ಅಖಾಡಕ್ಕಿಳಿದ ಕಿಚ್ಚನ ಹೊಸ ರೂಲ್ಸ್ ..!

ನಟ ಸುದೀಪ್ ತಮ್ಮದೇ ಮ್ಯಾನರಿಸಂ ನಿಂದ ಗಮನ ಸೆಳೆಯುವ ನಟ. ಅವರದ್ದು ವಿಭಿನ್ನ ಸ್ಟೈಲ್.  ಸಿನಿಮಾ ಮಾತ್ರವಲ್ಲೆದೆ ಕುಕ್ಕಿಂಗ್, ಕ್ರಿಕೆಟ್ , ಮ್ಯೂಸಿಗ್ ಅವರ ಇಂಟರೆಸ್ಟಿಂಗ್ ಸಬ್ಜೆಕ್ಟ್. ತಮಗೆ ಇಷ್ಟವಾದಾಗ ಅವರು ಅಡುಗೆ ಮಾಡ್ತಾರೆ. ಸಂಗೀತ ಹಾಡ್ತಾರೆ ಮತ್ತು ಇಡೀ ದಕ್ಷಿಣ ಭಾರತ ಚಿತ್ರರಂಗವನ್ನೇ ಒಂದುಗೂಡಿಸುವ ಕೆಸಿಸಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಿ ಗಮನ ಸೆಳೆಯುತ್ತಾರೆ. 



ಇದೀಗ ಮತ್ತೆ ಸುದೀಪ್ ಅವರ ಕೆಸಿಸಿ ಕ್ರಿಕೆಟ್ ಟೂರ್ನಿ ಸದ್ದು ಮಾಡುತ್ತಿದೆ. ಈ ಬಾರಿ ಒಂದಷ್ಟು ಬದಲಾವಣೆಗಳೊಂದಿಗೆ ಈ ಬಾರಿಯ ಟೂರ್ನಿ ಸದ್ದು ಮಾಡುತ್ತಿದೆ. ಸುದೀಪ್ ಹೇಳಿದಂತೆ ಟೂರ್ನಿಯಲ್ಲಿ ಆಗಿರುವ ಬದಲಾವಣೆಗಳೇನು ಅನ್ನೋದನ್ನು ನೋಡೋಣ,



  • ಈ ಬಾರಿ ಕೇವಲ ಸಿನಿಮಾ ನಟರು ಮಾತ್ರವಲ್ಲ, ಕಿರಿ ತೆರೆಯ  ಕಲಾವಿದರು, ಕೆಲವು ಮಾಧ್ಯಮಗಳ ಪ್ರತಿನಿಧಿಗಳು ಕೂಡ ಭಾಗಿಯಾಗಲಿದ್ದಾರೆ. 
  • ಕಳೆದ ಬಾರಿ ಎರಡು ದಿನಗಳ ಕಾಲ ನಡೆಯುತ್ತಿದ್ದ ಟೂರ್ನಿ ಈ ಬಾರಿ ಮೂರು ದಿನಗಳ ಕಾಲ ನಡೆಯಲಿದೆ.
  • ಕಳೆದ ಬಾರಿ  ಇರುವ ಆರು ತಂಡಗಳಿಗೆ ತಲಾ ಎರಡು ಅಥವ ಮೂರು ಪಂದ್ಯಗಳಷ್ಟೇ ಆಡಲು ಸಿಗುತ್ತಿತ್ತು. ಆದರೆ ಈ ಬಾರಿ ಪ್ರತಿತಂಡಕ್ಕೆ ಆರು ಪಂದ್ಯಗಳು ಆಡಲು ಸಿಗಲಿದೆ. 
  • ರೌಂಡ್ ರಾಬಿನ್ ವಿಧಾನದಲ್ಲಿ ಪಂದ್ಯ ನಡೆಯಲಿದೆ.
  • ವಿದೇಶಿ ಆಟಗಾರರು ಈ ಬಾರಿಯೂ ತಂಡದಲ್ಲಿ ಇರಲಿದ್ದಾರೆ. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?