ಸೈಫ್ ಅಲಿಖಾನ್ ನನ್ನು ಮದುವೆಯಾಗಿದ್ದು ಯಾಕೆ ಅಂತ ತಿಳಿಸಿದ್ರು ಕರೀನಾ ಕಾಪೂರ್

 ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಸತಿಪತಿಗಳಾಗಿ ದಶಕಗಳೇ ಕಳೆದಿದೆ. ಮೊದಲಿಗೆ ಅಮೃತಾ ಸಿಂಗ್ ಅವರನ್ನು ವರಿಸಿದ್ದ ಸೈಫ್ ಬಳಿಕ ಅವರಿಂದ ಬೇರ್ಪಟ್ಟು, ಕರೀನಾ ಅವರನ್ನು ವಿವಾಹವಾಗಿದ್ದರು. ಮದುವೆಯಾಗುವುದಕ್ಕೂ ಮುನ್ನ 5 ವರ್ಷಗಳ ಕಾಲ ಕರೀನಾ ಹಾಗೂ ಸೈಫ್ ಜೊತೆಗಿದ್ದರು. ಇದೀಗ ಸೈಫ್ ಅಲಿಖಾನ್ ರನ್ನು ಯಾಕೆ ಮದುವೆಯಾದೆ ಎಂಬ ಕುರಿತಂತೆ ಕರೀನಾ ದಿ ಡರ್ಟಿ ಮ್ಯಾಗಜಿನ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 



ಮಗುವನ್ನು ಹೊಂದುವ ಸಲುವಾಗಿ ತಾನು ಮದುವೆ ಮಾಡಿಕೊಂಡೆ ಎಂಬವಿಚಾರದ ಕುರಿತಂತೆ ಪ್ರತಿಕ್ರಿಯಿಸಿರುವ ಕರೀನಾ, ತೈಮೂರು ಮತ್ತು ಜಹಾಂಗೀರ್ ಹುಟ್ಟುವ ಐದು ವರ್ಷದ ಮೊದಲೇ ನಾವು ಜೊತೆಗೆ ಬದುಕಿದ್ದೆವು. ಆದರೆ ಎಲ್ಲವೂ ಓಕೆ ಅಂದ ಮೇಲೆಯೆ ನಾವು ಮುಂದುವರೆಯಲು ನಿರ್ಧರಿಸಿದೆವು. ಮಕ್ಕಳನ್ನು ಹೊಂದಳು ಬಯಸಿದೆವು ಎಂದು ಅವರು ಹೇಳಿದ್ದಾರೆ. 

ಕರೀನಾ ಮತ್ತು ಸೈಫ್ ಕೆಲವು ವರ್ಷಗಳ ಡೇಟಿಂಗ್ ನಂತರ ಅಕ್ಟೋಬರ್ 2012 ರಲ್ಲಿ ಮುಂಬೈನಲ್ಲಿ ವಿವಾಹವಾದರು. ಅವರು ಮೊದಲು ನಟಿ ಅಮೃತಾ ಸಿಂಗ್ ಅವರನ್ನು ಮದುವೆಯಾಗಿದ್ದರು. 2004 ರಲ್ಲಿ ಬೇರೆಯಾದರು. ಸೈಫ್ ಮತ್ತು ಅಮೃತಾ ಅವರಿಗೆ ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸೈಫ್ ಮತ್ತು ಕರೀನಾ ಅವರಿಗೆ ತೈಮೂರ್ ಅಲಿ ಖಾನ್ (ಜನನ 2016) ಮತ್ತು ಜಹಾಂಗೀರ್ ಅಲಿ ಖಾನ್ (2021 ರಲ್ಲಿ ಜನನ) ಮಕ್ಕಳಿದ್ದಾರೆ.

ಕರೀನಾಳ ಪೇರೆಂಟಿಂಗ್

ಮಕ್ಕಳನ್ನು ನಾವು ಗೌರವಿಸುತ್ತೇವೆ, ಅವರಿಗೆ ಅವಕಾಶ ನೀಡುತ್ತೇವೆ ಮತ್ತು ಅವರನ್ನು ವ್ಯಕ್ತಿಗಳಂತೆ ಪರಿಗಣಿಸುತ್ತೇವೆ. ಅವರು ಅವರದೇ ಆದ ಮಾರ್ಗವನ್ನು ಕಂಡುಕೊಳ್ಳಲು ಅವಕಾಶ ನೀಡುತ್ತೇವೆ. ನನಗೆ ನನ್ನ ಮಕ್ಕಳೊಂದಿಗೆ ಖುಷಿಯಾಗಿರಬೇಕು ಅವರೊಂದಿಗೆ ಬದುಕಬೇಕು ಎಂದಿರುವ ಅವರು ಮೊದಲಿಗೆ ನಮ್ಮ ಮಾನಸಿಕ ಆರೋಗ್ಯ ಚೆನ್ನಾಗಿರಬೇಕು. ಬಳಿಕ ಮಕ್ಕಳೊಂದಿಗೆ ಉತ್ತಮ ಸಮಯವನ್ನು ನೀಡಬೇಕು ಆಗ ಅವರು ಉತ್ತಮರೀತಿಯಲ್ಲೇ ಬೆಳೆಯುತ್ತಾರೆ ಎಂದಿದ್ದಾರೆ. 

ಕರೀನಾ ಅವರ ಇತ್ತೀಚಿನ ಚಿತ್ರಗಳು

ಕರೀನಾ ಅವರು ಚಲನಚಿತ್ರ ನಿರ್ಮಾಪಕ ಸುಜೋಯ್ ಘೋಷ್ ಅವರ ಜಾನೆ ಜಾನ್, ಜಪಾನೀಸ್ ಕಾದಂಬರಿ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್‌ನ ಹಿಂದಿ ವರ್ಷನ್ ನೊಂದಿಗೆ OTT ಪಾದಾರ್ಪಣೆ ಮಾಡಿದರು. ಇದು ಸೆಪ್ಟೆಂಬರ್ 21 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು. ಚಿತ್ರದಲ್ಲಿ ವಿಜಯ್ ವರ್ಮಾ ಮತ್ತು ಜೈದೀಪ್ ಅಹ್ಲಾವತ್ ಕೂಡ ಇದ್ದಾರೆ. ಅವರು ನಿರ್ದೇಶಕ ಹನ್ಸಲ್ ಮೆಹ್ತಾ ಅವರ ದಿ ಬಕಿಂಗ್ಹ್ಯಾಮ್ ಮರ್ಡರ್ಸ್ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?