ಅದ್ದೂರಿ ರಿಸೆಪ್ಷನ್ ನಲ್ಲಿ ವರುಣ್ ತೇಜ್-ಲಾವಣ್ಯ ತ್ರಿಪಾತಿ ಉಡುಪು ನೋಡಿ ಅಭಿಮಾನಿಗಳು ಫಿದಾ : ಬೆಲೆ ಕೇಳಿ ಶಾಕ್ ಆದ ಜನ

 ನವೆಂಬರ್ 1, 2023ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ತಾರಾ ಜೋಡಿಗಳಾದ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಹೈದ್ರಾಬಾದ್ ನ ಎನ್ ಕನ್ವೆಷನಲ್ ಹಾಲ್ ನಲ್ಲಿ ನಡೆದ ಗ್ರಾಂಡ್ ರಿಸೆಪ್ಷನ್ ಹಲವು ಕಾರಣಗಳಿಂದ ಗಮನ ಸೆಳೆಯಿತು. ಇದೊಂದು ತಾರೆಗಳ ಸಮಾಗಮದ ಕಾರ್ಯಕ್ರಮವಾಗಿ ಕಂಗೊಳಿಸಿದ್ದು ಸುಳ್ಳಲ್ಲಾ. ತಾರಾ ದಂಪತಿಗಳನ್ನ ಹಾರೈಸಲು ಸ್ಪೋರ್ಟ್ಸ್ ತಾರೆಯರು, ಸಿನಿರಂಗದ ತಾರೆಯರು ಆಗಮಿಸಿದ್ದರು. ಚಿನ್ನದ ಬಣ್ಣದ ಸೀರೆಯನ್ನು ಧರಿಸಿದ್ದ ಲಾವಣ್ಯ ಭಾರತೀಯ ನಾರಿಯಂತೆ ಕಂಗೊಳಿಸಿದ್ದರೆ, ಕಪ್ಪು ಬಣ್ಣದ ಪ್ಯಾಂಟ್ ಮತ್ತು ಗೋಲ್ಡನ್ ಬ್ಲೇಜರ್ ನಲ್ಲಿ  ವರುಣ್ ಸೃಷ್ಟಿ ತಾಗುವಂತೆ ರೆಡಿಯಾಗಿದ್ದರು.  



ನಾಗಚೈತನ್ಯ, ಆದಿವಿ ಶೇಷ್, ಸಂದೀಪ್ ಕಿಶನ್, ನಾಗ ಬಾಬು ಕೊನಿಡೇಲ, ಪದ್ಮಜಾ ಕೊನಿಡೇಲ, ಅಲ್ಲೂ ಸಿರೀಶ್ ಮತ್ತು ಭಾರತೀಯ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಸೇರಿದಂತೆ ಚಿತ್ರರಂಗದ ಗಣ್ಯರು ಹಾಜರಿದ್ದರು. ಇನ್ನೂ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಚಾರ ಎನಪ್ಪಾ ಅಂದ್ರೆ, ಮದುವೆಗೆ ಲಾವಣ್ಯ ಧರಿಸಿದ ಸೀರೆಯ ಬೆಲೆ. ಮದುವೆಗೆಂದು ಲಾವಣ್ಯ ಧರಿಸಿದ್ದ ಮದುವೆಯ ಸೀರೆಯನ್ನು ಸೆಲೆಬ್ರಿಟಿ ಡಿಸೈನರ್ ಮನೀಷ್ ಮಲ್ಹೋತ್ರಾ ಡಿಸೈನ್ ಮಾಡಿದ್ದು, ಇದರ ಬೆಲೆ 10 ಲಕ್ಷವಂತೆ. ರಿಸೆಪ್ಶನ್ ಸಾರಿ ಬೆಲೆ 2 ಲಕ್ಷ 75 ಸಾವಿರ ಇರಬಹುದೆಂದು ಅಂದಾಜಿಸಲಾಗಿದ್ದು, ಇದನ್ನೂ ಕೂಡ ಮನೀಷ್ ಮಲ್ಹೋತ್ರಾ ಡಿಸೈನ್ ಮಾಡಿದ್ದಾರೆ. 

ಈ ರಿಸೆಪ್ಶನ್ ಸಂಭ್ರಮವನ್ನು ಈ ವಿಡಿಯೋದಲ್ಲಿ ನೋಡಿ,




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?