ಕೈಹಿಡಿದಿದ್ದು ಕಾಜೋಲ್ ನನ್ನು, ಆದರೆ ಪ್ರೀತಿಸಿದ್ದು ಮಾತ್ರ....?

 ನಟ ಅಜಯ್ ದೇವಗನ್ ಮತ್ತು ನಟಿ ಕಾಜೋಲ್ ನಡುವೆ ಪ್ರೇಮಾಂಕುರವಾಗಿ ಅವರು ತಮ್ಮ ಮನೆಯ ಟೆರೆಸ್ ಮೇಲೆಯೆ ಮದುವೆಯಾದರೂ ಎಂಬುದನ್ನು ಈ ಜೋಡಿ ಹಲವು ವರ್ಷಗಳಹಿಂದೆಯೇ ಹೇಳಿಕೊಂಡಿತ್ತು. ಆದರೆ ಕಾಜೋಲ್ ಗಿಂತ ಮೊದಲು ಅಜಯ್ ಪ್ರೀತಿಸಿದ್ದು ಯಾರನ್ನು? ಅವರಿಬ್ಬರ ನಡುವಿನ ಪ್ರೇಮ ವಿಫಲವಾಗಲು ಕಾರಣವೇನು ಗೊತ್ತಾ?



ಅಜಯ್ ದೇವಗನ್ ಮತ್ತು ಕರಿಷ್ಮಾ ಕಾಪೂರ್ ಮತ್ತು ಕಾಜೋಲ್ 90ರ ದಶಕದ ಸೂಪರ್ ಹಿಟ್ ತಾರೆಗಳಾಗಿದ್ದರು. ಈ ಮೂವರ ನಡುವಿನ ತ್ರಿಕೋನ ಪ್ರೇಮ ಆ ಕಾಲದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೆ ಈ ಬಗ್ಗೆ ಎಂದೂ ಕೂಡ ಕರೀಷ್ಮಾ ಕಾಪೂರ್  ಆಗಲಿ  ಅಧಿಕೃತವಾಗಿ ಎಲ್ಲೂ ಏನೂ ಹೇಳಿಕೊಂಡಿರಲಿಲ್ಲ. ಆದರೆ ಮಾಧ್ಯಮಗಳು ಹಾಗೂ ಚಿತ್ರರಂಗದಲ್ಲಿ ಮಾತ್ರ ಕರೀಷ್ಮಾ ಕಾಪೂರ್ ಮತ್ತು ಅಜಯ್ ದೇವಗನ್ ಮದುವೆಯಾಗುತ್ತಾರೆ ಎಂಬ ವದಂತಿ ಹರಡಿತ್ತು. 

ಫರೋಗ್ ಸಿದ್ದಿಕಿ ನಿರ್ದೇಶನದ ಜಿಗರ್ ಚಿತ್ರದ ಶೂಟಿಂಗ್ ವೇಳೆ ಅಜಯ್ ದೇವಗನ್ ಮತ್ತು ಕರೀಷ್ಮಾ ಕಾಪೂರ್ ಪರಸ್ಪರ ಹತ್ತಿರವಾದರು.  ಮಾಧ್ಯಮಗಳ ವರದಿ ಪ್ರಕಾರ ಅಜಯ್ ದೇವಗನ್ ರವೀನಾ ಟಂಡನ್ ಜೊತೆ ಡೇಟಿಂಗ್ ಮಾಡುತ್ತಿದ್ದರು.

ಜಿಗರ್ ನಂತರ, ಅಜಯ್ ದೇವಗನ್ ಮತ್ತು ಕರಿಷ್ಮಾ ಕಪೂರ್ ಅವರು ಸುಹಾಗ್, ಧನ್ವಾನ್ ಮತ್ತು ಸರ್ಗಮ್ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಒಟ್ಟಿಗೇ ಸಿನಿಮಾ ಮಾಡುವಾಗ ಇಬ್ಬರೂ ಒಂದಷ್ಟು ಸಮಯ ಕಳೆದು ಹತ್ತಿರವಾದರು. ಆದರೆ, ಕಾಜೋಲ್ 1995 ರ ಹುಲ್ಚುಲ್ ಚಿತ್ರದ ಮೂಲಕ ಅಜಯ್ ದೇವಗನ್ ಅವರ ಜೀವನವನ್ನು ಪ್ರವೇಶಿಸಿದರು. ಕಾಜೋಲ್ ಅಜಯ್ ದೇವಗನ್ ಅವರನ್ನು ಭೇಟಿಯಾದಾಗ, ಅವರ ಬಬ್ಲಿ ಸ್ವಭಾವಕ್ಕೆ ಆಕರ್ಷಿತರಾದರು ಮತ್ತು ಇಬ್ಬರೂ ಸ್ನೇಹ ಬೆಳೆಸಿದರು.

ಆ ದಿನಗಳಲ್ಲಿ, ಕಾಜೋಲ್ ತನ್ನ ಸ್ನೇಹಿತ ಕಾರ್ತಿಕ್ ಮೆಹ್ತಾ ಜೊತೆ ಡೇಟಿಂಗ್ ಮಾಡುತ್ತಿದ್ದಳು ಎಂದು ವರದಿಯಾಗಿದೆ ಆದರೆ ಅವರ ನಡುವೆ ಅಷ್ಟೋಂದು ಹೊಂದಾಣಿಕೆ ಕಾಣದ ಕಾರಣ ಅವರ ಸ್ನೇಹ ದೂರವಾಯಿತು. ಅಜಯ್ ದೇವಗನ್ ಮತ್ತು ಕಾಜೋಲ್ ಉತ್ತಮ ಸ್ನೇಹಿತರಾಗಿದ್ದರಿಂದ ತಮ್ಮ ಸಮಸ್ಯೆಗಳನ್ನು ಚರ್ಚಿಸುತ್ತಿದ್ದರು ಮತ್ತು ಒಟ್ಟಿಗೆ ಸಾಕಷ್ಟು ಸಮಯ ಕಳೆಯುತ್ತಿದ್ದರು. ಇದು ಅವರ ಸಂಬಂಧ ಮತ್ತಷ್ಟು ಗಟ್ಟಿಯಾಗಲು ಸಹಾಯವಾಯಿತು  ಮತ್ತು ಇಬ್ಬರೂ ಪರಸ್ಪರ ಹತ್ತಿರವಾದರು. ಮಾಧ್ಯಮ ವರದಿಗಳ ಪ್ರಕಾರ, ಒಮ್ಮೆ ಕಾಜೋಲ್ ಮತ್ತು ಅಜಯ್ ಒಟ್ಟಿಗೆ ಕುಳಿತಿದ್ದಾಗ ಕರಿಷ್ಮಾ ಕಪೂರ್‌ನಿಂದ ಅಜಯ್‌ಗೆ ಕರೆ ಬಂದಿತು ಮತ್ತು ಹಿಂದಿನಿಂದ ಬಂದ ಸ್ತ್ರೀ ಧ್ವನಿಯನ್ನು ಕೇಳಿ ಆಕೆ ಕೋಪಗೊಂಡಿದ್ದಳಂತೆ. ಅಜಯ್ ದೇವಗನ್ ಕೂಡ ನಂತರ ಕಾಜೋಲ್ ಜೊತೆಗಿನ ಸಂಬಂಧವನ್ನು ಒಪ್ಪಿಕೊಂಡರು ಮತ್ತು ಹೀಗಾಗಿ ಕರಿಷ್ಮಾ ಅವರ ಜೀವನದಿಂದ ಹೊರಬಂದರು. ಫೆಬ್ರವರಿ 1999 ರಲ್ಲಿ, ಅಜಯ್ ದೇವಗನ್ ಮತ್ತು ಕಾಜೋಲ್ ವಿವಾಹವಾದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?