ಆರೋಗ್ಯಕ್ಕೂ ಸೈ- ರುಚಿಗೂ ಜೈ ಕೊಕಂ ಚಟ್ನಿ

 ಪಿತ್ತ ದೋಷದಿಂದ ಬಳಲುತ್ತಿದ್ದರೆ. ಬಾಯಿರುಚಿ ಇಲ್ಲದಿದ್ದರೆ ಊಟ ಸೇರೋದಿಲ್ಲ. ಏನು ತಿನ್ನೋದು ಬೇಡ ಅನಿಸುತ್ತದೆ. ಅದರಲ್ಲೂ ಜ್ವರ ಬಂದ ನಂತರ ಬಾಯಿ ಸಪ್ಪೆ ಸಪ್ಪೆ. ಹೀಗಾಗಿ  ಅದೆಷ್ಟೋ ಮಂದಿ ಜ್ವರ ಬಂದ ನಂತರ ಬಾಯಿ ರುಚಿ ಇಲ್ಲ. ಏನು ತಿನ್ನಲೂ ಆಗೋದಿಲ್ಲ. ವೀಕ್ ನೆಸ್ ಅಂತ ಹೇಳೋದನ್ನು ನೀವು ಕೇಳಿರಬಹುದು. ಚಿಂತೆ ಬಿಡಿ ನಾನು ಇವತ್ತು ನಿಮಗೊಂದು ಸಿಂಪಲ್ ಆಂಡ್ ಟೆಸ್ಟಿಯಾಗಿರುವ ಚಟ್ನಿ ರೆಸಿಪಿಯನ್ನು ಹೇಳ್ತೀನಿ ಟ್ರೈ ಮಾಡಿ. ಈ ರೆಸಿಪಿ 



ಬೇಕಾಗುವ ಸಾಮಾಗ್ರಿಗಗಳು

ಕೋಕಂ ಸಿಪ್ಪೆ- ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಒಂದು ವೇಳೆ ಸಿಗದಿದ್ದರೆ ಹುಣಸೆ ಹುಳಿಯನ್ನು ಬಳಸಿಕೊಳ್ಳಬಹುದು.

ಒಂದು ಕಪ್ ತೆಂಗಿನ ತುರಿ ( ಕೊಬ್ಬರಿ ಇದ್ದರೆ ಉತ್ತಮ)

6-7 ಒಣ ಮೆಣಸು

ಕೊಂಚ ಕಡಲೆ ಬೇಳೆ (ಒಂದು ಟೇಬಲ್ ಚಮಚ)

ಈರುಳ್ಳಿ 1

ಬೆಳ್ಳುಳ್ಳಿ 1

ರುಚಿಗೆ ತಕ್ಕಷ್ಟು ಉಪ್ಪು.

ಬೆಳ್ಳುಳ್ಳಿ, ಕಡಳೆ ಬೇಳೆ, ಯನ್ನು ಬೇರೆ ಬೇರೆಯಾಗಿ ಹುರಿದು ಕೊಳ್ಳಿ. ಬಳಿಕ ದೊಡ್ಡ ಪ್ಯಾನ್ ನಲ್ಲಿ ಈರುಳ್ಳಿಯನ್ನು ಬಾಡಿಸಿಕೊಳ್ಳಿ. ಇದಕ್ಕೆ ತೆಂಗಿನ ತುರಿ ಮತ್ತು ಕೊಕಂ ಸಿಪ್ಪೆಯನ್ನು ಹಾಕಿ ಹುರಿದುಕೊಂಡು ಬಳಿಕ ಸ್ಟವ್ ಆಫ್ ಮಾಡಿ. ಆರಿದ ಬಳಿಕ ಎಲ್ಲವನ್ನೂ ಸೇರಿಸಿ ಮಿಕ್ಸಿಯನ್ನು ರುಬ್ಬಿಕೊಳ್ಳಿ. ನಿಮ್ಮ ಚಟ್ನಿ ರೆಡಿ. ಇದಕ್ಕೆ ಕೊಂಚ ಕರಿಬೇವು, ಕಡ್ನೆಬೇಳೆ, ಒಣ ಮೆಣಸು ಮತ್ತು ಸಾಸಿವೆ ಹಾಕಿ ಒಗ್ಗರಣೆ ಹಾಕಿದರೆ ಚಟ್ನಿ ಸವಿಯಲು ರೆಡಿ. 

ಸಾಮಾನ್ಯವಾಗಿ ಮಂಗಳೂರಿನ ಕಡೆ ಈ ಚಟ್ನಿ ಹೆಚ್ಚು ಫೇಮಸ್. ಬಾಯಿಡ್ಲ್ ರೈಸ್ ಗೆ ಹೆಚ್ಚು ಸೂಕ್ತವಾಗುತ್ತದೆ. ಮೊಸರು , ಚಟ್ನಿ ಮತ್ತು ಚಿಪ್ಸ್ ಇದ್ದರೆ ಅದರ ಮಜಾವೇ ಬೇರೆ. ಒಮ್ಮೆ ಸುಮ್ಮನೆ ಟ್ರೈ ಮಾಡಿ ನೋಡಿ,  ಹೇಗಿತ್ತು ಸಿಂಪಲ್ ರಿಸೆಪಿ ಅಂತ ಕಮೆಂಟ್ ಮಾಡಿ ತಿಳಿಸಿ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?