ಸಾಯುವ ಮುನ್ನ ಆ ನಟನಿಗೆ ಆಕ್ಷನ್ ಕಟ್ ಹೇಳಬೇಕಂತೆ ಪ್ರಶಾಂತ್ ನೀಲ್

 


ಉಗ್ರಂ ಸಿನಿಮಾ ಬಂದ ಮೇಲೆ ನಿರ್ದೇಶಕ ಪ್ರಶಾಂತ್ ನೀಲ್ ರೇಂಜ್ ಬದಲಾಗಿದೆ. ಅಭಿಮಾನಿಗಳು ಅವರನ್ನು ನೋಡುವ ಅವರಿಂದ ಎಕ್ಸ್ ಪೆಕ್ಟ್ ಮಾಡುವ ರೀತಿಯೂ ಬದಲಾಗಿದೆ. ಇದೀಗ ಎಲ್ಲರ ಕಣ್ಣು ಸಲಾರ್ ಸಿನಿಮಾದ ಮೇಲೆ ಬಿದ್ದಿದೆ. ಸಲಾರ್ ಸಿನಿಮಾದಲ್ಲಿ ಬಾಹುಬಲಿ ಖ್ಯಾತಿಯ ಪ್ರಭಾಸ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಹೀಗಾಗಿ ಚಿತ್ರದ ಕುರಿತಂತೆ ಇರುವ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ. ಅದೇನೆ ಇರಲಿ ಈಗಾಗಲೇ ಸಲಾರ್ ಸಿನಿಮಾದ ಟ್ರೈಲರ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. 

ಉಗ್ರಂ ಚಿತ್ರವನ್ನೇ ಕೊಂಚ ಬದಲಾಯಿಸಿ ಚಿತ್ರ ಮಾಡಲಾಗಿದೆ ಎನ್ನಲಾಗುತ್ತಿದ್ದು, ಅಭಿಮಾನಿಗಳು ಚಿತ್ರದ ಟ್ರೈಲರ್ ನೋಡಿ ಥ್ರಿಲ್ಲಾಗಿದ್ದಾರೆ. ಚಿತ್ರ ಎರಡು ಭಾಗದಲ್ಲಿ ತೆರೆಗೆ ಬರಲಿದ್ದು, ಮೊದಲ ಭಾಗ ಡಿಸೆಂಬರ್ 22ಕ್ಕೆ ತೆರೆಗೆ ಅಪ್ಪಳಿಸಲಿದೆ. ಪಂಚ ಭಾಷೆಗಳಲ್ಲಿ ಏಕಕಾಲದಲ್ಲಿ ಸಿನಿಮಾ ರಿಲೀಸ್ ಆಗಲಿದ್ದು, ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿರುವ ಈ ಚಿತ್ರ 200 ಕೋಟಿ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣವಾಗಿದೆ. 



ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ನಿರ್ದೇಶಕರು ಇತ್ತೀಚೆಗೆ ಸಂದರ್ಶವೊಂದರಲ್ಲಿ ಮಾತನಾಡುತ್ತಾ, ಸಲಾರ್ ಸಿನಿಮಾದ ಎದುರು ಡಂಕಿ ಸಿನಿಮಾ ರಿಲೀಸ್ ಆಗುತ್ತಿದ್ದು, ನಿಮಗೆ ಭಯವಾಗುತ್ತಿದೆಯೆ ಎಂಬ ಪ್ರಶ್ನೆಗೆ ನನಗಿರುವುದು ಭಯ ಬೇರೆಯೆ. ಪ್ರೇಕ್ಷಕ ನನ್ನ ಸಿನಿಮಾವನ್ನು ಇಷ್ಟ ಪಡುತ್ತಾನೋ ಇಲ್ಲವೋ ಎಂಬುದಷ್ಟೇ ನನ್ನ ಭಯ ಎಂದಿದ್ದಾರೆ. 

ಇದೀಗ ತಮ್ಮ ನೆಚ್ಚಿನ ನಟನೊಬ್ಬನ ಕುರಿತಂತೆ ಮಾತನಾಡಿರುವ ಪ್ರಶಾಂತ್ ನೀಲ್, ನನಗೆ ಆ ನಟನೆಂದರೆ ಅತೀಯಾದ ಇಷ್ಟ. ಅವರಿಗೆ ಆಕ್ಷನ್ ಕಟ್ ಹೇಳುವುದು ನನ್ನ ಕನಸು. ಎಂದಿದ್ದಾರೆ. ನಟ ಅಮಿತಾಬ್ ನ ದೊಡ್ಡ ಅಭಿಮಾನಿ ನಾನು. ನಾನು ಸಾಯುವ ಮುನ್ನ ಅವರ ಚಿತ್ರವನ್ನು ಮಾಡಬೇಕು ನನ್ನ ಚಿತ್ರದಲ್ಲಿ ಅವರು ವಿಲನ್ ಆಗಿರಬೇಕು ಅದು ನನ್ನ ಕನಸು ಎಂದಿದ್ದಾರೆ ಅವರು. ಒಂದು ವೇಳೆ ಅವರು ನನ್ನೊಂದಿಗೆ ಸಿನಿಮಾ ಮಾಡಲು ಒಪ್ಪಿದರೆ ಅದು ನನಗೆ ಸಿಕ್ಕ ದೊಡ್ಡ ಗೌರವ ಎಂದು ಹೇಳಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?