ರಚಿತಾರಾಮ್ ನಿಜಕ್ಕೂ ಲಕ್ಕಿ ಹಿರೋಯಿನ್ ..! ಆಕೆಯ ಸೋಲೆಷ್ಟು ಗೆಲುವೆಷ್ಟು..?

 ರಚಿತಾ ರಾಮ್... ಬೆಂಗಳೂರಿನ ಈ ಬೆಡಗಿ ಬಬ್ಲಿ ಬಬ್ಲಿಯಾಗಿದ್ದುಕೊಂಡೆ ಕನ್ನಡದ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿ ಎನಿಸಿಕೊಂಡವರು. 1991ರಲ್ಲಿ ಜನಿಸಿದ ಇವರ ಹೆಸರು ರಚಿತಾ ರಾಮ್. ಕಿರುತೆರೆ ಧಾರವಾಹಿಗಳ ಮೂಲಕ ಗಮನ ಸೆಳೆದ ರಚಿತಾ ರಾಮ್,  2013ರ ಬುಲ್ ಬುಲ್ ಸಿನಿಮಾದ ಮೂಲಕ ಹಿರಿತೆರೆಗೆ ಎಂಟ್ರಿಯಾಗುತ್ತಾರೆ. ಮೊದಲ ಸಿನಿಮಾವೇ ಸೂಪರ್ ಹಿಟ್ ಆಗಿದ್ದೇ ಆಗಿದ್ದು, ರಚಿತಾಗೆ ಸ್ಯಾಂಡಲ್ ವುಡ್ ನಲ್ಲಿ ಎಲ್ಲಿಲ್ಲದ ಬೇಡಿಕೆ ಬಂತು. 



2015ರ ರನ್ನ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಇದು ಅವರ ಮೊದಲ ಫಿಲ್ಮ್ ಫೇರ್ ಪ್ರಶಸ್ತಿಯೂ ಹೌದು. 2016ರ ಚಕ್ರವ್ಯೂಹ, 2017ರ ಪುಷ್ಪಕವಿಮಾನ,   ಭರ್ಜರಿ (2017), ನಟಸಾರ್ವಭೌಮ (2019), ಲವ್ ಯೂ ರಚ್ಚು (2021), ಮಾನ್ಸೂನ್ ರಾಗ (2022) ಮತ್ತು ಕ್ರಾಂತಿ (2023) ಮುಂತಾದ ಚಿತ್ರಗಳು ಅವರಿಗೆ ಒಳ್ಳೆಯ ನೇಮ್ ಆಂಡ್ ಫೇಮ್ ತಂದುಕೊಟ್ಟಿವೆ. ರನ್ನ, ಅಯೋಗ್ಯ (2018) ಮತ್ತು ಆಯುಷ್ಮಾನ್ ಭವ (2019) ಎಂಬ ಯಶಸ್ವಿ ಚಿತ್ರಗಳಿಗಾಗಿ ರಚಿತಾ ಅತ್ಯುತ್ತಮ ನಟನೆಗಾಗಿ ಮೂರು ಸೈಮಾ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.



ರಚಿತಾ ರಾಮ್ ಬಾಲ್ಯ

ರಚಿತಾ ರಾಮ್ ಅವರ ತಂದೆಯ ಹೆಸರು ರಾಮ್. ಇವರು ಭರತನಾಣ್ಯ ಕಲಾವಿದರಾಗಿದ್ದು, ಇದುವರೆಗೂ ಹಲವು ಸಾರ್ವಜನಿಕ ಪ್ರದರ್ಶನಗಳನ್ನು ನೀಡಿದ್ದಾರೆ. ಹೀಗಾಗಿ ರಚಿತಾ ರಾಮ್ ಕೂಡ ಕ್ಲಾಸಿಕಲ್ ಭರತನಾಟ್ಯ ಕಲಾವಿದೆಯಾಗಿದ್ದಾರೆ. ಇವರಿಗೆ ನಿತ್ಯಾರಾಮ್ ಎಂಬ ಸಹೋದರಿಯೂ ಇದ್ದಾಳೆ.



ಬುಲ್ ಬುಲ್ ಚಿತ್ರದ ಮೂಲಕ ದರ್ಶನ್ ಗೆ ನಾಯಕಿಯಾಗಿ ನಟಿಸಿದ ನಂತರ ಆಕೆಯ ಲಕ್ ಬದಲಾಗಿ ಹೋಯ್ತು. ಚಿತ್ರದಲ್ಲಿನ ರಚಿತಾ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಚಿತ್ರ ಸೂಪರ್ ಹಿಟ್ ಆಗಿದ್ದು ರಚಿತಾಗೆ ಇನ್ನೊಂದು ಪ್ಲಸ್

2014 ರಲ್ಲಿ ದಿಲ್ ರಂಗೀಲಾ ಬಿಡುಗಡೆಯಾಯ್ತು. ಇದರಲ್ಲಿ ಅವರು ಗಣೇಶ್ ಗೆ ಜೋಡಿಯಾಗಿ ನಟಿಸಿದರು. ಅಂಬರೀಶ್‌ನಲ್ಲಿ ಮತ್ತೊಮ್ಮೆ ದರ್ಶನ್‌ಗೆ ಜೋಡಿಯಾಗಿ ಕಾಣಿಸಿಕೊಂಡರು. ಮತ್ತೆ ರನ್ನ ಚಿತ್ರದಲ್ಲಿ ಸುದೀಪ್ ಗೆ ನಾಯಕಿಯಾಗಿ ರುಕ್ಮಿಣಿ ಪಾತ್ರದಲ್ಲಿ ಕಾಣಿಸಿಕೊಂಡ ಅವರು ಪ್ರೇಕ್ಷಕರಿಗೆ ಇಷ್ಟವಾದರು. ರನ್ನದಲ್ಲಿ, ಅವರು ಸುದೀಪ್ ಅವರ ಪ್ರೀತಿಯ  ರುಕ್ಮಿಣಿ ಪಾತ್ರವನ್ನು ನಿರ್ವಹಿಸಿದರು, ಶ್ರೀಮುರಳಿಯೊಂದಿಗಿನ ರಥಾವರ ಮತ್ತೊಂದು ಹಿಟ್ ನೀಡಿತು.


ರಚಿತಾ 2016 ರ ಕನ್ನಡ ಚಲನಚಿತ್ರ ಚಕ್ರವ್ಯೂಹದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ್ದರು. ದರ್ಶನ್ ಅಭಿನಯದ ಜಗ್ಗು ದಾದಾ ಚಿತ್ರದಲ್ಲಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಕುಂದ ಮುರಾರಿ ಚಿತ್ರದಲ್ಲಿ ಸುದೀಪ್ ಎದುರು ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ. ರಚಿತಾ ಅವರು 2017 ರ ಪುಪ್ಫಕವಿಮಾನದಲ್ಲಿ ರಮೇಶ್ ಅರವಿಂದ್ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಧ್ರುವ ಸರ್ಜಾ ಎದುರು ಚೇತನ್ ಕುಮಾರ್ ಅಭಿನಯದ ಭರ್ಜರಿ ಚಿತ್ರದಲ್ಲೂ ನಟಿಸಿದ್ದಾರೆ. 


2018 ರಲ್ಲಿ ಅವರ ಮೊದಲ ಬಿಡುಗಡೆ ಪ್ರೀತಂ ಗುಬ್ಬಿ ಅವರ ಜಾನಿ ಜಾನಿ ಯೆಸ್ ಪಪ್ಪಾ ದುನಿಯಾ ವಿಜಯ್ ಅವರಿಗೆ ನಾಯಕಿಯಾಗಿ ನಟಿಸಿದ್ದು, ಇದಕ್ಕೂ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಳಿಕ ಮಹೇಶ್ ಕುಮಾರ್ ನಿರ್ದೇಶನದ ಸತೀಶ್ ನೀನಾಸಂ ಅವರ ಅಯೋಗ್ಯ ಬಳಿಕ  ದಿ ವಿಲನ್ ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ.


2019 ರಲ್ಲಿ ಅವರ ಚಿತ್ರಗಳೂ ಬೆರಳೆಣಿಕೆಯಷ್ಟು ಎನ್ನಬಹುದೇನೋ.  ನಿಖಿಲ್ ಕುಮಾರ್ ಜೊತೆಗಿನ ಸೀತಾರಾಮ ಕಲ್ಯಾಣ ಆ ವರ್ಷದ ಮೊದಲ ಬಿಡುಗಡೆ. ಇದು ಬ್ಲಾಕ್ಬಸ್ಟರ್ ಹಿಟ್ ಆಗಿ ಹೊರಹೊಮ್ಮಿತು. ಅವರ ಮುಂದಿನ ಬಿಡುಗಡೆಯು ಪವನ್ ಒಡೆಯರ್ ನಿರ್ದೇಶನದ ಪುನೀತ್ ರಾಜ್‌ಕುಮಾರ್ ಅವರ ನಟಸಾರ್ವಭೌಮ, ಚಕ್ರವ್ಯೂಹದ ನಂತರ ಪುನೀತ್ ಜೊತೆಗಿನ ಎರಡನೇ ಸಿನಿಮಾ ಅದು. . ಅಭಿಷೇಕ್ ಗೌಡ ಅಭಿನಯದ ಅಮರ್ ಚಿತ್ರದ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಆರ್. ಚಂದ್ರು ಅವರ ಐ ಲವ್ ಯೂ ಸಿನಿಮಾದಲ್ಲಿ ಸ್ಟಾರ್ ಉಪೇಂದ್ರ ಅವರೊಂದಿಗೆ ನಟಿಸಿದ್ದಾರೆ. ಬಳಿಕ ರವಿವರ್ಮಾ ನಿರ್ದೇಶನದ ಶಿವರಾಜ್‌ಕುಮಾರ್ ಅವರ ರುಸ್ತುಂನಲ್ಲಿ ಕಾಣಿಸಿಕೊಂಡಿದ್ದಾರೆ.  ಅಲ್ಲಿ ಅವರು ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರೊಂದಿಗೆ ಜೋಡಿಯಾಗಿದ್ದರು. ಶ್ರೀಮುರಳಿ ಎದುರು ಭರಾಟೆ ಚಿತ್ರದ ಹಾಡಿನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ನಂತರ ಆಯುಷ್ಮಾನ್ ಭವ ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಎದುರು ನಟಿಸಿದ್ದಾರೆ.


2021 ರಲ್ಲಿ ರಮೇಶ್ ಅರವಿಂದ್ ನಿರ್ದೇಶನದ 100 ನಲ್ಲಿ ರಮೇಶ್ ಅವರ ಸಹೋದರಿ ಪಾತ್ರವನ್ನು ನಿರ್ವಹಿಸಿದರು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸರಾಸರಿ ಗಳಿಕೆಯಾಯಿತು. ಆ ವರ್ಷದಲ್ಲಿ ಅವರ ಮತ್ತೊಂಗು ಸಿನಿಮಾ ಶಂಕರ್ ಅವರ ಲವ್ ಯು ರಚ್ಚು, ಅಲ್ಲಿ ಅವರು ಅಜಯ್ ರಾವ್ ಅವರೊಂದಿಗೆ ಜೋಡಿಯಾದರು, ಅನೇಕ ವಿವಾದಗಳೊಂದಿಗೆ ಚಲನಚಿತ್ರವು ಪ್ರೇಕ್ಷಕರಿಂದ ಕಳಪೆ ಪ್ರತಿಕ್ರಿಯೆಯೊಂದಿಗೆ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು.  2022 ರಲ್ಲಿ ಅವರು ಕಲ್ಯಾಣ್ ದೇವ್ ಅವರೊಂದಿಗೆ ಸೂಪರ್ ಮಚಿ ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದರು ರಚಿತಾ ರಾಮ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?