ವೈಯಕ್ತಿಕ ಬದುಕಿನಲ್ಲಾದ ಕಹಿಘಟನೆಯ ಬಗ್ಗೆ ನಾಗಚೈತನ್ಯ ಹೇಳಿದ್ದು ಹೀಗೆ...!

 ಇತ್ತೀಚೆಗಷ್ಟೇ ನಟಿ ಸಮಂತಾ ರುತು ಪ್ರಭು ತಮ್ಮ ವೈಯಕ್ತಿಕ ಬದುಕಿನಲ್ಲಾದ ಹೊಡೆತದಿಂದಾಗಿ ನಾನು ಸಾಕಷ್ಟು ಕುಗ್ಗಿ ಹೋಗಿದ್ದೆ. ನಂಬಿಕೆ ಅನ್ನೋದು ಪರಸ್ಪರ ಇಲ್ಲದ ಮೇಲೆ ಜೊತೆಯಾಗಿ ಇದ್ದು ಪ್ರಯೋಜನವಿಲ್ಲ . ನನ್ನ ವೈಯಕ್ತಿಕ ಬದುಕಿನ ಸೋಲು, ಸಾಲು ಸಾಲು ಸಿನಿಮಾಗಳು ಸೋಲು ಮತ್ತು ಅನಾರೋಗ್ಯ. ಇವು ಮೂರು ನನಗೆ ಹೊಡೆತದ ಮೇಲೆ ಹೊಡೆತ ಕೊಟ್ಟಿದ್ದರಿಂದ ನಾನು ಸಾಕಷ್ಟು ಜರ್ಜರಿತಳಾಗಿದ್ದೆ ಎಂದಿದ್ದರು. ಇದೀಗ ನಾಗಚೈತನ್ಯ ತಮ್ಮ ವೈಯಕ್ತಿಕ ಜೀವನದ ಕುರಿತಂತೆ ಮಾತನಾಡಿದ್ದಾರೆ




ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ನನಗೆ ವೈಯಕ್ತಿಕ ಜೀವನದಲ್ಲಾದ ವಿಚಾರಗಳ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಯಾವ ಕಾರಣಕ್ಕೆ ಹಾಗೆಲ್ಲಾ ಆಗಿದೆ ಎಂಬುದು ನನಗೆ ಮತ್ತು ನನ್ನ ಹತ್ತಿರದವರಿಗೆ ತಿಳಿದಿದೆ. ಹೀಗಾಗಿ ನಾನು ಯಾವುದರ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅತ್ಯುತ್ತಮ ಸಿನಿಮಾ ನೀಡುವುದಷ್ಟೇ ನನ್ನ ಉದ್ದೇಶ. ಒಂದು ಒಳ್ಳೆಯ ಸಿನಿಮಾ ಕೊಟ್ಟರೆ ಪ್ರೇಕ್ಷಕರಿಗೂ ಖುಷಿಯಾಗುತ್ತದೆ. ದುಡ್ಡು ಹಾಕಿದ ನಿರ್ಮಾಪಕರು ನೆಮ್ಮದಿಯಾಗಿರುತ್ತಾರೆ ಎನ್ನುವ ಮೂಲಕ ಸಮಂತಾ ದೂರವಾದ ಮೇಲೆ ಆಕೆಯ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎಂದಿದ್ದಾರೆ. 



2017ರಲ್ಲಿ ವಿವಾಹವಾದ ನಾಗಚೈತನ್ಯ ಹಾಗೂ ಸಮಂತಾ ರುತುಪ್ರಭು ವಿವಾಹಕ್ಕಿಂತ ಕೆಲವು ವರ್ಷಗಳ ಮೊದಲೇ ಪರಸ್ಪರ ಡೇಟಿಂಗ್ ನಲ್ಲಿದ್ದರು.  ಆದರೆ ದಾಂಪತ್ಯದಲ್ಲಿ ಅದೇನಾಯಿತೋ ಗೊತ್ತಿಲ್ಲ ಇವರಿಬ್ಬರು 2021ರಲ್ಲಿ ಪರಸ್ಪರ ಬೇರೆಯಾಗಲು ನಿರ್ಧರಿಸಿ ವಿಚ್ಛೇದನ ಪಡೆದಿದ್ದಾರೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?