ಏನಿದು ಮಾಮುಷಿ ಪಾಯಿಸನ್ : ಶ್ರೀದೇವಿ ಇದನ್ನು ಇನ್ ಜೆಕ್ಟ್ ಮಾಡಿಕೊಂಡಿದ್ದು ಯಾಕೆ?

 ಅಂದು 2018ರ ಫೆಬ್ರವರಿ 24. ಜನ ಎಂದಿನಂತೆ ಕಾರ್ಯಪ್ರವೃತ್ತರಾಗುತ್ತಿದ್ದರೆ, ಇತ್ತೆ ಟಿವಿ ಪರದೆಯ ಮೇಲೆ ಅತಿಲೋಕ ಸುಂದರಿ' ಶ್ರೀದೇವಿ ಇನ್ನಿಲ್ಲ ಎಂಬ ಬ್ರೇಕಿಂಗ್ ನ್ಯೂಸ್ ಪ್ರೇಕ್ಷಕರನ್ನು ಬರಸಿಡಿಲಿನಂತೆ ಅಪ್ಪಳಿಸಿತ್ತು. ಆಕೆಗೆ ಏನಾಗಿದೆ. ಏನಿದು ದಿಡೀರ್ ಸಾವು ಎಂದು ನೋಡುತ್ತಿದ್ದ ಅಭಿಮಾನಿಗಳಿಗೆ ತಿಳಿದ ಸುದ್ದಿ, ಆಕೆ ಬಾತ್ ಟಬ್ ನಲ್ಲಿ ಮುಳುಗಿ ಸಾವನಪ್ಪಿದ್ದಾರೆ ಎಂದು. ಆದರೆ ಈ ಸುದ್ದಿಯನ್ನು ಜನ ಅಷ್ಟು ಸುಲಭವಾಗಿ ಒಪ್ಪಿಕೊಂಡಿರಲಿಲ್ಲ. ಆದರೆ ಆಕೆಯ ಸಾವು ನಡೆದಿದ್ದು ದುಬೈನಲ್ಲಿ. ಹೀಗಾಗಿ ಈ ಬಗ್ಗೆ ಭಾರತದಲ್ಲಿರುವ ಅಭಿಮಾನಿಗಳಿಗೂ ಹೆಚ್ಚೆನು ಕೆದಕಲು ಆಗಿರಲಿಲ್ಲ. ಮಾಧ್ಯಮಗಳು ಮಾಡಿದ ವರದಿಯನ್ನೇ ಒಪ್ಪಿಕೊಳ್ಳಬೇಕಾದ ಅನಿವಾರ್ಯವೂ ಎದುರಾಗಿತ್ತು. ಆದರೆ ಮನದ ಮೂಲೆಯಲ್ಲಿ ಎಲ್ಲೋ ಈ ಸಾವಿನ ಹಿಂದೆ ಅದೆನೋ ನಿಗೂಢ ಇದೆ ಅನ್ನೋ ಅನುಮಾನ ಮಾತ್ರ ಸದಾ ಹಸಿಯಾಗಿತ್ತು. 



 ಮದುವೆ ಕಾರ್ಯಕ್ರಮಕ್ಕೆಂದು ದುಬೈಗೆ ತೆರಳಿದ್ದ ಶ್ರೀದೇವಿ ಮರಳಿ ಬಂದಿದ್ದು ಶವವಾಗಿ. ಬಂದಿದ್ದು ನೋಡಿದ  ಅಭಿಮಾನಿಗಳು ದಿಗ್ರ್ಬಮೆಗೊಂಡಿದ್ದರು. ಅಷ್ಟೊಂದು ಫಿಟ್ ಆಂಡ್ ಫೈನ್ ಆಗಿದ್ದ ಶ್ರೀದೇವಿ . ಬಾತ್‌ಟಬ್‌ನಲ್ಲಿ ಮುಳುಗಿ ಸಾವನ್ನಪ್ಪೋದು ಅಂದರೇನು..? ಆಕೆಯೇನು ಮಗುವೆ, ಅಷ್ಟಕ್ಕೂ ಆಕೆಗೆ ಏನಾಯಿತು ಎಂಬ ಕುರಿತಂತೆ ಚರ್ಚೆಗಳು ಸಾಗಿದವು. ಇದ್ದೀಗ ಅದಕ್ಕೆ ಪುಷ್ಠಿ ನೀಡಲೆಂದು ಇದೀಗ ತನೊಬ್ಬ ಸ್ವಾತಂತ್ರ್ಯ ತನಿಖಾ ಪತ್ರಿಕೋದ್ಯಮಿ ಎಂದು ಹೇಳಿಕೊಂಡಿರುವ ಮಹಿಳೆಯೊಬ್ಬರು ಹೇಳಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 


ದೀಪ್ತಿ ಪಿನ್ನಿಟಿ ಎಂಬ ಸ್ವತಂತ್ರ್ಯಾ ಪತ್ರಿಕೋದ್ಯಮಿ ಹೇಳುವ ಪ್ರಕಾರ ಶ್ರೀದೇವಿ ಸಾವು ಆಕಸ್ಮಿಕವಲ್ಲ. ಅವರಿಗೆ ಮಾಮುಷಿ ಎಂಬ ಜಪಾನ್ ಹಾವಿನ ವಿಷವನ್ನು ಕೊಟ್ಟು ಸಾಯಿಸಲಾಗಿದೆ. ಅದು ಕೂಡ ಆಕೆ ದುಬೈಗೆ ತೆರಳುವ ಮುನ್ನ ಮುಂಬೈನಲ್ಲೇ ಆಕೆಗೆ ಈ ವಿಷವನ್ನು ಇನ್ ಜೆಕ್ಟ್ ಮಾಡಲಾಗಿದೆ. ಇದು ಸ್ಲೋ ಪಾಯಿಸನ್ ನಂತೆ ಕೆಲಸ ಮಾಡುತ್ತದೆ. ಶ್ರೀದೇವಿಯವರು ಸಾವನಪ್ಪುವ 130  ಗಂಟೆಗಳ ಹಿಂದೆಯೇ ಈ ವಿಷವನ್ನು ಆಕೆಯ ದೇಹಕ್ಕೆ ನೀಡಲಾಗಿದೆ. ಇದೆಲ್ಲಾ ಪ್ಲಾನ್ ಪ್ರಕಾರ ನಡೆದಿದೆ. ಮದುವೆ ಕಾರ್ಯಕ್ರಮಕ್ಕೆಂದು ದುಬೈಗೆ ಹೋಗಿದ್ದ ಆಕೆ ನೃತ್ಯ ಮಾಡುತ್ತಿರುವಾಗ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬೀಳುತ್ತಾಳೆ ಎಂದೇ ವಿಷ ನೀಡಿದವರು ಅಂದುಕೊಂಡಿದ್ದರು. ಅದಕ್ಕಾಗಿಯೇ ಆಕೆ ನೃತ್ಯ ಮಾಡುತ್ತಿರುವ ವಿಡಿಯೋವನ್ನು ಜೂಮ್ ಮಾಡಲಾಗಿದೆ . . ಆದರೆ ವಿಷಹಾಕಿದವರು ಪ್ಲಾನ್ ವರ್ಕ್ ಜೌಟ್ ಆಗಿಲ್ಲ. ಆಕೆ ಫಿಟ್ ಆಗಿಯೇ ಇದ್ದಳು. ಹೀಗಾಗಿ ಶ್ರೀದೇವಿ ಪತಿ ಬೋನಿಕಾಪೂರ್ ಮತ್ತು ತಂಡ ಮದುವೆ ಮುಗಿಸಿ ಮುಂಬೈಗೆ ವಾಪಾಸ್ ಬಂದರೂ, ಆಕೆ ಮಾತ್ರ ತಾನು ಒಬ್ಬಂಟಿಯಾಗಿರಬೇಕು ಅಂದುಕೊಂಡು ದುಬೈನಲ್ಲೇ ಉಳಿಯುತ್ತಾಳೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಇದು ಸುಳ್ಳು ಎಂದಿರುವ ದೀಪ್ತಿ. ಮದುವೆ ನಡೆದ ಸ್ಥಳದಿಂದ ಸಿಕ್ಕಾಪಟ್ಟೆ ದೂರದಲ್ಲಿರುವ ಹೊಟೆಲ್ ನಲ್ಲಿ ಶ್ರೀದೇವಿ ಸಾವು ನಡೆಯುತ್ತದೆ. ಆಕೆ ಯಾಕೆ ಒಬ್ಬಳೆ ಇದ್ದಳು. ಎಂಬುದು ಅನುಮಾನ ಹುಟ್ಟಿಸುತ್ತದೆ. ಮಾಮುಷಿ ಎಂಬ ಹಾವಿನ ವಿಷ ಆಕೆಯ ದೇಹದಲ್ಲಿ ಪತ್ತೆಯಾಗಿರುವುದನ್ನು ಪೋಸ್ಟ್ ಮಾರ್ಟಮ್ ವರದಿಯಲ್ಲಿ ತಿಳಿಸಲಾಗಿದೆ. ನನಗೆ ಸಿಕ್ಕಿರುವ ಓರಿಜಿನಲ್ ಪೋಸ್ಟ್ ಮಾರ್ಟಮ್ ರಿಪೋರ್ಟ್ ಪ್ರಾಕರ, ದುಬೈ ಸಮಯ ಸಂಜೆ 6.30ಕ್ಕೆ ಫೆಬ್ರವರಿ 23, 2018ರಂದೇ ಶ್ರೀದೇವಿ ಸಾವನ್ನಪ್ಪಿದ್ದರು ಎಂದು ದೀಪ್ತಿ ಹೇಳಿದ್ದಾರೆ. ಈ ವಿಷ ಹೇಗೆ ಆಕೆಯ ದೇಹ ಸೇರಿತು. ಅದರ ಹಿಂದೆ ಯಾರಿದ್ದಾರೆ ಎಂಬ ಕುರಿತಂತೆಯೂ ನನಲ್ಲಿ ಮಾಹಿತಿ ಇದೆ. ಆದರೆ ರಿವೀಲ್ ಮಾಡಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ ತಾನು ಈ ಕುರಿತಂತೆ ಕಾನೂನು ಹೋರಾಟ ಮಾಡುತ್ತಿದ್ದರು ಪ್ರಯೋಜನವಾಗುತ್ತಿಲ್ಲ. ನಾನು ಸುಪ್ರೀಕೋರ್ಟ್ ಗೂ ಈ ಬಗ್ಗೆ ಮನವಿಸಲ್ಲಿಸಿರುವುದಾಗಿ ದೀಪ್ತಿ ಹೇಳಿಕೊಂಡಿದ್ದಾರೆ. 


ಏನಿದು ಮಾಮುಷಿ ಪಾಯಿಸನ್ ಅದರಿಂದಾಗುವ ತೊಂದರೆ ಏನು ಅಂತ ನೋಡಲು ಹೋದರೆ, ಅದೊಂದು ರೀತಿಯ ಜಪಾನ್ ನಲ್ಲಿ ಕಾಣಸಿಗುವ ಹಾವು. ಇದು ಕಚ್ಚಿದರೆ ಮೊದಲಿಗೆ ಹಾವು ಕಚ್ಚಿದ ಜಾಗ ಊದಿಕೊಳ್ಳುತ್ತದೆ. ಬಳಿಕ ನಿಧಾನಕ್ಕೆ ಹಾವಿನ ವಿಷದಿಂದಾಗಿ ದೇಹದಲ್ಲಿರುವ ಪ್ಲೆಟ್ ಲೆಟ್ ಗಳ ಸಂಖ್ಯೆ ಇಳಿಮುಖವಾಗುತ್ತಾ ಹೋಗುತ್ತದೆ. ಹೀಗೆ ಮುಂದುವರೆದರೆ ಮನುಷ್ಯ ಸಾವನಪ್ಪುತ್ತಾನೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?