ಶ್ರೀದೇವಿ ಸಾವು ಬೋನಿಕಾಪೂರನ್ನು ಹೇಗೆ ನಡೆಸಿಕೊಂಡ್ರು ಗೊತ್ತಾ ದುಬೈ ಪೊಲೀಸ್..?

ಶ್ರೀದೇವಿ ಸಾವಿಗೆ ಕಾರಣ ತಿಳಿಸಿದ ಬೋನಿಕಾಪೂರ್




ನಟಿ ಶ್ರೀದೇವಿ ಸಾವಿನ ಬಗ್ಗೆ ಕಳೆದ 5 ವರ್ಷಗಳಿಂದಲೂ ನಡೆಯುತ್ತಿರುವ ಚರ್ಚೆಗೆ ಇದೀಗ ತೆರೆ ಬಿದ್ದಿದೆ. ಅದು ಕೊಲೆ ಅಂತ ಕೆಲವರು ಹೇಳಿದರೆ ಮತ್ತೆ ಕೆಲವರು ಆಕಸ್ಮಿಕ ಎಂದು ವಾದಿಸುತ್ತಲೇ ಬಂದಿದ್ದರು. ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ನಿರ್ಮಾಪಕ ಬೋನಿಕಾಪೂರ್ ತೆರೆ ಎಳೆದಿದ್ದಾರೆ. ಪತ್ನಿಯ ಸಾವಿನ 5 ವರ್ಷಗಳ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿರುವ ಬೋನಿ, ತಮ್ಮ ಪ್ರೀತಿಯ ಪತ್ನಿಯ ಸಾವಿಗೆ ಇದೇ ಕಾರಣ ಇರಬಹುದು ಎಂದಿದ್ದಾರೆ. 

ಶ್ರೀದೇವಿ ಅಭಿಮಾನಿಗಳಿಗೆ ಮಾತ್ರವಲ್ಲದೆ ಆಕೆಯ ಮನೆಯವರಿಗೂ 2018ರ ಫೆಬ್ರವರಿ 24 ಅಘಾತಕಾರಿ ದಿನವಾಗಿತ್ತು. ದುಬೈನಲ್ಲಿ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ಹೋಗಿದ್ದ ನಟಿ, ಬಂದಿದ್ದು ಶವವಾಗಿ. ಹೊಟೆಲ್ ನ ಬಾತ್ ಟಬ್ ನಲ್ಲಿ ಶವವಾಗಿ ಆಕೆ ಪತ್ತೆಯಾಗಿದ್ದರು. ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಆಕೆ ಸಾವನಪ್ಪಿದ್ದಾರೆ ಎಂದು ಮಾಧ್ಯಮಗಳು ಸುದ್ದಿ ಮಾಡಿದ್ದವು. 

ನಟಿ ಶ್ರೀದೇವಿ ಚಿಕ್ಕವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದವರು. ತನ್ನ ಪ್ರತಿಭೆ ಮತ್ತು ಬ್ಯೂಟಿಯಿಂದಲೇ ದಕ್ಷಿಣ ಭಾರತ ಮಾತ್ರವಲ್ಲದೆ ಬಾಲಿವುಡ್ ನಲ್ಲೂ ಮನೆಮಾತಾದ ಶ್ರೀದೇವಿ, ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆಯ ನಟಿ. ತನ್ನ ಬೇಡಿಕೆ ಉತ್ತುಂಗದಲ್ಲಿದ್ದಾಗಲೇ ಆಕೆ ಬೋನಿಕಾಪೂರ್ ಅವರನ್ನು ಮದುವೆಯಾದರು. ಸದಾ ಬ್ಯೂಟಿ ಬಗ್ಗೆ ಯೋಚಿಸುತ್ತಿದ್ದ ಆಕೆ ತಿನ್ನುವ ಆಹಾರದ ಬಗ್ಗೆ ಡಯಟ್ ಬಗ್ಗೆ ಅತಿಯಾದ ಚಿಂತೆ ಮಾಡುತ್ತಿದ್ದರಂತೆ. 



ದಿ ನ್ಯೂ ಇಂಡಿಯನ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಬೋನಿ ಕಪೂರ್ ಶ್ರೀದೇವಿ ಅವರ ಸಾವು ಸಹಜವಲ್ಲ ಆದರೆ ಆಕಸ್ಮಿಕ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತೀಯ ಮಾಧ್ಯಮಗಳಿಂದ ಹೆಚ್ಚಿನ ಒತ್ತಡವಿದ್ದ ಕಾರಣ ದುಬೈ ಪೊಲೀಸರು ಸುಮಾರು 48 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಶ್ರೀದೇವಿಯದ್ದು ಕೊಲೆ ಎಂಬ ಬಗ್ಗೆಯೇ ಆರೋಪಗಳು ಕೇಳಿಬಂದಿದ್ದವು. ಹೀಗಾಗಿ ದುಬೈ ಪೊಲೀಸರು ನನ್ನನ್ನು ಸುದೀರ್ಘವಾದ ವಿಚಾರಣೆಗೆ ಒಳಪಡಿಸಿದ್ದರು. ಹೀಗಾಗಿ ಮಾಧ್ಯಮಗಳಲ್ಲಿ ಈ ಬಗ್ಗೆ ಮಾತನಾಡಲು ನಾನು ಬಯಸಿರಲಿಲ್ಲ ಎಂದವರು ಹೇಳಿದ್ದಾರೆ. 

ಶ್ರೀದೇವಿ ಸಾವಿನ ಬಗ್ಗೆ ತನಿಖೆ ನಡೆಸಿರುವ ಪೊಲೀಸರು ನನ್ನನ್ನು ಸುಳ್ಳು ಪತ್ತೆ ಪರೀಕ್ಷೆಗೂ ಒಳಪಡಿಸಿದ್ದರು. ನಾನು ಯಾವುದೇ ಸುಳ್ಳು ಹೇಳುತ್ತಿಲ್ಲ ಎಂದು ಗೊತ್ತಾದ ಬಳಿಕವಷ್ಟೇ ನನ್ನನ್ನು ಅಲ್ಲಿನ ಪೊಲೀಸರು ಕಳುಹಿಸಿಕೊಟ್ಟಿದ್ದರು. ನಾನು ಹೇಳುತ್ತಿರುವುದು ನನಗೆ ಗೊತ್ತಿರುವ ಸತ್ಯ , ಇದಕ್ಕಿಂತ ಮೇಲೆ ಹೇಳಲು ನನ್ನಲ್ಲಿ ಬೇರೆ ವಿಷಯವಿಲ್ಲ ಎಂದು ಹೇಳಿದ ಬಳಿಕಷ್ಟೇ ಪೊಲೀಸರು ನನ್ನನ್ನು ಅಲ್ಲಿಂದ ಕಳುಹಿಸಿಕೊಟ್ಟಿದ್ದು ಎಂದವರು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲೂ ನೀರಿನಲ್ಲಿ ಮುಳುಗಿ ಸಾವು ಎಂದು ಸ್ಪಷ್ಟವಾಗಿ ಹೇಳಲಾಗಿದೆ ಎಂದಿದೆ.

ಶೇಪ್ ಉಳಿಸಿಕೊಳ್ಳಳು ಡಯೆಟ್ ನಲ್ಲಿದ್ದ ಶ್ರೀದೇವಿ


ಶ್ರೀದೇವಿ ಸದಾ ಬ್ಯೂಟಿ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದರು. ಹೀಗಾಗಿ ಆಕೆ ಹೆಚ್ಚಾಗಿ ಹಸಿವಿನಿಂದಲೇ ಇರುತ್ತಿದ್ದಳು. ಮದುವೆಯಾದ ಬಳಿಕ ನನಗೆ ಆಕೆಯ ಈ ಅಭ್ಯಾಸಗಳು ಗೊತ್ತಾದವು. ನಟ ನಾಗಾರ್ಜುನ ಅವರು ಒಂದು ಬಾರಿ ಮಾತನಾಡುತ್ತಾ, ಶ್ರೀದೇವಿ ಬಾತ್ ರೂಮ್ ನಲ್ಲಿ ಬಿದ್ದು ಹಲ್ಲು ಮುರಿದುಕೊಂಡ ಬಗ್ಗೆ ಹೇಳಿದ್ದರು. ಆದರೆ ಆಕೆ ಇದನ್ನೆಲ್ಲಾ ಸಿರಿಯಸ್ ಆಗಿ ತೆಗೆದುಕೊಳ್ಳಲೇ ಇಲ್ಲ. ಮುಖ ಊದಿಕೊಳ್ಳುತ್ತದೆ ಎಂಬ ಕಾರಣಕ್ಕಾಗಿ ಆಕೆ ಉಪ್ಪನ್ನು ಸೇವಿಸುತ್ತಲೇ ಇರಲಿಲ್ಲ. ಸಲಾಡ್ ಗಳನ್ನು ಕೂಡ ಆಕೆ ಉಪ್ಪು ಬಳಸದೆ ಸೇವಿಸುತ್ತಿದ್ದಳು ಎಂದು ಬೋನಿ ಹೇಳಿದ್ದಾರೆ. ವೈದ್ಯರು ಕೂಡ ಲೋ ಬಿಪಿ ಇರುವ ಕಾರಣ ಉಪ್ಪು ಕಡಿಮೆ ಇರುವ ಪದಾರ್ಥಗಳನ್ನು ಸೇವಿಸಬೇಡಿ ಎಂದು ಕೂಡ ಎಚ್ಚರಿಸಿದ್ದರು. ಇಷ್ಟಾದರೂ ಆಕೆ ಇದನ್ನು ಅಷ್ಟಾಗಿ ಗಮನಿಸಲಿಲ್ಲ. ಇದು ಈ ರೀತಿ ಅಂತ್ಯ ಕಾಣುತ್ತೆ ಎಂದು ನಮಗೂ ಗೊತ್ತಿರಲಿಲ್ಲ ಎಂದು ಬೋನಿ ಪತ್ನಿಯ ಬಗ್ಗೆ ಹೇಳಿದ್ದಾರೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?