ಆ ಒಂದು ದೃಶ್ಯದಲ್ಲಿ ನಟಿಸಲು ಮಾಧುರಿ ದೀಕ್ಷಿತ್ ನೋ ಅಂದಿದ್ದರಂತೆ.

 ಆ ಒಂದು ದೃಶ್ಯದಲ್ಲಿ ನಟಿಸಲು ಮಾಧುರಿ ದೀಕ್ಷಿತ್ ನೋ ಅಂದಿದ್ದರಂತೆ. ಈ ಕಾರಣಕ್ಕಾಗಿ ನಿರ್ದೇಶಕರು ಮಾಧುರಿ ದೀಕ್ಷಿತ್ ಅವರನ್ನು  ಪ್ಯಾಕ್ ಅಪ್ ಬೇರೆ ನಟಿಯರನ್ನು ನೋಡಿಕೊಳ್ಳುತ್ತೇನೆ ಎಂದಿದ್ದರಂತೆ.



ತಮ್ಮ ಹಳೆಯ ನೆನಪುಗಳನ್ನು ಮೆಲುಗು ಹಾಕಿದ ನಿರ್ದೇಶಕ ತನು ಆನಂದ್, ಸಿನಿಮಾ ಒಂದರ ಕುರಿತಂತೆ ಮಾತನಾಡುತ್ತಾ, ರವಿಕೆ ತೆಗೆಯುವ ದೃಶ್ಯವೊಂದಕ್ಕೆ ನೋ ಎಂದಿದ್ದ ಮಾಧುರಿ ದೀಕ್ಷಿತ್ ಅವರನ್ನು ಗೆಟ್ ಜೌಟ್ಎಂದು ಹೇಳಿದ್ದಾಗಿ ಹೇಳಿಕೊಂಡಿದ್ದಾರೆ. ಕಾಲಿಯಾ ಮತ್ತು ಶಾಹೆನ್ ಶಾ ಮೊದಲಾದ ಚಿತ್ರಗಳನ್ನು ಮಾಡಿ ಹೆಸರುವಾಸಿಯಾಗಿರುವ ನಟ ಮತ್ತು ನಿರ್ದೇಶಕರಾಗಿರುವ ಟಿನ್ನು ಆನಂದ್, 1989ರಲ್ಲಿ ಶಾನಖ್ ಎಂಬ ಹೆಸರಿನ ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಅವರು ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸಲು ಸಹಿ ಮಾಡಿದ್ದರು. ಆದರೆ ಚಿತ್ರದ ಚಿತ್ರೀಕರಣದ ವೇಳೆ ದೃಶ್ಯವೊಂದರಲ್ಲಿ ನಟಿಸುವಾಗ ರವಿಕೆ ತೆಗೆಯುವ ದೃಶ್ಯದಲ್ಲಿ ನಟಿಸಲು ಮೊದಲು ಒಪ್ಪಿಕೊಂಡಿದ್ದ ಮಾಧುರಿ ಬಳಿಕ ನೋ ಅಂದಿದ್ದಕ್ಕೆ ಕೋಪಗೊಂಡ ತಾನು ಚಿತ್ರದಿಂದ ಹೊರನಡೆಯುವಂತೆ ತಿಳಿಸಿದ್ದಾಗಿ ನಿರ್ಮಾಪಕರು ಹೇಳಿದ್ದಾರೆ.



ಇತ್ತೀಚೆಗೆ ರೇಡಿಯೋ ನಶಾ ಜೊತೆಗಿನ ಸಂಭಾಷಣೆಯ ವೇಳೆ ಮಾತನಾಡಿದ ಟಿನ್ನು ಆನಂದ್ ಅವರು ಚಿತ್ರೀಕರಣಕ್ಕೆ ಹೊರಟಿದ್ದ ಚಿತ್ರದ ಮೊದಲ ದೃಶ್ಯವನ್ನು ನೆನಪಿಸಿಕೊಂಡರು ಮತ್ತು “ದೃಶ್ಯದಲ್ಲಿ, ಅಮಿತಾಭ್ ಅವರನ್ನು ಗಾಡಿಯಲ್ಲಿ ಖಳನಾಯಕನು ಸರಪಳಿಯಲ್ಲಿ ಕಟ್ಟಿದ್ದಾನೆ. ಹಿರೋ ಮಾಧುರಿಯನ್ನು ರಕ್ಷಿಸಲು ಯತ್ನಿಸುತ್ತಿದ್ದಾನೆ. ಮಹಿಳೆಯೊಬ್ಬಳು ಮುಂದೆ ನಿಂತಿದ್ದಾಗ ನೀನು ಪುರುಷನನ್ನು ಯಾಕೆ ಸರಪಳಿಯಲ್ಲಿ ಕಟ್ಟಿದ್ದೀಯಾ ಎಂದು ಮಾಧುರಿ ಪಾತ್ರವು ಹೇಳುವಂತಹ ದೃಶ್ಯವದು. 

ನಾನು ಚಿತ್ರಕ್ಕೆ ಸಹಿ ಹಾಕುವ ವೇಳೆಯೆ ಈ ದೃಶ್ಯದ ಕುರಿತಂತೆ ಮಾಧುರಿಗೆ ಹೇಳಿದ್ದೆ. ಅಕೆ ಒಪ್ಪಿಕೊಂಡಿದ್ದರು ಕೂಡ. ಆಕೆ ಆರಂಭದಲ್ಲಿ ಇದಕ್ಕೆ ಒಪ್ಪಿಕೊಂಡಿದ್ದರೂ ಕೂಡ. ಅಷ್ಟೇ ಅಲ್ಲದೆ ನಿಮಗೆ ಯಾವ ತರಹದ ಬ್ರಾ ಬೇಕು ಅದನ್ನು ನೀವೆ ಡಿಸೈನ್ ಮಾಡಿಕೊಳ್ಳಬಹುದು. ರವಿಕೆ ತೆಗೆದ ನಂತರ ನಿಮಗೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ನಿಮಗೆ ಬೇಕಾದಂತಹ ಒಳಉಡುಪನ್ನು ನೀವು ಡಿಸೈನ್ ಮಾಡಬಹುದು ಎಂಬುದನ್ನು ನಾನು ಆಕೆಗೆ ತಿಳಿಸಿದ್ದೆ. ಮಾಧುರಿ ಕೂಡ ಇದಕ್ಕೆ ಒಪ್ಪಿಕೊಂಡಿದ್ದಳು. ಆದರೆ ಚಿತ್ರದ ಚಿತ್ರೀಕರಣದ ಆರಂಭವಾದ ನಂತರ ಎಷ್ಟು ಹೊತ್ತಾದರೂ ಹಿರೋಯಿನ್ ಪತ್ತೆಯಿಲ್ಲ. ಆಕೆ ಇಗ ಬರಬಹುದು ಮತ್ತೆ ಬರಬಹುದು ಎಂದು ಕಾದು ಬಳಿಕ ಮೆಕಪ್ ರೂಮ್ ಗೆ ಹೋದರೆ, ಮಾಧುರಿ ಮೇಕಪ್ ಮಾಡುವ ಹುಡುಗಿ ಬಂದು ಹಿರೋಯಿನ್ ಗೆ ಆ ದೃಶ್ಯದಲ್ಲಿ ನಟಿಸಲು ಒಪ್ಪಿಗೆ ಇಲ್ಲವಂತೆ ಎಂದು ತಿಳಿಸಿದಳು. ಅದಕ್ಕೆ ನಾನು ಒಕೆ ಪ್ಯಾಕ್ ಅಪ್ ಎಂದಿದ್ದೆ. ಬಳಿಕ ಆಕೆಯ ಸಹಾಯಕಿ ಬಂದು ಇಲ್ಲ ಮಾಧುರಿ ಆ ಚಿತ್ರದಲ್ಲಿ ನಟಿಸುತ್ತಾಳಂತೆ. ಆದರೆ ಆಕೆಗೆ ಕೆಲವು ಸಮಯ ಬೇಕಂತೆ ಎಂದು ತಿಳಿಸಿದ್ದರಿಂದ ನಾವು ಚಿತ್ರೀಕರಣವನ್ನು 5 ದಿನಗಳ ಬಳಿಕ ಚಿತ್ರೀಕರಿಸಬೇಕಾಯಿತು. ಮೋಹನ್ ದೇಸಾಯಿ ಕೂಡ ಈ ಒಂದು ಸೀನ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಟಿನ್ನು ಆನಂದ್ ಹಳೆ ದಿನಗಳನ್ನು ನೆನಪಿಸಿಕೊಂಡರು. 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?