2023 ವಿಲನ್ ಗಳಾಗಿ ತೆರೆ ಮೇಲೆ ಮಿಂಚಿದವರು

 ಸಾಮಾನ್ಯವಾಗಿ ಸಿನಿಮಾಗಳು ತೆರೆ ಮೇಲೆ ಬರುತ್ತಿದೆ ಎಂದರೆ ಹೆಚ್ಚಿನ ಮಂದಿ ತಮ್ಮ ನೆಚ್ಚಿನ ಹಿರೋ ಹಿರೋಯಿನ್ ಗಾಗಿ ಚಿತ್ರ ಮಂದಿರದತ್ತ ತೆರಳಿದರೆ ಮತ್ತೆ ಕೆಲವರದ್ದು ವಿಭಿನ್ನವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಂತೂ ಹಿರೋಗಳಿಗಿಂತ ವಿಲನ್ ಗಳೆ ಹೆಚ್ಚು ಇಷ್ಟವಾಗು್ತಾರೆ. ಇದಕ್ಕೆ ಕಾರಣ ಅವರ ಸ್ಟೈಲೀಶ್ ಅಪಿಯರೆನ್ಸ್ , ಫಿಟ್ ಆಂಡ್ ಫೈನ್ ಆಗಿರೋ ಬಾಡಿ ಏನೇ ಇರಬಹುದು. 




ಅದಿರಲಿ 2023ರಲ್ಲಿ ಹಿರೋ ಆಗಿದ್ದವರು ವಿಲನ್ ರೋಲ್ ಮಾಡಿ ಪ್ರೇಕ್ಷಕರ ಮನಗೆದ್ದ ಒಂದಷ್ಟು ಮಂದಿಯನ್ನು ನಾವು ಇವತ್ತು ನಿಮಗೆ ಪರಿಚಯಿಸುತ್ತೀವಿ ನೋಡಿ. 

ಈ ವರ್ಷ ತೆರೆಗೆ ಪರಿಚಿತರಾದ ಹೊಸ ಖಳನಟರ ಬ್ಯಾಚ್ ಅನ್ನು ನೋಡೋಣ

ಸಂಜಯ್ ದತ್

ತೆರೆ ಮೇಲೆ ಹಿರೋ ಆಗಿ ಪ್ರೇಕ್ಷಕರನ್ನು ರಂಜಿಸಿದ್ದ ಸಂಜಯ್ ದತ್, ಕೆಜಿಎಫ್ 2 ಚಿತ್ರದಲ್ಲಿ ವಿಲನ್ ಆಗಿ ಎಂಟ್ರಿ ಕೊಟ್ಟು ರಂಜಿಸಿದ್ದರು. ಈ ವರ್ಷ ದಳಪತಿ ಅವರು  ದಳಪತಿ ವಿಜಯ್ ಅವರ 'ಲಿಯೋ' ಚಿತ್ರದಲ್ಲಿ 'ಆಂಟನಿ ದಾಸ್' ಪಾತ್ರದಲ್ಲಿ ಕಾಣಿಸಿಕೊಂಡರು. ಅವರ ಅಭಿನಯವನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ

 ಮನೀಶ್ ವಾಧ್ವಾ.

ಶಾರೂಖ್ ಖಾನ್ ನಟನೆಯ ಜವಾನ್ ಸನ್ನಿ ಡಿಯೋಲ್ ಫಠಾಣ್ ಚಿತ್ರದಲ್ಲಿ  ಮನೀಷ್ ಪಾಕಿಸ್ತಾನಿ ಮೇಜರ್ ಜನರಲ್ ಪಾತ್ರವನ್ನು ನಿರ್ವಹಿಸಿದ್ದಾರೆ ಮತ್ತು ಸಾಕಷ್ಟು ಚಪ್ಪಾಳೆಗಳನ್ನು ಗೆದ್ದಿದ್ದಾರೆ.

ಸೈಫ್ ಅಲಿಖಾನ್

 ಓಂ ರಾವುತ್ ಅವರ ಮೆಗಾಫ್ಲಾಪ್ ಚಿತ್ರ 'ಆದಿಪುರುಷ'ದಲ್ಲಿ ಸೈಫ್ ನೆಗೆಟೀವ್ ರೋಲ್ ನಲ್ಲಿ ನಟಿಸಿದ್ದರು. ಇದೀಗ ಜೂನಿಯರ್ ಎನ್‌ಟಿಆರ್ ಅವರ 'ದೇವ್ರಾ' ಚಿತ್ರದಲ್ಲಿ 'ಭೈರಾ' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಜಯ್ ಸೇತುಪತಿ

ದಕ್ಷಿಣದ ಖ್ಯಾತ ನಟ ವಿಜಯ್ ಸೇತುಪತಿ ‘ಜವಾನ್’ ಚಿತ್ರದಲ್ಲಿ ‘ಕಾಳಿ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಹಿರೋಗೆ ವಿಲನ್ ಕಠಿಣ ಪೈಪೋಟಿ ನೀಡಿದ್ದನ್ನು ಮರೆಯುವಂತಿಲ್ಲ. 

ಇಮ್ರಾನ್ ಹಶ್ಮಿ

ಕಿಸ್ ನಿಂದ ಫೇಮಸ್ ಆಗಿದ್ದ ಇಮ್ರಾನ್ ಇದೀಗ ವಿಲನ್ ಆಗಿ ಜನಕ್ಕೆ ಇಷ್ಟವಾಗಿದ್ದಾರೆ. 'ಟೈಗರ್ 3' ನಲ್ಲಿ ವಿಲನ್ ಆಗಿ ಎಂಟ್ರಿಕೊಟ್ಟು ಜನಮನಗೆದ್ದಿದ್ದಾರೆ. 

ಬಾಬಿ ಡಿಯೋಲ್

ರಣ್ ಬೀರ್ ಕಾಪೂರ್ ಅಭಿನಯದ ಅನಿಮಲ್ ನಲ್ಲಿ ಬಾಬಿ ಡಿಯೋಲ್ ವಿಲನ್ ಆಗಿ ಫೇಮಸ್ ಆಗಿದ್ದಾರೆ.  ಇದೀಗ ಸೌತ್‌ನಲ್ಲಿ ಸೂರ್ಯ ಅಭಿನಯದ 'ಕಂಗುವ' ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ

ಜೈಲರ್

ರಜನಿಕಾಂತ್ ಅಭಿನಯದ  'ಜೈಲರ್'. ಚಿತ್ರದಲ್ಲಿ ವಿನಾಯಕನ್ ಖಳನಾಯಕನ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?