ನಾನು ನನ್ನ ಅಮ್ಮನನ್ನು ಸೆಟ್ ಗೆ ಬರಲು ನೋ ಅನ್ನುತ್ತಿದ್ದು ಯಾಕೆ..?ಸಿಕ್ರೇಟ್ ಬಿಚ್ಚಿಟ್ಟ ಜಾಹ್ನವಿ ಕಾಪೂರ್

 ನಟ ಜಾನ್ವಿ ಕಪೂರ್ ಅವರು ತಮ್ಮ ಚೊಚ್ಚಲ ಚಿತ್ರ ಧಡಕ್‌ ಸೆಟ್ ಗೆ ಭೇಟಿ ನೀಡದಂತೆ ತಾಯಿ ಶ್ರೀದೇವಿಯರನ್ನು ಕೇಳಿಕೊಂಡಿದ್ದರಂತೆ. ಈ ಕುರಿತಂತೆ ಈ ಹಿಂದೆಯೂ ಒಂದು ಬಾರಿ ಆಕೆ ಹೇಳಿದ್ದು ನಿಮಗೆಲ್ಲಾ ನೆನಪಿರಬಹುದು. ಈ ಬಗ್ಗೆ ಮತ್ತೊಮ್ಮೆ ಹೇಳಿಕೊಂಡಿರುವ ಜಾಹ್ನವಿ ಇದು ನನ್ನ ಜೀವನದ ಅತ್ಯಂತ ವಿಷಾದ ಎಂದಿದ್ದಾರೆ.



ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ ಜಾನ್ವಿ 2018 ರ ಧಡಕ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಶ್ರೀದೇವಿ ದುಬೈನಲ್ಲಿ ಆಕಸ್ಮಿಕ ದುರ್ಮರಣಕ್ಕಿಡಾದರು. ಇದರ ಕೆಲ ದಿನಗಳ ನಂತರ ಧಡಕ್ ಚಿತ್ರ ರಿಲೀಸ್ ಆಯ್ತು.

ಧಡಕ್ ಚಿತ್ರದ ಚಿತ್ರೀಕರಣದ ವೇಳೆ ಬೇಕೆಂದೆ ಜಾನ್ವಿ ತಾಯಿಯಿಂದ ದೂರವಿರಲು ಬಯಸಿದ್ದರಂತೆ. ಯಾಕೆಂದರೆ ಮೊದಲೆ ನೆಪೋಟಿಸಂ ಕುರಿತಂತೆ ಮಾತುಕತೆ ಯಾಗುತ್ತಿತ್ತು. ಶ್ರೀದೇವಿಯ ಮಗಳಾಗಿದ್ದರಿಂದ ನಿನಗೆ ಮೊದಲ ಚಿತ್ರ ಸಿಕ್ಕಿತು ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಹೀಗಾಗಿ ನಾನು ಆಕೆಯಿಂದ ಯಾವುದೇ ಸಹಾಯವನ್ನು ಪಡೆದುಕೊಳ್ಳಬಾರದು ಎಂದು ನಿರ್ಧರಿಸಿದೆ. ಚಿತ್ರೀಕರಣದ ವೇಳೆ ನಾನು ಆಕೆಯ ಸಹಾಯ  ಪಡೆದರೆ ಹೆಚ್ಚು ಅನ್ಯಾಯವಾಗುತ್ತದೆ ಎಂದು ನಾನು ಅಂದುಕೊಂಡಿದ್ದೆ. ಹೀಗಾಗಿ ದಯವಿಟ್ಟು ಸೆಟ್ ಗೆ ಬರಬೇಡ ನಾನೆ ಕೆಲಸ ಮಾಡಬೇಕು ಎಂದು ಹೇಳಿದ್ದೆ ಎಂದಿದ್ದೆ ಎಂದಿದ್ದಾರೆ ಜಾಹ್ನವಿ.

ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್, ಗುಡ್ ಲಕ್ ಜೆರ್ರಿ ಮತ್ತು ಮಿಲಿಯ ದಂತಹ ವೈವಿಧ್ಯಮಯ ಚಿತ್ರಗಳಲ್ಲಿನ ಜಾನ್ವಿ ಕೆಲಸ ಮಾಡಿದ್ದಾರೆ.


"ಈ ಎಲ್ಲಾ ಚಿತ್ರಗಳಿಗಾಗಿ ನಾನು ಸಿಕ್ಕಾಪಟ್ಟೆ ಹಾರ್ಡ್ ವರ್ಕ್ ಮಾಡಿದ್ದೆ. ಅತಿಯಾಗಿ ಡೆಡಿಕೇಟೆಡ್ ಆಗಿ ಕೆಲಸ ಮಾಡಿದ್ದೆ. ಆದರೆ ಬಳಿಕ ನನಗೆ ಗೊತ್ತಾಯಿತು. ನನ್ನನ್ನು ನನ್ನ ತಾಯಿ ಶ್ರೀದೇವಿಯರ ಕೆಲಸಕ್ಕೆ ಹೋಲಿಸಲಾಗುತ್ತಿದೆ ಎಂದು . ನನಗೆ ಅಮ್ಮ ಮೊದಲೇ ಹೇಳಿದ್ದರು. ನಿನ್ನ ಮೊದಲ ಚಿತ್ರವನ್ನು ನನ್ನ ಕೊನೆಯ ಚಿತ್ರದೊಂದಿಗೆ ಕಂಪೇರ್ ಮಾಡಲಾಗುತ್ತದೆ ಎಂದು. ಆದರೆ ಈ ರೀತಿಯ ಒತ್ತಡ ಯಾವ ಶತ್ರುವಿಗೂ ಬೇಡ ಎಂದೂ ಅವರು ಹೇಳಿದ್ದರು. ಆಕೆ ಹೇಳಿದಾಗ ಪರಂಪರೆಯ ಸಾಮಾನು ಅಷ್ಟೊಂದು ಭಾರವಾಗಿರುತ್ತದೆ ಎಂದು ನನಗೆ ಅರ್ಥವಾಗಿರಲಿಲ್ಲ ಎಂದಿದ್ದಾರೆ ಜಾನ್ವಿ ಕಾಪೂರ್.

ಸಾಮಾನ್ಯವಾಗಿ ಯಾವ ತಾಯಿ ಮತ್ತು ಮಗಳು ಪರಸ್ಪರ ಸ್ಪರ್ಧೆ ನಡೆಸುವುದಿಲ್ಲ. ಯಾರು ತನ್ನ ತಾಯಿಯೊಂದಿಗೆ ಸ್ಪರ್ಧಿಸುವುದಿಲ್ಲ. ಯಾವುದೇ ನಟ ಅಥವ ನಟಿಯನ್ನು ಅವರ ತಂದೆ ತಾಯಿಯೊಂದಿಗೆ ಹೋಲಿಸುವುದು ಅನ್ಯಾಯ. ಅದು ಸರಿಯಲ್ಲ. ನನ್ನ ಉದ್ದೇಶ ಸ್ಪರ್ಧೆಯಲ್ಲ. ಆಕೆಯ ಲೆಗೆಸ್ಸಿಯನ್ನು ಕ್ಯಾರಿ ಮಾಡುವುದು ಆಕೆಯನ್ನು ಹೆಮ್ಮೆ ಪಡುವಂತೆ ಮಾಡುವುದಷ್ಟೇ ನನ್ನ ಉದ್ದೇಶವಾಗಿತ್ತು. ನಾನು ಸಾಯುವ ಕೊನೆಯ ದಿನದ ವರೆಗೂ ಅದನ್ನೇ ಮಾಡಲು ಭಯಸುತ್ತೇನೆ ಎಂದವರು ಹೇಳಿದ್ದಾರೆ. 

ಜಾನ್ವಿ  ತನ್ನ ಸಹೋದರಿ ಖುಷಿ ಕಾಪೂರ್ ಅವರ  ಚೊಚ್ಚಲ ಚಿತ್ರ ದಿ ಆರ್ಚೀಸ್‌ಗಾಗಿ ಆಕೆಯನ್ನು ಶ್ಲಾಘಿಸಿದ್ದಾರೆ. "ನಾನು ಅವಳಿಗೆ ಹೇಳಿದ್ದೆ. ಜನ ನಿಮ್ಮನ್ನು ದ್ವೇಷಿಸಲು ಕಾಯುತ್ತಿದ್ದಾರೆ. ಅದಕ್ಕೆ ಸಿದ್ದರಾಗಿರಿ ಎಂದು. ಆದರೆ ನಿನ್ನನ್ನು ನೀನು ಮರೆಯಬೇಡ ಎಂದಿದ್ದೆ. ಆರ್ಜೀಸ್ ನಲ್ಲಿ ಆಕೆಯ ಕೆಲಸ ಅದ್ಬುತವಾಗಿತ್ತು. ತುಂಬಾ ಪ್ರಮಾಣಿಕ ಪ್ರಯತ್ನವನ್ನು ಆಕೆ ಮಾಡಿದ್ದಾಳೆ. ನನ್ನ ತಾಯಿ ಶ್ರೀದೇವಿಗೆ ಆಕೆಯ ಚಲನಚಿತ್ರಗಳನ್ನು ವೀಕ್ಷಿಸಲು ಇಷ್ಟವಿರಲಿಲ್ಲ. ಅದನ್ನು ಆಕೆ ದ್ವೇಷಿಸುತ್ತಿದ್ದಳು ಹಾಗಾಗಿ ನಾವು ಅಧಿವೇಶನದಲ್ಲಿ, ನಟ ಶ್ರೀದೇವಿಗೆ ತಮ್ಮ ಸ್ವಂತ ಚಲನಚಿತ್ರಗಳನ್ನು ವೀಕ್ಷಿಸಲು ಇಷ್ಟವಿಲ್ಲ ಎಂದು ಹೇಳಿದರು. "

ನನಗಿನ್ನೂ ನೆನಪಿದೆ. ಆರಂಭದಲ್ಲಿ ನಾನು ನನ್ನ ತಾಯಿಯ ಹಗುರವಾದ ಚಿತ್ರಗಳನ್ನು ನೋಡಿದ್ದೆ. ಮಿಸ್ಟರ್ ಇಂಡಿಯಾದಂತಹ  ಚಿತ್ರವನ್ನು ನೋಡಿದ್ದೆ. ಆದರೆ ಸದ್ಮಾ ಚಿತ್ರವನ್ನು ನಾವೆಲ್ಲಾ ಜೊತೆಯಾಗಿ ನೋಡಿದ್ದೇವು. ಚಿತ್ರದ ಕೊನೆಯಲ್ಲಿ ನಾನು ನನ್ನ ತಾಯಿಯ ಮೇಲೆ ಕೋಪಗೊಂಡಿದ್ದೆ. ಚಿತ್ರದ ಕೊನೆಯ ಆಕೆ ಕಮಲ್ ಸರ್ ನ ಪಾತ್ರವನ್ನು ಗುರುತಿಸುವಲ್ಲಿ ವಿಫಲವಾಗಿದ್ದನ್ನು . ನಾನು ಅವಳನ್ನು ಕೇಳಿದೆ 'ಮಮ್ಮಾ, ನೀವು ಕಮಲ್ ಅವರನ್ನು ಹೇಗೆ ಮರೆಯುತ್ತೀರಿ ಸರ್?' ನಾನು ಅವಳೊಂದಿಗೆ ಎರಡು ದಿನ ಮಾತನಾಡಿರಲಿಲ್ಲ ಎಂದಾಗೆ ಹೇಳಿಕೊಂಡಿದ್ದಾರೆ.  

 ನಾನು ಶ್ರೀದೇವಿಯವರ ಹಳೆಯ ಚಿತ್ರಗಳನ್ನು ವೀಕ್ಷಿಸಲು ಆರಂಭಿಸಿದೆ. ಆಕೆಯ ಕೆಲಸದ ಕುರಿತಂತೆ ಸುಧೀರ್ಘವಾದ ಅಧ್ಯಯನ ಮಾಡಿದೆ ಎಂದಿದ್ದಾರೆ. ಇದೀದ ಸೌತ್ ಇಂಡಸ್ಟ್ರೀಗೆ ಎಂಟ್ರಿಯಾಗಲು ರೆಡಿಯಾಗಿರುವ ಆಕೆ ದೇವರ ಚಿತ್ರದ ಮೂಲಕ ಜೂನಿಯರ್ ಎನ್ ಟಿಆರ್ ಗೆ ಜೋಡಿಯಾಗಿ ನಟಿಸುತ್ತಿದ್ದೇನೆ. ಈ ಚಿತ್ರದ ಕುರಿತಂತೆ ಪ್ರೇಕ್ಷಕರಿಗೂ ಅಷ್ಟೇ ನಿರೀಕ್ಷೆ ಇದೆ ಎಂದಾಕೆ ಹೇಳಿಕೊಂಡಿದ್ದಾರೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?