ಅತ್ಯುದ್ಭುತವಾದ ರೇಖಾ- ಜಯಬಚ್ಚನ್ ಗೆಳತನದ ಹಾಗೂ ಬ್ರೇಕ್ ಅಪ್ ಕುರಿತಂತೆ ಲೇಖಕರು ಹೇಳಿದ್ದೇ ಅಚ್ಚರಿ ಸಂಗತಿ

 ರೇಖಾ... ಬಾಲಿವುಡ್ ಕಂಡ ಅತ್ಯದ್ಬುತ ನಟಿ. ಅಷ್ಟೇ ಅಲ್ಲದೆ ವಯಸ್ಸು 69 ದಾಟಿದರೂ ಆಕೆಯ ಗ್ಲಾಮರ್ ನಲ್ಲೇನೂ ಕೊರತೆಯಾಗಿಲ್ಲ. ಇಂದಿಗೂ ನವಯುವತಿಯರೂ ನಾಚುವಂತೆ ಆಕೆ ರೆಡಿಯಾಗುತ್ತಾರೆ. ಎಲ್ಲರ ಕಣ್ಣು ಕುಕ್ಕುವಂತೆ ರೆಡಿಯಾಗುತ್ತಾರೆ. ಇಂತಹ ರೇಖಾ ಒಂದೊಮ್ಮೆ ಅಬಿತಾಮ್ ಅವರ ಮೋಹದ ಬಲೆಯಲ್ಲಿ ಬಿದ್ದಿದ್ದರು ಎಂಬ ಸುದ್ದಿಯೂ ಇದೆ. ಅದೇನೆ ಇರಲಿ ಅಮಿತಾಬ್ ಅವರ ಪತ್ನಿ ಜಯಬಚ್ಚನ್ ಹಾಗೂ ರೇಖಾ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದರಂತೆ ಮತ್ತು ಮೊದಲ ಬಾರಿಗೆ ಅಮಿತಾಬ್ ಅವರನ್ನು ರೇಖಾ ಭೇಟಿಯಾಗಿದ್ದೇ ಜಯಬಚ್ಚನ್ ನಿವಾಸದಲ್ಲಂತೆ. 

ಸಾಮಾನ್ಯವಾಗಿ ಎಲ್ಲರೂ ಅಮಿತಾಬ್ ಹಾಗೂ ರೇಖಾ ಗೆಳೆತನದ ಬಗ್ಗೆ ಮಾತನಾಡುತ್ತಾರೆಯೇ ಹೊರತು, ಜಯ ಹಾಗೂ ರೇಖಾ ಗೆಳೆತನದ ಬಗ್ಗೆ ಅಷ್ಟೇನೂ ಟಾಕ್ ಇಲ್ಲ. ಸಿಲ್ ಸಿಲಾ ಚಿತ್ರದಲ್ಲಿ ಇಬ್ಬರು ಜೊತೆಯಾಗಿ ನಟಿಸಿದ್ದಾರೆಯೇ ಹೊರತು ಬೇರೆಲ್ಲೂ ಅವರ ಗೆಳೆತನದ ಬಗ್ಗೆ ಮಾತುಕತೆಗಳಾಗುವುದು ತೀರಾ ವಿರಳ. 



ಲೇಖಕ ಯಾಸರ್ ಉಸ್ಮಾನ್ ಬರೆದಿರುವ, ರೇಖಾ- ದಿ ಅನ್ ಟೋಲ್ಡ್ ಸ್ಟೋರಿಯಲ್ಲಿನ ಕೆಲವೊಂದು ಆಯ್ದ ಭಾಗವನ್ನು ಇಲ್ಲಿ ಪ್ರಕಟಿಸಲಾಗಿದ್ದು, ದಿದಿ ಬಾಯ್ ಎಂದು ಟೈಟಲ್ ನಲ್ಲಿರುವ ಆ ಪುಟದಲ್ಲಿ, ರೇಖಾ ಹಾಗೂ ಜಯ ಗೆಳೆತನದ ಬಗ್ಗೆ ಲೇಖಕರು ಹೇಳಿಕೊಂಡಿದ್ದಾರೆ. 

70ರ ದಶಕದ ಆರಂಭದ ದಿನಗಳು.  ರೇಖಾ ಮತ್ತು ಜಯ ಅಕ್ಕಪಕ್ಕದ ನಿವಾಸಿಗಳಾಗಿದ್ದು, ಜಯ ಮನೆಗೆ ರೇಖಾ ಪ್ರತಿದಿನ ಭೇಟಿ ನೀಡುತ್ತಿದ್ದರು ಎಂದವರು ಹೇಳಿದ್ದಾರೆ. 

ಆಕೆಯ ಮೊದಲ ಕೆಲವು ಚಿತ್ರಗಳೂ ಸೂಪರ್ ಹಿಟ್ ಆಗಿದ್ದೇ ಆಗಿದ್ದು, 1972ರಲ್ಲಿ ಬಾಂಬೆಯಲ್ಲಿ ಸ್ವಂತ ಮನೆ ಖರೀದಿ ಮಾಡುತ್ತಾರೆ. ಹೊಟೆಲ್ ಅಜಂತಾವನ್ನು ತೊರೆದು ಜೂಹೂ ಪಾರ್ಕ್ ನಲ್ಲಿ ಅಪಾರ್ಟ್ ಮೆಂಟ್ ಖರೀದಿ ಮಾಡಿ ಅಲ್ಲಿಗೆ ಶಿಪ್ಟ್ ಆಗುತ್ತಾರೆ. ಆಗಿನ್ನೂ ರೇಖಾಗೆ 18 ವರ್ಷ. ಇದೇ ಜೂಹೂ ಬೀಜ್ ಪಾರ್ಕ್ ನಲ್ಲಿ ಜಯ ಬದೂರಿ  ಕೂಡ ಇದ್ದರು. ಇಲ್ಲೇ ರೇಖಾ, ಜಯ ಅವರ ಕ್ಲೋಸ್ ಪ್ರೇಂಡ್ ಅಮಿತಾಬಚ್ಚನ್ ಅವರನ್ನು ಭೇಟಿ ಮಾಡಿದ್ದು. 

ಜಯಾ ಅವರನ್ನು ದೀದಿ ಬಾಯ್ ಎಂದೇ ಕರೆಯುತ್ತಿದ್ದ ರೇಖಾ ಸಾಮಾನ್ಯವಾಗಿ ಅವರ ಪ್ಲಾಟ್ ಗೆ ಭೇಟಿ ನೀಡುತ್ತಿದ್ದರು. ಸಾಕಷ್ಟು ಹೊತ್ತು ಹರಟುತ್ತಿದ್ದರಂತೆ. ಇಲ್ಲೇ ಅವರು ಅಮಿತಾಬ್ ಬಚ್ಚನ್ ಅವರನ್ನು ಭೇಟಿ ಮಾಡಿದ್ದಂತೆ. ಅಷ್ಟೇ ಅಲ್ಲದೆ ಅವರು ಮೂವರು ಕ್ಲೋಸ್ ಪ್ರೇಂಡ್ಸ್ ರೀತಿ ಸುತ್ತಾಡುತ್ತಿದ್ದರು. ಆಗ ಜಯ ಪ್ರಸಿದ್ಧಿಯ ಉತ್ತುಂಗದಲ್ಲಿದ್ದರು. ಆಕೆಯೇ ಅಮಿತಾಬ್ ಅವರನ್ನು ಹಲವು ಪ್ರೋಡ್ಯೂಸರ್ಸ್ ಗೆ ರೆಫರ್ ಮಾಡುತ್ತಿದ್ದರಂತೆ. 

ಆದರೆ ಈ ಗೆಳತನ ಅಮಿತಾಬ್ ಮತ್ತು ಜಯ ನಡುವೆ 1973ರಲ್ಲಿ ವಿವಾಹ ವಾದ ನಂತರ ಮುರಿದು ಬಿತ್ತು ಎಂದಿದ್ದಾರೆ ಬರಹಗಾರ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?