ಕಾಟೇರದ ಅಪ್ ಡೇಟ್ ಏನು ? ಚಿತ್ರತಂಡ ಹೈದ್ರಾಬಾದ್ ನಲ್ಲಿ ಬೀಡು ಬಿಟ್ಟಿರುವುದು ಯಾಕೆ...?

 ಸದ್ಯಕ್ಕೆ  ಚಿತ್ರಾಭಿಮಾನಿಗಳಿಗೆ ಕಾಟೇರ ಸಿನಿಮಾದ್ದೆ ಸುದ್ದಿ. ಚಿತ್ರದ ಕುರಿತಂತೆ ಅಪ್ಡೆಟ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.  ಡಿಸೆಂಬರ್ 28ಕ್ಕೆ ಚಿತ್ರ ರಿಲೀಸ್ ಆಗಲಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಆಕ್ಷನ್ ಎಂಟರ್ಟೈನರ್ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನ ಮಾಡಿರುವ ಚಿತ್ರ ಇದಾಗಿದ್ದು, ರಾಕ್ ಲೈನ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಚಿತ್ರದ ಪೈನಲ್ ವರ್ಕ್ಸ್ ಗಾಗಿ ಇದೀಗ ಇಡೀ ಚಿತ್ರತಂಡವೇ ಹೈದ್ರಾಬಾದ್ ನಲ್ಲಿ ಬೀಡುಬಿಟ್ಟಿದೆ. ಚಿತ್ರದ ಕುರಿತಂತೆ ಕಂಪ್ಲೀಟ್ ಅಪ್ಡೇಟ್ ಗಾಗಿ ಈ ವಿಡಿಯೋ ನೋಡಿ.



ಅಂದಹಾಗೆ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ಮಾಲಾಶ್ರೀ ಪುತ್ರಿ ಆರಾಧಾನಾ ನಟಿಸಿದ್ದಾಳೆ. ಉಳುವವನೆ ಭೂಮಿಯ ಒಡೆಯ ಎಂಬ ಕಥಾಹಂದರದೊಂದಿಗೆ ಚಿತ್ರಕಥೆ ಸಾಗಿದೆ. 

ವಿ ಹರಿಕೃಷ್ಣ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಾಹಣ, ಮಾಸ್ತಿಯವರ ಸಂಭಾಷಣೆ ಚಿತ್ರಕ್ಕಿದೆ. ಅಂದಹಾಗೆ ಚಿತ್ರಟೈಟಲ್ ನಿಂದಲೇ ಸದ್ದು ಮಾಡಿರುವುದು ವಿಶೇಷ. ಇನ್ನೊಂದು ವಾರದಲ್ಲಿ ಚಿತ್ರದ ಫೈನಲ್ ಕಟ್ ರೆಡಿಯಾಗಿ, ಸೆನ್ಸಾರ್ ಬೋರ್ಡ್ ಗೆ ಚಿತ್ರ ಹೋಗಲಿದೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?