ವರ್ತೂರ್ ಸಂತೋಷ್ ವಿರುದ್ಧ ಪಿತೂರಿಯಾ? ಯಾಕೆ ಆತನ ಮೇಲೆ ಇಷ್ಟೋಂದು ಕಾಂಟ್ರವರ್ಸಿ...?

 ಬಿಗ್ ಬಾಸ್ ಮನೆಯಿಂದ ಹುಲಿ ಉಗುರು ವಿಚಾರವಾಗಿ ಅರೆಸ್ಟ್ ಆಗಿದ್ದೆ ಆಗಿದ್ದು ವರ್ತೂರ್ ಸಂತೋಷ್ ಭಾರಿ ಸುದ್ದಿಯಲಿದ್ದಾರೆ. ಆರಂಭದಲ್ಲಿ ವರ್ತೂರ್ ಸಂತೋಷ್ ಕುರಿತಂತೆ ಅನುಕಂಪದ ಅಲೆ ಎದ್ದಿತ್ತು. ಹುಲಿ ಉಗುರು ಸಂಬಂಧಿಸಿದಂತೆ ಬಿಗ್ ಬಾಸ್ ಮನೆಯೊಳಗಿದ್ದ ವರ್ತೂರ್ ಸಂತೋಷ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದೆ ಮಾಡಿದ್ದು, ಸೆಲೆಬ್ರಿಟಿಗಳ ಪೋಟೋವನ್ನು ಟ್ಯಾಗ್ ಮಾಡಿದ್ದ ನೆಟ್ಟಿಗರು ಇದು ಹುಲಿ ಉಗುರಲ್ಲವೆ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಸೆಲೆಬ್ರಿಟಿಗಳ ಮನೆಗೂ ದಾಳಿ ನಡೆದಿತ್ತು. ಆದರೆ ಅದ್ಯಾವುದು ಹುಲಿ ಉಗುರಲ್ಲ. ಪ್ಲಾಸ್ಟಿಕ್ ನದ್ದು ಎಂದು ಹೇಳಿ ಅಧಿಕಾರಿಗಳು ಜಾರಿಕೊಂಡಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಈ ನಡೆ ಭಾರಿ ವಿರೋಧಕ್ಕೆ ಕಾರಣವಾಗಿತ್ತು. ವರ್ತೂರ್ ಕುರಿತಂತೆ ಅನುಕಂಪದ ಅಲೆ ಎದ್ದಿತ್ತು. 



ಅದು ಹೇಗೆ ಜಾಮೀನು ಪಡೆದು ಮತ್ತೆ ಬಿಗ್ ಬಾಸ್ ಮನೆಯೊಳಗೆ ಎಂಟ್ರಿಯಾಗಿರುವ ವರ್ತೂರ್ ಸಂತೋಷ್ ವಿರುದ್ಧ ಇದೀಗ ಭಾರಿ ವಿವಾದ ಅಲೆ ಎದ್ದಿದೆ. ಇದುವರೆಗೂ ಎಲ್ಲೂ ಕೂಡ ತಾನು ಮದುವೆಯಾಗಿದ್ದಾಗಿ ಹೇಳಿಕೊಳ್ಳದ ವರ್ತೂರ್ ವಿರುದ್ಧ ಮಡದಿಗೆ ಮೋಸ ಮಾಡಿದ ವಿಚಾರ ಬಯಲಾಗಿದೆ. ಆತ ಮಡದಿಗೆ ಮೋಸ ಮಾಡಿರುವ ವಿಚಾರ ಬಯಲಾಗಿದೆ.

ಮದುವೆಯ ವಿಡಿಯೋಗಳು ಮಾಧ್ಯಮಗಳಲ್ಲಿ , ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವರ್ತೂರ್ ಸಂತೋಷ್ ಮಾವ ಎಂದು ಹೇಳುತ್ತಿರುವ ವ್ಯಕ್ತಿಯೊಬ್ಬ, ವರ್ತೂರ್ ಸಂತೋಷ್ ಎಂತಹ ಮಾದಕ ವ್ಯಸನಿ ಎಂದಿದ್ದಾರೆ. ಆತ ತನ್ನ ಮಗಳಿಗೆ ಮೋಸ ಮಾಡಿದ್ದಾನೆ. ಆತನ ಹೆಡದಿ ಹೆರಿಗೆಗೆಂದು ತವರಿಗೆ ಬಂದ ಬಳಿಕ ವರ್ತೂರ್ ಇದುವರೆಗೂ ಮಡದಿಯನ್ನು ಮಗುವನ್ನು ನೋಡಲು ಬಂದಿಲ್ಲ ಎಂದು ದೂರಿದ್ದಾರೆ. ಮದುವೆಯ ಸಂದರ್ಭದಲ್ಲಿ ತಾವು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾಗಿ ದೂರಿದ್ದಾರೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?