ಕಾಟೇರ ಸಿನಿಮಾ ಸ್ಟೋರಿ ರಿವೀಲ್ ಮಾಡಿದ ದರ್ಶನ್ : ರೆಟ್ರೋ ಸ್ಟೈಲ್ ಗುಟ್ಟು ರಟ್ಟು

 ದರ್ಶನ್ ಅಭಿನಯದ ಕಾಟೇರ ಸಿನಿಮಾದ ಕುರಿತಂತೆ ಹೊಸ ಹೊಸ ಅಪ್ಡೇಟ್ ಗಳು ಹೊರಬರುತ್ತಲೇ ಇದೆ. ಇದೀಗ ಚಿತ್ರದ ಕುರಿತಂತೆ ಒಂದಷ್ಟು ಮಾಹಿತಿಯನ್ನು ಚಿತ್ರದ ನಿರ್ದೇಶಕ  ಜಡೇಶ್ ಹಂಪಿ ಹಾಗೂ ನಟ ದರ್ಶನ್ ಹೇಳಿಕೊಂಡಿದ್ದಾರೆ.

ಕಾಟೇರ ಸಿನಿಮಾ ಮಾಮೂಲಿ ನನ್ನ ಚಿತ್ರಗಳಂತಲ್ಲಾ. ಇದು ತುಂಬಾನೆ ಢಿಫರೆಂಟ್ ಆಗಿದೆ. ಹಿರೋ ಎಂಟ್ರಿ ಅಂದರೆ ದಾಮ್ ದೂಮ್ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಚಿತ್ರದಲ್ಲಿನ ಹಿರೋ ಎಂಟ್ರಿ ಢಿಫರೆಂಟಾಗಿದೆ. ಸಿನಿಮಾ ಶುರುವಾದ 20 ನಿಮಿಷದ ನಂತರ ಹಾಡು 40 ನಿಮಿಷದ ನಂತರ ಫೈಟ್ ಇರಲಿದೆ ಎಂದವರು ಹೇಳಿದ್ದಾರೆ.



ಇನ್ನೂ ನಿರ್ೇದಶಕ ಜಡೇಶ್ ಹಂಪಿ, ಪಾತ್ರದ ತೂಕದ ಕುರಿತಂತೆ ಹೇಳಿಕೊಂಡಿದ್ದಾರೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ 70ರ ದಶಕದ ಕಥೆಯನ್ನು ಕಟ್ಟಿಕೊಡಲಾಗಿದ್ದು. ಉಳುವವನೆ ಹೊಲದೊಡೆಯ ಕಾಯ್ದೆಯ ಸುತ್ತ ಈ ಕಥೆ ಸುತ್ತುತ್ತದೆ. 

ಈ ಕುರಿತಂತೆ ಮಾತನಾಡಿರುವ ನಿರ್ದೇಶಕರು, ದರ್ಶನ್ ಅವರದ್ದು ಪವರ್ ಫುಲ್ ಪಾತ್. ಬಹಳ ಫೋರ್ಸ್ ಇರುವ ಪಾತ್ರ. ಕುಲುಮೆಯಲ್ಲಿ ಕೆಲಸ ಮಾಡಿದಂತಹ ಪಾತ್ರವದು, ಕಬ್ಬಿಣದ ಜೊತೆಗೆ ಬೆಳೆದಂತಹ ಪಾತ್ರವದು. ಪ್ರತಿಮಚ್ಚು ಎರಡು ದಪ ಕೆಂಪಾಗೈತೆ. ಬೆಂಕಿಲಿ ಬೆಂದಾಗ, ರಕ್ತದಲ್ಲಿ ನೆಂದಾಗ. ಅಂದ್ರೆ ಈ ಪಾತ್ರ ಎರಡನ್ನು ನೋಡಿರುತ್ತದೆ. ಹಾಗಗಿ ಆ ಪಾತ್ರ ಅಷ್ಟರ ಮಟ್ಟಿಗೆ ಮಾಸ್ ಆಗಿದೆ ಎಂದವರು ಹೇಳಿದ್ದಾರೆ. 

ಅಂದಹಾಗೆ ರಾಬಾರ್ಟ್ ಸಿನಿಮಾದ ಬಳಿಕ ತರುಣ್ ಸುಧೀರ್ ಹಾಗೂ ದರ್ಶನ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾವೇ ಕಾಟೇರ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?