ಸರ್ಧಾರ್ ವಲ್ಲಭಭಾಯ್ ಪಾಟೀಲ್: ಉಕ್ಕಿನ ಮನುಷ್ಯ ಎಂದು ಹೆಸರಾಗಲು ಕಾರಣವೇನು ಗೊತ್ತಾ?
Why is Sardar Vallabhbhai Patel called the Iron man of India?
ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಮತ್ತು ಸಿಕ್ಕಿದ ಮೇಲೆ ನವಭಾರತ ನಿರ್ಮಾಣಕ್ಕೆ ಹಲವು ಮಹನೀಯರು ಹೋರಾಡಿದ್ದಾರೆ. ದುಡಿದಿದ್ದಾರೆ. ಪ್ರಾಣತ್ಯಾಗ ಮಾಡಿದ್ದಾರೆ. ಇದರಲ್ಲಿ ಕೆಲವರ ಹೆಸರು ಮುಂಚೂಣಿಯಲ್ಲಿದ್ದರೆ ಮತ್ತೆ ಕೆಲವರು ಬೆನ್ನೆಲುಬಾಗಿ ಕೆಲಸ ಮಾಡಿದ್ದಾರೆ. ಅದರಲ್ಲೂ ನಾವು ಇಂದು ನೆನಪಿಸಿಕೊಳ್ಳುವ ಹೆಸರು ಸರ್ಧಾರ್ ವಲ್ಲಭಬಾಯ್ ಪಾಟೀಲ್. ಇವರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯುತ್ತಾರೆ. ಹಾಗಾದರೆ ಇವರನ್ನು ಉಕ್ಕಿನ ಮನುಷ್ಯ ಎಂದು ಕರೆಯಲು ಕಾರಣವೇನು ಅಂತ ತಿಳಿಯೋಣ.
ಗುಜರಾತ್‌ನ ಬ್ಯಾರಿಸ್ಟರ್ ವಲ್ಲಭಭಾಯಿ ಪಟೇಲ್ ಅವರಿಗೆ ಅನೇಕ ಹೆಸರುಗಳಿವೆ. ಆರಂಭದಲ್ಲಿ ರಾಜಕೀಯ ಸೇರಲು ನಿರಾಕರಿಸುತ್ತಿದ್ದ ವಲ್ಲಭಭಾಯಿ ಪಾಟೀಲ್, ಬಳಿಕ ಆಧುನಿಕ ಭಾರತ ನಿರ್ಮಾಣದ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾದರು. 1947 ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೂ, ಆ ದಿನಗಳಲ್ಲಿ ಭಾರತದಲ್ಲಿ ರಾಜಸಂಸ್ಥಾನಗಳದ್ದೇ ರಾಜ್ಯಭಾರವಾಗಿದ್ದು. ದೇಶದಲ್ಲಿ ಹಬ್ಬಿದ್ದ ಇಷ್ಟೋಂದು ರಾಜಸಂಸ್ಥಾನಗಳನ್ನು ಭಾರತೀಯ ಒಕ್ಕೂಟದಲ್ಲಿ ವಿಲೀನಗೊಳಿಸುವುದು ಅಂದಿಗೆ ಸವಾಲೇ ಆಗಿತ್ತು. ಆದರೆ ಅಂದಿನ ಗೃಹಸಚಿವರಾಗಿದ್ದ ಸರ್ಧಾರ್ ವಲ್ಲಾಭಭಾಯಿ ಪಾಟೀಲ್ ಇದನ್ನು ಸಮರ್ಥವಾಗಿ ನಿಭಾಯಿಸಿದರು. ಹೀಗಾಗಿ ರಾಜಪ್ರಭುತ್ವದ ರಾಜ್ಯಗಳನ್ನು ಯಶಸ್ವಿಯಾಗಿ ಮನವೊಲಿಸಿದ ಕಾರಣಕ್ಕಾಗಿ ಸರ್ದಾರ್ ವಲ್ಲಾಭಭಾಯ್ ಪಾಟೀಲ್ ಅವರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯಲಾಯಿತು.
ಆ ದಿನಗಳಲ್ಲಿ ಭಾರತದಲ್ಲಿ 565ಕ್ಕೂ ಹೆಚ್ಚು ರಾಜಮನೆತನಗಳನ್ನು ಭಾರತದಲ್ಲಿ ವಿಲೀನಗೊಳಿಸಿದ ಕೀರ್ತಿ 72ನೇ ವಯಸ್ಸಿನಲ್ಲಿದ್ದ ಸರ್ಧಾರ್ ವಲ್ಲಭಭಾಯ್ ಪಾಟೀಲ್ ಗೆ ಸಲ್ಲುತ್ತದೆ.
ಸರ್ಧಾರ್ ವಲ್ಲಭಭಾಯ್ ಪಾಟೀಲ್ ಹುಟ್ಟಿದ್ದು, ಅಕ್ಟೋಬರ್ 31, 1875ರಲ್ಲಿ. ಗುಜರಾತ್ ನ ನಾಡಿಯಾಡ್ ನಲ್ಲಿ ಜನಿಸಿದ ಪಟೇಲ್, ಕಾನೂನು ಪದವಿಯನ್ನು ಓದಿ ಜನಪ್ರಿಯ ಬ್ಯಾರಿಸ್ಟರ್ ಆಗಿದ್ದರು. ಗಾಂಧೀಜಿಯವರ ಪ್ರಭಾವಕ್ಕೆ ಒಳಗಾದ ಪಾಟೀಲ್ ಬಳಿಕ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮನ್ನು ಅರ್ಪಿಸಿಕೊಂಡರು.
ಇಂದು ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿಯಬೇಕಾದರೆ ಅದರಲ್ಲಿ ಪಟೇಲ್ ಪಾತ್ರ ಮಹತ್ವದ್ದು. ಹೀಗಾಗಿ ಪ್ರಧಾನಿ ನರೇಂದ್ರಮೋದಿ ಸರ್ಕಾರ 2018ರ ಅಕ್ಟೋಬರ್ 31ರಂದು ನರ್ಮದಾ ನದಿಯ ದಡದಲ್ಲಿ ಪಟೇಲ್ ಅವರ ಏಕತಾ ಪ್ರತಿಮೆಯನ್ನು ಸ್ಥಾಪಿಸಿತು. 182 ಮೀ. ಎತ್ತರರದ ಈ ಏಕತಾ ಪ್ರತಿಮೆಗೆ ಸರ್ಕಾರ ಎರಡು ಸಾವಿರದ 989 ಕೋಟಿ ರೂಪಾಯಿ ವೆಚ್ಚ ಮಾಡಿತ್ತು. ಇದನ್ನು ವಿಶ್ವದ ಅತಿ ಎತ್ತರದ ಪ್ರತಿಮೆ ಎಂದು ಕರೆಯಲಾಗುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ