ವೈದ್ಯೋ ನಾರಾಯಣೋ ಹರಿ..! ಆದರೆ ನಮ್ಮ ಪಾಲಿಗೆ ಮಾತ್ರ... ನಟ ದರ್ಶನ್ ಹಾಗಂದಿದ್ದು ಯಾಕೆ...?
ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ವೈದ್ಯರು ಮನಸ್ಸು ಮಾಡಿದರೆ ಹೋಗುವ ಜೀವವನ್ನು ಉಳಿಸಬಹುದು , ನಿರ್ಲಕ್ಷ್ಯ ವಹಿಸಿದರೆ ಜೀವವೇ ಹೋಗಬಹುದು. ಇತ್ತೀಚಿನ ದಿನಗಳಲ್ಲಿ ವೈದ್ಯರ ನಿರ್ಲಕ್ಷ್ಯದ ಕುರಿತಂತೆ ಸಾಕಷ್ಟು ಸುದ್ದಿಗಳು ಹೊರಬರುತ್ತಲೇ ಇರುತ್ತದೆ. ಇದೀಗ ನಟ ದರ್ಶನ್ ತಮ್ಮ ತಂದೆಯವರ ವಿಚಾರದಲ್ಲಿ ವೈದ್ಯರ ನಿರ್ಲಕ್ಷ್ಯದ ಕುರಿತಂತೆ ಮಾತನಾಡಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ನಮ್ಮ ತಂದೆ ಇಲ್ಲದ ಕಾಯಿಲೆಗೆ ಒಳಗಾಗಿ ನರಳಿ ನರಳಿ ಸಾಯುವಂತಾಯಿತು ಎಂದಿದ್ದಾರೆ.
ತೂಗುದೀಪ ಶ್ರೀನಿವಾಸ್ ಕನ್ನಡ ಚಿತ್ರರಂಗ ಕಂಡ ಅತ್ಯುದ್ಬುತ ಖಳನಟ. ತೆರೆಯ ಮೇಲಿನ ಅವರ ಅಬ್ಬರ ನೋಡಿದ ಜನ ಇಂದಿಗೂ ಮೆಚ್ಚಿ ಕೊಂಡಾಡುತ್ತಾರೆ. ಆದರೆ ಹೃದಯಕ್ಕೆ ಸಂಬಂಧಿತ ಕಾಯಿಲೆಗೆಂದು ಬೆಂಗಳುರಿನ ಆಸ್ಪತ್ರೆಗೆ ಹೋಗಿದ್ದ ಶ್ರೀನಿವಾಸ್ ಅವರಿಗೆ ವೈದ್ಯರು ನಡೆಸಿದ ತಪಾಸಣೆ ಸಂದರ್ಭದಲ್ಲಿ ದೇಹದ ಒಳಗೆ ಡೈ ಹಾಕುತ್ತಾರೆ. ಕ್ಯಾಮೆರಾ ಕಳಿಸಿ ಒಳಗೆ ಏನಾಗಿದೆ ಎಂದು ನೋಡಲು. ಆದರೆ ನುರಿತ ವೈದ್ಯರ ಇಲ್ಲದ ಕಾರಣ ಹಾಕಿದ ಡೈ ಸೀದಾ ಹೋಗಿ ತಂದೆಯ ಕಿಡ್ನಿಯ ಮೇಲೆ ಕುಳಿತು. ಕಿಡ್ನಿ ಮುದುಡಲಾರಂಭಿಸಿತು. ಹೀಗಾಗಿ ತನ್ನ ತಂದೆ ಕಿಡ್ನಿ ವೈಫಲ್ಯಕ್ಕೆ ತುತ್ತಾಗಬೇಕಾಯಿತು ಎಂದು ದರ್ಶನ್ ಹೇಳಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ