ಪೋಸ್ಟ್‌ಗಳು

ನವೆಂಬರ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಥಿಯೇಟರ್ ನಿಂದ ಆರಂಭವಾದ ಪ್ರೀತಿ, ಮದುವೆಯಲ್ಲಿ ಕೊನೆ- ಇಂಟರೆಸ್ಟಿಂಗ್ ಲವ್ ಕಹಾನಿ ತೆರೆದಿಟ್ಟ ರಣ್ ದೀಪ್ ಹೂಡ

ಇಮೇಜ್
 ರಣ್ ದೀಪ್ ಹೂಡಾ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಹಾಗೂ ಪ್ರೇಮಿ, ಲಿನ್ ಲೈಸ್ರಾಮ್ ರನ್ನು ಅವರು ಮಣಿಪುರದ ಸಂಪ್ರದಾಯದಂತೆ ವರಿಸಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ರಣ್ ದೀಪ್ ತಮ್ಮ ಬಹುಕಾಲದ ಗೆಳತಿ ಇದೀಗ ನನ್ನ ಪತ್ನಿ. ನಮ್ಮ ಸಂಸಾರ ಸುಖಮಯವಾಗಿರಲಿ ಎಂದು ಹಾರೈಸಿ ಎಂದಿದ್ದಾರೆ. <script async src="https://pagead2.googlesyndication.com/pagead/js/adsbygoogle.js?client=ca-pub-4357723644443662"      crossorigin="anonymous"></script> ಇದೇ ವೇಳೆ ಮಾಧ್ಯಮವೊಂದಕ್ಕೆ ಮಾತನಾಡಿದ ಅವರ ತನ್ನದು ಹಾಗೂ ಪತ್ನಿ ಲಿನ್ ಲೈಸ್ರಾಮ್ ದು ಬಹುದಿನಗಳ ಸ್ನೇಹ. ನಮ್ಮಿಬ್ಬರ ಪ್ರೀತಿ ಶುರುವಾಗಿದ್ದೇ ಥಿಯೇಟರ್ ನಲ್ಲಿ. ಎಂದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಲಿನ್ ಲೈಸ್ರಾಮ್, ತಮ್ಮ ಲವ್ ಸ್ಟೋರ ಿಹೇಗೆ ಆರಂಭವಾಯಿತು ಎಂಬುದನ್ನು ವಿವರಿಸಿದ್ದಾರೆ. 

ವೈವಾಹಿಕ ಜೀವನಕ್ಕೆ ಕಾಲಿಟ್ಟ ಪೂಜಾಗಾಂಧಿ- ಪತಿ ವಿಜಯ್ ಘೋರ್ಪಡೆ ಹಿನ್ನೆಲೆ ಗೊತ್ತಾ?

ಇಮೇಜ್
 ಮಳೆ ಹುಡುಗಿ ಎಂದೇ ಖ್ಯಾತಿ ಪಡೆದಿರುವ ನಟಿ ಪೂಜಾಗಾಂಧಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಬಹುದಿನಗಳ ಗೆಳೆಯ ವಿಜಯ್ ಘೋರ್ಪಡೆಯವರೊಂದಿಗೆ ಮದುವೆಯಾಗುತ್ತಿದ್ದಾರೆ.  ಯಲಹಂಕದಲ್ಲಿ ವಿವಾಹ ನಡೆದಿದ್ದು, ಕುವೆಂಪು ಅವರ ಆಶಯದ ಮಂತ್ರ ಮಾಂಗಲ್ಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂದಹಾಗೆ ಅವರ ಪತಿ ವಿಜಯ್ ಘೋರ್ಪಡೆ ಉದ್ಯಮಿಯಾಗಿದ್ದು, ಬೆಂಗಳೂರಿನ ಲಾಜಿಸ್ಟಿಕ್ ಕಂಪೆನಿಯ ಮಾಲೀಕರು. ಇವರ ನಡುವಿನ ಸ್ನೇಹ ಪ್ರೀತಿಗೆ ತಿರುಗಿ, ಪರಸ್ಪರ ವಿವಾಹಕ್ಕೆ ಇವರು ಸಿದ್ದರಾಗಿದ್ದಾರೆ.  ಮೂಲತಃ ಪಂಜಾಬಿನವರಾದ ಪೂಜಾಗಾಂಧಿ ಬೆಳೆದಿದ್ದು ದೆಹಲಿಯಲ್ಲಿ. ಓದು ಮುಗಿಸಿದ ಬಳಿಕ ಮಾಡೆಲಿಂಗ್ ಆರಂಭಿಸಿದ ಅವರು ಬಳಿಕ ಜಾಹೀರಾತು, ಸಿನಿಮಾ ಕ್ಷೇತ್ರಕ್ಕೆ ಬಂದರು. ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾದ ಪೂಜಾ, ಕನ್ನಡಾಭಿಮಾನಿಯಾಗಿ ಕನ್ನಡ ಮಾತನಾಡುವುದು ಕಲಿತರು. ಇದೀಗ ಬರೆಯುವುದು ಮತ್ತು ಓದಲು ಕಲಿತು ತನ್ನ ಮದುವೆಯ ವಿಚಾರವನ್ನು ಪತ್ರದ ಮೂಲಕ ಬರೆದು ತಮ್ಮ ಅಭಿಮಾನಿಗಳಿಗೆ ಆಹ್ವಾನ ನೀಡಿದ್ದಾರೆ

ಅವಕಾಶಗಳನ್ನು ಪಡೆಯಲು ನಟಿ ಜ್ಯೋತಿಕಾ ಈ ರೀತಿಯೂ ಮಾಡಿದ್ದಾರಂತೆ...|

ಇಮೇಜ್
 ಓಂದಲ್ಲಾ ಎರಡಲ್ಲಾ ಬರೋಬ್ಬರಿ 13 ವರ್ಷಗಳ ನಂತರ ಮತ್ತೆ ಮಲೆಯಾಲಂ ಚಿತ್ರರಂಗಕ್ಕೆ ವಾಪಾಸ್ಸಾಗುತ್ತಿರುವ ನಟಿ ಜ್ಯೋತಿಕಾ ಜಿಯೋ ಬೇಬಿ ನಿರ್ದೇಶನದ ಕಾತಾಲ್ ಚಿತ್ರದ ಮೂಲಕ ಮತ್ತೆ ಮಲೆಯಾಲಂ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.  ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಜ್ಯೋತಿಕಾ , ತನ್ನ ವೃತ್ತಿ ಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡಿರುವ ಜ್ಯೋತಿಕಾ , ತಾನು ಮೊದಲು  ಹಿರೋ ಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಪ್ರಾಮುಖ್ಯತೆ ಇರುವ ಫೀಮೇಲ್ ಲೀಡ್ ಗಳಿಗೆ ಮಾತ್ರ ಗಮನ ಹರಿಸುತ್ತಿದ್ದೆ. ಕೇವಲ ಹಿರೋ ಓರಿಯೆಂಟೆಡ್ ಸಿನಿಮಾಗಳು ಮಾತ್ರವಲ್ಲದೆ, ಹಿರೋಯಿನ್ ಗೂ ಅಷ್ಟೇ ಪ್ರಾಮುಖ್ಯತೆ ಇರುವ ಕಥೆಗಳನ್ನು ಹುಡುಕುತ್ತಿದ್ದೆ ಎಂದಿದ್ದಾರೆ.  ಅಷ್ಟೇ ಅಲ್ಲದೆ ಆರಂಭದ ದಿನಗಳಲ್ಲೂ ದೊಡ್ಡ ದೊಡ್ಡ ಸ್ಟಾರ್ ನಟರೊಂದಿಗೆ ಮಾತ್ರ ನಟಿಸಲು ಪ್ರಾಮುಖ್ಯತೆ ನೀಡುತ್ತಿದ್ದೆ. ಇದಕ್ಕೆ ಕಾರಣ, ನನ್ನನ್ನು ನಾನು ಎಸ್ಟಾಬ್ಲಿಷ್ ಮಾಡಲು ಮತ್ತು ಹಣ ಗಳಿಸಲು ಎಂದಿದ್ದಾರೆ.  17ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಡುವಾಗ ನಮಗೆ ಪ್ರೌಢತೆ ಕಡಿಮೆ ಇರುತ್ತದೆ. ಚಿತ್ರರಂಗದಲ್ಲಿನ ಅನುಭವಗಳು ಯಾವ ರೀತಿಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಕಲಿತೆ ಎಂದಿದ್ದಾರೆ. 

ಅಖಾಡಕ್ಕಿಳಿದ ಕಿಚ್ಚನ ಹೊಸ ರೂಲ್ಸ್ ..!

ಇಮೇಜ್
ನಟ ಸುದೀಪ್ ತಮ್ಮದೇ ಮ್ಯಾನರಿಸಂ ನಿಂದ ಗಮನ ಸೆಳೆಯುವ ನಟ. ಅವರದ್ದು ವಿಭಿನ್ನ ಸ್ಟೈಲ್.  ಸಿನಿಮಾ ಮಾತ್ರವಲ್ಲೆದೆ ಕುಕ್ಕಿಂಗ್, ಕ್ರಿಕೆಟ್ , ಮ್ಯೂಸಿಗ್ ಅವರ ಇಂಟರೆಸ್ಟಿಂಗ್ ಸಬ್ಜೆಕ್ಟ್. ತಮಗೆ ಇಷ್ಟವಾದಾಗ ಅವರು ಅಡುಗೆ ಮಾಡ್ತಾರೆ. ಸಂಗೀತ ಹಾಡ್ತಾರೆ ಮತ್ತು ಇಡೀ ದಕ್ಷಿಣ ಭಾರತ ಚಿತ್ರರಂಗವನ್ನೇ ಒಂದುಗೂಡಿಸುವ ಕೆಸಿಸಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಿ ಗಮನ ಸೆಳೆಯುತ್ತಾರೆ.  ಇದೀಗ ಮತ್ತೆ ಸುದೀಪ್ ಅವರ ಕೆಸಿಸಿ ಕ್ರಿಕೆಟ್ ಟೂರ್ನಿ ಸದ್ದು ಮಾಡುತ್ತಿದೆ. ಈ ಬಾರಿ ಒಂದಷ್ಟು ಬದಲಾವಣೆಗಳೊಂದಿಗೆ ಈ ಬಾರಿಯ ಟೂರ್ನಿ ಸದ್ದು ಮಾಡುತ್ತಿದೆ. ಸುದೀಪ್ ಹೇಳಿದಂತೆ ಟೂರ್ನಿಯಲ್ಲಿ ಆಗಿರುವ ಬದಲಾವಣೆಗಳೇನು ಅನ್ನೋದನ್ನು ನೋಡೋಣ, ಈ ಬಾರಿ ಕೇವಲ ಸಿನಿಮಾ ನಟರು ಮಾತ್ರವಲ್ಲ, ಕಿರಿ ತೆರೆಯ  ಕಲಾವಿದರು, ಕೆಲವು ಮಾಧ್ಯಮಗಳ ಪ್ರತಿನಿಧಿಗಳು ಕೂಡ ಭಾಗಿಯಾಗಲಿದ್ದಾರೆ.  ಕಳೆದ ಬಾರಿ ಎರಡು ದಿನಗಳ ಕಾಲ ನಡೆಯುತ್ತಿದ್ದ ಟೂರ್ನಿ ಈ ಬಾರಿ ಮೂರು ದಿನಗಳ ಕಾಲ ನಡೆಯಲಿದೆ. ಕಳೆದ ಬಾರಿ  ಇರುವ ಆರು ತಂಡಗಳಿಗೆ ತಲಾ ಎರಡು ಅಥವ ಮೂರು ಪಂದ್ಯಗಳಷ್ಟೇ ಆಡಲು ಸಿಗುತ್ತಿತ್ತು. ಆದರೆ ಈ ಬಾರಿ ಪ್ರತಿತಂಡಕ್ಕೆ ಆರು ಪಂದ್ಯಗಳು ಆಡಲು ಸಿಗಲಿದೆ.  ರೌಂಡ್ ರಾಬಿನ್ ವಿಧಾನದಲ್ಲಿ ಪಂದ್ಯ ನಡೆಯಲಿದೆ. ವಿದೇಶಿ ಆಟಗಾರರು ಈ ಬಾರಿಯೂ ತಂಡದಲ್ಲಿ ಇರಲಿದ್ದಾರೆ. 

ಸಿನಿಮಾರಂಗಕ್ಕೆ ಬರುವ ಮೊದಲು ರಕ್ಷಿತ್ ಶೆಟ್ಟಿ ಈ ಕೆಲಸವನ್ನು ಮಾಡಿದ್ದಾರಂತೆ...!

ಇಮೇಜ್
 ಕನಸು ಅನ್ನೋದು ಪ್ರತಿಯೊಬ್ಬರಿಗೂ ಇರುತ್ತದೆ. ಕೆಲವರಿಗೆ ಸಿನಿಮಾ ಹಿರೋ ಆಗಬೇಕು ಅನಿಸಿದರೆ ಮತ್ತೆ ಕೆಲವರಿಗೆ ಇನ್ನೊಂದು ಥರದ ಆಸೆ. ಈ ಕನಸಿನ ಬೆನ್ನತ್ತಿ ಹೋಗುವ ಅದೆಷ್ಟೋ ಮಂದಿಗೆ ಸೋಲು ಎದುರಾದರೆ ಮತ್ತೆ ಕೆಲವರು ಗುರಿ ಮುಟ್ಟಿ ಗೆದ್ದು ಬೀಗುತ್ತಾರೆ. ಆದರೆ ಈ ಗೆಲುವಿನ ಹಾದಿ ಇದೆಯಲ್ಲಾ ಅದು ಅಷ್ಟು ಸುಲಭದಲ್ಲ. ಇದೀಗ ನಾವು ಹೇಳಲು ಹೋರಟಿರುವುದು ಕನ್ನಡ ಸಿನಿಮಾರಂಗದಲ್ಲಿ ಸದ್ಯಕ್ಕೆ ಗೆಲುವಿನ ನಾಗಲೋಟದಲ್ಲಿರುವ, ಚ್ಯೂಸಿಯಾಗಿ ಡಿಫರೆಂಟಾಗಿ ಸಿನಿಮಾ ಮಾಡುತ್ತಿರುವ ನಮ್ಮ ನೆಟ್ಟಿನ ರಕ್ಷಿತ್ ಶೆಟ್ಟಿ ಬಗ್ಗೆ. ಈ ಶೆಟ್ರು ಮಾಡುವ ಸಿನಿಮಾಗಳು ಸಿಕ್ಕಾಪಟ್ಟೆ ಢಿಫರೆಂಟಾಗಿರುತ್ತದೆ. ಹೀಗಾಗಿಯೇ ರಕ್ಷಿತ್ ಶೆಟ್ಟಿ ಸ್ಯಾಂಡಲ್ ವುಡ್ ನ ಭರವಸೆಯ ನಾಯಕ.  ಶೆಟ್ರ ಬಹುನಿರೀಕ್ಷೆಯ ಸಿನಿಮಾ ಸಪ್ತಸಾಗರದಾಚೆ ಸೈಡ್ ಬಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಪ್ರೇಕ್ಷಕರಿಂದ ಒಂದು ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಸಣ್ಣ ಪುಟ್ಟ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಪರಿಚತರಾದ ಶೆಟ್ರು ಬಳಿಕ ಉಳಿದವರು ಕಂಡಂತೆ ಚಿತ್ರವನ್ನು ನಿರ್ಮಿಸಿ ತಾವು ಹಿರೋ ಆಗಿ ಬಡ್ತಿ ಪಡೆದರು. ಹುಟ್ಟಿದ್ದು ಉಡುಪಿಯಲ್ಲಾದರೂ , ಇಂಜಿನಿಯರಿಂಗ್ ಪದವಿದರ. ಹೀಗಾಗಿ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಆದರೆ ಈ ಕೆಲಸದ ಬಗೆಗಿನ ಆಸಕ್ತಿ ಕಡಿಮೆಯಾಗಿ, ಚಿತ್ರರಂಗದತ್ತ ಒಲವು ಜಾಸ್ತಿಯಾಗಿದ್ದರಿಂದ ಅವರು . ತಮ್ಮನ್ನು ತಾವು ಚಿತ್ರರಂಗದಲ್ಲೇ ತೊಡಗಿಸಿಕೊಂಡರು ಮತ...

ನಟಿ ಲೀಲಾವತಿ ಹಿನ್ನೆಲೆ ಏನು? ಚಿತ್ರರಂಗಕ್ಕೆ ಇವರು ಪ್ರವೇಶ ಹೇಗಾಯಿತು ಗೊತ್ತಾ?

ಇಮೇಜ್
 70ರ ದಶಕದ ತೆರೆ ಮೇಲಿನ ಸೂಪರ್ ಹಿಟ್ ಜೋಡಿಗಳು ಎನಿಸಿಕೊಂಡಿದ್ದ ಡಾ ರಾಜ್ ಕುಮಾರ್ ಹಾಗೂ ಲೀಲಾವತಿಯರ ಕುರಿತಂತ ಹಲವು ಊಹಾಪೋಹಗಳು ಹರಿದಾಡುತ್ತಲೇ ಇದೆ. ಆದರೆ ಈ ಬಗ್ಗೆ ಯಾರೂ ಕೂಡ ಖಚಿತ ಹೇಳಿಕೆ ನೀಡುತ್ತಿಲ್ಲ . ಈ ನಡುವೆ ಲೀಲಾವತಿಯವರು ಮಗ ವಿನೋದ್ ಹಾಗೂ ಸೊಸೆಯೊಂದಿಗೆ ತಮ್ಮ ತೋಟದ ಮನೆಯಲ್ಲಿ ತಾವಾಯಿತು ತಮ್ಮ ಜೀವನವಾಯ್ತು ಎಂದುಕೊಂಡು ಬಿಟ್ಟಿದ್ದಾರೆ.  ಕೃಷಿ ಚಟುವಟಿಕೆಯತ್ತ ಹೆಚ್ಚು ಒಲವು ತೋರಿರುವ ಲೀಲಾವತಿ ಹಾಗೂ ಮಗ ವಿನೋದ್ ರಾಜ್, ತಮ್ಮ ಬಹುತೇಕ ಸಮಯವನ್ನು ಅಲ್ಲೇ ಕಳೆಯುತ್ತಾರೆ. ಅದೇನೆ ಇರಲಿ ಇದೀಗ ಲೀಲಾವತಿ ಅವರ ಆರೋಗ್ಯ ಏರುಪೇರಾಗಿದ್ದು, ಅವರಿಗೆ ಮೂಗಿನ ಮೂಲಕ ಆಹಾರವನ್ನು ನೀಡಲಾಗುತ್ತಿದೆ. ನಡೆದಾಡಲು ಸಾಧ್ಯವಾಗದ ರೀತಿಯಲ್ಲಿರುವ ತಾಯಿಯನ್ನು ವಿನೋದ್ ರಾಜ್ ಮಗುವಿನಂತೆ ಪೋಷಿ,ಸುತ್ತಿದ್ದಾರೆ.  ಲೀಲಾವತಿಯವರು ಇದುವರೆಗೂ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗಿನಲ್ಲೂ ನಟಿಸಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರಾಗಿರುವ ಲೀಲಾವತಿಯವರು ಬಾಲ್ಯದಲ್ಲೇ ಪೋಷಕರನ್ನು ಕಳೆದುಕೊಂಡು ಬದುಕು ಅರಸುತ್ತಾ ಹೋದವರು ಮೈಸೂರಿನಲ್ಲಿ ನಟನಾ ವೃತ್ತಿ ಆರಂಭಿಸುತ್ತಾರೆ.  1949ರಲ್ಲಿ ಶಂಕರ್ ನಾಗ್ ಅಭಿನಯದ ನಾಗಕನ್ನಿಕೆ ಸಿನಿಮಾದಲ್ಲಿ ಸಖಿಯ ಪಾತ್ರದ ಮೂಲಕ ಚಂದನವನ ಪ್ರವೇಶಿಸಿದ ಲೀಲಾವತಿಯವರು ಹಲವು ನಾಟಕಗಳಲ್ಲೂ ಅಭಿನಯಿಸಿದ್ದಾರೆ.  ...

ಸೌತ್ ನ ಸೂಪರ್ ಸ್ಟಾರ್ ಗೆ ವಿಲನ್ ಆಗುತ್ತಿದ್ದಾರೆ ಕನ್ನಡದ ನಟ..!

ಇಮೇಜ್
 ರಾಜ್ ಬೀ ಶೆಟ್ಟಿ. ಕನ್ನಡದ ಹೆಮ್ಮೆಯ ನಟ. ನಟನೆಗೆ ರೂಪ ಇದ್ರೆ ಸಾಲೋಲ್ಲ. ನಟನಾ ಕಲೆ ಗೊತ್ತಿರಬೇಕು. ಎಂಬುದನ್ನು ಸಾಬೀತು ಪಡಿಸಿದ ನಟ. ಈಗಾಗಲೇ ಕನ್ನಡದಲ್ಲಿ ಫೇಮಸ್ ಆಗಿರುವ ರಾಜ್ ಬಿ ಶೆಟ್ಟಿ ಮಲೆಯಾಲಂಗೂ ಹಾರಿದ್ದಾರೆ. ಇದೀಗ ರಾಜ್ ಬಿ ಶೆಟ್ಟಿಗೆ ಅತ್ಯುತ್ತಮ ಅದೃಷ್ಟವೊಂದು ಒಲಿದು ಬಂದಿದ್ದು. ಮಲೆಯಾಲಂ ಮೆಗಾಸ್ಟಾರ್ ಮಮ್ಮುಟ್ಟಿಗೆ ವಿಲನ್ ಆಗಿ ನಟಿಸಲು ರಾಜ್ ರೆಡಿಯಾಗಿದ್ದಾರೆ. ಮಾಲಿವುಡ್ ಮೆಗಾಸ್ಟಾರ್ ಮಮ್ಮುಟ್ಟಿ ಇತ್ತೀಚೆಗೆ ಕಣ್ಣೂರು ಸ್ಕ್ವಾಡ್‌ನಲ್ಲಿ ಕಾಣಿಸಿಕೊಂಡಿದ್ದು ಚಿತ್ರ ಈಗಾಗಲೇ , OTT ಯನ್ನು ಪ್ರವೇಶಿಸಿದೆ. ಈ ಮದ್ಯೆ ಮಮ್ಮುಟ್ಟಿ ಅವರ ಮುಂಬರುವ ಚಿತ್ರ, ಕಾದಲ್: ದಿ ಕೋರ್, ರಿಲಸ್ ಆಗಿದೆ. ಮಮ್ಮುಟ್ಟಿ ಪ್ರಸ್ತುತ ವೈಶಾಖ್ ನಿರ್ದೇಶನದ ಮತ್ತೊಂದು ಪ್ರಾಜೆಕ್ಟ್  ಆಕ್ಷನ್ ಕಾಮಿಡಿ ಚಿತ್ರ ಟರ್ಬೋ ದ ಚಿತ್ರೀಕರಣದಲ್ಲಿ ತಲ್ಲೀನರಾಗಿದ್ದಾರೆ. ಗರುಡ ಗಮನ ವೃಷಭ ವಾಹನ ಮತ್ತು ಟೋಬಿ ಚಿತ್ರದಲ್ಲಿನ ಅದ್ಭುತ ಅಭಿನಯಕ್ಕಾಗಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಕನ್ನಡ ನಟ ರಾಜ್ ಬಿ ಶೆಟ್ಟಿ ಅವರು ಈ ಚಿತ್ರದಲ್ಲಿ ಮಮ್ಮುಟ್ಟಿಗೆ ಎದುರಾಗಿ ವಿಲನ್ ರೋಲ್ ನಲ್ಲಿ ನಟಿಸಲಿದ್ದಾರಂತೆ.  . ಇದು ಮಲಯಾಳಂ ಚಿತ್ರರಂಗದಲ್ಲಿ ರಾಜ್ ಬಿ ಶೆಟ್ಟಿಯವರ ಎರಡನೇ ಚಿತ್ರ. ಅಲ್ಲದೆ ಮೆಗಾಸ್ಟಾರ್ ಜೊತೆಗೆ ತೆರೆ ಹಂಚಿಕೊಳ್ಳಲು ಇರುವ ಎರಡನೇ ಅವಕಾಶವೂ ಹೌದು.

ಮತ್ತೆ ವಿವಾದ ಸುಳಿಗೆ ಸಿಲುಕಿದ ಚಾಲೆಂಜಿಂಗ್ ಸ್ಟಾರ್ ದರ್ಶನ್...!

ಇಮೇಜ್
 ವಿವಾದಗಳು ದರ್ಶನ್ ಅವರನ್ನು ಹುಡುಕಿಕೊಂಡು ಬರುತ್ತವೋ ಅಥವ ಇವರೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೋ ಗೊತ್ತಿಲ್ಲ. ನೇಮ್ ಹೆಚ್ಚಾದ ಹಾಗೆ ಈ ರೀತಿಯ ವಿವಾದಗಳು ಸಾಮಾನ್ಯ ಬಿಡಿ. ಆದರೆ ಸೆಲೆಬ್ರಿಟಿಗಳು ತಾವು ಒಂದು ಹೆಜ್ಜೆ ಮುಂದಿಡಬೇಕಾದರು ಸಾವಿರಾರು ಬಾರಿ ಯೋಚಿಸಬೇಕು ಎಂಬುದಕ್ಕೆ ಈಗಾಗಲೇ ಹಲವು ಘಟನೆಗಳು ನಡೆದುಹೋಗಿವೆ. ಇದೀಗ ನಟ ದರ್ಶನ್ ಅಭಿಮಾನಿಗಳು ನೀಡಿದ ಬೆಳ್ಳಿಯ ಖಡ್ಗವನ್ನು ಹಿಡಿದ ಕಾರಣಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ವಿವಾದ ಸೃಷ್ಟಿಯಾಗಿದೆ. 

ಸಂಚು ವೆಡ್ಸ್ ಗೀತಾ ಸಿಕ್ವೆಲ್ 2- ಸ್ಟೋರಿ ಯಾವ ರೀತಿ ಇದೆ ಗೊತ್ತಾ?

ಇಮೇಜ್
  'ಸಂಜು ವೆಡ್ಸ್ ಗೀತಾ' ಜನರು ಮೆಚ್ಚಿದ ಇಂದಿಗೂ ಜನಮಾನಸದಲ್ಲಿ ಗಟ್ಟಿಯಾಗಿ ನೆಲೆ ನಿಂತ ಸಿನಿಮಾ. 2011ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ಮಾಡಿದ ಮೋಡಿ ಯಾರು ಮರೆಯಲು ಸಾಧ್ಯವೇ ಇಲ್ಲ. ಇದೀಗ ಚಿತ್ರದ ಸಿಕ್ವೆಲ್ ಗೆ ಚಿತ್ರತಂಡ ರೆಡಿಯಾಗಿದೆ. ಈ  ಬಾರಿ ರಮ್ಯಾ ಬದಲಾಗಿ ರಚಿತಾ ರಾಮ್ ಎಂಟ್ರಿಯಾಗಿದ್ದಾರೆ. ನಾಗಶೇಖರ್ ನಿರ್ದೇಶನದ ಈ ಚಿತ್ರ ರಿಲೀಸ್ ಆಗಿ 12 ವರ್ಷಗಳ ಬಳಿಕ ಈ ಸಿನಿಮಾ ರಿಲೀಸ್ ಆಗುತ್ತಿದ್ದು ಸಹಜವಾಗಿಯೇ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿದೆ. ಚಿತ್ರದ ಶೂಟಿಂಗ್ ಬೆಂಗಳೂರಿನಲ್ಲೇ ನಡೆಯುತ್ತಿದ್ದು, ಏಪ್ರಿಲ್ 1ಕ್ಕೆ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ರೆಡಿಯಾಗುತ್ತಿದೆ.   ರಚಿತಾ ರಾಮ್, ಶ್ರೀನಗರ ಕಿಟ್ಟಿ, ಸಾಧು ಕೋಕಿಲಾ, ಅರುಣ್ ಸಾಗರ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇದರ ನಡುವೆ ಇತ್ತೀಚೆಗೆ ನಡೆದ ಪತ್ರಿಕಾಗೋಷ್ಟಿಯ ಸಂದರ್ಭದಲ್ಲಿ ಶ್ರೀನಗರ ಕಿಟ್ಟಿ ರಚಿತಾ ರಾಮ್ ಕುರಿತಂತೆ ಹೇಳಿದ ಲಕ್ಕಿ ಚಾರ್ಮ್ ವಿಚಾರ ಇದೀಗ ವೈರಲ್ ಆಗಿದೆ. 

ರಚಿತಾರಾಮ್ ನಿಜಕ್ಕೂ ಲಕ್ಕಿ ಹಿರೋಯಿನ್ ..! ಆಕೆಯ ಸೋಲೆಷ್ಟು ಗೆಲುವೆಷ್ಟು..?

ಇಮೇಜ್
 ರಚಿತಾ ರಾಮ್... ಬೆಂಗಳೂರಿನ ಈ ಬೆಡಗಿ ಬಬ್ಲಿ ಬಬ್ಲಿಯಾಗಿದ್ದುಕೊಂಡೆ ಕನ್ನಡದ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿ ಎನಿಸಿಕೊಂಡವರು. 1991ರಲ್ಲಿ ಜನಿಸಿದ ಇವರ ಹೆಸರು ರಚಿತಾ ರಾಮ್. ಕಿರುತೆರೆ ಧಾರವಾಹಿಗಳ ಮೂಲಕ ಗಮನ ಸೆಳೆದ ರಚಿತಾ ರಾಮ್,  2013ರ ಬುಲ್ ಬುಲ್ ಸಿನಿಮಾದ ಮೂಲಕ ಹಿರಿತೆರೆಗೆ ಎಂಟ್ರಿಯಾಗುತ್ತಾರೆ. ಮೊದಲ ಸಿನಿಮಾವೇ ಸೂಪರ್ ಹಿಟ್ ಆಗಿದ್ದೇ ಆಗಿದ್ದು, ರಚಿತಾಗೆ ಸ್ಯಾಂಡಲ್ ವುಡ್ ನಲ್ಲಿ ಎಲ್ಲಿಲ್ಲದ ಬೇಡಿಕೆ ಬಂತು.  2015ರ ರನ್ನ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಇದು ಅವರ ಮೊದಲ ಫಿಲ್ಮ್ ಫೇರ್ ಪ್ರಶಸ್ತಿಯೂ ಹೌದು. 2016ರ ಚಕ್ರವ್ಯೂಹ, 2017ರ ಪುಷ್ಪಕವಿಮಾನ,    ಭರ್ಜರಿ (2017), ನಟಸಾರ್ವಭೌಮ (2019), ಲವ್ ಯೂ ರಚ್ಚು (2021), ಮಾನ್ಸೂನ್ ರಾಗ (2022) ಮತ್ತು ಕ್ರಾಂತಿ (2023) ಮುಂತಾದ ಚಿತ್ರಗಳು ಅವರಿಗೆ ಒಳ್ಳೆಯ ನೇಮ್ ಆಂಡ್ ಫೇಮ್ ತಂದುಕೊಟ್ಟಿವೆ. ರನ್ನ, ಅಯೋಗ್ಯ (2018) ಮತ್ತು ಆಯುಷ್ಮಾನ್ ಭವ (2019) ಎಂಬ ಯಶಸ್ವಿ ಚಿತ್ರಗಳಿಗಾಗಿ ರಚಿತಾ ಅತ್ಯುತ್ತಮ ನಟನೆಗಾಗಿ ಮೂರು ಸೈಮಾ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ರಚಿತಾ ರಾಮ್ ಬಾಲ್ಯ ರಚಿತಾ ರಾಮ್ ಅವರ ತಂದೆಯ ಹೆಸರು ರಾಮ್. ಇವರು ಭರತನಾಣ್ಯ ಕಲಾವಿದರಾಗಿದ್ದು, ಇದುವರೆಗೂ ಹಲವು ಸಾರ್ವಜನಿಕ ಪ್ರದರ್ಶನಗಳನ್ನು ನೀಡಿದ್ದಾರೆ. ಹೀಗಾಗಿ ರಚಿತಾ ರಾಮ್ ಕೂಡ ಕ...

ಇತಿಹಾಸ ಸೃಷ್ಟಿಸಿದ 2023ರ ಮಿಸ್ ಯೂನಿವರ್ಸ್

ಇಮೇಜ್
 2023ರ ನವೆಂಬರ್ ನಲ್ಲಿ ನಡೆದ ಮಿಸ್ ಯೂನಿವರ್ಸ್ ಸ್ಪರ್ಧೆ ಹಲವು ಕಾರಣಗಳಿಂದ ಗಮನ ಸೆಳೆಯಿತು. ಅದರಲ್ಲೂ  ನಿಕರಾಗುವಾ ಮೂಲದ ಶೆನ್ನಿಸ್ ಪಲಾಸಿಯೋಸ್ 72ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಇತಿಹಾಸ ನಿರ್ಮಿಸಿದರು, ಪ್ರತಿಷ್ಠಿತ ಕಿರೀಟವನ್ನು ಗೆದ್ದ ತನ್ನ ದೇಶದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.  ಪಲಾಸಿಯೊಸ್ ಕಿರೀಟವನ್ನು ಗೆದ್ದರು, ಆದರೆ ಈ ವರ್ಷದ ಸ್ಪರ್ಧೆಯು ದೀರ್ಘಕಾಲದ ಗಡಿಗಳನ್ನು ಮುರಿಯುವ ಮೂಲಕ ಮತ್ತು ತಾಯಂದಿರು, ವಿವಾಹಿತ ಮಹಿಳೆಯರು ಮತ್ತು ಪ್ಲಸ್-ಸೈಜ್ ಮಾದರಿಯನ್ನು ಸ್ವಾಗತಿಸುವ ಮೂಲಕ ಇತಿಹಾಸವನ್ನು ನಿರ್ಮಿಸಿತು. ಎರಡು ಮಕ್ಕಳ ತಾಯಿ ವಿಶ್ವಸುಂದರಿ ಸ್ಪರ್ಧೆಯಲ್ಲಿ ಸ್ಪರ್ಧಿಸಿರುವ ಮಿಸ್ ಗ್ವಾಟೆಮಾಲಾ ಮಿಚೆಲ್ ಎರಡು ಮಕ್ಕಳ ತಾಯಿ. 28 ವರ್ಷದ  ಈ ಸುಂದರಿ ಎರಡು ಮಕ್ಕಳನ್ನು ಹೊಂದಿದ್ದಾರೆ. ಈಕೆ ರೂಪದರ್ಶಿ, ಮತ್ತು ಉದ್ಯಮಿಯೂ ಹೌದು.  ವಿಶ್ವ ಸುಂದರಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿವಾಹಿತ ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಮಿಸ್ ಕೊಲಂಬಿಯಾ ಕ್ಯಾಮಿಲಾ ಅವೆಲ್ಲಾ, ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಮೊದಲ ವಿವಾಹಿತ ಮಹಿಳೆ ಮತ್ತು ಎರಡು ಮಕ್ಕಳ ತಾಯಿ. ಇದು ಮಾತ್ರವಲ್ಲದೆ, ಮಿಸ್ ಯೂನಿವರ್ಸ್ 2023 ಟಾಪ್ 5 ಅನ್ನು ತಲುಪಿದ ಮೊದಲ ತಾಯಿಯೂ ಆದರು. ಪ್ರಶ್ನೋತ್ತರ ಸುತ್ತಿನಲ್ಲಿ, ಕ್ಯಾಮಿಲಾ ಅವರನ್ನು ಕೇಳಲಾಯಿತು: ಇದು ಭೂಮಿಯ ಮೇಲಿನ ನಿಮ್ಮ ಕೊನೆಯ ದ...

ಕಳೆದ 12 ತಿಂಗಳಲ್ಲಿ ಅತ್ಯಧಿಕ ಟ್ರೋಲ್ ಗೆ ಗುರಿಯಾದ ಕ್ರಿಕೇಟಿಗ ಯಾರು ಗೊತ್ತಾ...?

ಇಮೇಜ್
 ಭಾರತ ಮಾತ್ರವಲ್ಲ ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಪ್ಯಾನ್ಸ್ ಇರೋ ಸ್ಪೋರ್ಟ್ಸ್ ಅಂದರೆ ಅದು ಕ್ರಿಕೇಟ್. ಇದೀಗ ಭಾರತೀಯ ಕ್ರಿಕೇಟ್ ಪ್ರೇಮಿಗಳು ಇಟ್ಟಿದ್ದ ವಿಶ್ವಕಪ್ ಕನಸು ನುಚ್ಚು ನೂರಾಗಿದೆ. ಅದಿರಲಿ ಕಳೆದ 12 ತಿಂಗಳಲ್ಲಿ  ಅತೀ ಹೆಚ್ಚು ಟ್ರೋಲ್ ಗೆ ಗುರಿಯಾದ  ಕ್ರಿಕೇಟಿಗ ಯಾರು ಅಂತ ನೋಡಲು ಹೋದರೆ ಇವರ ಹೆಸರು ಹೊರಗೆ ಬಂದಿದೆ. ಕೆ ಎಲ್ ರಾಹುಲ್.  ವಿಶ್ವಕಪ್ ಫೈನಲ್ ನಲ್ಲಿ ಆಸ್ಪ್ರೇಲಿಯಾದ ವಿರುದ್ಧ ಅರ್ಧಶತಕ ಭಾರಿಸಿದ ಕೆ ಎಲ್ ರಾಹುಲ್ ಅವರನ್ನು ಆಕಾಶ್ ಚೋಪ್ಲಾ ಶ್ಲಾಘಿಸಿದ್ದಾರೆ.  ಅಹಮದಾಬಾದ್ ನ ನರೇಂದ್ರಮೋದಿ ಸ್ಟೇಡಿಯಂನಲ್ಲಿ ನವೆಂಬರ್ 19ರಂದು ರಾತ್ರಿ ನಡೆದ ಕ್ರಿಕೇಟ್ ಕದನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಕೆ ಎಲ್ ರಾಹುಲ್ ಅವರನ್ನು ಮಾಜಿ ಕ್ರಿಕೇಟಿಗ ಅಕಾಶ್ ಚೋಪ್ರಾ ಶ್ಲಾಘಿಸಿದ್ದಾರೆ.  ಕಳೆದ 12 ತಿಂಗಳಲ್ಲೇ ಅತೀ ಹೆಚ್ಚು ಟ್ರೋಲ್ ಗೆ ಒಳಗಾದ ರಾಹುಲ್, ಯಾವಾಗ ತಂಡಕ್ಕೆ ರನ್ ಗಳ ಅಗತ್ಯ ತೀವ್ರವಾಯಿತೋ ಅವತ್ತು ಬ್ಯಾಟ್ ನೊಂದಿಗೆ ಗಟ್ಟಿಯಾಗಿ ನಿಂತಿದ್ದಾರೆ ಎಂದು ಚೋಪ್ರಾ ಶ್ಲಾಘಿಸಿದರು.  11 ಪಂದ್ಯಗಳಲ್ಲಿ ಕೆಎಲ್ ರಾಹುಲ್ 75.33ರ ಸರಾಸರಿಯಲ್ಲಿ ಮತ್ತು 90.76ರ ಸ್ಪ್ರೈಕ್ ರೇಟ್ ನಲ್ಲಿ 452 ರನ್ ಗಳಿಸಿದರು. ಕೆ ಎಲ್ ರಾಹುಲ್ ಒಂದು ಶತಕ ಮತ್ತು ಎರಡು ಅರ್ಥ ಶತಕಗಳನ್ನು ಭಾರಿಸಿದ್ದಾರೆ ರಾಹುಲ್ ನೆದರ್ ಲ್ಯಾಂಡ್ ವಿರುದ್ದ 102 ಸ್ಕೋರ್ ಗಳನ್ನು 6...

ಸೈಫ್ ಅಲಿಖಾನ್ ನನ್ನು ಮದುವೆಯಾಗಿದ್ದು ಯಾಕೆ ಅಂತ ತಿಳಿಸಿದ್ರು ಕರೀನಾ ಕಾಪೂರ್

ಇಮೇಜ್
 ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಸತಿಪತಿಗಳಾಗಿ ದಶಕಗಳೇ ಕಳೆದಿದೆ. ಮೊದಲಿಗೆ ಅಮೃತಾ ಸಿಂಗ್ ಅವರನ್ನು ವರಿಸಿದ್ದ ಸೈಫ್ ಬಳಿಕ ಅವರಿಂದ ಬೇರ್ಪಟ್ಟು, ಕರೀನಾ ಅವರನ್ನು ವಿವಾಹವಾಗಿದ್ದರು. ಮದುವೆಯಾಗುವುದಕ್ಕೂ ಮುನ್ನ 5 ವರ್ಷಗಳ ಕಾಲ ಕರೀನಾ ಹಾಗೂ ಸೈಫ್ ಜೊತೆಗಿದ್ದರು. ಇದೀಗ ಸೈಫ್ ಅಲಿಖಾನ್ ರನ್ನು ಯಾಕೆ ಮದುವೆಯಾದೆ ಎಂಬ ಕುರಿತಂತೆ ಕರೀನಾ ದಿ ಡರ್ಟಿ ಮ್ಯಾಗಜಿನ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.  ಮಗುವನ್ನು ಹೊಂದುವ ಸಲುವಾಗಿ ತಾನು ಮದುವೆ ಮಾಡಿಕೊಂಡೆ ಎಂಬವಿಚಾರದ ಕುರಿತಂತೆ ಪ್ರತಿಕ್ರಿಯಿಸಿರುವ ಕರೀನಾ, ತೈಮೂರು ಮತ್ತು ಜಹಾಂಗೀರ್ ಹುಟ್ಟುವ ಐದು ವರ್ಷದ ಮೊದಲೇ ನಾವು ಜೊತೆಗೆ ಬದುಕಿದ್ದೆವು. ಆದರೆ ಎಲ್ಲವೂ ಓಕೆ ಅಂದ ಮೇಲೆಯೆ ನಾವು ಮುಂದುವರೆಯಲು ನಿರ್ಧರಿಸಿದೆವು. ಮಕ್ಕಳನ್ನು ಹೊಂದಳು ಬಯಸಿದೆವು ಎಂದು ಅವರು ಹೇಳಿದ್ದಾರೆ.  ಕರೀನಾ ಮತ್ತು ಸೈಫ್ ಕೆಲವು ವರ್ಷಗಳ ಡೇಟಿಂಗ್ ನಂತರ ಅಕ್ಟೋಬರ್ 2012 ರಲ್ಲಿ ಮುಂಬೈನಲ್ಲಿ ವಿವಾಹವಾದರು. ಅವರು ಮೊದಲು ನಟಿ ಅಮೃತಾ ಸಿಂಗ್ ಅವರನ್ನು ಮದುವೆಯಾಗಿದ್ದರು. 2004 ರಲ್ಲಿ ಬೇರೆಯಾದರು. ಸೈಫ್ ಮತ್ತು ಅಮೃತಾ ಅವರಿಗೆ ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸೈಫ್ ಮತ್ತು ಕರೀನಾ ಅವರಿಗೆ ತೈಮೂರ್ ಅಲಿ ಖಾನ್ (ಜನನ 2016) ಮತ್ತು ಜಹಾಂಗೀರ್ ಅಲಿ ಖಾನ್ (2021 ರಲ್ಲಿ ಜನನ) ಮಕ್ಕಳಿದ್ದಾರೆ. ಕರೀನಾಳ ಪೇರೆಂಟಿಂಗ್ ಮಕ್ಕಳನ್ನು ನಾವು ಗ...

ಏನಿದು ಮಾಮುಷಿ ಪಾಯಿಸನ್ : ಶ್ರೀದೇವಿ ಇದನ್ನು ಇನ್ ಜೆಕ್ಟ್ ಮಾಡಿಕೊಂಡಿದ್ದು ಯಾಕೆ?

ಇಮೇಜ್
 ಅಂದು 2018ರ ಫೆಬ್ರವರಿ 24. ಜನ ಎಂದಿನಂತೆ ಕಾರ್ಯಪ್ರವೃತ್ತರಾಗುತ್ತಿದ್ದರೆ, ಇತ್ತೆ ಟಿವಿ ಪರದೆಯ ಮೇಲೆ ಅತಿಲೋಕ ಸುಂದರಿ' ಶ್ರೀದೇವಿ ಇನ್ನಿಲ್ಲ ಎಂಬ ಬ್ರೇಕಿಂಗ್ ನ್ಯೂಸ್ ಪ್ರೇಕ್ಷಕರನ್ನು ಬರಸಿಡಿಲಿನಂತೆ ಅಪ್ಪಳಿಸಿತ್ತು. ಆಕೆಗೆ ಏನಾಗಿದೆ. ಏನಿದು ದಿಡೀರ್ ಸಾವು ಎಂದು ನೋಡುತ್ತಿದ್ದ ಅಭಿಮಾನಿಗಳಿಗೆ ತಿಳಿದ ಸುದ್ದಿ, ಆಕೆ ಬಾತ್ ಟಬ್ ನಲ್ಲಿ ಮುಳುಗಿ ಸಾವನಪ್ಪಿದ್ದಾರೆ ಎಂದು. ಆದರೆ ಈ ಸುದ್ದಿಯನ್ನು ಜನ ಅಷ್ಟು ಸುಲಭವಾಗಿ ಒಪ್ಪಿಕೊಂಡಿರಲಿಲ್ಲ. ಆದರೆ ಆಕೆಯ ಸಾವು ನಡೆದಿದ್ದು ದುಬೈನಲ್ಲಿ. ಹೀಗಾಗಿ ಈ ಬಗ್ಗೆ ಭಾರತದಲ್ಲಿರುವ ಅಭಿಮಾನಿಗಳಿಗೂ ಹೆಚ್ಚೆನು ಕೆದಕಲು ಆಗಿರಲಿಲ್ಲ. ಮಾಧ್ಯಮಗಳು ಮಾಡಿದ ವರದಿಯನ್ನೇ ಒಪ್ಪಿಕೊಳ್ಳಬೇಕಾದ ಅನಿವಾರ್ಯವೂ ಎದುರಾಗಿತ್ತು. ಆದರೆ ಮನದ ಮೂಲೆಯಲ್ಲಿ ಎಲ್ಲೋ ಈ ಸಾವಿನ ಹಿಂದೆ ಅದೆನೋ ನಿಗೂಢ ಇದೆ ಅನ್ನೋ ಅನುಮಾನ ಮಾತ್ರ ಸದಾ ಹಸಿಯಾಗಿತ್ತು.   ಮದುವೆ ಕಾರ್ಯಕ್ರಮಕ್ಕೆಂದು ದುಬೈಗೆ ತೆರಳಿದ್ದ ಶ್ರೀದೇವಿ ಮರಳಿ ಬಂದಿದ್ದು ಶವವಾಗಿ. ಬಂದಿದ್ದು ನೋಡಿದ  ಅಭಿಮಾನಿಗಳು ದಿಗ್ರ್ಬಮೆಗೊಂಡಿದ್ದರು. ಅಷ್ಟೊಂದು ಫಿಟ್ ಆಂಡ್ ಫೈನ್ ಆಗಿದ್ದ ಶ್ರೀದೇವಿ . ಬಾತ್‌ಟಬ್‌ನಲ್ಲಿ ಮುಳುಗಿ ಸಾವನ್ನಪ್ಪೋದು ಅಂದರೇನು..? ಆಕೆಯೇನು ಮಗುವೆ, ಅಷ್ಟಕ್ಕೂ ಆಕೆಗೆ ಏನಾಯಿತು ಎಂಬ ಕುರಿತಂತೆ ಚರ್ಚೆಗಳು ಸಾಗಿದವು. ಇದ್ದೀಗ ಅದಕ್ಕೆ ಪುಷ್ಠಿ ನೀಡಲೆಂದು ಇದೀಗ ತನೊಬ್ಬ ಸ್ವಾತಂತ್ರ್ಯ ತನಿಖಾ ಪತ್ರಿಕೋದ್ಯಮಿ ಎಂದು ಹೇಳಿ...

ವರ್ತೂರ್ ಸಂತೋಷ್ ವಿರುದ್ಧ ಪಿತೂರಿಯಾ? ಯಾಕೆ ಆತನ ಮೇಲೆ ಇಷ್ಟೋಂದು ಕಾಂಟ್ರವರ್ಸಿ...?

ಇಮೇಜ್
 ಬಿಗ್ ಬಾಸ್ ಮನೆಯಿಂದ ಹುಲಿ ಉಗುರು ವಿಚಾರವಾಗಿ ಅರೆಸ್ಟ್ ಆಗಿದ್ದೆ ಆಗಿದ್ದು ವರ್ತೂರ್ ಸಂತೋಷ್ ಭಾರಿ ಸುದ್ದಿಯಲಿದ್ದಾರೆ. ಆರಂಭದಲ್ಲಿ ವರ್ತೂರ್ ಸಂತೋಷ್ ಕುರಿತಂತೆ ಅನುಕಂಪದ ಅಲೆ ಎದ್ದಿತ್ತು. ಹುಲಿ ಉಗುರು ಸಂಬಂಧಿಸಿದಂತೆ ಬಿಗ್ ಬಾಸ್ ಮನೆಯೊಳಗಿದ್ದ ವರ್ತೂರ್ ಸಂತೋಷ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದೆ ಮಾಡಿದ್ದು, ಸೆಲೆಬ್ರಿಟಿಗಳ ಪೋಟೋವನ್ನು ಟ್ಯಾಗ್ ಮಾಡಿದ್ದ ನೆಟ್ಟಿಗರು ಇದು ಹುಲಿ ಉಗುರಲ್ಲವೆ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಸೆಲೆಬ್ರಿಟಿಗಳ ಮನೆಗೂ ದಾಳಿ ನಡೆದಿತ್ತು. ಆದರೆ ಅದ್ಯಾವುದು ಹುಲಿ ಉಗುರಲ್ಲ. ಪ್ಲಾಸ್ಟಿಕ್ ನದ್ದು ಎಂದು ಹೇಳಿ ಅಧಿಕಾರಿಗಳು ಜಾರಿಕೊಂಡಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಈ ನಡೆ ಭಾರಿ ವಿರೋಧಕ್ಕೆ ಕಾರಣವಾಗಿತ್ತು. ವರ್ತೂರ್ ಕುರಿತಂತೆ ಅನುಕಂಪದ ಅಲೆ ಎದ್ದಿತ್ತು.  ಅದು ಹೇಗೆ ಜಾಮೀನು ಪಡೆದು ಮತ್ತೆ ಬಿಗ್ ಬಾಸ್ ಮನೆಯೊಳಗೆ ಎಂಟ್ರಿಯಾಗಿರುವ ವರ್ತೂರ್ ಸಂತೋಷ್ ವಿರುದ್ಧ ಇದೀಗ ಭಾರಿ ವಿವಾದ ಅಲೆ ಎದ್ದಿದೆ. ಇದುವರೆಗೂ ಎಲ್ಲೂ ಕೂಡ ತಾನು ಮದುವೆಯಾಗಿದ್ದಾಗಿ ಹೇಳಿಕೊಳ್ಳದ ವರ್ತೂರ್ ವಿರುದ್ಧ ಮಡದಿಗೆ ಮೋಸ ಮಾಡಿದ ವಿಚಾರ ಬಯಲಾಗಿದೆ. ಆತ ಮಡದಿಗೆ ಮೋಸ ಮಾಡಿರುವ ವಿಚಾರ ಬಯಲಾಗಿದೆ. ಮದುವೆಯ ವಿಡಿಯೋಗಳು ಮಾಧ್ಯಮಗಳಲ್ಲಿ , ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವರ್ತೂರ್ ಸಂತೋಷ್ ಮಾವ ಎಂದು ಹೇಳುತ್ತಿರುವ ವ್ಯಕ್ತಿಯೊಬ್ಬ, ವರ್ತೂರ್ ಸಂತೋಷ್ ಎಂತಹ ಮಾದಕ ವ್ಯಸನಿ ಎಂ...

ಬಾಜಿಗರ್ ಗೆ 30 ವರ್ಷ : ಶಾರೂಖ್ ಜೊತೆಗಿನ ಮೊದಲ ಭೇಟಿ ಹೇಗಿತ್ತು ಎಂದು ತಿಳಿಸಿದ ಕಾಜೋಲ್

ಇಮೇಜ್
 ಶಾರೂಖ್ ಖಾನ್ ಮತ್ತು ಕಾಜೋಲ್ ನಟನೆಯ ಸೂಪರ್ ಹಿಟ್ ಚಿತ್ರ ಬಾಜಿಗರ್ ರಿಲೀಸ್ ಆಗಿ 30 ವರ್ಷ ಕಳೆದಿದೆ. ಇಂದಿಗೂ ಈ ಚಿತ್ರದ ಕುರಿತ ಕ್ರೇಜ್ ಮಾತ್ರ ಜನಕ್ಕೆ ಹೋಗಿಲ್ಲ. ಇದೀಗ ಚಿತ್ರದ ಜರ್ನಿ, ಶಾರೂಖ್ ಜೊತೆಗಿನ ಮೊದಲ ಭೇಟಿ  ಕುರಿತಂತೆ ಕಾಜೋಲ್ ನೆನಪಿಸಿಕೊಂಡಿದ್ದಾರೆ. ನನಗೆ ಆಗಿನ್ನೂ 17ರ ಹರೆಯ ಎಂದಿರುವ ಕಾಜೋಲ್,  ಹಿರೋಯಿನ್ ಆಗಿ ಬಾಜಿಗರ್ ನನಗೆ ಎರಡನೇ ಸಿನಿಮಾ ಆಗಿತ್ತು. ಆಗಿನ್ನೂ ನನಗೆ 17 ವರ್ಷ. ಚಿತ್ರದಲ್ಲಿದ್ದ ಎಲ್ಲರೂ ನನ್ನನ್ನೂ ಮಗುವಿನಂತೆ ಪ್ರೀತಿಸಿ , ತಪ್ಪುಗಳನ್ನು ತಿದ್ದಿ ಹೇಳಿಕೊಟ್ಟಿದ್ದನ್ನು ನಾನು ಹೇಗೆ ಮರೆಯಲಿ. ಚಿತ್ರದಲ್ಲಿದ್ದ ಪ್ರತಿಯೊಬ್ಬ ನಟ ನಟಿಯರು ನನಗೆ ಸಾಕಷ್ಟು ಹೇಳಿಕೊಂಡಿದ್ದಾರೆ. ಅವರ ಮನೆಯ ಮಗುವಿನಂತೆ ಪ್ರೀತಿಸಿದ್ದಾರೆ ಅವರಿಗೆ ನನ್ನ ತುಂಬು  ಹೃದಯದ ಧನ್ಯವಾದಗಳು ಎಂದಿದ್ದಾರೆ ಕಾಜೋಲ್.  1993ರಲ್ಲಿ ಬಿಡುಗಡೆಯಾದ ರೋಮ್ಯಾಂಟಿಕ್ ಥ್ರಿಲ್ಲರ್ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಅಷ್ಟೇ ಅಲ್ಲದೆ ಶಾರೂಖ್ ಕಾಜೋಲ್ ಜೋಡಿ ಸೂಪರ್ ಹಿಟ್ ಆಗಿತ್ತು. ಅಬ್ಬಾಸ್ ಮುಸ್ತಾನ್ ನಿರ್ದೇಶನದ ಈ ಸಿನಿಮಾದಲ್ಲಿ ಶಾರೂಖ್ ಸ, ಕಾಜೋಲ್, ಸಿದ್ಧಾರ್ಥ್ , ಶಿಲ್ಪಾ ಶೆಟ್ಟಿ , ದಲೀಪ್ ತಾಹಿಲ್ ಮತ್ತು ಜಾನಿ ಲಿವರ್ ನಟಿಸಿದ್ದರು. 40 ಲಕ್ಷ ಬಜೆಟ್ ನಲ್ಲಿ ನಿರ್ಮಿಸಲಾದ ಈ ಚಿತ್ರ ಅಂದಿನ ಕಾಲಕ್ಕೆ 320 ಮಿಲಿಯನ್ ಬಾಚಿಕೊಂಡಿತ್ತು.

ಕುಸ್ತಿ ಅಖಾಡಕ್ಕಿಳಿದ ದರ್ಶನ್, ಯಶಸ್ ಸೂರ್ಯ : ಜನ ಏನಂತಾರೆ?

ಇಮೇಜ್
  ಕುಸ್ತಿ ಅಖಾಡಕ್ಕಿಳಿದ ದರ್ಶನ್, ಯಶಸ್ ಸೂರ್ಯ : ಜನ ಏನಂತಾರೆ? ಯೋಗರಾಜ್ ಭಟ್ರ ಸಿನಿಮಾ ಅಂದ್ರೆ ಅಲ್ಲಿ ಒಂದು ಥ್ರಿಲ್ ಅಂಡ್ ಮ್ಯಾಜಿಕ್ ಇದ್ದೇ ಇರುತ್ತೆ. ಬಹುನಿರೀಕ್ಷೆಯ ಗರಡಿ ಸಿನಿಮಾ ರಿಲೀಸ್ ಆಗಿದ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಸೆಯಂತೆ ಯಶಸ್ಸು ಸೂರ್ಯ ಈ ಸಿನಿಮಾದ ಮೂಲಕ ಯಶಸ್ವಿ ನಾಯಕನಾಗೋ ಎಲ್ಲ ಲಕ್ಷಣ ಕಂಡುಬರುತ್ತಿದೆ.  ಚಿತ್ರ ಹಾಡುಗಳು. ಡೈಲಾಗ್ , ಸನ್ನಿವೇಶ ಹಾಸ್ಯ ಎಲ್ಲವೂ ಕ್ರಮಬದ್ದವಾಗಿದ್ದು, ಪ್ರೇಕ್ಷಕನಿಗೆ ರುಚಿಸಿದಂತೆ ಕಾಣುತ್ತದೆ.  https://theviralstories360.blogspot.com/2023/11/garadikannadareview.html ಗರಡಿ.. ಯೋಗರಾಜ್ ಭಟ್ ಅವರು ನಿರ್ದೇಶಿಸಿರುವ ಸಿನಿಮಾ. ವಿಭಿನ್ನ ಕಥಾಹಂದರವನ್ನು ಹೊಂದಿರುವ ಈ ಸಿನಿಮಾ ಇಂದು ರಿಲೀಸ್ ಆಗಿದ್ದು, ಯೋಗರಾಜ್ ಭಟ್ಟರ ಹೊಸ ಪ್ರಯೋಗ ಜನರಿಗೆ ಇಷ್ಟವಾದಂತೆ ಭಾಸವಾಗುತ್ತಿದೆ. ಚಿತ್ರದ ಹಾಡುಗಳು, ಹಾಸ್ಯ ಸನ್ನಿವೇಶ, ಪೈಟಿಂಗ್ ಎಲ್ಲವೂ ಸರಳವಾಗಿ ಸುಂದರವಾಗಿ ಮೂಡಿಬಂದಿದೆ. ಹಳ್ಳಿಗಳಲ್ಲಿ ಕುಸ್ತಿ ಅಖಾಡ ಮತ್ತು ಕುಸ್ತಿ ಪಟುಗಳ ತಾಕತ್ತಿನ ಕುರಿತಂತೆ ಈ ಚಿತ್ರದ ಕಥೆ ಹೊಂದಿದೆ.  ಗರಡಿಯ ಕಥಾಹಂದರವೇನು..? https://theviralstories360.blogspot.com/2023/11/garadikannadareview.html ಯಶಸ್ ಸೂರ್ಯ ಚಿತ್ರದಲ್ಲಿ ಕುಸ್ತಿಪಟುವಾಗಿದ್ದೆ, ಬಿ ಸಿ ಪಾಟೀಲ್ ಕುಸ್ತಿ ಉಸ್ತಾದ್ ಆಗಿ ನಟಿಸಿದ್ದಾರೆ. ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿರು...

ಗರಡಿ ವಿಮರ್ಶೆ : ಕುಸ್ತಿ ಅಖಾಡಕ್ಕಿಳಿದ ದರ್ಶನ್, ಯಶಸ್ ಸೂರ್ಯ : ಜನ ಏನಂತಾರೆ?

ಇಮೇಜ್
   ಯೋಗರಾಜ್ ಭಟ್ರ ಸಿನಿಮಾ ಅಂದ್ರೆ ಅಲ್ಲಿ ಒಂದು ಥ್ರಿಲ್ ಅಂಡ್ ಮ್ಯಾಜಿಕ್ ಇದ್ದೇ ಇರುತ್ತೆ. ಬಹುನಿರೀಕ್ಷೆಯ ಗರಡಿ ಸಿನಿಮಾ ರಿಲೀಸ್ ಆಗಿದ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಸೆಯಂತೆ ಯಶಸ್ಸು ಸೂರ್ಯ ಈ ಸಿನಿಮಾದ ಮೂಲಕ ಯಶಸ್ವಿ ನಾಯಕನಾಗೋ ಎಲ್ಲ ಲಕ್ಷಣ ಕಂಡುಬರುತ್ತಿದೆ.  ಚಿತ್ರ ಹಾಡುಗಳು. ಡೈಲಾಗ್ , ಸನ್ನಿವೇಶ ಹಾಸ್ಯ ಎಲ್ಲವೂ ಕ್ರಮಬದ್ದವಾಗಿದ್ದು, ಪ್ರೇಕ್ಷಕನಿಗೆ ರುಚಿಸಿದಂತೆ ಕಾಣುತ್ತದೆ.  ಮೊದಲ ಬಾರಿಗೆ ಮಾಸ್ ಸಿನಿಮಾಗೆ ಕೈ ಹಾಕಿರುವ ಭಟ್ರ ಗರಡಿ ಪಕ್ಕಾ ದೇಸಿ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ. ಈ  ಸಿನಿಮಾ ಪೂರ್ತಿಯಾಗಿ ಗರಡಿಯ ಸುತ್ತಮುತ್ತವೇ ನಡೆಯುತ್ತಿರುತ್ತದೆ. ಯಶಸ್ ಸೂರ್ಯ ತುಂಬಾ ದಿನಗಳ ಬಳಿಕ ನಾಯಕನಾಗಿ ರಿ ಎಂಟ್ರಿಯಾದರೆ, ಇವರಿಗೆ ಸಾಥ್ ನೀಡಿರುವುದು ಸೋನಾಲ್ ಮಾಂಟೇರೋ. ಭಟ್ಟರ ಸಿನಿಮಾದಲ್ಲಿ ಈಕೆ ಎರಡನೇ ಬಾರಿಗೆ ನಾಯಕಿಯಾಗಿದ್ದಾರೆ.  ಈ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಅವರ ಎಂಟ್ರಿಯಂತೂ ಸಿಕ್ಕಾಪಟ್ಟೆ ಕಿಕ್ ಕೊಡುವಂತಿದೆ.  ಕನ್ನಡದ ಕೌರವ ಎಂದೇ ಖ್ಯಾತಿಯಾಗಿರುವ ಬಿ ಸಿ ಪಾಟೀಲ್ ಪೈಲ್ವಾನ್ ಗುರುವಾಗಿ ನಟಿಸಿದ್ದಾರೆ. ಗರಡಿ' ಯ ಸುತ್ತ ಒಂದು ರೌಂಡ್ ಹೋಗಾದಾದ್ರೆ, ಈ ಚಿತ್ರ ಆರಂಭವಾಗುವುದು ರವಿಶಂಕರ್ ಅವರ ಮನೆತನದಿಂದ. ಈ ಮನೆತನ ಇದುವರೆಗೂ ಕುಸ್ತಿಯಲ್ಲಿ ಸೋಲು ಕಂಡರಿಯದ ಮನೆ. ಈ ಊರಲ್ಲಿ ಬಿಸಿ ಪಾಟೀಲ್ ಪೈಲ್ವಾನ್‌ಗಳ ಗುರು. ಅದೊಂದು...

ಆರೋಗ್ಯಕ್ಕೂ ಸೈ- ರುಚಿಗೂ ಜೈ ಕೊಕಂ ಚಟ್ನಿ

ಇಮೇಜ್
 ಪಿತ್ತ ದೋಷದಿಂದ ಬಳಲುತ್ತಿದ್ದರೆ. ಬಾಯಿರುಚಿ ಇಲ್ಲದಿದ್ದರೆ ಊಟ ಸೇರೋದಿಲ್ಲ. ಏನು ತಿನ್ನೋದು ಬೇಡ ಅನಿಸುತ್ತದೆ. ಅದರಲ್ಲೂ ಜ್ವರ ಬಂದ ನಂತರ ಬಾಯಿ ಸಪ್ಪೆ ಸಪ್ಪೆ. ಹೀಗಾಗಿ  ಅದೆಷ್ಟೋ ಮಂದಿ ಜ್ವರ ಬಂದ ನಂತರ ಬಾಯಿ ರುಚಿ ಇಲ್ಲ. ಏನು ತಿನ್ನಲೂ ಆಗೋದಿಲ್ಲ. ವೀಕ್ ನೆಸ್ ಅಂತ ಹೇಳೋದನ್ನು ನೀವು ಕೇಳಿರಬಹುದು. ಚಿಂತೆ ಬಿಡಿ ನಾನು ಇವತ್ತು ನಿಮಗೊಂದು ಸಿಂಪಲ್ ಆಂಡ್ ಟೆಸ್ಟಿಯಾಗಿರುವ ಚಟ್ನಿ ರೆಸಿಪಿಯನ್ನು ಹೇಳ್ತೀನಿ ಟ್ರೈ ಮಾಡಿ. ಈ ರೆಸಿಪಿ  ಬೇಕಾಗುವ ಸಾಮಾಗ್ರಿಗಗಳು ಕೋಕಂ ಸಿಪ್ಪೆ- ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಒಂದು ವೇಳೆ ಸಿಗದಿದ್ದರೆ ಹುಣಸೆ ಹುಳಿಯನ್ನು ಬಳಸಿಕೊಳ್ಳಬಹುದು. ಒಂದು ಕಪ್ ತೆಂಗಿನ ತುರಿ ( ಕೊಬ್ಬರಿ ಇದ್ದರೆ ಉತ್ತಮ) 6-7 ಒಣ ಮೆಣಸು ಕೊಂಚ ಕಡಲೆ ಬೇಳೆ (ಒಂದು ಟೇಬಲ್ ಚಮಚ) ಈರುಳ್ಳಿ 1 ಬೆಳ್ಳುಳ್ಳಿ 1 ರುಚಿಗೆ ತಕ್ಕಷ್ಟು ಉಪ್ಪು. ಬೆಳ್ಳುಳ್ಳಿ, ಕಡಳೆ ಬೇಳೆ, ಯನ್ನು ಬೇರೆ ಬೇರೆಯಾಗಿ ಹುರಿದು ಕೊಳ್ಳಿ. ಬಳಿಕ ದೊಡ್ಡ ಪ್ಯಾನ್ ನಲ್ಲಿ ಈರುಳ್ಳಿಯನ್ನು ಬಾಡಿಸಿಕೊಳ್ಳಿ. ಇದಕ್ಕೆ ತೆಂಗಿನ ತುರಿ ಮತ್ತು ಕೊಕಂ ಸಿಪ್ಪೆಯನ್ನು ಹಾಕಿ ಹುರಿದುಕೊಂಡು ಬಳಿಕ ಸ್ಟವ್ ಆಫ್ ಮಾಡಿ. ಆರಿದ ಬಳಿಕ ಎಲ್ಲವನ್ನೂ ಸೇರಿಸಿ ಮಿಕ್ಸಿಯನ್ನು ರುಬ್ಬಿಕೊಳ್ಳಿ. ನಿಮ್ಮ ಚಟ್ನಿ ರೆಡಿ. ಇದಕ್ಕೆ ಕೊಂಚ ಕರಿಬೇವು, ಕಡ್ನೆಬೇಳೆ, ಒಣ ಮೆಣಸು ಮತ್ತು ಸಾಸಿವೆ ಹಾಕಿ ಒಗ್ಗರಣೆ ಹಾಕಿದರೆ ಚಟ್ನಿ ಸವಿಯಲು ರೆಡಿ.  ಸಾಮಾನ್ಯವಾಗಿ...

ಲಾವಣ್ಯ ತ್ರಿಪಾಠಿ ಎಂಬ ಮಧ್ಯಮವರ್ಗದ ಯುವತಿಯೊಬ್ಬಳು, ಮೆಗಾ ಪ್ಯಾಮಿಲಿಯ ಸೊಸೆಯಾಗಿದ್ದು ಹೇಗೆ..?

ಇಮೇಜ್
  ಲಾವಣ್ಯ ತ್ರಿಪಾಠಿ. ಸದ್ಯಕ್ಕೆ ತೆಲುಗು ಚಿತ್ರರಂಗದಲ್ಲಿ ನೆಲೆನಿಂತಿರುವ ಲಾವಣ್ಯ, ಇದೀಗ ಮೆಗಾ ಪ್ಯಾಮಿಲಿಯ ಸೊಸೆ ಕೂಡ ಹೌದು. ಮೆಗಾ ಪ್ಯಾಮಿಲಿಯ ಸೊಸೆಯಾಗುವ ಮುನ್ನ ಆಕೆ ಕೇವಲ ಒಬ್ಬ ಸಾಮಾನ್ಯ ನಟಿಯಷ್ಟೇ. ಆದರೆ ಆಕೆಯ ಹಿನ್ನೆಲೆ ಏನು ಎಂಬುದನ್ನು ನೋಡುವುದಾದರೆ, ಲಾವಣ್ಯ ಮಧ್ಯಮ ವರ್ಗದ ಕುಟುಂಬದ ಹೆಣ್ಣು ಮಗಳು.  1990ರ ಡಿಸೆಂಬರ್ 15ರಂದು ದೇವಾಲಯಗಳ ನಗರಿ ಅಯೋಧ್ಯೆಯಲ್ಲಿ ಜನಿಸಿದ ಲಾವಣ್ಯ ತ್ರಿಪಾಠಿ, ಸರಳವಾದ ಮಧ್ಯಮ ವರ್ಗದ ಕುಟುಂಬದಲ್ಲೇ ಬೆಳೆದರು.   ತಂದೆ ಹೈಕೋರ್ಟ್‌ನಲ್ಲಿ ವಕೀಲರಾಗಿ ಅಭ್ಯಾಸ ಮಾಡುತ್ತಿದ್ದರೆ, ಅವರ ತಾಯಿ ಶಿಕ್ಷಕಿ. ಮಿಸ್ ಉತ್ತರಖಂಡ್ ಪಟ್ಟ ಏರುವವರೆಗೂ ಲಾವಣ್ಯ ಯಾರು ಎಂಬುದು ಯಾರಿಗೂ ಗೊತ್ತಿರಲಿಲ್ಲ. ಮಾಡೆಲಿಂಗ್ ಬಗ್ಗೆ ಆಸಕ್ತಿ ಹೊಂದಿದ್ದ ಲಾವಣ್ಯ ಮಿಸ್ ಉತ್ತರಖಂಡ್ ಕಿರೀಟ ಮುಡಿಗೇರಿಸಿದ ಬಳಿಕ ಖ್ಯಾತಿ ಪಡೆದರು. ಕಿರಿತೆರೆಯಲ್ಲಿ ಅವಕಾಶಗಳನ್ನು ಪಡೆದ ಲಾವಣ್ಯ ಬಳಿಕ  ಅಂದಾಳ ರಾಕ್ಷಸಿ ಚಿತ್ರದ ಮೂಲಕ ತೆಲುಗು ಚಿತ್ರರಂಗವನ್ನು ಪ್ರವೇಶಿಸಿದರು.   ಇದಾದ ಬಳಿಕ ಆಕೆ ಹಿಂದಿರುಗಿ ನೋಡಲೇ ಇಲ್ಲ. ತೆಲುಗು ಚಿತ್ರರಂಗ ಆಕೆಯನ್ನು ಒಪ್ಪಿಕೊಂಡಿದ್ದು ಮತ್ತು ಅಪ್ಪಿಕೊಂಡಿತ್ತು. ದೂಸುಕೆಳ್ತಾ, ಭಲೇ ಭಲೇ ಮಗಾಡಿವೋಯ್, ಮತ್ತು ಶ್ರೀ ರಸ್ತು ಶುಭಮಸ್ತು ಚಿತ್ರಗಳು ಸೂಪರ್ ಹಿಟ್ ಆದ ಚಿತ್ರಗಳು . ನಾಗಾರ್ಜುನ ಅವರ ಮನಂ ಚಿತ್ರದಲ್ಲಿ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಎಲ್...

ದೀಪಾವಳಿ 2023 : ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ ಸಾಲು ಸಾಲು ಸಿನಿಮಾ..

ಇಮೇಜ್
 ದೀಪಾವಳಿ ಬಂತೆಂದರೆ ಸಾಕು, ಮಾರುಕಟ್ಟೆಗಳು ಗಿಜಿಗುಟ್ಟುತ್ತದೆ. ಒಂದೆಡೆ ಶಾಪಿಂಗ್  ಭರಾಟೆ ಜೋರಾದರೆ, ಮತ್ತೊಂದೆಡೆ ವ್ಯಾಪಾರಿಗಳಿಗೆ ಸಿಕ್ಕಾಪಟ್ಟೆ ಬ್ಯುಸಿನೆಸ್, ಅದು ಇದು ಅಂತ ಜನ ಓಡಾಡುತ್ತಿದ್ದರೆ, ದೀಪಾವಳಿಯಂದು ಇರೋ ರಜಾದಿನಗಳಲ್ಲಿ ಯಾವುದಾದರೂ ಒಳ್ಳೆ ಮೂವಿ ನೋಡಬೇಕು ಅಂತ ಜನ ಹಂಬಲಿಸುತ್ತಿರುತ್ತಾರೆ. ಹೀಗಾಗಿ ಬೆಳಕನ ಹಬ್ಬಕ್ಕೆಂದು ರಿಲೀಸ್ ಆಗಲು ಕೆಲವು ಸಿನಿಮಾಗಳು ಕಾಯುತ್ತಿದ್ದು, ಅವುಗಳ ಪಟ್ಟಿ ಇಲ್ಲಿದೆ ನೋಡಿ.  ಗರಡಿ ಯೋಗರಾಜ್ ಭಟ್ ನಿರ್ದೇಶನದ , ದರ್ಶನ್ ತೂಗುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗರಡಿ ಚಿತ್ರ ಸ್ಯಾಂಡಲ್ ವುಡ್ ಮಂದಿ ಪಾಲಿಗೆ ವಿಶೇಷ ನಿರೀಕ್ಷೆ ಇರುವ ಸಿನಿಮಾ. ಲವ್‌ ಸ್ಟೋರಿಗಳಿಗೆ ಆಕ್ಷನ್ ಕಟ್ ಹೇಳುತ್ತಿದ್ದ ಭಟ್ಟರು ಇದೀಗ ಮಾಸ್ ಸಿನಿಮಾದತ್ತ ಮುಖಮಾಡಿದ್ದು, ಯಶಸ್ ಸೂರ್ಯ ಹಿರೋ ಆಗಿ ಕಮ್ ಬ್ಯಾಕ್ ಮಾಡಿರುವ ಈ ಸಿನಿಮಾ ದೀಪಾವಳಿಗೆ ರಿಲೀಸ್ ಆಗಲಿದೆ. ಟೈಗರ್ 3 ಸಲ್ಮಾನ್ ಖಾನ್ ನಟನೆಯ ಟೈಗರ್ 3 ಸಿನಿಮಾವನ್ನು ಆದತ್ಯ ಚೋಪ್ರಾ ನಿರ್ಮಾಣ ಮಾಡಿದ್ದು,  ದೀಪಾವಳಿ ಸಂಭ್ರಮಕ್ಕೆ ರಿಲೀಸ್ ಆಗಲಿರುವ ಈ ಸಿನಿಮಾ. ಟೈಗರ್' ಹಾಗೂ 'ಟೈಗರ್ ಜಿಂದಾ ಹೇ' ಸಿನಿಮಾದ ಸೀಕ್ವೆಲ್ ಆಗಿದೆ.  ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಜಪಾನ್  ಕಾರ್ತಿ ನಟಿಸಿರುವ 'ಜಪಾನ್' ಸಿನಿಮಾ ಕೂಡ ಇದೇ ಸಂದರ್ಭದಲ್ಲಿ ರಿಲೀಸ್ ಆಗಲಿದೆ. ರಾಜು ಮುರುಗನ್ ಚಿತ್ರದ ನಿರ...

ವೈದ್ಯೋ ನಾರಾಯಣೋ ಹರಿ..! ಆದರೆ ನಮ್ಮ ಪಾಲಿಗೆ ಮಾತ್ರ... ನಟ ದರ್ಶನ್ ಹಾಗಂದಿದ್ದು ಯಾಕೆ...?

ಇಮೇಜ್
 ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ವೈದ್ಯರು ಮನಸ್ಸು ಮಾಡಿದರೆ ಹೋಗುವ ಜೀವವನ್ನು ಉಳಿಸಬಹುದು , ನಿರ್ಲಕ್ಷ್ಯ ವಹಿಸಿದರೆ ಜೀವವೇ ಹೋಗಬಹುದು. ಇತ್ತೀಚಿನ ದಿನಗಳಲ್ಲಿ ವೈದ್ಯರ ನಿರ್ಲಕ್ಷ್ಯದ ಕುರಿತಂತೆ ಸಾಕಷ್ಟು ಸುದ್ದಿಗಳು ಹೊರಬರುತ್ತಲೇ ಇರುತ್ತದೆ. ಇದೀಗ ನಟ ದರ್ಶನ್ ತಮ್ಮ ತಂದೆಯವರ ವಿಚಾರದಲ್ಲಿ ವೈದ್ಯರ ನಿರ್ಲಕ್ಷ್ಯದ ಕುರಿತಂತೆ ಮಾತನಾಡಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ನಮ್ಮ ತಂದೆ ಇಲ್ಲದ ಕಾಯಿಲೆಗೆ ಒಳಗಾಗಿ ನರಳಿ ನರಳಿ ಸಾಯುವಂತಾಯಿತು ಎಂದಿದ್ದಾರೆ.  ತೂಗುದೀಪ ಶ್ರೀನಿವಾಸ್ ಕನ್ನಡ ಚಿತ್ರರಂಗ ಕಂಡ ಅತ್ಯುದ್ಬುತ ಖಳನಟ. ತೆರೆಯ ಮೇಲಿನ ಅವರ ಅಬ್ಬರ ನೋಡಿದ ಜನ ಇಂದಿಗೂ ಮೆಚ್ಚಿ ಕೊಂಡಾಡುತ್ತಾರೆ. ಆದರೆ ಹೃದಯಕ್ಕೆ ಸಂಬಂಧಿತ ಕಾಯಿಲೆಗೆಂದು ಬೆಂಗಳುರಿನ ಆಸ್ಪತ್ರೆಗೆ ಹೋಗಿದ್ದ ಶ್ರೀನಿವಾಸ್ ಅವರಿಗೆ ವೈದ್ಯರು ನಡೆಸಿದ ತಪಾಸಣೆ ಸಂದರ್ಭದಲ್ಲಿ ದೇಹದ ಒಳಗೆ ಡೈ ಹಾಕುತ್ತಾರೆ. ಕ್ಯಾಮೆರಾ ಕಳಿಸಿ ಒಳಗೆ ಏನಾಗಿದೆ ಎಂದು ನೋಡಲು. ಆದರೆ ನುರಿತ ವೈದ್ಯರ ಇಲ್ಲದ ಕಾರಣ ಹಾಕಿದ ಡೈ ಸೀದಾ ಹೋಗಿ ತಂದೆಯ ಕಿಡ್ನಿಯ ಮೇಲೆ ಕುಳಿತು. ಕಿಡ್ನಿ ಮುದುಡಲಾರಂಭಿಸಿತು. ಹೀಗಾಗಿ ತನ್ನ ತಂದೆ ಕಿಡ್ನಿ ವೈಫಲ್ಯಕ್ಕೆ ತುತ್ತಾಗಬೇಕಾಯಿತು ಎಂದು ದರ್ಶನ್ ಹೇಳಿದ್ದಾರೆ. 

ಅದ್ದೂರಿ ರಿಸೆಪ್ಷನ್ ನಲ್ಲಿ ವರುಣ್ ತೇಜ್-ಲಾವಣ್ಯ ತ್ರಿಪಾತಿ ಉಡುಪು ನೋಡಿ ಅಭಿಮಾನಿಗಳು ಫಿದಾ : ಬೆಲೆ ಕೇಳಿ ಶಾಕ್ ಆದ ಜನ

ಇಮೇಜ್
 ನವೆಂಬರ್ 1, 2023ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ತಾರಾ ಜೋಡಿಗಳಾದ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಹೈದ್ರಾಬಾದ್ ನ ಎನ್ ಕನ್ವೆಷನಲ್ ಹಾಲ್ ನಲ್ಲಿ ನಡೆದ ಗ್ರಾಂಡ್ ರಿಸೆಪ್ಷನ್ ಹಲವು ಕಾರಣಗಳಿಂದ ಗಮನ ಸೆಳೆಯಿತು. ಇದೊಂದು ತಾರೆಗಳ ಸಮಾಗಮದ ಕಾರ್ಯಕ್ರಮವಾಗಿ ಕಂಗೊಳಿಸಿದ್ದು ಸುಳ್ಳಲ್ಲಾ. ತಾರಾ ದಂಪತಿಗಳನ್ನ ಹಾರೈಸಲು ಸ್ಪೋರ್ಟ್ಸ್ ತಾರೆಯರು, ಸಿನಿರಂಗದ ತಾರೆಯರು ಆಗಮಿಸಿದ್ದರು. ಚಿನ್ನದ ಬಣ್ಣದ ಸೀರೆಯನ್ನು ಧರಿಸಿದ್ದ ಲಾವಣ್ಯ ಭಾರತೀಯ ನಾರಿಯಂತೆ ಕಂಗೊಳಿಸಿದ್ದರೆ, ಕಪ್ಪು ಬಣ್ಣದ ಪ್ಯಾಂಟ್ ಮತ್ತು ಗೋಲ್ಡನ್ ಬ್ಲೇಜರ್ ನಲ್ಲಿ  ವರುಣ್ ಸೃಷ್ಟಿ ತಾಗುವಂತೆ ರೆಡಿಯಾಗಿದ್ದರು.   ನಾಗಚೈತನ್ಯ, ಆದಿವಿ ಶೇಷ್, ಸಂದೀಪ್ ಕಿಶನ್, ನಾಗ ಬಾಬು ಕೊನಿಡೇಲ, ಪದ್ಮಜಾ ಕೊನಿಡೇಲ, ಅಲ್ಲೂ ಸಿರೀಶ್ ಮತ್ತು ಭಾರತೀಯ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಸೇರಿದಂತೆ ಚಿತ್ರರಂಗದ ಗಣ್ಯರು ಹಾಜರಿದ್ದರು. ಇನ್ನೂ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಚಾರ ಎನಪ್ಪಾ ಅಂದ್ರೆ, ಮದುವೆಗೆ ಲಾವಣ್ಯ ಧರಿಸಿದ ಸೀರೆಯ ಬೆಲೆ. ಮದುವೆಗೆಂದು ಲಾವಣ್ಯ ಧರಿಸಿದ್ದ ಮದುವೆಯ ಸೀರೆಯನ್ನು ಸೆಲೆಬ್ರಿಟಿ ಡಿಸೈನರ್ ಮನೀಷ್ ಮಲ್ಹೋತ್ರಾ ಡಿಸೈನ್ ಮಾಡಿದ್ದು, ಇದರ ಬೆಲೆ 10 ಲಕ್ಷವಂತೆ. ರಿಸೆಪ್ಶನ್ ಸಾರಿ ಬೆಲೆ 2 ಲಕ್ಷ 75 ಸಾವಿರ ಇರಬಹುದೆಂದು ಅಂದಾಜಿಸಲಾಗಿದ್ದು, ಇದನ್ನೂ ಕೂಡ ಮನೀಷ್ ಮಲ್ಹೋತ್ರಾ ಡಿಸೈನ್ ಮಾಡಿದ್ದಾರೆ.  ಈ ರ...

ಕಿಚ್ಚನ ಪೋಸ್ಟರ್ ಬಿಚ್ಚಿಟ್ಟ ಸಿಕ್ರೇಟ್ ..!

ಇಮೇಜ್
  ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯಕ್ಕೆ ಮ್ಯಾಕ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದರೆ ಮತ್ತೊಂದೆಡೆ ಮಹಾಬಲಿಪುರಂನಲ್ಲಿ ಚಿತ್ರದ ಶೂಟಿಂಗ್ ಸಾಗುತ್ತಿದೆ. ಈಗಾಗಲೇ ಚಿತ್ರದ ಶೂಟಿಂಗ್ ಶೇಕಡಾ 70ರಷ್ಟು ಪೂರ್ಣಗೊಂಡಿದೆ ಎನ್ನಲಾಗುತ್ತಿದ್ದು, ಇದರ ನಡುವೆ ತಮ್ಮ ಹೊಸ ಸಿನಿಮಾದ ಕುರಿತಂತೆ ಕಿಚ್ಚ ಪ್ರೇಕ್ಷಕರಿಗೆ ಅಪ್ಡೇಟ್ ಕೊಟ್ಟಿದ್ದಾರೆ. ಚಿತ್ರದ ಕುರಿತಂತೆ ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ. ದೀಪಾವಳಿ ಸಂಭ್ರಮದಲ್ಲಿರುವ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್ ಕೊಟ್ಟಿರುವ ಕಿಚ್ಚ, ತಮ್ಮ ಮುಂದಿನ ಸಿನಿಮಾದ ಕುರಿತಂತೆ ಚಿಕ್ಕ ಪೋಸ್ಟರ್ ರಿಲೀಸ್ ಮಾಡಿ, ಏನೋ ಇದೆ ಅನ್ನೋದನ್ನು ತಿಳಿಸಿದ್ದಾರೆ.  ಅಂದಹಾಗೆ ಕಿಚ್ಚ47 ಚಿತ್ರವನ್ನು ತಮಿಳಿನ ಚೇರನ್ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರ ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ನಲ್ಲಿ ರಿಲೀಸ್ ಆಗಲಿದ್ದು, ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಚಿತ್ರಕ್ಕೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 

ನನ್ನ ಮತ್ತು ಜಯಬಚ್ಚನ್ ನಡುವಿನ ವಿವಾಹ ಒಂದು ದಿಡೀರ್ ನಿರ್ಧಾರ : ಮದುವೆ ಸಿಕ್ರೇಟ್ ಬಿಚ್ಚಿಟ್ಟ ಅಮಿತಾಬ್ ಬಚ್ಚನ್

ಇಮೇಜ್
 ಕೌನ್ ಬನೇಗಾ ಕರೋಡ್ ಪತಿ ಸೀಸನ್ 15 ಆರಂಭವಾಗಿದ್ದು, ಬಾಲಿವುಡ್ ಬಿಗ್ ಬಿ ನಡೆಸಿಕೊಂಡು ಬರುತ್ತಿರುವ ಈ ಬಿಗ್ ಟೆಲಿವಿಷನ್ ಶೋದಲ್ಲಿ ಅಮಿತಾಬ್ ಸ್ಪರ್ಧಿಯೊಂದಿಗೆ ಮಾತನಾಡುತ್ತಾ, ಸುಖದಾಂಪತ್ಯಕ್ಕೆ ಕೆಲವೊಂದು ಟಿಪ್ಸ್ ಕೊಡಿ ಎಂದು ಕೇಳಿಕೊಂಡರು. ಇದೇ ಸಂದರ್ಭದಲ್ಲಿ ತನ್ನ ಮತ್ತು ಜಯಬಚ್ಚನ್ ನಡುವಿನ ವಿವಾಹದ ಕುರಿತಂತೆಯೂ ಅಪರೂಪದ ವಿಚಾರವೊಂದನ್ನು ಹೇಳಿಕೊಂಡರು.  ನಾನು ಮತ್ತು ಜಯಬಚ್ಚನ್ ಒಟ್ಟಿಗೆ ಕೆಲಸ ಮಾಡುತ್ತಿದ್ದ ಕಾಲವದು. ನಾವಿಬ್ಬರು ದಿಡೀರ್ ಆಗಿ ಮದುವೆ ಆಗೋಣ ಅಂತ ನಿರ್ಧಾರ ಮಾಡಿದೆವು ಮತ್ತು ಅದು ನಿಜವಾಯ್ತು ಎಂದಿದ್ದಾರೆ. ಜೂನ್ 3, 1973ರಲ್ಲಿ ಜಯ ಬಚ್ಚನ್ ಹಾಗೂ ಅಮಿತಾಬ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ ದಂಪತಿ 50ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಕೂಡ ಆಚರಿಸಿಕೊಂಡರು.  1970ರಲ್ಲಿ ಅಮಿತಾಬ್ ಪುಣೆಯ ಫಿಲ್ಮಂ ಇನ್ಸಿಟ್ಯೂಷನ್ ಗೆ ಮೊದಲ ಭಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಯಬಚ್ಚನ್ ಅವರನ್ನು ಭೇಟಿಯಾದರು. ಅಂದಹಾಗೆ ಇದು ಅಮಿತಾಬ್ ಸಿನಿಮಾ ಇಂಡಸ್ಟ್ರೀಯಲ್ಲಿ ಅಂಬೆಗಾಲಿಡುತ್ತಿದ್ದ ಸಂದರ್ಭವಾದರೆ, ಜಯಬಚ್ಚನ್ ಅದಾಗಲೇ ಸೂಪರ್ ಸ್ಟಾರ್ ಆಗಿದ್ದರು. ಪ್ರೋಡ್ಯೂಸರ್ ಜೊತೆಗೆ ಪುಣೆಯ ಫಿಲಂ ಇನ್ಸಿಟ್ಯೂಷನ್ ಗೆ ತೆರಳಿದ್ದ ಸಂದರ್ಭದಲ್ಲಿ ಜಯಬಚ್ಚನ್ ಪ್ರೆಸೆಂಟೇಷನ್ ನೋಡಿ ಅಮಿತಾಬ್ ಆಕೆಯನ್ನು ಮೆಚ್ಚಿಕೊಂಡಿದ್ದರಂತೆ.  ಲವ್ ಎಟ್ ಫಸ್ಟ್ ಸೈಟ್ ಅನ್ನುವ ಹಾಗೆ ಅಮಿತಾಬ್ ಗೆ ಅದಾಗಲೇ ಜಯ ...

ಶ್ರೀದೇವಿ ನನ್ನ ನೋಡಿದೊಡನೆ ಕಣ್ಣೀರಾಗಿದ್ದಳು : ಹಳೆ ದಿನಗಳನ್ನು ಮೆಲುಕು ಹಾಕಿದ ಆದಿಲ್ ಹುಸೈನ್

ಇಮೇಜ್
 ಇತ್ತೀಚೆಗೆ ಸಂದರ್ಶನೊಂದರಲ್ಲಿ ಮಾತನಾಡಿದ ನಟ ಅದಿಲ್ ಹುಸೈನ್, 15 ವರ್ಷಗಳ ಬಳಿಕ ಸಿನಿ ಇಂಡಸ್ಟ್ರೀಗೆ ಇಂಗ್ಲೀಷ್-ವಿಂಗ್ಲೀಷ್ ಚಿತ್ರದ ಮೂಲಕ ರೀ ಎಂಟ್ರಿಯಾದ ನಟಿ ಶ್ರೀದೇವಿಯೊಂದಿಗಿನ ಒಡನಾಟವನ್ನು ಮೆಲುಕು ಹಾಕಿಕೊಂಡಿದ್ದಾರೆ. ಆಕೆ ಅಕ್ಷರಶಹ ಕಣ್ಣೀರಾಗಿದ್ದಳು ಎಂದಿದ್ದಾರೆ ನಟ. ಆಕೆಯ ಡೌನ್ ಟು ಆರ್ಥ್ ಕ್ಯಾರೆಕ್ಚರ್ ಅನ್ನು ನೆನೆಸಿಕೊಂಡ ಅದಿಲ್, ನಿಜಕ್ಕೂ ಆಕೆ ಮಹಾನ್ ನಟಿಯಾದರೂ ಕೊಂಚವೂ ಹಮ್ಮಿಲ್ಲದಂತೆ ನಮ್ಮೊಂದಿಗೆ ಬೆರೆದಿದ್ದರು. ನಮ್ಮನ್ನು ನೋಡಿ ಕಣ್ಣೀರಾಗಿದ್ದರು ಎಂದಿದ್ದಾರೆ.  ಇಂಗ್ಲೀಷ್ ವಿಂಗ್ಲೀಷ್ ಬಾಲಿವುಡ್ ನ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದಾಗಿದ್ದು, 15 ವರ್ಷಗಳ ನಂತರ ಕಮ್ ಬ್ಯಾಕ್ ಆದ ಶ್ರೀದೇವಿಗೆ ಒಂದು ಚಾಲೆಂಜ್ ಕೂಡ ಆಗಿತ್ತು.  ಚಿತ್ರದಲ್ಲಿ ಶ್ರೀದೇವಿ ಪತಿಯ ಪಾತ್ರವನ್ನು ಆದಿಲ್ ಹುಸೇನನ್ ನಿರ್ವಹಿಸಿದ್ದರು. ಇದೀಗ ಆಕೆಯ ಪ್ರತಿಭೆ ಮತ್ತು ಸ್ವಭಾವದ ಕುರಿತಂತೆ ಮೆಲುಗು ಹಾಕಿರುವ ಆದಿಲ್, ಆಕೆಯನ್ನು ಶ್ಲಾಘಿಸಿದ್ದಾರೆ.  ಸೆಟ್ ಲ್ಲಿ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡರುವ ಹುಸೇನ್, ಶ್ರೀದೇವಿ ಅವರು ತಮ್ಮ ಸದ್ಮಾ ಚಿತ್ರದಲ್ಲಿನ ಹೇಗೆ ತನ್ನ ಮೇಲೆ ಪ್ರಭಾವ ಬೀರಿದರು ಎಂಬ ಕುರಿತಂತೆ ಹೇಳಿದಾಗ ನಿಜಕ್ಕೂ ಭಾವುಕರಾದರು ಎಂದಿದ್ದಾರೆ.  ಆಕೆಯ ನಟನಾ ಕೌಶಲ್ಯವನ್ನು   ಮೆರಿಲ್ ಸ್ಟ್ರೀಪ್‌ಗೆ ಹೋಲಿಸಿದ ಅವರು, ಆಕೆಗೆ ಸರಿಯಾದ ಚಿತ್ರಕಥೆಗಳು ಮತ್ತು ಕಥೆಗಳನ್ನು ಸಿಕ್ಕಿದ್ದರೆ...

ಅಮಿತಾಬಚ್ಚನ್ ತನ್ನನ್ನು ನಡೆಸಿಕೊಂಡ ರೀತಿಯನ್ನು ನೆನೆದ ನಟಿ ಪೂನಂ..!

ಇಮೇಜ್
 ಬಾಲಿವುಡ್ ಬಿಗ್ ಬಿ ಅಮಿತಾಬಚ್ಚನ್ ಶೂಟಿಂಗ್ ನ ಮೊದಲ ದಿನ ನನ್ನನ್ನು ಹೇಗೆ ಬಳಸಿಕೊಂಡರು ಎಂಬುದನ್ನು ನೆನಪಿಸಿಕೊಂಡಿರುವ ನಟಿ ಪೂನಂ ದಿಲ್ಲೋನ. ಯಶ್ ಚೋಪ್ರಾ ಅವರ ತ್ರಿಶೂಲ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಯಾದ ದಿಲ್ಲೋನ, ಅಮಿತ್ ಬಚ್ಚನ್ ನೊಂದಿಗನ ಸಿನಿಮಾ ಶೂಟಿಂಗ್ ವೇಳೆಯ ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ.  ಅಂತಹ ಮಹಾನ್ ನಟರಾದ  ಅಮಿತಾಭ್ ಬಚ್ಚನ್, ಸಂಜೀವ್ ಕುಮಾರ್, ಶಶಿ ಕಪೂರ್, ರಾಖೀ, ಹೇಮಾ ಮಾಲಿನಿ ಮುಂತಾದ ನಟರು ನಟಿಸಿದ ತ್ರಿಶೂಲ್‌ನಲ್ಲಿ ನಟಿಸಲು ಅವಕಾಶ ಸಿಕ್ಕಿದ್ದರಿಂದ ನಾನು ಸಿಕ್ಕಪಟ್ಟೆ ಆತಂಕಗೊಂಡಿದ್ದೆ. ಆಗಿನ್ನೂ ಹದಿಹರೆಯಕ್ಕೆ ಕಾಲಿಟ್ಟಿದ್ದ ಪೂನಂ  ಚಿತ್ರದಲ್ಲಿ ಸಂಜೀವ್ ಕುಮಾರ್ ಅವರ ಮಗಳ ಪಾತ್ರವನ್ನು ನಿರ್ವಹಿಸಿದ್ದರು  ಮತ್ತು ಅವರ ಮೊದಲ ಶಾಟ್ ಅಮಿತಾಭ್ ಅವರೊಂದಿಗಿತ್ತು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಪೂನಂ, ಸೆಟ್‌ನಲ್ಲಿ ತನ್ನ ಮೊದಲ ದಿನವನ್ನು ನೆನಪಿಸಿಕೊಂಡರು ಮತ್ತು ತ್ರಿಶೂಲ್ ನಿರ್ದೇಶಕ ಯಶ್ ಚೋಪ್ರಾ ಹೊರತುಪಡಿಸಿ  ಸೆಟ್ ನಲ್ಲಿದ್ದ ಯಾರೂ ಕೂಡ ಇದು ನನ್ನ ಮೊದಲ ಶೂಟಿಂಗ್ ಎಂದು ತಿಳಿದುಕೊಂಡಿರಲಿಲ್ಲ|. ರೆಡಿಯೋ ನಶಾಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರ ಹೇಳಿದ ಪೂನಂ,  "ನನ್ನ ಮೊದಲ ದಿನದ ಶೂಟಿಂಗ್ ಅಮಿತಾಭ್ ಬಚ್ಚನ್ ಅವರೊಂದಿಗೆ ಆಗಿತ್ತು ಮತ್ತು ಅವರು ನನ್ನನ್ನು ಅವರ ತೋಳುಗಳಲ್ಲಿ ಎತ್ತಿಕೊಳ್ಳಬೇಕಾದ ಸನ್ನಿವೇಶವಿತ್ತು" ಎಂದು ಅವರು ಹೇಳ...

ಕೈಹಿಡಿದಿದ್ದು ಕಾಜೋಲ್ ನನ್ನು, ಆದರೆ ಪ್ರೀತಿಸಿದ್ದು ಮಾತ್ರ....?

ಇಮೇಜ್
 ನಟ ಅಜಯ್ ದೇವಗನ್ ಮತ್ತು ನಟಿ ಕಾಜೋಲ್ ನಡುವೆ ಪ್ರೇಮಾಂಕುರವಾಗಿ ಅವರು ತಮ್ಮ ಮನೆಯ ಟೆರೆಸ್ ಮೇಲೆಯೆ ಮದುವೆಯಾದರೂ ಎಂಬುದನ್ನು ಈ ಜೋಡಿ ಹಲವು ವರ್ಷಗಳಹಿಂದೆಯೇ ಹೇಳಿಕೊಂಡಿತ್ತು. ಆದರೆ ಕಾಜೋಲ್ ಗಿಂತ ಮೊದಲು ಅಜಯ್ ಪ್ರೀತಿಸಿದ್ದು ಯಾರನ್ನು? ಅವರಿಬ್ಬರ ನಡುವಿನ ಪ್ರೇಮ ವಿಫಲವಾಗಲು ಕಾರಣವೇನು ಗೊತ್ತಾ? ಅಜಯ್ ದೇವಗನ್ ಮತ್ತು ಕರಿಷ್ಮಾ ಕಾಪೂರ್ ಮತ್ತು ಕಾಜೋಲ್ 90ರ ದಶಕದ ಸೂಪರ್ ಹಿಟ್ ತಾರೆಗಳಾಗಿದ್ದರು. ಈ ಮೂವರ ನಡುವಿನ ತ್ರಿಕೋನ ಪ್ರೇಮ ಆ ಕಾಲದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೆ ಈ ಬಗ್ಗೆ ಎಂದೂ ಕೂಡ ಕರೀಷ್ಮಾ ಕಾಪೂರ್  ಆಗಲಿ  ಅಧಿಕೃತವಾಗಿ ಎಲ್ಲೂ ಏನೂ ಹೇಳಿಕೊಂಡಿರಲಿಲ್ಲ. ಆದರೆ ಮಾಧ್ಯಮಗಳು ಹಾಗೂ ಚಿತ್ರರಂಗದಲ್ಲಿ ಮಾತ್ರ ಕರೀಷ್ಮಾ ಕಾಪೂರ್ ಮತ್ತು ಅಜಯ್ ದೇವಗನ್ ಮದುವೆಯಾಗುತ್ತಾರೆ ಎಂಬ ವದಂತಿ ಹರಡಿತ್ತು.  ಫರೋಗ್ ಸಿದ್ದಿಕಿ ನಿರ್ದೇಶನದ ಜಿಗರ್ ಚಿತ್ರದ ಶೂಟಿಂಗ್ ವೇಳೆ ಅಜಯ್ ದೇವಗನ್ ಮತ್ತು ಕರೀಷ್ಮಾ ಕಾಪೂರ್ ಪರಸ್ಪರ ಹತ್ತಿರವಾದರು.  ಮಾಧ್ಯಮಗಳ ವರದಿ ಪ್ರಕಾರ ಅಜಯ್ ದೇವಗನ್ ರವೀನಾ ಟಂಡನ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಜಿಗರ್ ನಂತರ, ಅಜಯ್ ದೇವಗನ್ ಮತ್ತು ಕರಿಷ್ಮಾ ಕಪೂರ್ ಅವರು ಸುಹಾಗ್, ಧನ್ವಾನ್ ಮತ್ತು ಸರ್ಗಮ್ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಒಟ್ಟಿಗೇ ಸಿನಿಮಾ ಮಾಡುವಾಗ ಇಬ್ಬರೂ ಒಂದಷ್ಟು ಸಮಯ ಕಳೆದು ಹತ್ತಿರವಾದರು. ಆದರೆ, ಕಾಜೋಲ್ 1995 ರ ಹುಲ್ಚುಲ್ ಚಿತ್ರದ ಮೂಲಕ...

ನಾನು ಇನ್ನೂ ಜೀವನದಲ್ಲಿ ಯಾವತ್ತೂ ಅಕ್ಷಯ್ ಕುಮಾರ್ ತಾಯಿ ಪಾತ್ರವನ್ನು ಮಾಡಲ್ಲಾ ಅಂದ್ರು ಆ ನಟಿ..!

ಇಮೇಜ್
2023ರ ಅಂತರಾಷ್ಟ್ರೀಯ ಎಮ್ಮಿ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿರುವ ನಟಿ ಶೆಫಾಲಿ ಶಾ, ಇತ್ತೀಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ನಾನು ಇನ್ನೂ ಯಾವತ್ತೂ ಜನ್ಮದಲ್ಲಿ ತೆರೆ ಮೇಲೆ ಅಕ್ಷಯ್ ಕುಮಾರ್ ತಾಯಿಯ ಪಾತ್ರವನ್ನು ನಿಭಾಯಿಸುವುದಿಲ್ಲ ಎಂದಿದ್ದಾರೆ.  ಸಿನಿಮಾ ಸೆಟ್ ನಲ್ಲಿನ ಹೈಯಾರಾರ್ಕಿ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದ ನಟಿ.  ನಾನು ಬಹುಶಃ ಒಬ್ಬ ನಿರ್ದೇಶಕ ಅಥವಾ ಒಬ್ಬ ನಟನೊಂದಿಗೆ ಕೆಲಸ ಮಾಡಿದ್ದೇನೆ, ಅವರು ಅತ್ಯಂತ ಆಕ್ರಮಣಕಾರಿ. ಅದಲ್ಲದೆ, ನಟರು ಕೇವಲ ನಟರಲ್ಲ, ಅವರು ಸಹಯೋಗಿಗಳು ಎಂದು ಭಾವಿಸುವ ನಿರ್ದೇಶಕರೊಂದಿಗೆ ನಾನು ಕೆಲಸ ಮಾಡಿದ್ದೇನೆ ಎಂದಿದ್ದಾರೆ.  ಇದೇ ವೇಳೆ ಅವರು ಮುಂದೆ ನಾನು ಎಂದಿಗೂ ಅಕ್ಷಯ್ ಕುಮಾರ್ ತಾಯಿಯಾಗಿ ನಟಿಸುವುದಿಲ್ಲ ಎಂದು ಇದೇ ವೇಳೆ ಹೇಳಿದ್ದಾರೆ.  2005ರ ಚಲನಚಿತ್ರ ವಕ್ತ್ : ದಿ ರೇಸ್ ಎಗೇನ್ಸ್ಟ್ ಟೈಮ್ ನಲ್ಲಿ ಶೆಫಾಲಿ ಶಾ  ಅಕ್ಷಯ್ ಕುಮಾರ್ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ.  ಶೆಫಾಲಿ ಅಕ್ಷಯ್ ಕುಮಾರ್ ಗಿಂತ 5 ವರ್ಷ ಕಿರಿಯವರಾಗಿದ್ದರೂ ಅವರ ತಾಯಿಯ ಪಾತ್ರವನ್ನು ನಿಭಾಯಿಸಿದ್ದರು.  ಆಗ ಶೆಫಾಲಿಗೆ 32 ವರ್ಷ ಮತ್ತು ಅಕ್ಷಯ್ ಗೆ 37 ವರ್ಷ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ಪ್ರಿಯಾಂಕ ಚೋಪ್ರಾ ನಟಿಸಿದ್ದರು. 

ವರುಣ್ -ಲಾವಣ್ಯ ತ್ರೀಪಾಠಿ ನಡುವೆ ಪ್ರೇಮಾಂಕುರವಾಗಿದ್ದೇ ಈ ಘಟನೆಯಿಂದಂತೆ..!

ಇಮೇಜ್
  ದಕ್ಷಿಣ ಭಾರತದ ಜನಪ್ರಿಯ ನಟರಾದ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ  ನವಜೀವನಕ್ಕೆ ಕಾಲಿಟ್ಟಿದ್ದಾರೆ. ನವೆಂಬರ್ 1ರಂದು ಇಟಲಿಯ ಬೊರ್ಗೊ ಸ್ಯಾನ್ ಫೆಲಿಸ್ ರೆಸಾರ್ಟ್ ನಲ್ಲಿ ಇವರಿಬ್ಬರು ಪತಿ-ಪತ್ನಿಯರಾದರು.  ನಟ ಮತ್ತು ನಿರ್ಮಾಪಕ ನಾಗೇಂದ್ರ ಬಾಬು ಅವರ ಪುತ್ರನಾದ ವರುಣ್ ತೇಜ್   ತೆಲುಗು ಚಿತ್ರರಂಗದ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಿ ಕುಟುಂಬಗಳಲ್ಲಿ ಒಂದಾದ ಅಲ್ಲು-ಕೊನಿಡೆಲಾ ಕುಟುಂಬಕ್ಕೆ ಸೇರಿದವರು.  ವರುಣ್ ಅವರ ಚಿಕ್ಕಪ್ಪಂದಿರಾದ ಮೆಗಾ ಸ್ಟಾರ್ ಚಿರಂಜೀವಿ ಮತ್ತು ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಅವರ ಸೋದರಸಂಬಂಧಿಗಳು , ರಾಮ್ ಚರಣ್ ಮತ್ತು ಅಲ್ಲೂ ಅರ್ಜುನ್ ಮೂರು ದಿನಗಳ ಸುದೀರ್ಘ ಉತ್ಸವದ ಭಾಗವಾಗಿದ್ದರು. https://youtu.be/Rodftd4ttpg?si=2zioxk1GZOorc808  ಯಾರೂ ಈ ಲಾವಣ್ಯ ತ್ರಿಪಾಠಿ? ಉತ್ತರ ಪ್ರದೇಶದ ಫೈಜಾಬಾದ್ ನಲ್ಲಿ ಜನಿಸಿರುವ ಲಾವಣ್ಯ, ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಬೆಳೆದರು. ಅವರ ಶಿಕ್ಷಣವೂ ಅಲ್ಲಿಯೇ ಮುಗಿಸಿದರು. ಪದವಿ ಶಿಕ್ಷಣಕ್ಕಾಗಿ ಮುಂಬೈಗೆ ತೆರಳಿದ ಲಾವಣ್ಯ ಬಳಿಕ ಮಾಡೆಲಿಂಗ್ ಆರಂಭಿಸಿದ್ದರು. ಸಿನಿಮಾ ತಾರೆಯಾಗಬೇಕು ಎಂದು ಕನಸು ಕಾಣುತ್ತಿದ್ದ ಲಾವಣ್ಯ 2006ರಲ್ಲಿ ಮಿಸ್ ಉತ್ತರಖಂಡ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಬಳಿಕ ಅವರ ನಟನಾ ವೃತ್ತಿ ಆರಂಭವಾಗಿದ್ದು, ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಹಾರರ್ ಥ್ರಿಲ್ಲರ್ ಧಾರವಾಹಿ ಶ್....

ವಸಿಷ್ಠ ಸಿಂಹ ಎಂಬ ಯಂಗ್ ಆಂಡ್ ಎನರ್ಜಿಟಿಕ್ ನಟನ ಬಗ್ಗೆ

ಇಮೇಜ್
  ವಸಿಷ್ಟ ನಿರಂಜನ್ ಸಿಂಹ. ಅಕ್ಟೋಬರ್ 19 , 1988ರಲ್ಲಿ ಹಾಸನ ಜಿಲ್ಲೆಯಲ್ಲಿ ಜನಿಸಿದರು.  ಭಾರತೀಯ ನಟ ಹಾಗೂ ಹಿನ್ನೆಲೆ ಗಾಯಕನಾಗಿರುವ ವಸಿಷ್ಠ ಸಿಂಹ ಖಳನಾಯಕನ ರೋಲ್ ನಲ್ಲಿ ತುಂಬಾನೆ ಫೇಮಸ್. ವಸಿಷ್ಠ ಮೈಸೂರಿನ ಶಾರದ ವಿಲಾಸ ಶಾಲೆ ಮತ್ತು ಸದ್ವಿದ್ಯಾ ಶಾಲೆಯಲ್ಲಿ ಓದಿದ್ದಾರೆ. ಪಿಯುಸಿಯನ್ನು ಶ್ರೀ ಸಾಯಿ ಸತ್ಯನಾರಾಯಣ ಪಿಯು ಕಾಲೇಜು ಬಾಣಸವಾಡಿಯಲ್ಲಿ ಮುಗಿಸಿದರೆ , ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ಸಂಗೀತ ದಂತಕಥೆ ಹಂಸಲೇಖ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದರಿಂದ ಅವರು ಬೆಂಗಳೂರಿಗೆ ತಮ್ಮ ನೆಲೆಯನ್ನು ಬದಲಿಸಬೇಕಾಗಿ ಬಂತು. 2011 ರಲ್ಲಿ , ವಸಿಷ್ಟ ಅವರು ಸಾಫ್ಟ್‌ವೇರ್ ಇಂಜಿನಿಯರ್ ಕೆಲಸವನ್ನು ತೊರೆದು ನಟನಾ ಜೀವನಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ನಿರ್ದರಿಸಿದರು. ಆರ್ಯಸ್ ಲವ್ (2013) ನೊಂದಿಗೆ ಸಿನಿ ಜೀವನ ಆರಂಭಿಸಿದ ಅವರು , ಬಿಡುಗಡೆಯಾದ  ಹುಬ್ಬಳ್ಳಿ ಹುಡಗರು ಎಂಬ ಬಿಡುಗಡೆಯಾಗದ ಚಲನಚಿತ್ರದಲ್ಲಿ ಕೆಲಸ ಮಾಡಿದರು. ತಮಿಳಿನ ಸುಂದರಪಾಂಡಿಯನ್ (2012) ಚಿತ್ರದ ರೀಮೇಕ್ ಆದ ರಾಜಾ ಹುಲಿ (2013) ನಲ್ಲಿ ಮುಖ್ಯ ಪಾತ್ರದ ಮೂಲಕ ಫೇಮಸ್ ಆದರು. . ನಂತರ ಅವರು ರುದ್ರ ತಾಂಡವ (2014) , ತಮಿಳು ಚಲನಚಿತ್ರ ಪಾಂಡಿಯ ನಾಡು (2013) ನ ರಿಮೇಕ್‌ನಲ್ಲಿ ಕಾಣಿಸಿಕೊಂಡರು. ವಸಿಷ್ಟ ನಂತರ JKS ನ ದ್ವಿಭಾಷಾ ಚಿತ್ರ ಅಲೋನ್ ನಲ್ಲಿ ನಿಕೇಶಾ ಪಟೇಲ್ ಜೊತೆಗೆ ಪ್ರಮುಖ ಪಾತ್ರ...