ನನ್ನ ಮತ್ತು ಜಯಬಚ್ಚನ್ ನಡುವಿನ ವಿವಾಹ ಒಂದು ದಿಡೀರ್ ನಿರ್ಧಾರ : ಮದುವೆ ಸಿಕ್ರೇಟ್ ಬಿಚ್ಚಿಟ್ಟ ಅಮಿತಾಬ್ ಬಚ್ಚನ್

 ಕೌನ್ ಬನೇಗಾ ಕರೋಡ್ ಪತಿ ಸೀಸನ್ 15 ಆರಂಭವಾಗಿದ್ದು, ಬಾಲಿವುಡ್ ಬಿಗ್ ಬಿ ನಡೆಸಿಕೊಂಡು ಬರುತ್ತಿರುವ ಈ ಬಿಗ್ ಟೆಲಿವಿಷನ್ ಶೋದಲ್ಲಿ ಅಮಿತಾಬ್ ಸ್ಪರ್ಧಿಯೊಂದಿಗೆ ಮಾತನಾಡುತ್ತಾ, ಸುಖದಾಂಪತ್ಯಕ್ಕೆ ಕೆಲವೊಂದು ಟಿಪ್ಸ್ ಕೊಡಿ ಎಂದು ಕೇಳಿಕೊಂಡರು. ಇದೇ ಸಂದರ್ಭದಲ್ಲಿ ತನ್ನ ಮತ್ತು ಜಯಬಚ್ಚನ್ ನಡುವಿನ ವಿವಾಹದ ಕುರಿತಂತೆಯೂ ಅಪರೂಪದ ವಿಚಾರವೊಂದನ್ನು ಹೇಳಿಕೊಂಡರು. 



ನಾನು ಮತ್ತು ಜಯಬಚ್ಚನ್ ಒಟ್ಟಿಗೆ ಕೆಲಸ ಮಾಡುತ್ತಿದ್ದ ಕಾಲವದು. ನಾವಿಬ್ಬರು ದಿಡೀರ್ ಆಗಿ ಮದುವೆ ಆಗೋಣ ಅಂತ ನಿರ್ಧಾರ ಮಾಡಿದೆವು ಮತ್ತು ಅದು ನಿಜವಾಯ್ತು ಎಂದಿದ್ದಾರೆ. ಜೂನ್ 3, 1973ರಲ್ಲಿ ಜಯ ಬಚ್ಚನ್ ಹಾಗೂ ಅಮಿತಾಬ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ ದಂಪತಿ 50ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಕೂಡ ಆಚರಿಸಿಕೊಂಡರು. 

1970ರಲ್ಲಿ ಅಮಿತಾಬ್ ಪುಣೆಯ ಫಿಲ್ಮಂ ಇನ್ಸಿಟ್ಯೂಷನ್ ಗೆ ಮೊದಲ ಭಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಯಬಚ್ಚನ್ ಅವರನ್ನು ಭೇಟಿಯಾದರು. ಅಂದಹಾಗೆ ಇದು ಅಮಿತಾಬ್ ಸಿನಿಮಾ ಇಂಡಸ್ಟ್ರೀಯಲ್ಲಿ ಅಂಬೆಗಾಲಿಡುತ್ತಿದ್ದ ಸಂದರ್ಭವಾದರೆ, ಜಯಬಚ್ಚನ್ ಅದಾಗಲೇ ಸೂಪರ್ ಸ್ಟಾರ್ ಆಗಿದ್ದರು. ಪ್ರೋಡ್ಯೂಸರ್ ಜೊತೆಗೆ ಪುಣೆಯ ಫಿಲಂ ಇನ್ಸಿಟ್ಯೂಷನ್ ಗೆ ತೆರಳಿದ್ದ ಸಂದರ್ಭದಲ್ಲಿ ಜಯಬಚ್ಚನ್ ಪ್ರೆಸೆಂಟೇಷನ್ ನೋಡಿ ಅಮಿತಾಬ್ ಆಕೆಯನ್ನು ಮೆಚ್ಚಿಕೊಂಡಿದ್ದರಂತೆ.  ಲವ್ ಎಟ್ ಫಸ್ಟ್ ಸೈಟ್ ಅನ್ನುವ ಹಾಗೆ ಅಮಿತಾಬ್ ಗೆ ಅದಾಗಲೇ ಜಯ ಜೊತೆಗೆ ಪ್ರೇಮಾಂಕುರವಾಗಿತ್ತಂತೆ. ಇವರಿಬ್ಬರು ಗುಡ್ಡಿ ಚಿತ್ರದಲ್ಲಿ ಜೊತೆಗೆ ತೆರೆ ಹಂಚಿಕೊಂಡರು.  ಪರಿಚಯ ಪ್ರೇಮಕ್ಕೆ ತಿರುಗಲು ಹೆಚ್ಚು ಸಮಯ ಹೋಗಿರಲಿಲ್ಲ. ಏಕ್ ನಝಾರ್ ಚಿತ್ರದ ಚಿತ್ರೀಕರಣದ ವೇಳೆ ಜಯ ಬಚ್ಚನ್ ಮೊದಲ ಬಾರಿಗೆ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡರಂತೆ. 

ಆದರೆ ಜಯಾ ಅವರ ಗೆಳೆಯ ರಾಕೇಶ್ ಖನ್ನಾಗೆ ಜಯಾ ಅವರ ಆಯ್ಕೆ ಇಷ್ಟವಾಗಿರಲಿಲ್ಲವಂತೆ. ಆತ ನಿನಗೆ ಸರಿಯಾದ ಜೋಡಿಯಲ್ಲ ಎಂದು ಆತ ಪದೇ ಪದೇ ಹೇಳುತ್ತಿದ್ದರಂತೆ. ಮದುವೆಗೆ ಜಯ ಹಾಗೂ ಅಮಿತಾಬಾ ಪೋಷಕರ ವಿರೋಧವಿದ್ದರೂ ಆರಂಭದಲ್ಲಿ ಬಳಿಕ ಎಲ್ಲರೂ ಆಶೀರ್ವಾದಿಸಿ ಇವರಿಬ್ಬರನ್ನು ಸತಿ ಪತಿಗಳನ್ನಾಗಿಸಿದರಂತೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?