ಕುಸ್ತಿ ಅಖಾಡಕ್ಕಿಳಿದ ದರ್ಶನ್, ಯಶಸ್ ಸೂರ್ಯ : ಜನ ಏನಂತಾರೆ?

 

ಕುಸ್ತಿ ಅಖಾಡಕ್ಕಿಳಿದ ದರ್ಶನ್, ಯಶಸ್ ಸೂರ್ಯ : ಜನ ಏನಂತಾರೆ?

ಯೋಗರಾಜ್ ಭಟ್ರ ಸಿನಿಮಾ ಅಂದ್ರೆ ಅಲ್ಲಿ ಒಂದು ಥ್ರಿಲ್ ಅಂಡ್ ಮ್ಯಾಜಿಕ್ ಇದ್ದೇ ಇರುತ್ತೆ. ಬಹುನಿರೀಕ್ಷೆಯ ಗರಡಿ ಸಿನಿಮಾ ರಿಲೀಸ್ ಆಗಿದ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಸೆಯಂತೆ ಯಶಸ್ಸು ಸೂರ್ಯ ಈ ಸಿನಿಮಾದ ಮೂಲಕ ಯಶಸ್ವಿ ನಾಯಕನಾಗೋ ಎಲ್ಲ ಲಕ್ಷಣ ಕಂಡುಬರುತ್ತಿದೆ.  ಚಿತ್ರ ಹಾಡುಗಳು. ಡೈಲಾಗ್ , ಸನ್ನಿವೇಶ ಹಾಸ್ಯ ಎಲ್ಲವೂ ಕ್ರಮಬದ್ದವಾಗಿದ್ದು, ಪ್ರೇಕ್ಷಕನಿಗೆ ರುಚಿಸಿದಂತೆ ಕಾಣುತ್ತದೆ. 



https://theviralstories360.blogspot.com/2023/11/garadikannadareview.html



ಗರಡಿ.. ಯೋಗರಾಜ್ ಭಟ್ ಅವರು ನಿರ್ದೇಶಿಸಿರುವ ಸಿನಿಮಾ. ವಿಭಿನ್ನ ಕಥಾಹಂದರವನ್ನು ಹೊಂದಿರುವ ಈ ಸಿನಿಮಾ ಇಂದು ರಿಲೀಸ್ ಆಗಿದ್ದು, ಯೋಗರಾಜ್ ಭಟ್ಟರ ಹೊಸ ಪ್ರಯೋಗ ಜನರಿಗೆ ಇಷ್ಟವಾದಂತೆ ಭಾಸವಾಗುತ್ತಿದೆ. ಚಿತ್ರದ ಹಾಡುಗಳು, ಹಾಸ್ಯ ಸನ್ನಿವೇಶ, ಪೈಟಿಂಗ್ ಎಲ್ಲವೂ ಸರಳವಾಗಿ ಸುಂದರವಾಗಿ ಮೂಡಿಬಂದಿದೆ. ಹಳ್ಳಿಗಳಲ್ಲಿ ಕುಸ್ತಿ ಅಖಾಡ ಮತ್ತು ಕುಸ್ತಿ ಪಟುಗಳ ತಾಕತ್ತಿನ ಕುರಿತಂತೆ ಈ ಚಿತ್ರದ ಕಥೆ ಹೊಂದಿದೆ. 

ಗರಡಿಯ ಕಥಾಹಂದರವೇನು..? https://theviralstories360.blogspot.com/2023/11/garadikannadareview.html

ಯಶಸ್ ಸೂರ್ಯ ಚಿತ್ರದಲ್ಲಿ ಕುಸ್ತಿಪಟುವಾಗಿದ್ದೆ, ಬಿ ಸಿ ಪಾಟೀಲ್ ಕುಸ್ತಿ ಉಸ್ತಾದ್ ಆಗಿ ನಟಿಸಿದ್ದಾರೆ. ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿರುವ ದರ್ಶನ್ ಪಾತ್ರವೊಂದರಲ್ಲಿ ಎಂಟ್ರಿಯಾಗುವ ಸೀನ್ ಇಷ್ಟವಾಗುತ್ತದೆ. ತೋಳುತಟ್ಟಿಕೊಂಡು ದರ್ಶನ್ ಎಂಟ್ರಿಯಾಗುತ್ತಿದ್ದಂತೆ ಶಿಳ್ಳೆಗಳ ಮಹಾಪೂರವೇ ಹರಿದು ಬಂತು. ಇನ್ನೂ ಹಾಸ್ಯ ಸನ್ನಿವೇಶಗಳು ಪ್ರೇಕ್ಷಕರಿಗೆ ಕಚಕುಳಿ ಇಡುವಂತಿದೆ. 

ಗರಡಿ ಸಿನಿಮಾವನ್ನು ಭಟ್ರು ಹಾಗೆ ಸುಮ್ಮನೆ ಮಾಡಿಲ್ಲ. ಸಿಕ್ಕಾಪಟ್ಟೆ ಅಧ್ಯಯನ ಮಾಡಿ ಈ ಸಿನಿಮಾವನ್ನು ಮಾಡಲಾಗಿದೆ. ಈ ಚಿತ್ರದಲ್ಲಿ ನಟ ಯಶಸ್ ಸೂರ್ಯಗೆ ನಚಿ ಸೋನಾಲ್ ಮಾಂಟೆರೊ ಜೋಡಿಯಾಗಿದ್ದಾರೆ. ರವಿಶಂಕರ್, ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ, ಚೆಲುವರಾಜು, ರಾಘವೇಂದ್ರ  , ಸೂರಜ್ ಬೇಲೂರು,  ರಾಜವಾಡಿ , ತೇಜಸ್ವಿನಿ ಪ್ರಕಾಶ್, ರವಿಚೇತನ್ ಮೊದಲಾದ ತಾರಾಂಗಣವಿದೆ. ಇವರ ನಟನೆ ಇಷ್ಟವಾಗುತ್ತದೆ. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?