ನಟಿ ಲೀಲಾವತಿ ಹಿನ್ನೆಲೆ ಏನು? ಚಿತ್ರರಂಗಕ್ಕೆ ಇವರು ಪ್ರವೇಶ ಹೇಗಾಯಿತು ಗೊತ್ತಾ?

 70ರ ದಶಕದ ತೆರೆ ಮೇಲಿನ ಸೂಪರ್ ಹಿಟ್ ಜೋಡಿಗಳು ಎನಿಸಿಕೊಂಡಿದ್ದ ಡಾ ರಾಜ್ ಕುಮಾರ್ ಹಾಗೂ ಲೀಲಾವತಿಯರ ಕುರಿತಂತ ಹಲವು ಊಹಾಪೋಹಗಳು ಹರಿದಾಡುತ್ತಲೇ ಇದೆ. ಆದರೆ ಈ ಬಗ್ಗೆ ಯಾರೂ ಕೂಡ ಖಚಿತ ಹೇಳಿಕೆ ನೀಡುತ್ತಿಲ್ಲ . ಈ ನಡುವೆ ಲೀಲಾವತಿಯವರು ಮಗ ವಿನೋದ್ ಹಾಗೂ ಸೊಸೆಯೊಂದಿಗೆ ತಮ್ಮ ತೋಟದ ಮನೆಯಲ್ಲಿ ತಾವಾಯಿತು ತಮ್ಮ ಜೀವನವಾಯ್ತು ಎಂದುಕೊಂಡು ಬಿಟ್ಟಿದ್ದಾರೆ. 



ಕೃಷಿ ಚಟುವಟಿಕೆಯತ್ತ ಹೆಚ್ಚು ಒಲವು ತೋರಿರುವ ಲೀಲಾವತಿ ಹಾಗೂ ಮಗ ವಿನೋದ್ ರಾಜ್, ತಮ್ಮ ಬಹುತೇಕ ಸಮಯವನ್ನು ಅಲ್ಲೇ ಕಳೆಯುತ್ತಾರೆ. ಅದೇನೆ ಇರಲಿ ಇದೀಗ ಲೀಲಾವತಿ ಅವರ ಆರೋಗ್ಯ ಏರುಪೇರಾಗಿದ್ದು, ಅವರಿಗೆ ಮೂಗಿನ ಮೂಲಕ ಆಹಾರವನ್ನು ನೀಡಲಾಗುತ್ತಿದೆ. ನಡೆದಾಡಲು ಸಾಧ್ಯವಾಗದ ರೀತಿಯಲ್ಲಿರುವ ತಾಯಿಯನ್ನು ವಿನೋದ್ ರಾಜ್ ಮಗುವಿನಂತೆ ಪೋಷಿ,ಸುತ್ತಿದ್ದಾರೆ. 

ಲೀಲಾವತಿಯವರು ಇದುವರೆಗೂ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗಿನಲ್ಲೂ ನಟಿಸಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರಾಗಿರುವ ಲೀಲಾವತಿಯವರು ಬಾಲ್ಯದಲ್ಲೇ ಪೋಷಕರನ್ನು ಕಳೆದುಕೊಂಡು ಬದುಕು ಅರಸುತ್ತಾ ಹೋದವರು ಮೈಸೂರಿನಲ್ಲಿ ನಟನಾ ವೃತ್ತಿ ಆರಂಭಿಸುತ್ತಾರೆ. 

1949ರಲ್ಲಿ ಶಂಕರ್ ನಾಗ್ ಅಭಿನಯದ ನಾಗಕನ್ನಿಕೆ ಸಿನಿಮಾದಲ್ಲಿ ಸಖಿಯ ಪಾತ್ರದ ಮೂಲಕ ಚಂದನವನ ಪ್ರವೇಶಿಸಿದ ಲೀಲಾವತಿಯವರು ಹಲವು ನಾಟಕಗಳಲ್ಲೂ ಅಭಿನಯಿಸಿದ್ದಾರೆ. 

 'ಮಾಂಗಲ್ಯ ಯೋಗ' ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡರು. ಬಳಿಕ  ಡಾ.ರಾಜ್ ಕುಮಾರ್ ಅವರೊಂದಿಗೆ ರಣಧೀರ ಕಂಠೀರವದಲ್ಲಿ ನಟಿಸಿದರು. ರಾಣಿ ಹೊನ್ನಮ್ಮ ಚಿತ್ರದ ಬಳಿಕ ರಾಜ್ ಕುಮಾರ್ ಹಾಗೂ ಲೀಲಾವತಿ ಜೋಡಿ ಹೆಚ್ಚು ಜನಪ್ರಿಯವಾಯ್ತು.  ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಹೀಗೆ ಹಲವಾರು ಚಿತ್ರಗಳ ನಾಯಕಿಯಾಗಿ ನಟಿಸಿದ್ದಾರೆ. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?