ತ್ರಿಷಾ ಕೃಷ್ಣನ್ ಹಿನ್ನೆಲೆ ಏನು? ಆಕೆಯ ಟಾಪ್ 10 ಸಿನಿಮಾಗಳು ಯಾವುದು ಗೊತ್ತಾ?

 ತ್ರಿಶಾ 4 ಮೇ 1983 ರಂದು ಮದ್ರಾಸ್‌ನಲ್ಲಿ ಪಾಲ್ಕ್ಕಾಡ್ ಅಯ್ಯರ್ ಕುಟುಂಬದಲ್ಲಿ ಜನಿಸುತ್ತಾರೆ. ತಂದೆ ತಂದೆ ಕೃಷ್ಣನ್ ಅಯ್ಯರ್ ಮತ್ತು ತಾಯಿ ಉಮಾ ಅಯ್ಯರ್. ಚೆನ್ನೈನ ಚರ್ಚ್ ಪಾರ್ಕ್ ನಲ್ಲಿರುವ ಸೆಕ್ರೆಡ್ ಹಾರ್ಟ್ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ ತ್ರಿಷಾ ಬಳಿಕ  ಚೆನ್ನೈನ ಎಥಿರಾಜ್ ಮಹಿಳಾ ಕಾಲೇಜಿನಲ್ಲಿ ಬಿಬಿಎ ಕೋರ್ಸ್ ಪಡೆದರು. ಓದಿನ ಜೊತೆಗೆ ಮಾಡೆಲಿಂಗ್ ನಲ್ಲೂ ತೊಡಗಿಸಿಕೊಂಡಿದ್ದ ಅವರು ಹಲವಾರು ಪ್ರಿಂಟ್ ಹಾಗೂ ಟಿವಿ ಜಾಹಿರಾತಿನಲ್ಲಿ ಕಾಣಿಸಿಕೊಂಡರು. 1999 ರಲ್ಲಿ, ಅವರು "ಮಿಸ್ ಸೇಲಂ" ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು ಬೀಗಿದರು. ಅದೇ ವರ್ಷ ನಡೆದ ಮಿಸ್ ಚೆನ್ನೈನಲ್ಲೂ ಕಿರೀಟವನ್ನು ತನ್ನದಾಗಿಸಿಕೊಂಡರು. ಅವರು ಮಿಸ್ ಇಂಡಿಯಾ 2001 ಸ್ಪರ್ಧೆಯ "ಬ್ಯೂಟಿಫುಲ್ ಸ್ಮೈಲ್" ಪ್ರಶಸ್ತಿಯನ್ನು ಸಹ ಗೆದ್ದಿದ್ದಾರೆ.

ಈ ಯಶಸ್ಸಿನ ನಂತರ ಆಕೆ 1999ರಲ್ಲಿ ಪ್ರಣಯಾಧಾರಿತ ಚಿತ್ರದಲ್ಲಿ ಸಿಮ್ರಾನ್ ಗೆ ಜೊತೆಯಾಗಿ ಚಿಕ್ಕ ಪೋಷಕ ಪಾತ್ರವನ್ನು ಮಾಡಿದರು. ಇಲ್ಲಿಂದ ಆಕೆಯ ನಟನಾ ವೃತ್ತಿ ಆರಂಭವಾಯಿತು. 



ಅವರು ಒಪ್ಪಿಕೊಂಡ ಮೊದಲ ಚಿತ್ರವೆಂದರೆ ಪ್ರಿಯದರ್ಶನ್ ನಿರ್ದೇಶನದ ಲೇಸ ಲೇಸಾ. ಆಕೆ ನಟಿಸಿದ ಚಿತ್ರದ ಮೊದಲ ರಿಲೀಸ್ ಕಂಡ ಚಿತ್ರವೆಂದರೆ 2002ರಲ್ಲಿ ಸೂರ್ಯಗೆ ಎದುರಾಗಿ ಅಮರನ ಮೌನಂ ಪೇಸಿಯಾದೆ ಚಿತ್ರ ರಿಲೀಸ್ ಆಯ್ತು. 2003ರಲ್ಲಿ ಮನಸೆಲ್ಲಂ ಆಕೆಯ ಎರಡನೇ ಪ್ರಾಜೆಕ್ಟ್. ಕ್ಯಾನ್ಸರ್ ರೋಗಿಯಾಗಿ ಆಕೆ ನಟಿಸಿದ ರೀತಿ ಜನಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಬಳಿಕ ಹರಿ ನಿರ್ದೇಶದನ ಸಾಹಸ ಚಿತ್ರ ವಿಕ್ರಮ್ ಜೊತೆಗಿನ ಸಾಮಿ 2003ರಲ್ಲಿ ಬಿಡುಗಡೆಯಾಯಿತು. ಮೃದುವಾಗಿ ಮಾತಾಡುವ ಬ್ರಾಹ್ಮಣ ಹುಡುಗಿಯ ಪಾತ್ರವನ್ನು ಅದ್ಬುತವಾಗಿ ನಿರ್ವಹಿಸಿದರು. ಆಕೆಯ ಅಭಿನಯಕ್ಕೆ ಸಿಕ್ಕಾಪಕ್ಕೆ ಧನಾತ್ಮಕ ವಿಮರ್ಶೆಗಳು ಕೇಳಿಬಂದಿತ್ತು. 

2004ರಲ್ಲಿ ಎಸ್ ರಾಜು ನಿರ್ಮಾಣದ ರೊಮ್ಯಾಂಟಿಕ್ ಆಕ್ಷನ್ ಚಿತ್ರದ  ವರ್ಷನೊಂದಿಗೆ ತೆಲುಗಿಗೆ ಪದಾರ್ಪಣೆ ಮಾಡಿದರು. ಈ ಚಿತ್ರ ರಾತ್ರೋ ರಾತ್ರಿ ಸೆನ್ಷೇಷನ್ ಕ್ರಿಯೆಟ್ ಮಾಡಿತ್ತು. ದೊಡ್ಡ ಯಶಸ್ಸಿನೊಂದಿಗೆ ಈ ಚಿತ್ರ 175 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಓಡಿತು. ಆ ವರ್ಷದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಇದೇ ಚಿತ್ರದ ಅಭಿನಯಕ್ಕೆ ಆಕೆ ತನ್ನ ಮೊದಲ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಗೆದ್ದುಕೊಂಡರು. 

2004ರಲ್ಲಿ ಆಕ್ಷನ್ ಕಾಮಿಡಿ ಚಿತ್ರಗಿಲ್ಲಿಯಲ್ಲಿ ವಿಜಯ್ ಗೆ ನಾಯಕಿಯಾಗಿ ನಟಿಸಿದರು. ಈ ಚಿತ್ರ ಕೂಡ ಸೂಪರ್ ಹಿಟ್ ಆಯ್ತು. 2004ರಲ್ಲಿ ಆಯುತ ಎಳುತ್ತು ರಾಜಕೀಯ ಡ್ರಾಮ ಚಿತ್ರ ಮಣಿರತ್ನಂ ನಿರ್ದೇಶನದ ಚಿತ್ರದಲ್ಲೂ ನಟಿಸಿದರು

ಆಕೆಯ ಎರಡನೇ ತೆಲುಗು ಪ್ರಾಜೆಕ್ಟ್ ನುವ್ವೊಸ್ತಾನಂಟೆ ನೆನೊಡ್ಡಂತನಾ . 2005ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಸಿದ್ದಾರ್ಥ್ ಜೊತೆ ನಟಿಸಿ ಸೈ ಅನಿಸಿಕೊಂಡರು. ಈ ಚಿತ್ರವೂ ಸೂಪರ್ ಹಿಟ್ ಆಯ್ತು. ಈ ಚಿತ್ರ ಅವರಿಗೆ ಎರಡನೇ ಫಿಲ್ಮ್ ಫೇರ್ ಪ್ರಶಸ್ತಿಯನ್ನು ತಂದುಕೊಟ್ಟಿತು. ಮೊದಲ ನಂದಿ ಪ್ರಶಸ್ತಿಯೂ ಇದೇ ಚಿತ್ರಕ್ಕಾಗಿ ತ್ರಿಷಾ ಗೆ ಲಭಿಸಿತು. 2005ರಲ್ಲಿ ಅವರ ಬಿಡುಗಡೆಯ ಸರಣಿ ಮುಂದುವರೆಯಿತು. ಮಹೇಶ್ ಬಾಬು ಅವರ ಆಕ್ಷನ್ ಚಿತ್ರ ಅತ್ತಾಡುವಿನಲ್ಲಿ ನಟಿಸಿದರು. ಮೂರನೇ ಬಾರಿಗೆ ಅತ್ಯುತ್ತಮ ನಟಿ ಫಿಲ್ಮ್ ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.2006ರ ಪೌರ್ಣಮಿ ಚಿತ್ರ ಆಕೆಗೆ ಮತ್ತೊಂದು ಬ್ರೇಕ್ ನೀಡಿತು.  ಚಿರಂಜೀವಿ ಅವರೊಂದಿಗೆ ತೆಲುಗು ಚಲನಚಿತ್ರ ಸ್ಟಾಲಿನ್ (2006) ನಲ್ಲಿ ಸಹ ನಟಿಸಿದರು, ಅದರ ನಂತರ ಮಹೇಶ್ ಬಾಬು ಅವರ ತೆಲುಗು ಚಲನಚಿತ್ರ ಸೈನಿಕುಡು (2006) ಬಿಡುಗಡೆಯಾಯಿತು.


ಅವರ ಮುಂದಿನ ಬಿಡುಗಡೆ ಆದವರಿ ಮಾತಲಕು ಅರ್ಧಲು ವೆರುಲೆ (2007. ಈ ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ತ್ರಿಶಾ ಅವರು ಅತ್ಯುತ್ತಮ ನಟಿಗಾಗಿ ಮೂರನೇ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದರು - ತೆಲುಗು. ಅವರು ಅಜಿತ್ ಕುಮಾರ್ ಜೊತೆಗೆ ಕಿರೀಡಂ (2007) ನಲ್ಲಿ ನಟಿಸಿದರು.


ಆಕೆಯ 2008 ರ ತಮಿಳು ಚಿತ್ರಗಳಾದ ಭೀಮಾ ಮತ್ತು ಕುರುವಿ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದವು. ತೆಲುಗಿನಲ್ಲಿ ರವಿತೇಜ ಜೊತೆ ಕೃಷ್ಣ ಚಿತ್ರ ಬ್ಲಾಕ್ ಬಸ್ಟರ್ ಆಯಿತು.

ಆಕೆಯ ನಂತರದ 2008 ರ ಬಿಡುಗಡೆಯಾದ ಬುಜ್ಜಿಗಾಡು, ಪೂರಿ ಜಗನ್ನಾಥ್ ನಿರ್ದೇಶಿಸಿದ ಮತ್ತು ಪ್ರಭಾಸ್ ನಟಿಸಿದ, ಈ ಚಿತ್ರ ಉತ್ತಮ ಗಳಿಕೆ ಮಾಡಿತು.

ಅವರ 2009 ರಲ್ಲಿ ಆರ್ಯ ಜೊತೆಗಿನ ಸರ್ವಂ ಮತ್ತು ಗೋಪಿಚಂದ್ ಜೊತೆಗಿನ ಸಂಖಂ ಉತ್ತಮ ಪ್ರದರ್ಶನ ನೀಡಲಿಲ್ಲ

2010 ರ ತಮಿಳು ರೋಮ್ಯಾಂಟಿಕ್ ನಾಟಕ ವಿನ್ನೈತಾಂಡಿ ವರುವಾಯಾ, ಇದು ಗಲ್ಲಾಪೆಟ್ಟಿಗೆಯಲ್ಲಿ ಪ್ರಮುಖ ವಾಣಿಜ್ಯ ಯಶಸ್ಸನ್ನು ಕಂಡಿತು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?