ಇಂದಿರಾಗಾಂಧಿ- ಫಿರೋಜ್ ಗಾಂಧಿಯವರ ಕುರಿತಂತೆ 'The Tatas, Freddie Mercury & Other Bawas', ಪುಸ್ತಕದಲ್ಲಿ Coomi Kapoor ಹೇಳಿಕೊಂಡಿರುವ ವಿಚಾರದ ಕುರಿತಂತೆ ದಿ ಪ್ರಿಂಟ್ ಪ್ರಕಟಿಸಿರುವ ವರದಿಯ ಭಾವಾನುವಾದವನ್ನು ಇಲ್ಲಿ ಪ್ರಕಟಿಸಲಾಗಿದೆ. ಇಂದಿರಾಗಾಂಧಿ... ಇಂದಿಗೂ ರಾಜಕಾರಣದಲ್ಲಿ ಇವರ ಹೆಸರು ಹೇಳಿದರೆ ರಾಜಕಾರಣಿಗಳು ಬೆಚ್ಚಿಬೀಳುತ್ತಾರೆ. ಖಡಕ್ ಮಾತು ನಡೆಯಿಂದಲೇ ಫೇಮಸ್ ಆಗಿದ್ದ ಇಂದಿರಾಗಾಂಧಿ ಹಠವಾದಿ, ಛಲವಾದಿಯೂ ಹೌದು. ಫಿರೋಜ್ ಗಾಂಧಿಯನ್ನು ಮದುವೆಯಾಗಿದ್ದ ಇಂದಿರಾಗಾಂಧಿ, ನೆಹರೂ ಕುಟುಂಬದಿಂದ ಗಾಂಧಿ ಕುಟುಂಬಕ್ಕೆ ಹೋಗುತ್ತಾರೆ. ಅಲ್ಲಿಂದ ಆಕೆಯ ಹೆಸರಿನ ಹಿಂದೆ ಗಾಂಧಿ ಸೇರ್ಪಡೆಯಾಗುತ್ತದೆ. ಆದೇನೆ ಇರಲಿ, ಸದ್ಯಕ್ಕೆ ತಿಳಿದ ಹೊಸ ವಿಚಾರವೆಂದರೆ ಇಂದಿರಾಗಾಂಧಿಯನ್ನು ಮದುವೆಯಾದ ಬಳಿಕ ಫಿರೋಜ್ ಗಾಂಧಿ ಇಂದಿರಾರಿಗೆ ವಿಚ್ಛೇದನ ನೀಡಿ, ಆ ಮಹಿಳೆಯನ್ನು ಮದುವೆಯಾಗಲು ರೆಡಿಯಾಗಿದ್ದರಂತೆ. ಈ ಕುರಿತಂತೆ ಮಾತನಾಡಿರುವ ಕೂಮಿ ಕಾಪೂರ್, ಇಂದಿರಾ ಹಾಗೂ ಫಿರೋಜ್ ಮದುವೆ ಹೇಗೆ ಮಿಸ್ ಮ್ಯಾಚ್ ಆಗಿದ್ದು ಆರಂಭದ ದಿನಗಳಲ್ಲಿ ಎಂಬುದನ್ನು ವಿವರಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ನಾನು ನೆಹರೂ ಮತ್ತು ಫಿರೋಜ್ ಗಾಂಧಿ ಅವರ ಅಲಹಾಬಾದ್ ನಲ್ಲಿರುವ ಮನೆಗೆ ಭೇಟಿ ನೀಡಿದ್ದೆ. ಅದು ಈಗ ಆನಂದ ಭವನ, ಮೋತಿ ಲಾಲ್ ಭವನ ಅಂತ ಏನಿದೆ ಅದನ್ನು ದೇಶಕ್ಕೆ ಉಡುಗೊರೆಯಾಗಿ ನೀಡಿದ್ದಾರೆ....