ದೀಪಾವಳಿ 2023 : ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ ಸಾಲು ಸಾಲು ಸಿನಿಮಾ..

 ದೀಪಾವಳಿ ಬಂತೆಂದರೆ ಸಾಕು, ಮಾರುಕಟ್ಟೆಗಳು ಗಿಜಿಗುಟ್ಟುತ್ತದೆ. ಒಂದೆಡೆ ಶಾಪಿಂಗ್  ಭರಾಟೆ ಜೋರಾದರೆ, ಮತ್ತೊಂದೆಡೆ ವ್ಯಾಪಾರಿಗಳಿಗೆ ಸಿಕ್ಕಾಪಟ್ಟೆ ಬ್ಯುಸಿನೆಸ್, ಅದು ಇದು ಅಂತ ಜನ ಓಡಾಡುತ್ತಿದ್ದರೆ, ದೀಪಾವಳಿಯಂದು ಇರೋ ರಜಾದಿನಗಳಲ್ಲಿ ಯಾವುದಾದರೂ ಒಳ್ಳೆ ಮೂವಿ ನೋಡಬೇಕು ಅಂತ ಜನ ಹಂಬಲಿಸುತ್ತಿರುತ್ತಾರೆ. ಹೀಗಾಗಿ ಬೆಳಕನ ಹಬ್ಬಕ್ಕೆಂದು ರಿಲೀಸ್ ಆಗಲು ಕೆಲವು ಸಿನಿಮಾಗಳು ಕಾಯುತ್ತಿದ್ದು, ಅವುಗಳ ಪಟ್ಟಿ ಇಲ್ಲಿದೆ ನೋಡಿ. 







ಗರಡಿ

ಯೋಗರಾಜ್ ಭಟ್ ನಿರ್ದೇಶನದ , ದರ್ಶನ್ ತೂಗುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗರಡಿ ಚಿತ್ರ ಸ್ಯಾಂಡಲ್ ವುಡ್ ಮಂದಿ ಪಾಲಿಗೆ ವಿಶೇಷ ನಿರೀಕ್ಷೆ ಇರುವ ಸಿನಿಮಾ. ಲವ್‌ ಸ್ಟೋರಿಗಳಿಗೆ ಆಕ್ಷನ್ ಕಟ್ ಹೇಳುತ್ತಿದ್ದ ಭಟ್ಟರು ಇದೀಗ ಮಾಸ್ ಸಿನಿಮಾದತ್ತ ಮುಖಮಾಡಿದ್ದು, ಯಶಸ್ ಸೂರ್ಯ ಹಿರೋ ಆಗಿ ಕಮ್ ಬ್ಯಾಕ್ ಮಾಡಿರುವ ಈ ಸಿನಿಮಾ ದೀಪಾವಳಿಗೆ ರಿಲೀಸ್ ಆಗಲಿದೆ.

ಟೈಗರ್ 3

ಸಲ್ಮಾನ್ ಖಾನ್ ನಟನೆಯ ಟೈಗರ್ 3 ಸಿನಿಮಾವನ್ನು ಆದತ್ಯ ಚೋಪ್ರಾ ನಿರ್ಮಾಣ ಮಾಡಿದ್ದು,  ದೀಪಾವಳಿ ಸಂಭ್ರಮಕ್ಕೆ ರಿಲೀಸ್ ಆಗಲಿರುವ ಈ ಸಿನಿಮಾ. ಟೈಗರ್' ಹಾಗೂ 'ಟೈಗರ್ ಜಿಂದಾ ಹೇ' ಸಿನಿಮಾದ ಸೀಕ್ವೆಲ್ ಆಗಿದೆ.  ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.



ಜಪಾನ್

 ಕಾರ್ತಿ ನಟಿಸಿರುವ 'ಜಪಾನ್' ಸಿನಿಮಾ ಕೂಡ ಇದೇ ಸಂದರ್ಭದಲ್ಲಿ ರಿಲೀಸ್ ಆಗಲಿದೆ. ರಾಜು ಮುರುಗನ್ ಚಿತ್ರದ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. 



 ಜಿಗರ್‌ಥಾಂಡ ಡಬಲ್ ಎಕ್ಸ್

 ನಿರ್ದೇಶಕ ಕಾರ್ತಿಕ್ ಸುಬ್ಬರಾಜು ನಿರ್ದೇಶಿಸಿದ ಸಿನಿಮಾ ಜಿಗರ್‌ಥಾಂಡ ಡಬಲ್ ಎಕ್ಸ್  ದೀಪಾವಳಿಗೆ ರಿಲೀಸ್ ಆಗುತ್ತಿದೆ. ರಾಘವ ಲಾರೆನ್ಸ್ ಹಾಗೂ ಎಸ್‌ಜೆ ಸೂರ್ಯ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

ಅಲಾ ನಿನ್ನು ಚೇರಿ

 ಪಕ್ಕಾ ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಎಂಟರ್‌ಟೈನರ್ ಕಥೆಯನ್ನು ಹೊಂದಿರುವ  ದಿನೇಶ್ ತೇಜ್, ಹೆಬ್ಬ ಪಟೇಲ್ ಹಾಗೂ ಪಾಯಲ್ ರಾಧಾಕೃಷ್ಣ ನಟಿಸಿಪುವ  ಸಿನಿಮಾ 'ಅಲಾ ನಿನ್ನು ಚೇರಿ'. ಈ ಸಿನಿಮಾ ಕೂಡ ನವೆಂಬರ್ 10ಕ್ಕೆ ರಿಲೀಸ್ ಆಗುತ್ತಿದೆ. 

 ದಿ ಮಾರ್ವಲ್ಸ್

 ಹಾಲಿವುಡ್‌ನ ಸೂಪರ್ ಹೀರೋ ಸಿನಿಮಾ 'ದಿ ಮಾರ್ವಲ್ಸ್'  ಭಾರತದ ಸಿನಿಮಾಗಳಿಗೆ ಟಕ್ಕರ್ ಕೊಡುವುದಕ್ಕೆ ಬರುತ್ತಿದೆ. ನವೆಂಬರ್ 10ಕ್ಕೆ ಈ ಸಿನಿಮಾ ಕೂಡ ರಿಲೀಸ್ ಆಗುತ್ತಿದ್ದು, ಬ್ರೀ ಲಾರ್ಸನ್, ಟೆಯೋನಾ ಪ್ಯಾರಿಸ್, ಇಮಾನ್ ವೆಲ್ಲಾನಿ, ಪಾರ್ಕ್ ಸಿಯೋ-ಜೂನ್ ನಟಿಸಿದ್ದಾರೆ,


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?