿಲಿಯನ್ ಮಂದಿಯ ಸಾವಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.  


ಈಗಾಗಲೇ ನಾವೆಲ್ಲಾ ಕೋರೋನಾ ಸೋಂಕಿಗೆ ವ್ಯಾಕ್ಸಿನ್ ತೆಗೆದುಕೊಂಡಂತೆ ಮತ್ತೊಮ್ಮೆ ಇಡೀ ವಿಶ್ವ ಮತ್ತೊಂದು ವ್ಯಾಕ್ಸಿನೇಷನ್ ಗೆ ತಯಾರಿ ನಡೆಸುವ ಅಗತ್ಯವಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.

ಜ್ವರದ ಲಕ್ಷಣಗಳು ಹೇಗಿರುತ್ತದೆ ಗೊತ್ತಾ?

ಸ್ಪ್ಯಾನಿಷ್ ಜ್ವರದ ಲಕ್ಷಣಗಳನ್ನು ಗಮನಿಸುವುದಾದರೆ, ಹಠಾತ್ತನೆ ಜ್ವರ ಮತ್ತು ಹೈ ಫೀವರ್

ಒಣಕೆಮ್ಮು

ಗಂಟಲು ನೋವು, ಗಂಟಲು ಕೆರೆತ, 

ವಿಪರೀತವಾದ ತಲೆನೋವು, ಮೈಕೈ ನೋವು

ಚಳಿ, 

ಶೀತ, 

ಹಸಿವಾಗದಿರುವುಕೆ

ಆಯಾಸ

ಈ ಜ್ವರಕ್ಕೆ ಕಾರಣವೇನು?

ಈ ಸ್ಪ್ಯಾನಿಷ್ ಜ್ವರಕ್ಕೆ ಮುಖ್ಯ ಕಾರಣ ವೈರಸ್. ಪಕ್ಷಿ ಸಂಕುಲಗಳಿಂದ ಆರಂಭವಾದ ಈ ವೈರಸ್ ಬಳಿಕ ಸಸ್ತನಿಗಳಿಗೆ ಹರಡಿತು.  ಈ ವೈರಸ್ ನಲ್ಲಿ ಎರಡು ವಿಧವಿದ್ದು, ಟೈಪ್ ಎ ಮತ್ತು ಟೈಪ್ ಬಿ. ಟೈಪ್ ಎ ಸಾಂಕ್ರಾಮಿಕ ಮಾತ್ರ ಸಾಂಕ್ರಾಮಿಕವಾಗಿ ಹರಡುತ್ತದೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅವಕಾಶಗಳನ್ನು ಪಡೆಯಲು ನಟಿ ಜ್ಯೋತಿಕಾ ಈ ರೀತಿಯೂ ಮಾಡಿದ್ದಾರಂತೆ...|

ಲಾಕ್ ಡೌನ್ ಲವ್ ಸ್ಟೋರಿಗೆ ಮದುವೆಯ ಬ್ರೇಕ್. ಅಮೀರ್ ಖಾನ್ ಮಗಳು ಹಿರಾ ಲವ್ ಸ್ಟೋರಿ