ಕ್ರೇಜಿಯಾಗಿದೆ ರಾಮಾಯಣದ ಸ್ಟಾರ್ ಕಾಸ್ಟ್ ...!!

 


ರಾಮಾಯಣ ಮಹಾಭಾರತದಂತಹ ಸಿನಿಮಾಗಳನ್ನು ಅದೆಷ್ಟು ಮಂದಿ ನಿರ್ದೇಶಕರು ತೆರೆ ಮೇಲೆ ತಂದರೂ, ನೋಡುಗರಿಗೆ ಬೋರ್ ಅನಿಸುವುದೇ ಇಲ್ಲ. ಓದಿದಷ್ಟು ಓದಿಸುವ, ನೋಡಿದಷ್ಟು ನೋಡಿಸಿಕೊಂಡು ಹೋಗುವ ತಾಕತ್ತು ಈ ಮಹಾಗ್ರಂಥಗಳಿಗಿವೆ. ಈಗಾಗಲೇ ಹಿರಿ ಮತ್ತು ಕಿರಿ ತೆರೆ ಮೇಲೆ ಇಂತಹ ಮಹಾಗ್ರಂಥಗಳ ಸಿನಿಮಾ ಹಾಗೂ ಸಿರಿಯಲ್ ಗಳು ಬಂದು ಹೋಗಿದೆ. ಆದರೆ ಮತ್ತೆ ಮತ್ತೆ ನಿರ್ದೇಶಕರು ರಾಮಾಯಣದಲ್ಲಿರುವ ವಿಭಿನ್ನ ಕಥಾಹಂದರವನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಇದೀಗ ಮತ್ತೊಮ್ಮೆ ರಾಮಾಯಣ ತೆರೆ ಮೇಲೆ ಬರಲಿದೆ. ಅದರಲ್ಲೂ ರೆಕಾರ್ಡ್ ಬ್ರೇಕ್ ಮಾಡಿದ ದಂಗಲ್ ನಿರ್ದೇಶಕ ನಿತೇಶ್ ತಿವಾರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ಇನ್ನಿಲ್ಲದ ಕುತೂಹಲಕ್ಕೆ ಕಾರಣವಾಗಿದೆ. 

ಈಗಾಗಲೇ ಸುದ್ದಿಯಾಗಿರುವಂತೆ ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾವಣನನಾಗಿ ಅಬ್ಬರಿಸಿದರೆ, ರಣ್ ಬೀರ್ ಕಾಪೂರ್ ರಾಮನಾಗಿ, ಸಾಯಿಪಲ್ಲವಿ ಸೀತೆಯಾಗಿ ನಟಿಸಲಿದ್ದಾರಂತೆ. ಆದರೆ ಇದೀಗ ಯಾಕೆ ಈ ರಾಮಾಯಣ ವಿಚಾರ ಮತ್ತೆ ಸುದ್ದಿಯಾಗಿದೆ ಎಂದರೆ , ರಾಮಾಯಣ ಚಿತ್ರದ ಕುರಿತಂತೆ ರಣ್ ಬೀರ್ ಅಭಿಮಾನಿಯೊಬ್ಬ ರಾಮಾಯಣ ಸಿನಿಮಾ 2024ರ ಬೇಸಿಗೆಯಲ್ಲಿ ಶುರುವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ತಾನು ಏರ್ ಪೋರ್ಟ್ ಇಮಿಗ್ರೇಷನ್ ವೇಳೆ ರಣ್ ಬೀರ್ ಕಾಪೂರ್ ಜೊತೆಗೆ ನಿಂತುಕೊಂಡಿದ್ದೆ. ಈ ಸಂದರ್ಭದಲ್ಲಿ ಅನಿಮಲ್ ಸಿನಿಮಾ ಹಾಗೂ ಮುಂದಿನ ಪ್ರಾಜೆಕ್ಟ್ ಬಗ್ಗೆ ಒಂದಷ್ಟು ವಿಚಾರ ಮಾತನಾಡಿದೆ. ಈ ಸಂದರ್ಭದಲ್ಲಿ 2024ರ ಬೇಸಿಗೆಯ ಸಂದರ್ಭದಲ್ಲಿ ರಾಮಾಯಣ ಶೂಟಿಂಗ್ ಆರಂಭವಾಗಲಿದೆ ಎಂದವರು ಹೇಳಿದ್ದಾರೆ. ಈ ಬಗ್ಗೆ ಹೆಚ್ಚಿನದ್ದನ್ನು ಏನು ಹೇಳಲಾರೆ. ಆದರೆ ಸ್ಟಾರ್ ಕಾಸ್ಟ್ ಅಂತೂ ಕ್ರೇಜಿಯಾಗಿದೆ ಎಂದಿದ್ದಾರೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?