ದರ್ಶನ್ ಅಸಮಾಧಾನಕ್ಕೆ ಕಾರಣವೇನು?

 


ದರ್ಶನ್ ಅಸಮಾಧಾನಕ್ಕೆ ಕಾರಣವೇನು?



ಕರ್ನಾಟಕದಲ್ಲಿ ಫರಭಾಷಿಗರು ಹೆಚ್ಚಾಗಿದ್ದಾರೆಯೇ ಅಥವ ಕನ್ನಡಿಗರಿಗೆ ಪರಭಾಷಾ ಅಭಿಮಾನ ಹೆಚ್ಚಾಗಿದೆಯೇ ಗೊತ್ತಿಲ್ಲ. ಆದರೆ ರಿಲೀಸ್ ಆಗುತ್ತಿರುವ ಪರಭಾಷಾ ಚಿತ್ರಗಳು ಮಾತ್ರ ಕೋಟಿ ಕೋಟಿ ಕಲೆಕ್ಷನ್ ಮಾಡಿಕೊಂಡು ಕರ್ನಾಟಕದಿಂದ ಹೋಗುತ್ತಿದ್ದರೆ, ಇತ್ತ ಕನ್ನಡ ಚಿತ್ರಗಳು ಮಾತ್ರ ಮಕಾಡೆ ಮಲಗುತ್ತಿದೆ. ಇದಕ್ಕೆ ಚಿತ್ರಕಥೆ ಕಾರಣವೇ ಅಥವ ಪ್ರೇಕ್ಷಕರಿಗೆ ಕನ್ನಡ ಚಿತ್ರದ ಬಗ್ಗೆ ಇರುವ ನಿರಾಸಕ್ತಿ ಕಾರಣವಾ ಅಂದರೆ ಉತ್ತರ ಗೊತ್ತಿಲ್ಲ. ಇದೀಗ ಈ ರೀತಿಯ ಚರ್ಚೆ ಸಾಗೋದಿಕ್ಕೆ ಕಾರಣ ಲಿಯೋ ಸಿನಿಮಾ. ವಿಜಯ್ ನಟನೆ ಲಿಯೋ ಸಿನಿಮಾ ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕನ್ನಡದ ಫೋಸ್ಟ್ ಚಿತ್ರಕ್ಕಿಂತಲೂ ಲಿಯೋ ಸದ್ದು ಮಾಡುತ್ತಿರುವುದು ನಟರ ಅಸಮಾಧಾನಕ್ಕೆ ಕಾರಣವಾಗಿದೆ. 

ಬೆಂಗಳೂರಿನಲ್ಲಿ ಲಿಯೋ ಸಿನಿಮಾ 45ಕ್ಕೂ ಅಧಿಕ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದ್ದರೆ. ಕನ್ನಡದ ಫೋಸ್ಟ್ ಗೆ ಮಾತ್ರ ಕೇವಲ 25 ಚಿತ್ರಮಂದಿರಗಳು ಸಿಕ್ಕಿವೆ. ಫೋಸ್ಟ್ ಚಿತ್ರದ ಅಡ್ವಾನ್ಸ್ ಬುಕ್ಕಿಂಗೆ ಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಲಿಯೋದ ಟಿಕೆಟ್ ಬೆಲೆ 2000 ರೂಪಾಯಿ ಮಾಡಿದ್ದರೂ ಕೂಡ, ಪ್ರೇಕ್ಷಕರು ಮುಗಿಬಿದ್ದು ಬುಕ್ಕಿಂಗ್ ಮಾಡುತ್ತಿದ್ದಾರೆ. 

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಇದೀಗ ದರ್ಶನ್ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ಸದ್ಯದ ಪರಿಸ್ಥಿತಿಗೆ ಅದು ತಾಳೆ ಹಾಕುವಂತಿದೆ. ರಾಬರ್ಟ್ ಸಿನಿಮಾ ರಿಲೀಸ್ ಟೈಂನಲ್ಲಿ  ಆಂಧ್ರ, ತೆಲಂಗಾಣದಲ್ಲಿ ರಿಲೀಸ್ ಮಾಡಲು ಅಲ್ಲಿ ಮಂದಿ ಹಿಂದೇಟು ಹಾಕಿದ್ದವು. ಬೇರೆ ಸಿನಿಮಾಗಳು ರಿಲೀಸ್ ಆಗುತ್ತಿರುವುದರಿಂದ ರಾಬರ್ಟ್ ಗೆ ನೋ ಅಂದಿದ್ದರು. ನಿಮ್ಮ ಹಿರೋಗಳು ಇಲ್ಲಿ ಬಂದರೆ ನಮ್ಮ ಹಿರೋಗಳಿಗೆ ತೊಂದರೆ ಆಗುತ್ತೆ ಎಂದಿದ್ದರು. ಇದನ್ನು ಪ್ರಶ್ನಿಸಿ ದರ್ಶನ್ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಕದ ತಟ್ಟಿದ್ದರು. ಇದೇ ವೇಳೆ ನಮ್ಮಲ್ಲಿರುವ ಭಾಷಾಭಿಮಾನದ ಕೊರತೆಯನ್ನು ಕೂಡ ಹೇಳಿ ಬೇಸರ ವ್ಯಕ್ತಪಡಿಸಿದ್ದರು. ಸದ್ಯಕ್ಕೆ ಅಂದಿನ ದರ್ಶನ್ ಹೇಳಿಕೆ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?