ಇಂದಿರಾಗಾಂಧಿಗೆ ವಿಚ್ಛೇದನ ನೀಡಿ ಆ ಮಹಿಳೆಯನ್ನು ಮದುವೆಯಾಗಲು ಹೊರಟಿದ್ದರಂತೆ ಫಿರೋಜ್ ಗಾಂಧಿ...!

 ಇಂದಿರಾಗಾಂಧಿ- ಫಿರೋಜ್ ಗಾಂಧಿಯವರ ಕುರಿತಂತೆ  'The Tatas, Freddie Mercury & Other Bawas', ಪುಸ್ತಕದಲ್ಲಿ  Coomi Kapoor ಹೇಳಿಕೊಂಡಿರುವ ವಿಚಾರದ ಕುರಿತಂತೆ ದಿ ಪ್ರಿಂಟ್  ಪ್ರಕಟಿಸಿರುವ ವರದಿಯ ಭಾವಾನುವಾದವನ್ನು ಇಲ್ಲಿ ಪ್ರಕಟಿಸಲಾಗಿದೆ. 



ಇಂದಿರಾಗಾಂಧಿ... ಇಂದಿಗೂ ರಾಜಕಾರಣದಲ್ಲಿ ಇವರ ಹೆಸರು ಹೇಳಿದರೆ ರಾಜಕಾರಣಿಗಳು ಬೆಚ್ಚಿಬೀಳುತ್ತಾರೆ. ಖಡಕ್ ಮಾತು ನಡೆಯಿಂದಲೇ ಫೇಮಸ್ ಆಗಿದ್ದ ಇಂದಿರಾಗಾಂಧಿ ಹಠವಾದಿ, ಛಲವಾದಿಯೂ ಹೌದು. ಫಿರೋಜ್ ಗಾಂಧಿಯನ್ನು ಮದುವೆಯಾಗಿದ್ದ ಇಂದಿರಾಗಾಂಧಿ, ನೆಹರೂ ಕುಟುಂಬದಿಂದ ಗಾಂಧಿ ಕುಟುಂಬಕ್ಕೆ ಹೋಗುತ್ತಾರೆ. ಅಲ್ಲಿಂದ ಆಕೆಯ ಹೆಸರಿನ ಹಿಂದೆ ಗಾಂಧಿ ಸೇರ್ಪಡೆಯಾಗುತ್ತದೆ. ಆದೇನೆ ಇರಲಿ, ಸದ್ಯಕ್ಕೆ ತಿಳಿದ ಹೊಸ ವಿಚಾರವೆಂದರೆ ಇಂದಿರಾಗಾಂಧಿಯನ್ನು ಮದುವೆಯಾದ ಬಳಿಕ ಫಿರೋಜ್ ಗಾಂಧಿ ಇಂದಿರಾರಿಗೆ ವಿಚ್ಛೇದನ ನೀಡಿ, ಆ ಮಹಿಳೆಯನ್ನು ಮದುವೆಯಾಗಲು ರೆಡಿಯಾಗಿದ್ದರಂತೆ. 

ಈ ಕುರಿತಂತೆ ಮಾತನಾಡಿರುವ ಕೂಮಿ ಕಾಪೂರ್, ಇಂದಿರಾ ಹಾಗೂ ಫಿರೋಜ್ ಮದುವೆ ಹೇಗೆ ಮಿಸ್ ಮ್ಯಾಚ್ ಆಗಿದ್ದು ಆರಂಭದ ದಿನಗಳಲ್ಲಿ ಎಂಬುದನ್ನು ವಿವರಿಸಿದ್ದಾರೆ.



ಕೆಲವು ವರ್ಷಗಳ ಹಿಂದೆ ನಾನು ನೆಹರೂ ಮತ್ತು ಫಿರೋಜ್ ಗಾಂಧಿ ಅವರ  ಅಲಹಾಬಾದ್ ನಲ್ಲಿರುವ ಮನೆಗೆ ಭೇಟಿ ನೀಡಿದ್ದೆ. ಅದು ಈಗ ಆನಂದ ಭವನ, ಮೋತಿ ಲಾಲ್ ಭವನ ಅಂತ ಏನಿದೆ ಅದನ್ನು ದೇಶಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆ ಅವರ ಕುಟುಂಬಕ್ಕಾಗಲಿ ಜನಕ್ಕಾಗಲಿ ಕಿಂಚಿತ್ತೂ ಗೌರವವಿಲ್ಲ ಎಂಬುದು ದುರ್ದೈವ ಎಂದಿರುವ ಕೂಮಿ ಕಾಪೂರ್,ಅಲ್ಲಿ ಫಿರೋಜ್ ಗಾಂಧಿ ಅವರ ಚಿತಾಭಸ್ಮವನ್ನು ಸಮಾಧಿ ಮಾಡಲಾಗಿದೆ. ಆದರೆ ಫಿರೋಜ್ ಅವರ ಅಂತ್ಯಕ್ರಿಯೆಯನ್ನು ಸಂಪೂರ್ಣ ಹಿಂದೂ ವಿಧಿಗಳೊಂದಿಗೆ ಮಾಡಲಾಗಿದೆ ಮತ್ತು ಅವರ ಇಬ್ಬರು ಪುತ್ರರಾದ ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ ಚಿತೆಗೆ ಬೆಂಕಿ ಇಟ್ಟರು ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 



ಒಂದು ವಿಚಾರವೆಂದರೆ ಜೊರಾಸ್ಟ್ರಿಯನ್ ಪಾದ್ರಿಯೊಬ್ಬರು ಸಮುದಾಯದ ಸದಸ್ಯರು ಮತ್ತು ಪುತ್ರರೊಂದಿಗೆ ಮಾತ್ರ ದೇಹದ ಮೇಲೆ ಗಥಾ ಪ್ರಾರ್ಥನೆಗಳನ್ನು ಓದಲು ಮೊದಲು ಅನುಮತಿ ನೀಡಲಾಯಿತು ಎಂದಿದ್ದಾರೆ. 



ಇಂದಿರಾ ಹಾಗೂ ಫಿರೋಜ್ ಅವರ ವಿವಾಹವೂ ಆರಂಭದಲ್ಲಿ ಕೊಂಚ ಗೊಂದಲದಿಂದ ಕೂಡಿತ್ತು. ಹೊಂದಾಣಿಕೆಯ ಕೊರತೆ ಎದುರಾಗಿತ್ತು. ಇಂದಿರಾ ನಾಚಿಕೆ, ಸಂಯಮ, ಘನತೆ ಮತ್ತು ವಿವೇಚನೆಯುಳ್ಳವಳಾಗಿದ್ದಳು. ತನ್ನ ಕುಟುಂಬಕ್ಕಿರುವ ಸ್ಥಾನಮಾನದ ಕುರಿತಂತೆ ಸ್ಥಿತ ಪ್ರಜ್ಜೆಯಾಗಿದ್ದಳು. ಫಿರೋಜ್ ಘಟಾನುಘಟಿಯಾಗಿದ್ದ, ಒಳ್ಳೆಯ ಹೃದಯವಂತ, ವಿನೋದ- ಪ್ರೀತಿ ಜೊತೆಗೆ ಕೊಂಚ ದಡ್ಡತನವೂ ಆತನಲ್ಲಿತ್ತು. ಆತ ಇಂದಿರಾರನ್ನು ಭೇಟಿಯಾದಾಗ ಆತ ನೆಹರೂ ಅವರ ಬಗ್ಗೆ ತಿಳಿದು ಸಂಪೂರ್ಣ ಭಯಪಟ್ಟಿದ್ದ.  ಫಿರೋಜ್ ರನ್ನು ಅವರ ತಾಯಿಯ ಸಹೋದರಿ ಅಕ್ಕನಿಂದ ದತ್ತು ಪಡೆದಿದ್ದರು. ಆಕೆ ದೇಶದ ಮೊದಲ ಮಹಿಳಾ ಶಸ್ತ್ರಚಿಕಿತ್ಸಾಕರಲ್ಲಿ ಒಬ್ಬರು. ಆಕೆ ಅಲಹಾಬಾದ್ ನ ಲೇಡಿ ಡಫರಿನ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆಕೆಯ ಹೆಸರು ಶಿರಿನ್ ಕಮಿಸ್. ಫಿರೋಜ್ ತಂದೆ ಜಹಾಂಗೀರ್ ಗಾಂಧಿ ಮೆರಿನ್ ಎಂಜಿನಿಯರ್ ಆಗಿದ್ದರು. ಅವರದ್ದು ಗುಜರಾತಿನ ಮಧ್ಯಮವರ್ಗದ ಕುಟುಂಬ. ಬಾಂಬೆಯಲ್ಲಿ ನೆಲೆ ಕಂಡುಕೊಂಡಿದ್ದರು. ತಾಯಿ ರಿಟ್ಟಿ.



ಫಿರೋಜ್ ರಿಟ್ಟಿ ಹಾಗೂ ಜಹಾಂಗೀರ್ ಗಾಂಧಿ ದಂಪತಿಯ ಐದನೇ ಪುತ್ರ. ಹೀಗಾಗಿ ಫಿರೋಜ್ ನನ್ನು ದತ್ತು ನೀಡುವಂತೆ ಸಹೋದರಿಯಲ್ಲಿ ಕೇಳಿಕೊಂಡ ಅವಿವಾಹಿತೆ ಶಿರಿನ್, ಆತನ ಪಾಲನೆ ಪೋಷಣೆ ಮತ್ತು ಶಿಕ್ಷಣದ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾಳೆ. ಜಹಾಂಗೀರ್ ಅವರ ಅಕಾಲಿಕ ಮರಣದ ನಂತರ, ರಟ್ಟಿ ಮತ್ತು ಅವರ ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಅಲಹಾಬಾದ್‌ನಲ್ಲಿ ಕಳೆದರು. 

ಶಾಲಾ ಬಾಲಕನಾಗಿದ್ದಾಗ ಫಿರೋಜ್ ಅವರು , ಅನಾರೋಗ್ಯದಿಂದ ಬಳಲುತ್ತಿದ್ದ ಇಂದಿರಾ ಅವರ ತಾಯಿ ಕಮಲಾ ನೆಹರೂ ಅವರ ಸಂಪರ್ಕಕ್ಕೆ ಬಂದರು. ಅವರ ಬಗ್ಗೆ ಫಿರೋಜ್ ಗೆ ವಿಶೇಷವಾದ ಗೌರವಿತ್ತು. ಫಿರೋಜ್ ಅವರ ಪರೋಪಕಾರ, ಏಕಾಂಗಿಯಾಗಿರುವರಿಗೆ ಸಹಾಯ ಮಾಡಲು ಸದಾ ರೆಡಿಯಾಗಿರುವ ಮನೋಭಾವ ಇಷ್ಟವಾಯಿತು.. ನೆಹರೂ ಅವರ ಕುಟುಂಬದ ಒಡನಾಟವೋ ಏನೋ ಫಿರೋಜ್  ಸ್ವಾತಂತ್ರ್ಯ ಚಳವಳಿಯಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಇದಕ್ಕೆ ಅವರ  ಪಾರ್ಸಿ ಕುಟುಂಬದ ಬೇಸರವಿತ್ತು.  ಫಿರೋಜ್ ತನ್ನ ಭವಿಷ್ಯವನ್ನು ಹಾಳು ಮಾಡುತ್ತಿದ್ದಾನೆ ಎಂದು ಅವರು ಮಹಾತ್ಮ ಗಾಂಧಿ ಮತ್ತು ಪಂಡಿತ್ ನೆಹರು ಇಬ್ಬರಿಗೂ ದೂರು ನೀಡಿದರು. ಒಂದು ವೇಳೆ ನೀನು ಇದೇ ಕಾರ್ಯ ಮುಂದುವರೆಸಿದ್ದೇ ಆದಲ್ಲಿ ಇಂಗ್ಲೇಂಡ್ ನಲ್ಲಿ ಓದಬೇಕು ಎನ್ನುವ ನಿನ್ನ ಶಿಕ್ಷಣಕ್ಕೆ ಹಣಕಾಸಿನ ನೆರವೂ ನೀಡುವುದಿಲ್ಲ ಎಂದು ಶಿರಿನ್ ಬೆದರಿಕೆ ಕೂಡ ಹಾಕಿದರು. 



ಆಕೆಗೆ ಆಗಿನ್ನೂ 16 ವರ್ಷ. ಇಂದಿರಾಗಾಂಧಿಯ ಕುರಿತಂತೆ ಫಿರೋಜ್ ಗೆ ಒಂದಷ್ಟು ಒಲವು ಇತ್ತು. ಆದರೆ ಇಂದಿರಾಗಾಂಧಿ ಮೇಲೆ ಇತರರಿಗೆ ಅಷ್ಟೇ ಆಕರ್ಷಣೆಯಿತ್ತು. ಫಿರೋಜ್ ಮೇಲೆ ವಿಶೇಷವಾದ ಯಾವುದೇ ಒಲವನ್ನು ಇಂದಿರಾ ತೋರಿಸಿರಲಿಲ್ಲ. 

23ರ ಹರೆಯದಲ್ಲಿ ಇಬ್ಬರು ಶಿಕ್ಷಣಕ್ಕಾಗಿ ಇಂಗ್ಲೆಂಡ್ ಗೆ ತೆರಳಿದ್ದರು. ಇಂದಿರಾ ಆಕ್ಸ್ ಫರ್ಡ್ ನಲ್ಲಿ ಮತ್ತು ಫಿರೋಜ್ ಲಂಡನ್ ನ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಓದುತ್ತಿದ್ದರು. ಲಂಡನ್ ನಲ್ಲಿ ಅವರಿಬ್ಬರ ಸ್ನೇಹ ನಿಧಾನವಾಗಿ ಪ್ರೇಮಕ್ಕೆ ತಿರುಗಿತ್ತು ಎಂಬ ಮಾತುಗಳಿದ್ದರೂ ಈ ಬಗ್ಗೆ ಇಂದಿರಾ ತನ್ನ ತಂದೆಗೆ ಯಾವುದೇ ರೀತಿಯ ಮಾತು ಹೇಳಿರಲಿಲ್ಲ. 

ಸ್ವಯಂ ಇಚ್ಛೆಯುಳ್ಳ ಇಂದಿರಾ ಭಾರತಕ್ಕೆ ಹಿಂದಿರುಗಿದ ನಂತರ ಫಿರೋಜ್ ಅವರನ್ನು ಮದುವೆಯಾಗುವುದಾಗಿ ತಂದೆಗೆ ತಿಳಿಸುತ್ತಾರೆ. ಮಗಳ ನಿರ್ಧಾರ ಕೇಳಿ ತಂದೆ ಅಚ್ಚರಿಗೊಳಗಾಗುತ್ತಾರೆ. ಅಸಮಾಧಾನಗೊಂಡ ನೆಹರೂ, ಮಹಾತ್ಮಗಾಂಧಿಯವರನ್ನು ಭೇಟಿಯಾಗುವಂತೆ ಕೇಳಿಕೊಂಡರು. ಆದರೆ ಇಂದಿರಾ ಸಂಕಲ್ಪ ತೊಟ್ಟಿದ್ದನ್ನು ನೋಡಿ, ಗಾಂಧೀಜಿ ಆಶೀರ್ವಾದ ಮಾಡಿದರು. ಎರಡನೇ ಮಹಾಯುದ್ಧದ ಕೋಲಾಹಲದ ನಡುವೆಯೇ ವಿವಾಹವೂ ಕಾಂಗ್ರೆಸ್ ಪಕ್ಷದ ಪ್ರಮುಖರ ಸಮ್ಮುಖದಲ್ಲೇ ನಡೆಯಿತು. ವಿವಾಹ ಸಿದ್ದತೆಗಳು ನಡೆಯುತ್ತಿದ್ದರು ನೆಹರೂ ಅವರು ತಣ್ಣಗಿದ್ದರು. ಕಾರಣ ಇಂದಿರಾ ಹಾಗೂ ಫಿರೋಜ್ ಅವರ ಧರ್ಮ ಬೇರೆಯಾಗಿದ್ದರಿಂದ ಕೆಲವರು ಹಿಂಸಾತ್ಮಕ ಆಕ್ರೋಶ ಹೊರಹಾಕಿದ್ದರು.  (ಉತ್ತರ ಭಾರತದಲ್ಲಿ, ಕೆಲವರಿಗೆ ಪಾರ್ಸಿ ಎಂದರೆ ಏನು ಎಂದು ತಿಳಿದಿತ್ತು; ಅವರಿಗೆ 'ಫಿರೋಜ್' ಎಂಬ ಹೆಸರು ಮುಸ್ಲಿಂ ಎಂದು ಧ್ವನಿಸುತ್ತದೆ.) ಇಂದಿರಾ ಗಾಂಧಿಯವರ ಜೀವನಚರಿತ್ರೆಕಾರರಾದ ಕ್ಯಾಥರೀನ್ ಫ್ರಾಂಕ್, ಫಿರೋಜ್ ಅವರ ವಂಶಾವಳಿ ಮತ್ತು ಸಂಪರ್ಕಗಳ ಕೊರತೆಯಿಂದಾಗಿ ಮದುವೆಯ ನಿರೀಕ್ಷೆಯು ನೆಹರೂರನ್ನು ಅಸಮಾಧಾನಗೊಳಿಸಿತ್ತು ಎಂದು ಬರೆದಿದ್ದಾರೆ. . ನೆಹರೂ ಮೌಲ್ಯವರ್ಧಿಸಿದರು. ಅವನು ಹಾಗೆ ಇರುತ್ತಿರಲಿಲ್ಲ. ಆತ ತನ್ನ ಶಿಕ್ಷಣವನ್ನೂ ಪೂರ್ಣಗೊಳಿಸಲಿಲ್ಲ.  ಯಾವುದು ವೃತ್ತಿ ಪರ ಅರ್ಹತೆಗಳನ್ನು ಹೊಂದಿರಲಿಲ್ಲ ಮತ್ತು ಸ್ಥಿರ ಆದಾಯದ ನಿರೀಕ್ಷೆ ಇರಲಿಲ್ಲ. ಅಂತಿಮವಾಗಿ, ಅವರು ವೈದಿಕ ಸಮಾರಂಭದಲ್ಲಿ ವಿವಾಹವಾದರು. ಝೋರಾಸ್ಟ್ರಿಯನ್ ಸ್ಪರ್ಶವೆಂದರೆ ಫಿರೋಜ್ ಅವರ ತಾಯಿ ರಟ್ಟಿ ಅವರು ಫಿರೋಜ್ ಅವರ ಶೆರ್ವಾನಿಯ ಅಡಿಯಲ್ಲಿ ಕುಸ್ತಿಯನ್ನು (ಪಾರ್ಸಿಯರು ಧರಿಸುವುದ ನೂಲಿನಂತಹ ಒಂದು ಸಂಪ್ರದಾಯಿಕ ವಸ್ತು)  ಧರಿಸಲು ಮನವೊಲಿಸಿದರು.

ಆದರೆ ಇದು ಫಿರೋಜ್ ನ ಪಾರ್ಸಿ ಆಚರಣೆಯ ಪ್ರತಿಪಾದನೆಗೆ ಸೂಕ್ತವಾಗಿರಲಿಲ್ಲ. ಪಾರ್ಸಿ ಸಂಪ್ರದಾಯವನ್ನು ರಹಸ್ಯವಾಗಿ ಇರಿಸಲಾಗತ್ತು.  ಫಿರೋಜ್ ಕೂಡ ಪಾರ್ಸಿ ಸಮಾಜದವರೊಂದಿಗೆ ಬೆರೆಯಲಿಲ್ಲ. ಜೊರಾಸ್ಟ್ರಿಯನ್ ಪದ್ಧತಿಯನ್ನು ಅನುಸರಿಸಲಿಲ್ಲ. ಪಾರ್ಸಿಗಳಿಗಿಂತ ಭಿನ್ನವಾಗಿ, ಅಲಹಾಬಾದ್‌ನಲ್ಲಿ ಅವರ ಪಾಲನೆ ಎಂದರೆ ಅವರು ದೋಷರಹಿತ ಹಿಂದಿ ಮಾತನಾಡುತ್ತಿದ್ದರು ಮತ್ತು ಕೆಲವು ಪರಿಣತಿಯೊಂದಿಗೆ ಗೀತಾ ಭಾಗಗಳನ್ನು ಪಠಿಸಲು ಸಹ ತಿಳಿದಿದ್ದರು. ದಂಪತಿಗೆ ಇಬ್ಬರು ಮಕ್ಕಳಾದರು. ರಾಜೀವ್ ಗಾಂಧಿ ಪ್ರಧಾನಿಯಾದರೆ, ಸಂಜಯ್ ಗಾಂಧಿ  ತುರ್ತು ಪರಿಸ್ಥಿತಿಯ ಸಮಯದಲ್ಲಿ  ತಾಯಿಯ ಪ್ರಮುಖ ಸಲಹೆಗಾರರಾಗಿದ್ದರು. 1980 ರಲ್ಲಿ ವಿಮಾನ ಅಪಘಾತದಲ್ಲಿ ಸಾವನಪ್ಪುವವರೆಗೂ ಆತ ತಾಯಿಯ ಅತ್ಯಂತ ನಂಬಿಕೆಯ ಆಡಳಿತ ಮಂಡಳಿಯಾ ಸದಸ್ಯನಾಗಿದ್ದರು. 

ಫಿರೋಜ್ ಹಾಗೂ ಇಂದಿರಾ ದಾಂಪತ್ಯ ಜೀವನದಲ್ಲಿ ಕೆಲವು ವರ್ಷಗಳ ಕಾಲ ದೂರವಿರಬೇಕಾಯಿತು. ಅದಕ್ಕೆ ಮುಖ್ಯ ಕಾರಣವೆಂದರೆ ನೆಹರೂ ಅವರಿಗೆ ತಮ್ಮ ಮಗಳೆಂದರೆ ಕೊಂಚ ಹೆಚ್ಚೇ ಪ್ರೀತಿ. ತಾವು ಭಾರತದ ಪ್ರಧಾನಮಂತ್ರಿಯಾದಾಗ, ತಮ್ಮ ಅಧಿಕೃತ ಆತಿಥ್ಯಕಾರಿಣಿಯಾಗಿ ಸೇವೆ ಸಲ್ಲಿಸಲು ದೆಹಲಿಗೆ ತೆರಳುವಂತೆ ಸೂಚಿಸಿದರು.  ಫಿರೋಜ್, ಅವರ ಎಲ್ಲವನ್ನೂ ಸಲೀಸಾಗಿ ತೆಗೆದುಕೊಳ್ಳುವ ವ್ಯಕ್ತಿಯಾಗಿದ್ದರು.  ಅವರು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ನಿರ್ದೇಶಕರಾಗಿ ಲಕ್ನೋದಲ್ಲಿಯೇ ಉಳಿದರು. 

ಕಾಂಗ್ರೆಸ್ ನಲ್ಲಿ ಕೆಲವರು ಫಿರೋಜ್ ಅವರನ್ನು ತೀರಾ ಹಗುರವಾಗಿ ನೋಡಿದ್ದು ಇದೆ. ಫಿರೋಜ್ ಅವರು ಕಾಫಿ ಹೌಸ್ ನಲ್ಲಿ ಹರಟೆ ಹೊಡೆಯಲು ಹೆಚ್ಚು ಇಷ್ಟಪಡುತ್ತಿದ್ದರು ಮತ್ತು ಅವರು ಮಹಿಳೆಯರ ಪರ ಹೆಚ್ಚು ಒಲವು ತೋರುತ್ತಿದ್ದರು ಎಂಬ ಮಾತುಗಳು ಕೇಳಿಬರುತ್ತಿದ್ದವು. ನೆಹರೂ ಅವರಿಗೆ  ಅಳಿಯನ ಕುರಿತಂತೆ ಅಷ್ಟೊಂದು ಒಲವು ಇಲ್ಲದೇ ಇದ್ದರು ಅವರು ಫಿರೋಜ್ ಗಾಂಧಿ ಅವರಿಗೆ ಉದ್ಯೋಗ ಕೊಡಿಸಲು ಸಹಾಯ ಮಾಡಿದ್ದಾರೆ. ಮೊದಲಿಗೆ ಲಕ್ನೋದಲ್ಲಿನ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಮತ್ತು ದೆಹಲಿಯ ಇಂಡಿಯನ್ ಎಕ್ಸ್‌ಪ್ರೆಸ್‌ನ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಲು ಸಹಾಯ ಮಾಡಿದ್ದಾರೆ.

ಫಿರೋಜ್ ಗಾಂಧಿ ಅವರು ರಾಯ್ ಬರೇಲಿಯಿಂದ ಮೂರು ಬಾರಿ ಸಂಸತ್  ಸದಸ್ಯರಾಗಿದ್ದರು. ಮತ್ತು ಶಾಸಕರಾಗಿಯೂ ಆಯ್ಕೆಯಾಗಿದ್ದರು. 

ಸಂಸದರಾಗಿ ಆಯ್ಕೆಯಾದ ಆರಂಭದಲ್ಲಿ ಅವರು ಪ್ರಶ್ನೆಗಳನ್ನು ಕೇಳುವುದಕ್ಕಿಂತ ಹಿಂದೆ ಕುಳಿತು ಬೇರೆಯವರು ಹೇಳುವುದನ್ನು ಕೇಳುತ್ತಿದ್ದಕ್ಕಷ್ಟೇ ಸೀಮಿತರಾಗಿದ್ದರು.  6 ಡಿಸೆಂಬರ್ 1955 ರಂದು ಅವರು ಪ್ರಸಿದ್ಧ ಚೊಚ್ಚಲ ಭಾಷಣವನ್ನು ಮಾಡಿದರು, ಕ್ರಮೇಣ ಅವರು ತಮ್ಮದೇ ಆದ ಪ್ರಾಖ್ಯಾತಿ ಗಳಿಸಲು ಆರಂಭಿಸಿದರು. ಅವರು ಕೈಗಾರಿಕೋದ್ಯಮಿ ರಾಮಕೃಷ್ಣ ದಾಲ್ಮಿಯಾ ನಡೆಸುತ್ತಿದ್ದ ಭಾರತ್ ಇನ್ಶುರೆನ್ಸ್ ಕಂಪನಿಯನ್ನು ಗುರಿಯಾಗಿಸಿಕೊಂಡರು ಮತ್ತು ಹಣದ ವ್ಯಾಪಕ ದುರ್ಬಳಕೆಯನ್ನು ಬಹಿರಂಗಪಡಿಸಿದರು. ಫಿರೋಜ್ ಅವರ ಸಂಶೋಧನೆಗಳ ಪರಿಣಾಮವಾಗಿ, ಭಾರತದ ಶ್ರೀಮಂತ ವ್ಯಕ್ತಿಯಾಗಿದ್ದ ದಾಲ್ಮಿಯಾಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ವಿಮಾ ಉದ್ಯಮವನ್ನು ರಾಷ್ಟ್ರೀಕರಣಗೊಳಿಸಲಾಯಿತು. ಭ್ರಷ್ಟಾಚಾರದ ವಿರುದ್ಧ ಹೋರಾಟಗಾರರಾಗಿ ಫಿರೋಜ್ ಅವರ ದೊಡ್ಡ ಸಾಧನೆಯೆಂದರೆ ಪ್ರಬಲ ಹಣಕಾಸು ಸಚಿವ ಟಿ.ಟಿ.ಕೃಷ್ಣಮಾಚಾರಿ (ಟಿಟಿಕೆ). ಸ್ವತಂತ್ರ ಭಾರತದ ಮೊದಲ ಹಣಕಾಸು ಹಗರಣಗಳಲ್ಲಿ ಒಂದಾದ ಕೃಷ್ಣಮಾಚಾರಿ ಅವರು ಭಾರತದ ರಾಷ್ಟ್ರೀಕೃತ ಜೀವ ವಿಮಾ ನಿಗಮದ ನಿರ್ಧಾರಕ್ಕೆ ಬಲಿಯಾದರು.

ಸಾಮಾನ್ಯ ಎಲ್ ಐಸಿ ಕಾರ್ಯ ವಿಧಾನವನ್ನು ಬದಿಗಿಟ್ಟು ಮಾಡಿದ ಹೂಡಿಕೆಗಳನ್ನು ಷೇರು ಮಾರುಕಟ್ಟೆಯನ್ನು ಉತ್ತೇಜಿಸಲು ಮಾಡಲಾಗಿದೆ ಎಂದು ಹಣಕಾಸು ಸಚಿವರು ಹೇಳಿದನ್ನು ಕಟ್ಟುನಿಟ್ಟಾಗಿ ಖಂಡಿಸಿದ ಫಿರೋಜ್, ಸಚಿವರ ಮಾತು ಸುಳ್ಳಿನಿಂದ ಕೂಡಿದೆ ಎಂಬುದನ್ನು ಸಾಬೀತುಪಡಿಸಿದರು. ಇದರಿಂದ ಟಿಟಿಕೆ ರಾಜೀನಾಮೆ ನೀಡಬೇಕಾಯಿತು. ಸಂಸತ್ತಿನ ಕಲಾಪಗಳನ್ನು ವರದಿ ಮಾಡುವ ಪತ್ರಕರ್ತರನ್ನು ಕಾನೂನು ಕ್ರಮದಿಂದ ರಕ್ಷಿಸುವ ಮಸೂದೆಯನ್ನು ಮಂಡಿಸಿದರು. ವಿಪರ್ಯಾಸವೆಂದರೆ ಹತ್ತೊಂಬತ್ತು ವರ್ಷಗಳ ನಂತರ, ತುರ್ತು ಪರಿಸ್ಥಿತಿಯ ಸಮಯದಲ್ಲಿ, ಇಂದಿರಾ ಗಾಂಧಿಯವರು ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವ ತನ್ನ ಸ್ವಂತ ಗಂಡನ ಕಾನೂನನ್ನು ರದ್ದುಗೊಳಿಸಿದರು. 

ಫಿರೋಜ್ ಲಕ್ನೋದಿಂದ ದೆಹಲಿಗೆ ಹೋದರೂ ಕೂಡ, ತಮ್ಮ ಸಂಸದರ ಕ್ವಾರ್ಟರ್ಸ್ ನಲ್ಲೇ ತಂಗುತ್ತಿದ್ದರು. ಹೆಂಡತಿಯಿಂದ ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದರು. ಬೆಳಗ್ಗೆ ಪ್ರಧಾನಿ ನಿವಾಸದಲ್ಲಿ ಉಪಹಾರ ಸೇವಿಸುತ್ತಿದ್ದರೂ, ಪುತ್ರರೊಂದಿಗೆ ನಿಕಟವಾದ ಭಾಂದವ್ಯ ಹೊಂದಿದ್ದರು.

ಪತ್ನಿಯೊಂದಿಗಿನ ಅವರ ವೈಮನಸ್ಸು ಎಷ್ಟಿತ್ತೆಂದರೆ ಒಂದು ಹಂತದಲ್ಲಿ ಫಿರೋಜ್ ತಮ್ಮ ಪತ್ನಿಗೆ ವಿಚ್ಛೇದನ ನೀಡಿ, ಮುಸ್ಲಿಂ ಕುಟುಂಬದ ಯುವತಿಯನ್ನು ಮದುವೆಯಾಗಲು ಇಂದಿರಾ ಅವರಿಗೆ ವಿಚ್ಛೇದನವನ್ನು ನೀಡಲು ಬಯಸಿದ್ದರಂತೆ. ನೆಹರೂ ಮನೆತನದ ಹೆಸರು ಹಗರಣದಿಂದ ಹಾಳಾಗುವುದು ಬೇಡ ಎಂದು  ನೆಹರೂ ಕಾಲು ಬಗ್ಗಿಸಿದರು.. ದೆಹಲಿಯ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಫಿರೋಜ್‌ಗೆ ಕೆಲಸ ಹುಡುಕಲು  ತನ್ನ ಸ್ನೇಹಿತ ರಾಮನಾಥ್ ಗೋಯೆಂಕಾ ಅವರನ್ನು ಕೇಳಿದನು. ಪ್ರಾಸಂಗಿಕವಾಗಿ, ಫಿರೋಜ್ ಅವರು ಸಂಸತ್ತಿನಲ್ಲಿ ಮುಂಧ್ರಾ ಹಗರಣವನ್ನು ಬ್ರೇಕ್ ಮಾಡಿದ ಬಳಿಕ ಅವರು ತಮ್ಮ ಕೆಲಸ ಮತ್ತು ಕಚೇರಿಯ ಕಾರಿನ್ನು ರಾತ್ರೋ ರಾತ್ರಿ ತೊರೆಯುವಂತಾಯಿತು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅವಕಾಶಗಳನ್ನು ಪಡೆಯಲು ನಟಿ ಜ್ಯೋತಿಕಾ ಈ ರೀತಿಯೂ ಮಾಡಿದ್ದಾರಂತೆ...|

ಲಾಕ್ ಡೌನ್ ಲವ್ ಸ್ಟೋರಿಗೆ ಮದುವೆಯ ಬ್ರೇಕ್. ಅಮೀರ್ ಖಾನ್ ಮಗಳು ಹಿರಾ ಲವ್ ಸ್ಟೋರಿ