ಗರಡಿ ವಿಮರ್ಶೆ : ಕುಸ್ತಿ ಅಖಾಡಕ್ಕಿಳಿದ ದರ್ಶನ್, ಯಶಸ್ ಸೂರ್ಯ : ಜನ ಏನಂತಾರೆ?

  


ಯೋಗರಾಜ್ ಭಟ್ರ ಸಿನಿಮಾ ಅಂದ್ರೆ ಅಲ್ಲಿ ಒಂದು ಥ್ರಿಲ್ ಅಂಡ್ ಮ್ಯಾಜಿಕ್ ಇದ್ದೇ ಇರುತ್ತೆ. ಬಹುನಿರೀಕ್ಷೆಯ ಗರಡಿ ಸಿನಿಮಾ ರಿಲೀಸ್ ಆಗಿದ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಸೆಯಂತೆ ಯಶಸ್ಸು ಸೂರ್ಯ ಈ ಸಿನಿಮಾದ ಮೂಲಕ ಯಶಸ್ವಿ ನಾಯಕನಾಗೋ ಎಲ್ಲ ಲಕ್ಷಣ ಕಂಡುಬರುತ್ತಿದೆ.  ಚಿತ್ರ ಹಾಡುಗಳು. ಡೈಲಾಗ್ , ಸನ್ನಿವೇಶ ಹಾಸ್ಯ ಎಲ್ಲವೂ ಕ್ರಮಬದ್ದವಾಗಿದ್ದು, ಪ್ರೇಕ್ಷಕನಿಗೆ ರುಚಿಸಿದಂತೆ ಕಾಣುತ್ತದೆ. 








ಮೊದಲ ಬಾರಿಗೆ ಮಾಸ್ ಸಿನಿಮಾಗೆ ಕೈ ಹಾಕಿರುವ ಭಟ್ರ ಗರಡಿ ಪಕ್ಕಾ ದೇಸಿ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ. ಈ  ಸಿನಿಮಾ ಪೂರ್ತಿಯಾಗಿ ಗರಡಿಯ ಸುತ್ತಮುತ್ತವೇ ನಡೆಯುತ್ತಿರುತ್ತದೆ. ಯಶಸ್ ಸೂರ್ಯ ತುಂಬಾ ದಿನಗಳ ಬಳಿಕ ನಾಯಕನಾಗಿ ರಿ ಎಂಟ್ರಿಯಾದರೆ, ಇವರಿಗೆ ಸಾಥ್ ನೀಡಿರುವುದು ಸೋನಾಲ್ ಮಾಂಟೇರೋ. ಭಟ್ಟರ ಸಿನಿಮಾದಲ್ಲಿ ಈಕೆ ಎರಡನೇ ಬಾರಿಗೆ ನಾಯಕಿಯಾಗಿದ್ದಾರೆ.  ಈ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಅವರ ಎಂಟ್ರಿಯಂತೂ ಸಿಕ್ಕಾಪಟ್ಟೆ ಕಿಕ್ ಕೊಡುವಂತಿದೆ. 

ಕನ್ನಡದ ಕೌರವ ಎಂದೇ ಖ್ಯಾತಿಯಾಗಿರುವ ಬಿ ಸಿ ಪಾಟೀಲ್ ಪೈಲ್ವಾನ್ ಗುರುವಾಗಿ ನಟಿಸಿದ್ದಾರೆ.


ಗರಡಿ' ಯ ಸುತ್ತ ಒಂದು ರೌಂಡ್ ಹೋಗಾದಾದ್ರೆ, ಈ ಚಿತ್ರ ಆರಂಭವಾಗುವುದು ರವಿಶಂಕರ್ ಅವರ ಮನೆತನದಿಂದ. ಈ ಮನೆತನ ಇದುವರೆಗೂ ಕುಸ್ತಿಯಲ್ಲಿ ಸೋಲು ಕಂಡರಿಯದ ಮನೆ. ಈ ಊರಲ್ಲಿ ಬಿಸಿ ಪಾಟೀಲ್ ಪೈಲ್ವಾನ್‌ಗಳ ಗುರು. ಅದೊಂದು ದಿನ ರವಿಶಂಕರ್ ಸಹೋದರನನ್ನು ಪೈಲ್ವಾನ್ ಒಬ್ಬ ಹೊಡೆದು ಸಾಯಿಸಿ ಬಿಡ್ತಾನೆ. ಅದೇ ಕೋಪಕ್ಕೆ ರವಿಶಂಕರ್ ಪೈಲ್ವಾನ್ ನನ್ನು ಸಾಯಿಸುತ್ತಾನೆ. ಅವನ ಮಕ್ಕಳೆ  ದರ್ಶನ್ ಮತ್ತು ಯಶಸ್ ಸೂರ್ಯ.. ಅಲ್ಲಿಂದ ಕಥೆ ಶುರುವ. ಆದರೆ ಇದು ತಂದೆಯನ್ನು ಸಾಯಿಸಿದ್ದಕ್ಕಾಗಿ ನಡೆಯುವ ರಿವೇಂಜ್ ಅಂತ ನೀವು ಅಂದುಕೊಂಡ್ರೆ ತಪ್ಪು. ಇದು ದ್ವೇಷದ ಯುದ್ಧವಲ್ಲ. ಹಾಗಾದರೆ ಮತ್ಯಾಕೆ ಅನ್ನೋದು ನೋಡಬೇಕು ಅಂದ್ರೆ ನೀವು ಸಿನಿಮಾ ನೋಡಬೇಕು. 

ಸಿನಿಮಾ ನಿರೀಕ್ಷೆಯ ಮಟ್ಟದಲ್ಲಿಲ್ಲದಿದ್ದರೂ ಎಲ್ಲೂ ಬೋರ್ ಆಗಲ್ಲ. ಈ ಚಿತ್ರದ ಪ್ರಮುಖ ಹೈಲೈಟ್ ಅಂದ್ರೆ, ಮಾಸ್ ಸಿನಿಮಾ ಮಾಡಿದ್ರು, ದೇಸಿ ಶೈಲಿಯನ್ನೂ ಭಟ್ರು ಬಿಟ್ಟುಕೊಟ್ಟಿಲ್ಲ. ಪ್ರೀತಿ ಪ್ರೇಮದ ಕತೆಯಿದೆ.ನೋವಿದೆ, ನಲಿವಿದೆ. ಆಕ್ಷನ್ ಇದೆ. ಸೇಡಿದೆ, ಕುಸ್ತಿ ಅಖಾಡದಲ್ಲಿನ ಹೋರಾಟ ವ್ಹಾ ಎನ್ನುವಂತಿದೆ.  ಯಶಸ್ ಸೂರ್ಯ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ನಾಯಕಿಯದ್ದು ವಿಶೇಷ ಅನ್ನುವ ಪಾತ್ರವಲ್ಲ. ಖಳನಾಯಕ ರವಿಶಂಕರ್ ಅಂದ್ರೆ ಕೇಳಬೇಕು. ಎಂದಿನಂತೆ ಅದ್ಬುತವಾಗಿ ಅಭಿನಯಿಸಿದ್ದಾರೆ.  ಪೈಲ್ವಾನ್ ಆಗಿ ಬಿ ಸಿ ಪಾಟೀಲ್ ಇಷ್ಟವಾಗುತ್ತಾರೆ .  ದರ್ಶನ್ ಎಂಟ್ರಿಯಾಗುತ್ತಿದ್ದಂತೆ ಶಿಳ್ಳೆಗಳ ಮಹಾಪೂರವೇ ಹರಿದು ಬರುತ್ತೆ. ಹರಿಕೃಷ್ಣ ಮ್ಯೂಸಿಕ್ ಚೆನ್ನಾಗಿದೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?