ಸಿನಿಮಾರಂಗಕ್ಕೆ ಬರುವ ಮೊದಲು ರಕ್ಷಿತ್ ಶೆಟ್ಟಿ ಈ ಕೆಲಸವನ್ನು ಮಾಡಿದ್ದಾರಂತೆ...!

 ಕನಸು ಅನ್ನೋದು ಪ್ರತಿಯೊಬ್ಬರಿಗೂ ಇರುತ್ತದೆ. ಕೆಲವರಿಗೆ ಸಿನಿಮಾ ಹಿರೋ ಆಗಬೇಕು ಅನಿಸಿದರೆ ಮತ್ತೆ ಕೆಲವರಿಗೆ ಇನ್ನೊಂದು ಥರದ ಆಸೆ. ಈ ಕನಸಿನ ಬೆನ್ನತ್ತಿ ಹೋಗುವ ಅದೆಷ್ಟೋ ಮಂದಿಗೆ ಸೋಲು ಎದುರಾದರೆ ಮತ್ತೆ ಕೆಲವರು ಗುರಿ ಮುಟ್ಟಿ ಗೆದ್ದು ಬೀಗುತ್ತಾರೆ. ಆದರೆ ಈ ಗೆಲುವಿನ ಹಾದಿ ಇದೆಯಲ್ಲಾ ಅದು ಅಷ್ಟು ಸುಲಭದಲ್ಲ. ಇದೀಗ ನಾವು ಹೇಳಲು ಹೋರಟಿರುವುದು ಕನ್ನಡ ಸಿನಿಮಾರಂಗದಲ್ಲಿ ಸದ್ಯಕ್ಕೆ ಗೆಲುವಿನ ನಾಗಲೋಟದಲ್ಲಿರುವ, ಚ್ಯೂಸಿಯಾಗಿ ಡಿಫರೆಂಟಾಗಿ ಸಿನಿಮಾ ಮಾಡುತ್ತಿರುವ ನಮ್ಮ ನೆಟ್ಟಿನ ರಕ್ಷಿತ್ ಶೆಟ್ಟಿ ಬಗ್ಗೆ.



ಈ ಶೆಟ್ರು ಮಾಡುವ ಸಿನಿಮಾಗಳು ಸಿಕ್ಕಾಪಟ್ಟೆ ಢಿಫರೆಂಟಾಗಿರುತ್ತದೆ. ಹೀಗಾಗಿಯೇ ರಕ್ಷಿತ್ ಶೆಟ್ಟಿ ಸ್ಯಾಂಡಲ್ ವುಡ್ ನ ಭರವಸೆಯ ನಾಯಕ.  ಶೆಟ್ರ ಬಹುನಿರೀಕ್ಷೆಯ ಸಿನಿಮಾ ಸಪ್ತಸಾಗರದಾಚೆ ಸೈಡ್ ಬಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಪ್ರೇಕ್ಷಕರಿಂದ ಒಂದು ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಸಣ್ಣ ಪುಟ್ಟ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಪರಿಚತರಾದ ಶೆಟ್ರು ಬಳಿಕ ಉಳಿದವರು ಕಂಡಂತೆ ಚಿತ್ರವನ್ನು ನಿರ್ಮಿಸಿ ತಾವು ಹಿರೋ ಆಗಿ ಬಡ್ತಿ ಪಡೆದರು. ಹುಟ್ಟಿದ್ದು ಉಡುಪಿಯಲ್ಲಾದರೂ , ಇಂಜಿನಿಯರಿಂಗ್ ಪದವಿದರ. ಹೀಗಾಗಿ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಆದರೆ ಈ ಕೆಲಸದ ಬಗೆಗಿನ ಆಸಕ್ತಿ ಕಡಿಮೆಯಾಗಿ, ಚಿತ್ರರಂಗದತ್ತ ಒಲವು ಜಾಸ್ತಿಯಾಗಿದ್ದರಿಂದ ಅವರು . ತಮ್ಮನ್ನು ತಾವು ಚಿತ್ರರಂಗದಲ್ಲೇ ತೊಡಗಿಸಿಕೊಂಡರು ಮತ್ತೆ ಯಶಸ್ವಿಯೂ ಆದರು. ಸಿಂಪಲ್ಲಾಗೊಂದು ಲವ ಸ್ಟೋರಿ ಮೂಲಕ ಚಿತ್ರರಂಗಕ್ಕೆ ಮತ್ತು ಪ್ರೇಕ್ಷಕರಿಗೆ ತುಂಬಾ ಹತ್ತಿರವಾದವರು ರಕ್ಷಿತ್. ಇದೀಗ ತೆಲುಗಿನ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ವೇಳೆ ಅವರು ನೀಡಿದ ಉತ್ತರ ವೈರಲ್ ಆಗಿದೆ. ಸಿನಿಮಾರಂಗಗೆ ಬರುವ ಮೊದಲು ಅವರ ವೃತ್ತಿ ಬದುಕಿನ ಮೊದಲ ಸಂಬಂಳ ಎಷ್ಟು ಎಂದು ನೋಡಲು ಹೋದರೆ 12 ಸಾವಿರವಂತೆ.  ನಾನು ಮೊದಲು ಬೆಂಗಳೂರಿಗೆ ಬಂದಾಗ ಐಟಿ ಕಂಪೆನಿಯಲ್ಲಿ ಕೆಲಸ ಮಾಡಲು ಆರಂಭಿಸಿದೆ. ಆಗ ನನ್ನ ಸಂಬಂಳ 12 ಸಾವಿರ ಇತ್ತು. ಎಂದಿರುವ ಅವರು, ಇದಕ್ಕೂ ಮೊದಲು ನನ್ನ ಅಪ್ಪಾ ಕಂಸ್ಟ್ರಕ್ಷನ್ ಕೆಲಸ ಮಾಡುತ್ತಿದ್ದರು. ಹೀಗಾಗಿ ನಾನು ಚಿಕ್ಕ ವಯಸ್ಸಿನಲ್ಲೇ ಸಿಮೆಂಟ್ ಮೂಟೆಗಳನ್ನು ಡೆಲಿವರಿ ಮಾಡುತ್ತಿದ್ದೆ ಎಂದಿದ್ದಾರೆ. 

ಆಗ ನನಗೆ ವಯಸ್ಸು 15 ರಿಂದ 16 ವಯಸ್ಸು, ಕಟ್ಟಡಗಳನ್ನು ಕಟ್ಟುವ ಜಾಗಕ್ಕೆ ಸಿಮೆಂಟ್ ಮೂಟೆಗಳನ್ನು ಸಾಗಿಸುತ್ತಿದ್ದೆ. ಅವುಗಳನ್ನು ಲೋಡ್ ಮತ್ತು ಅನ್ ಲೋಡ್ ಮಾಡುತ್ತಿದ್ದೆ. ಒಂದು ಮೂಟೆಗೆ ತಲಾ 2 ರೂಪಾಯಿಯಂತೆ ನನ್ನ ಅಪ್ಪಾ ನನಗೆ ನೀಡುತ್ತಿದ್ದರು. ನಾನು 100 ರಿಂದ 150 ರೂಪಾಯಿ ಸಂಪಾದಿಸುತ್ತಿದ್ದೆ ಎಂದಿದ್ದಾರೆ. ಒಂದರ್ಥದಲ್ಲಿ  ಅದು ಪ್ಯಾಕೆಟ್ ಮನಿಯೂ ಹೌದು ಮೊದಲ ಸಂಬಳವೂ ಹೌದು ಎಂದಿರುವ ಅವರು ತೆಲುಗಿನ ಸಿನಿಮಾಗಳಲ್ಲಿ ನಟಿಸುತ್ತೀರಾ ಎಂಬ ಪ್ರಶ್ನೆಗೆ ನಾನು ನಿರ್ದೇಶನ ಮಾಡಿ ನಟಿಸಿ ತುಂಬಾ ವರ್ಷಗಳಾಯಿತು. ಮಾಡಿಕೊಂಡಿರುವ ಸ್ಕ್ರೀಪ್ಟ್ ಗಳನ್ನು ಮೊದಲು ಸಿನಿಮಾ ಮಾಡಿ ಬಳಿಕ ಮುಂದಿನದ್ದು ಎಂದಿದ್ದಾರೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅವಕಾಶಗಳನ್ನು ಪಡೆಯಲು ನಟಿ ಜ್ಯೋತಿಕಾ ಈ ರೀತಿಯೂ ಮಾಡಿದ್ದಾರಂತೆ...|

ಲಾಕ್ ಡೌನ್ ಲವ್ ಸ್ಟೋರಿಗೆ ಮದುವೆಯ ಬ್ರೇಕ್. ಅಮೀರ್ ಖಾನ್ ಮಗಳು ಹಿರಾ ಲವ್ ಸ್ಟೋರಿ