ವೈವಾಹಿಕ ಜೀವನಕ್ಕೆ ಕಾಲಿಟ್ಟ ಪೂಜಾಗಾಂಧಿ- ಪತಿ ವಿಜಯ್ ಘೋರ್ಪಡೆ ಹಿನ್ನೆಲೆ ಗೊತ್ತಾ?

 ಮಳೆ ಹುಡುಗಿ ಎಂದೇ ಖ್ಯಾತಿ ಪಡೆದಿರುವ ನಟಿ ಪೂಜಾಗಾಂಧಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಬಹುದಿನಗಳ ಗೆಳೆಯ ವಿಜಯ್ ಘೋರ್ಪಡೆಯವರೊಂದಿಗೆ ಮದುವೆಯಾಗುತ್ತಿದ್ದಾರೆ.



 ಯಲಹಂಕದಲ್ಲಿ ವಿವಾಹ ನಡೆದಿದ್ದು, ಕುವೆಂಪು ಅವರ ಆಶಯದ ಮಂತ್ರ ಮಾಂಗಲ್ಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂದಹಾಗೆ ಅವರ ಪತಿ ವಿಜಯ್ ಘೋರ್ಪಡೆ ಉದ್ಯಮಿಯಾಗಿದ್ದು, ಬೆಂಗಳೂರಿನ ಲಾಜಿಸ್ಟಿಕ್ ಕಂಪೆನಿಯ ಮಾಲೀಕರು. ಇವರ ನಡುವಿನ ಸ್ನೇಹ ಪ್ರೀತಿಗೆ ತಿರುಗಿ, ಪರಸ್ಪರ ವಿವಾಹಕ್ಕೆ ಇವರು ಸಿದ್ದರಾಗಿದ್ದಾರೆ. 



ಮೂಲತಃ ಪಂಜಾಬಿನವರಾದ ಪೂಜಾಗಾಂಧಿ ಬೆಳೆದಿದ್ದು ದೆಹಲಿಯಲ್ಲಿ. ಓದು ಮುಗಿಸಿದ ಬಳಿಕ ಮಾಡೆಲಿಂಗ್ ಆರಂಭಿಸಿದ ಅವರು ಬಳಿಕ ಜಾಹೀರಾತು, ಸಿನಿಮಾ ಕ್ಷೇತ್ರಕ್ಕೆ ಬಂದರು. ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾದ ಪೂಜಾ, ಕನ್ನಡಾಭಿಮಾನಿಯಾಗಿ ಕನ್ನಡ ಮಾತನಾಡುವುದು ಕಲಿತರು. ಇದೀಗ ಬರೆಯುವುದು ಮತ್ತು ಓದಲು ಕಲಿತು ತನ್ನ ಮದುವೆಯ ವಿಚಾರವನ್ನು ಪತ್ರದ ಮೂಲಕ ಬರೆದು ತಮ್ಮ ಅಭಿಮಾನಿಗಳಿಗೆ ಆಹ್ವಾನ ನೀಡಿದ್ದಾರೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?