ವಸಿಷ್ಠ ಸಿಂಹ ಎಂಬ ಯಂಗ್ ಆಂಡ್ ಎನರ್ಜಿಟಿಕ್ ನಟನ ಬಗ್ಗೆ

 


ವಸಿಷ್ಟ ನಿರಂಜನ್ ಸಿಂಹ. ಅಕ್ಟೋಬರ್ 19, 1988ರಲ್ಲಿ ಹಾಸನ ಜಿಲ್ಲೆಯಲ್ಲಿ ಜನಿಸಿದರು.  ಭಾರತೀಯ ನಟ ಹಾಗೂ ಹಿನ್ನೆಲೆ ಗಾಯಕನಾಗಿರುವ ವಸಿಷ್ಠ ಸಿಂಹ ಖಳನಾಯಕನ ರೋಲ್ ನಲ್ಲಿ ತುಂಬಾನೆ ಫೇಮಸ್. ವಸಿಷ್ಠ ಮೈಸೂರಿನ ಶಾರದ ವಿಲಾಸ ಶಾಲೆ ಮತ್ತು ಸದ್ವಿದ್ಯಾ ಶಾಲೆಯಲ್ಲಿ ಓದಿದ್ದಾರೆ. ಪಿಯುಸಿಯನ್ನು ಶ್ರೀ ಸಾಯಿ ಸತ್ಯನಾರಾಯಣ ಪಿಯು ಕಾಲೇಜು ಬಾಣಸವಾಡಿಯಲ್ಲಿ ಮುಗಿಸಿದರೆ, ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ಸಂಗೀತ ದಂತಕಥೆ ಹಂಸಲೇಖ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದರಿಂದ ಅವರು ಬೆಂಗಳೂರಿಗೆ ತಮ್ಮ ನೆಲೆಯನ್ನು ಬದಲಿಸಬೇಕಾಗಿ ಬಂತು.



2011 ರಲ್ಲಿ, ವಸಿಷ್ಟ ಅವರು ಸಾಫ್ಟ್‌ವೇರ್ ಇಂಜಿನಿಯರ್ ಕೆಲಸವನ್ನು ತೊರೆದು ನಟನಾ ಜೀವನಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ನಿರ್ದರಿಸಿದರು. ಆರ್ಯಸ್ ಲವ್ (2013) ನೊಂದಿಗೆ ಸಿನಿ ಜೀವನ ಆರಂಭಿಸಿದ ಅವರು, ಬಿಡುಗಡೆಯಾದ  ಹುಬ್ಬಳ್ಳಿ ಹುಡಗರು ಎಂಬ ಬಿಡುಗಡೆಯಾಗದ ಚಲನಚಿತ್ರದಲ್ಲಿ ಕೆಲಸ ಮಾಡಿದರು. ತಮಿಳಿನ ಸುಂದರಪಾಂಡಿಯನ್ (2012) ಚಿತ್ರದ ರೀಮೇಕ್ ಆದ ರಾಜಾ ಹುಲಿ (2013) ನಲ್ಲಿ ಮುಖ್ಯ ಪಾತ್ರದ ಮೂಲಕ ಫೇಮಸ್ ಆದರು. . ನಂತರ ಅವರು ರುದ್ರ ತಾಂಡವ (2014), ತಮಿಳು ಚಲನಚಿತ್ರ ಪಾಂಡಿಯ ನಾಡು (2013) ನ ರಿಮೇಕ್‌ನಲ್ಲಿ ಕಾಣಿಸಿಕೊಂಡರು.

ವಸಿಷ್ಟ ನಂತರ JKS ನ ದ್ವಿಭಾಷಾ ಚಿತ್ರ ಅಲೋನ್ ನಲ್ಲಿ ನಿಕೇಶಾ ಪಟೇಲ್ ಜೊತೆಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಚಿತ್ರವು ಮಿಶ್ರ ವಿಮರ್ಶೆಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು ಮತ್ತು ವಸಿಷ್ಟ ಸಿಂಹ ಎಂಬ ನಟ ತಮಿಳು ಚಿತ್ರೋಧ್ಯಮಕ್ಕೆ ಪರಿಚಿತರಾಗಲು ಯಶಸ್ವಿಯಾಯಿತು. 2021 ರಲ್ಲಿ ನಾರಪ್ಪ ಚಿತ್ರದ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿದರು. ಆದರೆ K.G.F ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ನಂತರ ವಸಿಷ್ಟ ಅವರ ಖ್ಯಾತಿ ಮತ್ತು ಅಭಿಮಾನಿಗಳ ಬಳಗವು  ಹೆಚ್ಚಾಯಿತು,

ಟಗರು ಸೇರಿದಂತೆ ವಸಿಷ್ಠ ಸಿಂಹ ಅಭಿನಯದ ಹಲವು ಚಿತ್ರಗಳು ಜನಮನ್ನಣೆ ಗಳಿಸಿವೆ. ವಸಿಷ್ಠ ಸಿಂಹ ಕನ್ನಡ ನಟಿ ಹರಿಪ್ರಿಯ ಅವರನ್ನು ವಿವಾಹವಾಗಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?