ಲಾವಣ್ಯ ತ್ರಿಪಾಠಿ ಎಂಬ ಮಧ್ಯಮವರ್ಗದ ಯುವತಿಯೊಬ್ಬಳು, ಮೆಗಾ ಪ್ಯಾಮಿಲಿಯ ಸೊಸೆಯಾಗಿದ್ದು ಹೇಗೆ..?

 

ಲಾವಣ್ಯ ತ್ರಿಪಾಠಿ. ಸದ್ಯಕ್ಕೆ ತೆಲುಗು ಚಿತ್ರರಂಗದಲ್ಲಿ ನೆಲೆನಿಂತಿರುವ ಲಾವಣ್ಯ, ಇದೀಗ ಮೆಗಾ ಪ್ಯಾಮಿಲಿಯ ಸೊಸೆ ಕೂಡ ಹೌದು. ಮೆಗಾ ಪ್ಯಾಮಿಲಿಯ ಸೊಸೆಯಾಗುವ ಮುನ್ನ ಆಕೆ ಕೇವಲ ಒಬ್ಬ ಸಾಮಾನ್ಯ ನಟಿಯಷ್ಟೇ. ಆದರೆ ಆಕೆಯ ಹಿನ್ನೆಲೆ ಏನು ಎಂಬುದನ್ನು ನೋಡುವುದಾದರೆ, ಲಾವಣ್ಯ ಮಧ್ಯಮ ವರ್ಗದ ಕುಟುಂಬದ ಹೆಣ್ಣು ಮಗಳು. 


1990ರ ಡಿಸೆಂಬರ್ 15ರಂದು ದೇವಾಲಯಗಳ ನಗರಿ ಅಯೋಧ್ಯೆಯಲ್ಲಿ ಜನಿಸಿದ ಲಾವಣ್ಯ ತ್ರಿಪಾಠಿ, ಸರಳವಾದ ಮಧ್ಯಮ ವರ್ಗದ ಕುಟುಂಬದಲ್ಲೇ ಬೆಳೆದರು.  ತಂದೆ ಹೈಕೋರ್ಟ್‌ನಲ್ಲಿ ವಕೀಲರಾಗಿ ಅಭ್ಯಾಸ ಮಾಡುತ್ತಿದ್ದರೆ, ಅವರ ತಾಯಿ ಶಿಕ್ಷಕಿ. ಮಿಸ್ ಉತ್ತರಖಂಡ್ ಪಟ್ಟ ಏರುವವರೆಗೂ ಲಾವಣ್ಯ ಯಾರು ಎಂಬುದು ಯಾರಿಗೂ ಗೊತ್ತಿರಲಿಲ್ಲ. ಮಾಡೆಲಿಂಗ್ ಬಗ್ಗೆ ಆಸಕ್ತಿ ಹೊಂದಿದ್ದ ಲಾವಣ್ಯ ಮಿಸ್ ಉತ್ತರಖಂಡ್ ಕಿರೀಟ ಮುಡಿಗೇರಿಸಿದ ಬಳಿಕ ಖ್ಯಾತಿ ಪಡೆದರು. ಕಿರಿತೆರೆಯಲ್ಲಿ ಅವಕಾಶಗಳನ್ನು ಪಡೆದ ಲಾವಣ್ಯ ಬಳಿಕ  ಅಂದಾಳ ರಾಕ್ಷಸಿ ಚಿತ್ರದ ಮೂಲಕ ತೆಲುಗು ಚಿತ್ರರಂಗವನ್ನು ಪ್ರವೇಶಿಸಿದರು. 

 ಇದಾದ ಬಳಿಕ ಆಕೆ ಹಿಂದಿರುಗಿ ನೋಡಲೇ ಇಲ್ಲ. ತೆಲುಗು ಚಿತ್ರರಂಗ ಆಕೆಯನ್ನು ಒಪ್ಪಿಕೊಂಡಿದ್ದು ಮತ್ತು ಅಪ್ಪಿಕೊಂಡಿತ್ತು. ದೂಸುಕೆಳ್ತಾ, ಭಲೇ ಭಲೇ ಮಗಾಡಿವೋಯ್, ಮತ್ತು ಶ್ರೀ ರಸ್ತು ಶುಭಮಸ್ತು ಚಿತ್ರಗಳು ಸೂಪರ್ ಹಿಟ್ ಆದ ಚಿತ್ರಗಳು. ನಾಗಾರ್ಜುನ ಅವರ ಮನಂ ಚಿತ್ರದಲ್ಲಿ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಎಲ್ಲಾ ಚಿತ್ರಗಳು ಅವರನ್ನು ಟಾಲಿವುಡ್‌ನಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಮಾಡಿದ್ದು ಸುಳ್ಳಲ್ಲಾ.  ಲಾವಣ್ಯ ಸದ್ಯಕ್ಕೆ ಹಿಂದಿ ಮತ್ತು ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ. ತಮಿಳಿನಲ್ಲಿ ಮಾಯಾವನ್ ಮತ್ತು ಹಿಂದಿಯಲ್ಲಿ 10.30, ಚಲೇನ್ ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ತಮಿಳಿನಲ್ಲಿ ತನಲ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಪ್ರೀತಿ ಮತ್ತು ಪ್ರಣಯ

 ಮಾಸ್ ಎಂಟರ್ ಟೈನರ್ ಚಿತ್ರ ಮಿಸ್ಚರ್ ನಲ್ಲಿ ಈ ಜೋಡಿ ತೆರೆ ಹಂಚಿಕೊಂಡಿತ್ತು.  ಇದೇ ವೇಳೆ ಆರಂಭವಾದ ಪರಿಚಯ ಪ್ರೇಮಕ್ಕೆ ತಿರುಗಿತ್ತು.  ಬಳಿಕ ಇವರಿಬ್ಬರು ಸೈಂಟಿಫಿಕ್  ಥ್ರಿಲ್ಲರ್ ಅಂತರಿಕ್ಷಂ 9000 KMPH ನಲ್ಲಿ ನಟಿಸಿದ್ದಾರೆ. ಬಳಿಕ ಅವರಿಬ್ಬರ ಡೇಟಿಂಗ್ ಜೊರಾಗಿ ಸಾಗಿತ್ತು. 

ಮೆಗಾ ಪ್ಯಾಮಿಲಿ ನಾಗಬಾಬು ಅವರ ಮಗ ವರುಣ್ ತೇಜ್ ಅವರನ್ನು ನವೆಂಬರ್ 1, 2023ರಂದು ಇಟಲಿಯಲ್ಲಿ ವರಿಸಿದ ಲಾವಣ್ಯ ಇದೀಗ ಮೆಗಾ ಪ್ಯಾಮಿಲಿಯ ಎಲ್ಲಾ ರೀತಿಯ ಆಥಿತ್ಯವನ್ನು ಸ್ವೀಕರಿಸುತ್ತಿದ್ದಾರೆ. ವರುಣ್ ತೇಜ್ ಗೆ ನಿಹಾರಿಕಾ ಎಂಬ ತಂಗಿಯೂ ಇದ್ದಾಳೆ. 

ನಾಗಬಾಬು ಮೆಗಾ ಸ್ಟಾರ್ ಚಿರಂಜೀವಿ, ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಸೋದರಳಿಯ ಮತ್ತು  ಗ್ಲೋಬಲ್ ಸ್ಟಾರ್ ರಾಮ್ ಚರಣ್ ಮತ್ತು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಸೋದರಸಂಬಂಧಿ. ಮೆಗಾ ಕುಟುಂಬವು ದಕ್ಷಿಣ ಚಿತ್ರರಂಗದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಶ್ರೀಮಂತ ಕುಟುಂಬವಾಗಿದೆ. ಸಹೋದರ ಪವನ್ ಕಲ್ಯಾಣ್ ಅತ್ಯಂತ ವರ್ಚಸ್ವಿ ತಾರೆ ಮತ್ತು ಈಗ ಜನಸೇನೆಯ ಮುಖ್ಯಸ್ಥರಾಗಿದ್ದಾರೆ ಮತ್ತು ಪಿಎಂ ಮೋದಿ ಅವರೊಂದಿಗೆ ನಿಕಟ ಸಂಬಂಧವನ್ನು ಹಂಚಿಕೊಂಡಿದ್ದಾರೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?