ವರುಣ್ -ಲಾವಣ್ಯ ತ್ರೀಪಾಠಿ ನಡುವೆ ಪ್ರೇಮಾಂಕುರವಾಗಿದ್ದೇ ಈ ಘಟನೆಯಿಂದಂತೆ..!

 ದಕ್ಷಿಣ ಭಾರತದ ಜನಪ್ರಿಯ ನಟರಾದ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ  ನವಜೀವನಕ್ಕೆ ಕಾಲಿಟ್ಟಿದ್ದಾರೆ. ನವೆಂಬರ್ 1ರಂದು ಇಟಲಿಯ ಬೊರ್ಗೊ ಸ್ಯಾನ್ ಫೆಲಿಸ್ ರೆಸಾರ್ಟ್ ನಲ್ಲಿ ಇವರಿಬ್ಬರು ಪತಿ-ಪತ್ನಿಯರಾದರು. 



ನಟ ಮತ್ತು ನಿರ್ಮಾಪಕ ನಾಗೇಂದ್ರ ಬಾಬು ಅವರ ಪುತ್ರನಾದ ವರುಣ್ ತೇಜ್  ತೆಲುಗು ಚಿತ್ರರಂಗದ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಿ ಕುಟುಂಬಗಳಲ್ಲಿ ಒಂದಾದ ಅಲ್ಲು-ಕೊನಿಡೆಲಾ ಕುಟುಂಬಕ್ಕೆ ಸೇರಿದವರು.  ವರುಣ್ ಅವರ ಚಿಕ್ಕಪ್ಪಂದಿರಾದ ಮೆಗಾ ಸ್ಟಾರ್ ಚಿರಂಜೀವಿ ಮತ್ತು ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಅವರ ಸೋದರಸಂಬಂಧಿಗಳು , ರಾಮ್ ಚರಣ್ ಮತ್ತು ಅಲ್ಲೂ ಅರ್ಜುನ್ ಮೂರು ದಿನಗಳ ಸುದೀರ್ಘ ಉತ್ಸವದ ಭಾಗವಾಗಿದ್ದರು.

https://youtu.be/Rodftd4ttpg?si=2zioxk1GZOorc808



 ಯಾರೂ ಈ ಲಾವಣ್ಯ ತ್ರಿಪಾಠಿ?

ಉತ್ತರ ಪ್ರದೇಶದ ಫೈಜಾಬಾದ್ ನಲ್ಲಿ ಜನಿಸಿರುವ ಲಾವಣ್ಯ, ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಬೆಳೆದರು. ಅವರ ಶಿಕ್ಷಣವೂ ಅಲ್ಲಿಯೇ ಮುಗಿಸಿದರು. ಪದವಿ ಶಿಕ್ಷಣಕ್ಕಾಗಿ ಮುಂಬೈಗೆ ತೆರಳಿದ ಲಾವಣ್ಯ ಬಳಿಕ ಮಾಡೆಲಿಂಗ್ ಆರಂಭಿಸಿದ್ದರು. ಸಿನಿಮಾ ತಾರೆಯಾಗಬೇಕು ಎಂದು ಕನಸು ಕಾಣುತ್ತಿದ್ದ ಲಾವಣ್ಯ 2006ರಲ್ಲಿ ಮಿಸ್ ಉತ್ತರಖಂಡ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಬಳಿಕ ಅವರ ನಟನಾ ವೃತ್ತಿ ಆರಂಭವಾಗಿದ್ದು, ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಹಾರರ್ ಥ್ರಿಲ್ಲರ್ ಧಾರವಾಹಿ ಶ್.... ಕೋಹಿ ಹೈ ಮೂಲಕ. ಇದರಲ್ಲಿ ಅವರು ಮೂರು ವರ್ಷಗಳ ಕಾಲ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡರು. 2009 ರಿಂದ 2010 ರವರೆಗೆ, ಸೋನಿ ಟಿವಿಯಲ್ಲಿ ಏಕ್ತಾ ಕಪೂರ್ ಅವರ ದೈನಂದಿನ ಸೋಪ್ ಪ್ಯಾರ್ ಕಾ ಬಂಧನ್‌ನಲ್ಲಿ ಲಾವಣ್ಯ ಪ್ರಮುಖ ನಾಯಕಿಗಳಲ್ಲಿ ಒಬ್ಬರಾಗಿದ್ದರು. ಸಿಐಡಿ ಧಾರಾವಾಹಿಯಲ್ಲೂ ನಟಿಸಿದ್ದರು. 

2012ರಲ್ಲಿ ಲಾವಣ್ಯ ತೆಲುಗು ಚಿತ್ರ ಆಂಡಾಲಾ ರಾಕ್ಷಸಿಯ ಮೂಲಕ ಹಿರಿತೆರೆ ಪ್ರವೇಶಿಸಿದರು. ಲಚ್ಚಿಮ್ದೇವಿಕಿ ಓ ಲೆಕ್ಕುಂಡಿ, ಯುದ್ಧಂ ಶರಣಂ, ರಾಧಾ, ಮತ್ತು ಹ್ಯಾಪಿ ಬರ್ತ್‌ಡೇ ಮುಂತಾದ ಬಹು ಟಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿದರು. 2017 ರ ಮಿಸ್ಟರ್ ಚಿತ್ರದ ಸೆಟ್‌ನಲ್ಲಿ ಅವರು ವರುಣ್ ತೇಜ್ ಅವರನ್ನು ಭೇಟಿಯಾದರು ಮತ್ತು ಅದೇ ವರ್ಷದಲ್ಲಿ ಡೇಟಿಂಗ್ ಪ್ರಾರಂಭಿಸಿದರು. 2018 ರಲ್ಲಿ, ಅವರು ಅಂತರಿಕ್ಷಮ್ 9000 KMPH ನಲ್ಲಿ ಒಟ್ಟಿಗೆ ನಟಿಸಿದ್ದಾರೆ.

ಹೈದ್ರಾಬಾದ್ ನನಲ್ಲಿ ವರುಣ್ ಮತ್ತು ಲಾವಣ್ಯ ಆರತಕ್ಷತೆ.

ವರುಣ್ ಮತ್ತು ಲಾವಣ್ಯ ಅವರ ವಿವಾಹ ಆಕತಕ್ಷತೆ ಹೈದ್ರಾಬಾದ್ ನಲ್ಲಿ ನಡೆಯಲಿದೆ. ಸ್ನೇಹಿತರು ಮತ್ತು ಚಿತ್ರರಂಗದ ಸಹೋದ್ಯೋಗಿಗಳು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?