ಸೌತ್ ನ ಸೂಪರ್ ಸ್ಟಾರ್ ಗೆ ವಿಲನ್ ಆಗುತ್ತಿದ್ದಾರೆ ಕನ್ನಡದ ನಟ..!

 ರಾಜ್ ಬೀ ಶೆಟ್ಟಿ. ಕನ್ನಡದ ಹೆಮ್ಮೆಯ ನಟ. ನಟನೆಗೆ ರೂಪ ಇದ್ರೆ ಸಾಲೋಲ್ಲ. ನಟನಾ ಕಲೆ ಗೊತ್ತಿರಬೇಕು. ಎಂಬುದನ್ನು ಸಾಬೀತು ಪಡಿಸಿದ ನಟ. ಈಗಾಗಲೇ ಕನ್ನಡದಲ್ಲಿ ಫೇಮಸ್ ಆಗಿರುವ ರಾಜ್ ಬಿ ಶೆಟ್ಟಿ ಮಲೆಯಾಲಂಗೂ ಹಾರಿದ್ದಾರೆ. ಇದೀಗ ರಾಜ್ ಬಿ ಶೆಟ್ಟಿಗೆ ಅತ್ಯುತ್ತಮ ಅದೃಷ್ಟವೊಂದು ಒಲಿದು ಬಂದಿದ್ದು. ಮಲೆಯಾಲಂ ಮೆಗಾಸ್ಟಾರ್ ಮಮ್ಮುಟ್ಟಿಗೆ ವಿಲನ್ ಆಗಿ ನಟಿಸಲು ರಾಜ್ ರೆಡಿಯಾಗಿದ್ದಾರೆ.

ಮಾಲಿವುಡ್ ಮೆಗಾಸ್ಟಾರ್ ಮಮ್ಮುಟ್ಟಿ ಇತ್ತೀಚೆಗೆ ಕಣ್ಣೂರು ಸ್ಕ್ವಾಡ್‌ನಲ್ಲಿ ಕಾಣಿಸಿಕೊಂಡಿದ್ದು ಚಿತ್ರ ಈಗಾಗಲೇ , OTT ಯನ್ನು ಪ್ರವೇಶಿಸಿದೆ. ಈ ಮದ್ಯೆ ಮಮ್ಮುಟ್ಟಿ ಅವರ ಮುಂಬರುವ ಚಿತ್ರ, ಕಾದಲ್: ದಿ ಕೋರ್, ರಿಲಸ್ ಆಗಿದೆ.



ಮಮ್ಮುಟ್ಟಿ ಪ್ರಸ್ತುತ ವೈಶಾಖ್ ನಿರ್ದೇಶನದ ಮತ್ತೊಂದು ಪ್ರಾಜೆಕ್ಟ್  ಆಕ್ಷನ್ ಕಾಮಿಡಿ ಚಿತ್ರ ಟರ್ಬೋ ದ ಚಿತ್ರೀಕರಣದಲ್ಲಿ ತಲ್ಲೀನರಾಗಿದ್ದಾರೆ. ಗರುಡ ಗಮನ ವೃಷಭ ವಾಹನ ಮತ್ತು ಟೋಬಿ ಚಿತ್ರದಲ್ಲಿನ ಅದ್ಭುತ ಅಭಿನಯಕ್ಕಾಗಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಕನ್ನಡ ನಟ ರಾಜ್ ಬಿ ಶೆಟ್ಟಿ ಅವರು ಈ ಚಿತ್ರದಲ್ಲಿ ಮಮ್ಮುಟ್ಟಿಗೆ ಎದುರಾಗಿ ವಿಲನ್ ರೋಲ್ ನಲ್ಲಿ ನಟಿಸಲಿದ್ದಾರಂತೆ.  .


ಇದು ಮಲಯಾಳಂ ಚಿತ್ರರಂಗದಲ್ಲಿ ರಾಜ್ ಬಿ ಶೆಟ್ಟಿಯವರ ಎರಡನೇ ಚಿತ್ರ. ಅಲ್ಲದೆ ಮೆಗಾಸ್ಟಾರ್ ಜೊತೆಗೆ ತೆರೆ ಹಂಚಿಕೊಳ್ಳಲು ಇರುವ ಎರಡನೇ ಅವಕಾಶವೂ ಹೌದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?