ನಾನು ಇನ್ನೂ ಜೀವನದಲ್ಲಿ ಯಾವತ್ತೂ ಅಕ್ಷಯ್ ಕುಮಾರ್ ತಾಯಿ ಪಾತ್ರವನ್ನು ಮಾಡಲ್ಲಾ ಅಂದ್ರು ಆ ನಟಿ..!

2023ರ ಅಂತರಾಷ್ಟ್ರೀಯ ಎಮ್ಮಿ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿರುವ ನಟಿ ಶೆಫಾಲಿ ಶಾ, ಇತ್ತೀಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ನಾನು ಇನ್ನೂ ಯಾವತ್ತೂ ಜನ್ಮದಲ್ಲಿ ತೆರೆ ಮೇಲೆ ಅಕ್ಷಯ್ ಕುಮಾರ್ ತಾಯಿಯ ಪಾತ್ರವನ್ನು ನಿಭಾಯಿಸುವುದಿಲ್ಲ ಎಂದಿದ್ದಾರೆ. 



ಸಿನಿಮಾ ಸೆಟ್ ನಲ್ಲಿನ ಹೈಯಾರಾರ್ಕಿ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದ ನಟಿ. ನಾನು ಬಹುಶಃ ಒಬ್ಬ ನಿರ್ದೇಶಕ ಅಥವಾ ಒಬ್ಬ ನಟನೊಂದಿಗೆ ಕೆಲಸ ಮಾಡಿದ್ದೇನೆ, ಅವರು ಅತ್ಯಂತ ಆಕ್ರಮಣಕಾರಿ. ಅದಲ್ಲದೆ, ನಟರು ಕೇವಲ ನಟರಲ್ಲ, ಅವರು ಸಹಯೋಗಿಗಳು ಎಂದು ಭಾವಿಸುವ ನಿರ್ದೇಶಕರೊಂದಿಗೆ ನಾನು ಕೆಲಸ ಮಾಡಿದ್ದೇನೆ ಎಂದಿದ್ದಾರೆ.  ಇದೇ ವೇಳೆ ಅವರು ಮುಂದೆ ನಾನು ಎಂದಿಗೂ ಅಕ್ಷಯ್ ಕುಮಾರ್ ತಾಯಿಯಾಗಿ ನಟಿಸುವುದಿಲ್ಲ ಎಂದು ಇದೇ ವೇಳೆ ಹೇಳಿದ್ದಾರೆ. 

2005ರ ಚಲನಚಿತ್ರ ವಕ್ತ್ : ದಿ ರೇಸ್ ಎಗೇನ್ಸ್ಟ್ ಟೈಮ್ ನಲ್ಲಿ ಶೆಫಾಲಿ ಶಾ  ಅಕ್ಷಯ್ ಕುಮಾರ್ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ.  ಶೆಫಾಲಿ ಅಕ್ಷಯ್ ಕುಮಾರ್ ಗಿಂತ 5 ವರ್ಷ ಕಿರಿಯವರಾಗಿದ್ದರೂ ಅವರ ತಾಯಿಯ ಪಾತ್ರವನ್ನು ನಿಭಾಯಿಸಿದ್ದರು.  ಆಗ ಶೆಫಾಲಿಗೆ 32 ವರ್ಷ ಮತ್ತು ಅಕ್ಷಯ್ ಗೆ 37 ವರ್ಷ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ಪ್ರಿಯಾಂಕ ಚೋಪ್ರಾ ನಟಿಸಿದ್ದರು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?