ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!
ಇಂದಿಗೆ ಸರಿಯಾಗಿ 39 ವರ್ಷಗಳ ಹಿಂದಿನ ಮಾತು. ಅಕ್ಟೋಬರ್ 31, 1984 ರಂದು ದೇಶದ ಪ್ರಧಾನಿಯಾಗಿದ್ದ ಇಂಧಿರಾಗಾಂಧಿಯ ಮೇಲೆ ಅವರ ಅಂಗರಕ್ಷಕರೇ ಗುಂಡಿಕ್ಕಿ ಹತ್ಯೆಗೈದ ದಿನ. ಪವಿತ್ರ ಗೋಲ್ಡನ್ ಟೆಂಪಲ್ ನಲ್ಲಿ ನಡೆದ ಅಪರೇಷನ್ ಬ್ಲೂ ಸ್ಟಾರ್ ನ ನಂತರ ನಡೆದ ಆ ಘಟನೆಯನ್ನು ಇಂದು ನೆನಪಿಸಿಕೊಳ್ಳಲೇ ಬೇಕು. ಇಂದಿರಾ ಗಾಂಧಿಯವರು ಅಕ್ಟೋಬರ್ 31, 1984 ರಂದು ಹತ್ಯೆಗೀಡಾದರು. ಪ್ರಧಾನಿಯವರ ಇಬ್ಬರು ಅಂಗರಕ್ಷಕರಾದ ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಅವರೇ ಪ್ರಧಾನಿಯನ್ನು ಹತ್ಯೆಗೈದರು. ಸಿಖ್ಖರಿಗಾದ ಅವಮಾನ ಮತ್ತು ಕಾರ್ಯಾಚರಣೆಯ ಸಮಯದಲ್ಲಿ ಗೋಲ್ಡನ್ ಟೆಂಪಲ್ ಅನ್ನು ಅಪವಿತ್ರಗೊಳಿಸಿದರು ಎಂಬ ಸೇಡು ತೀರಿಸಿಕೊಳ್ಳಲು 30 ಕ್ಕೂ ಹೆಚ್ಚು ಗುಂಡುಗಳನ್ನು ಅವರ ಮೇಲೆ ಪಾಯಿಂಟ್ ಬ್ಲಾಂಕ್ ರೇಂಜ್ ನಿಂದ ಹಾರಿಸಿದರು. ಆ ವರ್ಷದ ಜೂನ್‌ನಲ್ಲಿ ಬ್ಲೂ ಸ್ಟಾರ್. ಇಂದಿರಾ ಹತ್ಯೆಯು ರಾಷ್ಟ್ರದಾದ್ಯಂತ ಅಲ್ಲೋಲ ಕಲ್ಲೋಲವನ್ನು ಸೃಷ್ಟಿಸಿತು. ಭಾರತದಾತ್ಯಂತ ಕೋಮುಸಂಘರ್ಷ ಏರ್ಪಟ್ಟಿತ್ತು. ಘಟನೆ ನಡದ ಮೂರನೇ ದಿನಗಳಲ್ಲಿ ಸರಿಸುಮಾರು 3350ಕ್ಕೂ ಹೆಚ್ಚು ಸಿಖ್ಖರನ್ನು ಹತ್ಯೆಗೈಯ್ಯಲಾಯಿತು. ಕೇವಲ 2800 ಮಂದಿಯನ್ನು ದೆಹಲಿಯಲ್ಲೇ ಹತ್ಯೆಗೈಯ್ಯಲಾಯಿತು. 39 ವರ್ಷಗಳ ಹಿಂದೆ ನಡೆದಿದ್ದು ಇದೇ..? ಸಿಖ್ಖರ ಪವಿತ್ರ ದೇವಾಲಯ ಅಮೃತಸರದ ಗೋಲ್ಡನ್ ಟೆಂಪಲ್. ಈ ದೇವಾಲಯದಲ್ಲಿ ನೆಲೆ ಕಂಡುಕೊಂಡಿದ್ದ ಪ್ರತ್ಯೇಕತಾವಾದಿಗಳನ್ನು ಹೊರಹಾಕಲೆಂದು ಆ...