ಬಾಜಿಗರ್ ಗೆ 30 ವರ್ಷ : ಶಾರೂಖ್ ಜೊತೆಗಿನ ಮೊದಲ ಭೇಟಿ ಹೇಗಿತ್ತು ಎಂದು ತಿಳಿಸಿದ ಕಾಜೋಲ್

 ಶಾರೂಖ್ ಖಾನ್ ಮತ್ತು ಕಾಜೋಲ್ ನಟನೆಯ ಸೂಪರ್ ಹಿಟ್ ಚಿತ್ರ ಬಾಜಿಗರ್ ರಿಲೀಸ್ ಆಗಿ 30 ವರ್ಷ ಕಳೆದಿದೆ. ಇಂದಿಗೂ ಈ ಚಿತ್ರದ ಕುರಿತ ಕ್ರೇಜ್ ಮಾತ್ರ ಜನಕ್ಕೆ ಹೋಗಿಲ್ಲ. ಇದೀಗ ಚಿತ್ರದ ಜರ್ನಿ, ಶಾರೂಖ್ ಜೊತೆಗಿನ ಮೊದಲ ಭೇಟಿ  ಕುರಿತಂತೆ ಕಾಜೋಲ್ ನೆನಪಿಸಿಕೊಂಡಿದ್ದಾರೆ.



ನನಗೆ ಆಗಿನ್ನೂ 17ರ ಹರೆಯ ಎಂದಿರುವ ಕಾಜೋಲ್,  ಹಿರೋಯಿನ್ ಆಗಿ ಬಾಜಿಗರ್ ನನಗೆ ಎರಡನೇ ಸಿನಿಮಾ ಆಗಿತ್ತು. ಆಗಿನ್ನೂ ನನಗೆ 17 ವರ್ಷ. ಚಿತ್ರದಲ್ಲಿದ್ದ ಎಲ್ಲರೂ ನನ್ನನ್ನೂ ಮಗುವಿನಂತೆ ಪ್ರೀತಿಸಿ , ತಪ್ಪುಗಳನ್ನು ತಿದ್ದಿ ಹೇಳಿಕೊಟ್ಟಿದ್ದನ್ನು ನಾನು ಹೇಗೆ ಮರೆಯಲಿ. ಚಿತ್ರದಲ್ಲಿದ್ದ ಪ್ರತಿಯೊಬ್ಬ ನಟ ನಟಿಯರು ನನಗೆ ಸಾಕಷ್ಟು ಹೇಳಿಕೊಂಡಿದ್ದಾರೆ. ಅವರ ಮನೆಯ ಮಗುವಿನಂತೆ ಪ್ರೀತಿಸಿದ್ದಾರೆ ಅವರಿಗೆ ನನ್ನ ತುಂಬು  ಹೃದಯದ ಧನ್ಯವಾದಗಳು ಎಂದಿದ್ದಾರೆ ಕಾಜೋಲ್. 



1993ರಲ್ಲಿ ಬಿಡುಗಡೆಯಾದ ರೋಮ್ಯಾಂಟಿಕ್ ಥ್ರಿಲ್ಲರ್ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಅಷ್ಟೇ ಅಲ್ಲದೆ ಶಾರೂಖ್ ಕಾಜೋಲ್ ಜೋಡಿ ಸೂಪರ್ ಹಿಟ್ ಆಗಿತ್ತು. ಅಬ್ಬಾಸ್ ಮುಸ್ತಾನ್ ನಿರ್ದೇಶನದ ಈ ಸಿನಿಮಾದಲ್ಲಿ ಶಾರೂಖ್ ಸ, ಕಾಜೋಲ್, ಸಿದ್ಧಾರ್ಥ್ , ಶಿಲ್ಪಾ ಶೆಟ್ಟಿ , ದಲೀಪ್ ತಾಹಿಲ್ ಮತ್ತು ಜಾನಿ ಲಿವರ್ ನಟಿಸಿದ್ದರು. 40 ಲಕ್ಷ ಬಜೆಟ್ ನಲ್ಲಿ ನಿರ್ಮಿಸಲಾದ ಈ ಚಿತ್ರ ಅಂದಿನ ಕಾಲಕ್ಕೆ 320 ಮಿಲಿಯನ್ ಬಾಚಿಕೊಂಡಿತ್ತು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?

ಪ್ರಭಾಸ್ ಈ ವಿಚಾರಗಳು ಕಂಫರ್ಟ್ ಅನಿಸುವುದಿಲ್ಲವಂತೆ.