ಶ್ರೀದೇವಿ ನನ್ನ ನೋಡಿದೊಡನೆ ಕಣ್ಣೀರಾಗಿದ್ದಳು : ಹಳೆ ದಿನಗಳನ್ನು ಮೆಲುಕು ಹಾಕಿದ ಆದಿಲ್ ಹುಸೈನ್
ಇತ್ತೀಚೆಗೆ ಸಂದರ್ಶನೊಂದರಲ್ಲಿ ಮಾತನಾಡಿದ ನಟ ಅದಿಲ್ ಹುಸೈನ್, 15 ವರ್ಷಗಳ ಬಳಿಕ ಸಿನಿ ಇಂಡಸ್ಟ್ರೀಗೆ ಇಂಗ್ಲೀಷ್-ವಿಂಗ್ಲೀಷ್ ಚಿತ್ರದ ಮೂಲಕ ರೀ ಎಂಟ್ರಿಯಾದ ನಟಿ ಶ್ರೀದೇವಿಯೊಂದಿಗಿನ ಒಡನಾಟವನ್ನು ಮೆಲುಕು ಹಾಕಿಕೊಂಡಿದ್ದಾರೆ. ಆಕೆ ಅಕ್ಷರಶಹ ಕಣ್ಣೀರಾಗಿದ್ದಳು ಎಂದಿದ್ದಾರೆ ನಟ.
ಆಕೆಯ ಡೌನ್ ಟು ಆರ್ಥ್ ಕ್ಯಾರೆಕ್ಚರ್ ಅನ್ನು ನೆನೆಸಿಕೊಂಡ ಅದಿಲ್, ನಿಜಕ್ಕೂ ಆಕೆ ಮಹಾನ್ ನಟಿಯಾದರೂ ಕೊಂಚವೂ ಹಮ್ಮಿಲ್ಲದಂತೆ ನಮ್ಮೊಂದಿಗೆ ಬೆರೆದಿದ್ದರು. ನಮ್ಮನ್ನು ನೋಡಿ ಕಣ್ಣೀರಾಗಿದ್ದರು ಎಂದಿದ್ದಾರೆ. ಇಂಗ್ಲೀಷ್ ವಿಂಗ್ಲೀಷ್ ಬಾಲಿವುಡ್ ನ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದಾಗಿದ್ದು, 15 ವರ್ಷಗಳ ನಂತರ ಕಮ್ ಬ್ಯಾಕ್ ಆದ ಶ್ರೀದೇವಿಗೆ ಒಂದು ಚಾಲೆಂಜ್ ಕೂಡ ಆಗಿತ್ತು. ಚಿತ್ರದಲ್ಲಿ ಶ್ರೀದೇವಿ ಪತಿಯ ಪಾತ್ರವನ್ನು ಆದಿಲ್ ಹುಸೇನನ್ ನಿರ್ವಹಿಸಿದ್ದರು. ಇದೀಗ ಆಕೆಯ ಪ್ರತಿಭೆ ಮತ್ತು ಸ್ವಭಾವದ ಕುರಿತಂತೆ ಮೆಲುಗು ಹಾಕಿರುವ ಆದಿಲ್, ಆಕೆಯನ್ನು ಶ್ಲಾಘಿಸಿದ್ದಾರೆ.
ಸೆಟ್ ಲ್ಲಿ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡರುವ ಹುಸೇನ್, ಶ್ರೀದೇವಿ ಅವರು ತಮ್ಮ ಸದ್ಮಾ ಚಿತ್ರದಲ್ಲಿನ ಹೇಗೆ ತನ್ನ ಮೇಲೆ ಪ್ರಭಾವ ಬೀರಿದರು ಎಂಬ ಕುರಿತಂತೆ ಹೇಳಿದಾಗ ನಿಜಕ್ಕೂ ಭಾವುಕರಾದರು ಎಂದಿದ್ದಾರೆ. ಆಕೆಯ ನಟನಾ ಕೌಶಲ್ಯವನ್ನು ಮೆರಿಲ್ ಸ್ಟ್ರೀಪ್‌ಗೆ ಹೋಲಿಸಿದ ಅವರು, ಆಕೆಗೆ ಸರಿಯಾದ ಚಿತ್ರಕಥೆಗಳು ಮತ್ತು ಕಥೆಗಳನ್ನು ಸಿಕ್ಕಿದ್ದರೆ ಆಕೆ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲಬಹುದಿತ್ತು ಎಂದಿದ್ದಾರೆ.
ಇಂಗ್ಲಿಷ್ ವಿಂಗ್ಲಿಷ್ ಸೆಟ್ ನಲ್ಲಿ ಅವರನ್ನು ಭೇಟಿಯಾದ ದಿನ ನನಗಿನ್ನೂ ನೆನಪಿದೆ. ಗೌರಿ ಮತ್ತು ಬಾಲ್ಕಿ ನನ್ನನ್ನು ಆಕೆಗೆ ಪರಿಚಯಿಸಿದರು. ಅವಳು ತನ್ನ ದೊಡ್ಡ ಸುಂದರವಾದ ಕಣ್ಣುಗಳಿಂದ ನನ್ನನ್ನು ನೋಡಿದಳು. ನಾನು ಸದ್ಮಾಳನ್ನು ನೋಡಿದ ನಂತರ ನನಗೆ ಏನನ್ನೂ ತಿನ್ನಲು ಸಾಧ್ಯವಾಗಲಿಲ್ಲ ಎಂದು ನಾನು ಅವಳಿಗೆ ಹೇಳಿದ ಮೊದಲ ವಿಷಯ, ಅದನ್ನು ಕೇಳಿದ ನಂತರ ಅವಳ ಕಣ್ಣಲ್ಲಿ ನೀರು ಬಂತು. ಆದರೆ ಆಕೆ ಯಾಕೆ ಕಣ್ಣೀರಾದಳು ಎಂಬುದು ಮಾತ್ರ ನನಗೆ ತಿಳಿಯಲಿಲ್ಲ. ಬಳಿಕ ನಾವು ಪೂರ್ವಾಭ್ಯಾಸದಲ್ಲಿ ತೊಡಗಿದೆವು ಎಂದವರು ಹೇಳಿದ್ದಾರೆ. “ಇಂಗ್ಲಿಷ್ ವಿಂಗ್ಲಿಷ್ ನನ್ನ ಮೂರನೇ ಚಿತ್ರ ಮತ್ತು ಬಹುಶಃ ಇದು ಶ್ರೀದೇವಿಯವರ 300 ನೇ ಚಿತ್ರವಾಗಿದೆ - ನಾನು ಶ್ರೀದೇವಿಯೊಂದಿಗೆ ನಟಿಸುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ ಏಕೆಂದರೆ ಅದು ನನ್ನ ರಾಡಾರ್‌ನಲ್ಲಿ ಇರಲಿಲ್ಲ. ಅವಳ ಸದ್ಮಾ ಚಿತ್ರ ನನ್ನ ಮೇಲೆ ಹೇಗೆ ಪ್ರಭಾವ ಬೀರಿತು ಎಂಬುದು ನನಗೆ ನೆನಪಿದೆ. ನಾನು ಅದನ್ನು ನೋಡಿದಾಗ, ನಾನು ಒಂದೂವರೆ ದಿನ ಏನನ್ನೂ ತಿಂದಿರಲಿಲ್ಲ ಎಂದವರು ಹೇಳಿದ್ದಾರೆ|..
ಅವಳು ಸಾಕಷ್ಟು ಸಂವೇದನಾಶೀಲಳಾಗಿದ್ದಳು ಮತ್ತು ನಾನು ಆಕೆಯನ್ನು ಮೆರಿಲ್ ಸ್ಕ್ರೀಪ್ ಗೆ ಹೋಲಿಸುತ್ತೇನೆ. ಆಕೆಗೆ ಸರಿಯಾದ ಸ್ಕ್ರೀಪ್ಟ್ ಗಳು ಸಿಗುತ್ತಿದ್ದರೆ ಆಕೆ ಆಸ್ಕರ್ ಬಾಚಿಕೊಳ್ಳುವುದರಲ್ಲಿ ಅನುಮಾನವಿರಲಿಲ್ಲ ಎಂದು ಅದಿಲ್ ಹೇಳಿಕೊಂಡಿದ್ದಾರೆ.
Shridevi
ಪ್ರತ್ಯುತ್ತರಅಳಿಸಿ